ಭಾರತದಲ್ಲಿ ಲಭ್ಯವಿರುವ ಪ್ರೀಮಿಯಂ ಸ್ಮಾರ್ಟ್ ವಾಚ್ ಗಳು
ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಜೀವನಶೈಲಿಯಲ್ಲಿ ಮಹತ್ವದ ವಿಚಾರವಾಗಿದೆ. ಅದಕ್ಕಾಗಿ ನಿಮಗೆ ಕೆಲವು ರೀತಿಯ ಪ್ರೋತ್ಸಾಹಗಳು ಕೂಡ ಬೇಕಾಗುತ್ತದೆ. ಸ್ಮಾರ್ಟ್ ವಾಚ್ ಗಳು ಅಂತಹದ್ದೇ ಕೆಲಸವನ್ನು ನಿರ್ವಹಿಸುತ್ತದೆ. ನಿಮ್ಮ ಆಧುನಿಕ ಜೀವನಶೈಲಿಗೆ ಇವು ಖಂಡಿತ ಉಪಯೋಗಕಾರಿಯಾಗಿದೆ.

ನಾವಿಲ್ಲಿ ಕೆಲವು ಹೈ-ಎಂಡ್ ಸ್ಮಾರ್ಟ್ ವಾಚ್ ಗಳನ್ನು ಮಾರುಕಟ್ಟೆಯಲ್ಲಿ ಗಮನಿಸುತ್ತೇವೆ. ಇವುಗಳಲ್ಲಿ ಕೆಲವು ಅತ್ಯುತ್ತಮ ಫೀಚರ್ ಗಳು ಲಭ್ಯವಿದೆ. ಕೆಲವು ಸ್ಮಾರ್ಟ್ ವಾಚ್ ಗಳು ಸ್ಮಾರ್ಟ್ ಫೋನಿನ ಕೆಲಸವನ್ನೇ ನಿರ್ವಹಿಸುತ್ತದೆ. ಅತ್ಯುತ್ತಮವಾಗಿರುವ LTE ಕನೆಕ್ಟಿವಿಟಿಯನ್ನು ಇವು ಒದಗಿಸುತ್ತದೆ.

ಆಪಲ್ ವಾಚ್ 38 mm ಸ್ಟೈನ್ ಲೆಸ್ ಸ್ಟೀಲ್ ಕೇಸ್
ಸ್ವಲ್ಪ ಹಳೆಯ ಸ್ಮಾರ್ಟ್ ವಾಚ್ ಆಗಿದ್ದರೂ ಕೂಡ ಅಂದರೆ ಮೊದಲ ಜನರೇಷನ್ನಿನ ಆಪಲ್ ವಾಚ್ 38 mm ಸ್ಟೈನ್ ಲೆಸ್ ಸ್ಟ್ರೀಲ್ ಕೇಸಿನ ವಾಚ್ ಆಗಿದ್ದರೂ ಕೂಡ ಇಂದಿಗೂ ಕೂಡ ಬಹಳ ಪ್ರಚಲಿತದಲ್ಲಿರುವ ವಾಚ್ ಇದಾಗಿದೆ. ಇದರಲ್ಲಿ ಗ್ರೇಟ್ ಡಿಸ್ಪ್ಲೇ ಇದೆ ಮತ್ತು ಇಡೀ ದಿನ ಬ್ಯಾಟರಿ ಲೈಫ್ ಜೊತೆಗೆ ವಯರ್ ಲೆಸ್ ಚಾರ್ಜಿಂಗ್ ಸಪೋರ್ಟ್ ಇದರಲ್ಲಿದೆ.

ಆಪಲ್ ವಾಚ್ ಸರಣಿ 5 ಸೆಲ್ಯುಲರ್ 44mm
ಆಪಲ್ ವಾಚ್ ಸರಣಿ 5 ಸೆಲ್ಯುಲರ್ 44mm ನಿಮ್ಮ ಸ್ಮಾರ್ಟ್ ಫೋನ್ ಬದಲಿಗೆ ಆಗಿದ್ದು LTE ಗೆ ಬೆಂಬಲ ನೀಡುತ್ತದೆ ಜೊತೆಗೆ ವಾಯ್ಸ್ ಕರೆಗಳನ್ನುಮಾಡುವುದಕ್ಕೆ ಬೆಂಬಲ ನೀಡುತ್ತದೆ ಮತ್ತು ಮ್ಯೂಸಿಕ್ ಸ್ಟ್ರೀಮಿಂಗ್ ಇದರಲ್ಲಿ ಸಾಧ್ಯವಾಗುತ್ತದೆ. ಇದರಲ್ಲಿ ಇ-ಸಿಮ್ ಕಾರ್ಡ್ ಬಳಕೆಗೆ ಅವಕಾಶವಿದೆ. ಐಫೋನ್ ಬಳಕೆದಾರರಿಗೆ ಇದು ಬೆಸ್ಟ್ ಸ್ಮಾರ್ಟ್ ವಾಚ್ ಆಗಿದ್ದು ECG ಇದರಲ್ಲಿದೆ. ಕೆಲವೇ ಕೆಲವು ಸ್ಮಾರ್ಟ್ ವಾಚ್ ಗಳಲ್ಲಿ ಈ ಸೌಲಭ್ಯವಿರುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್
ನೀವು ಫ್ಯಾನ್ಸಿಯಾಗಿ ಕಾಣುವ ಸ್ಮಾರ್ಟ್ ವಾಚ್ ಹುಡುಕುತ್ತಿದ್ದೀರಾದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಇದು ಸರ್ಕ್ಯುಲರ್ ಡಿಸ್ಪ್ಲೇ ಜೊತೆಗೆ ರೊಟೇಟೇಬಲ್ ಫ್ರೇಮ್ ನ್ನು ಹೊಂದಿದೆ ಮತ್ತು ಮೆಟಲ್ ಯುನಿಬಾಡಿ ಡಿಸೈನ್ ನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಆಂಡ್ರಾಯ್ಡ್ ಮತ್ತು ಐಓಎಸ್ ಡಿವೈಸ್ ನಲ್ಲೂ ಕೂಡ ಕೆಲಸ ಮಾಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಆಕ್ಟೀವ್ 2
ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಆಕ್ಟೀವ್2 ಕ್ಲಾಸಿಕ್ ಟೈಮ್ ಪೀಸ್ ನಂತೆ ಕಾಣುತ್ತದೆ ಜೊತೆಗೆ ಸಿಂಪಲ್ ಡಿಸೈನ್ ನ್ನು ಹೊಂದಿದೆ. ಇದು ಕಡಿಮೆ ತೂಕವನ್ನು ಹೊಂದಿರುತ್ತದೆ ಜೊತೆಗೆ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳಲ್ಲಿ ಅಧ್ಬುತವಾಗಿ ಕೆಲಸ ಮಾಡುತ್ತದೆ ಮತ್ತು ಆಂಡ್ರಾಯ್ಡ್,ಐಓಎಸ್ ಎರಡೂ ಡಿವೈಸ್ ಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಉತ್ತಮವಾಗಿ ಕೆಲಸ ಮಾಡುತ್ತದೆ.

ಫೋಸಿಲ್ ಜನರೇಷನ್ 5
ಫೋಸಿಲ್ ಜನರೇಷನ್ 5 ನೂತನವಾಗಿರುವ ಮತ್ತು ಹೆಚ್ಚು ಶಕ್ತಿಶಾಲಿಯಾಗಿರುವ ಸ್ಮಾರ್ಟ್ ವಾಚ್ ಆಗಿದ್ದು ಈ ಹಿಂದೆ ಇಂತಹ ಸ್ಮಾರ್ಟ್ ವಾಚ್ ನ್ನು ಈ ಕಂಪೆನಿ ತಯಾರಿಸಿರಲಿಲ್ಲ. ಇದು ಕ್ವಾಲ್ಕಂ ಪ್ರೊಸೆಸರ್ ಜೊತೆಗೆ WearOS ಸಾಫ್ಟ್ ವೇರ್ ಮತ್ತು ಅತ್ಯುತ್ತಮ ಬ್ಯಾಟರಿ ಬ್ಯಾಕ್ ಅಪ್ ನ್ನು ಹೊಂದಿದೆ. ನೂತನ ಫೀಚರ್ ಜೊತೆಗೆ ಕ್ಲೀನ್ ಆಗಿ ಕಾಣುವ ಫೀಚರ್ ಗಳನ್ನು ಹೊಂದಿರುವ ಅತ್ಯುತ್ತಮ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಇದಾಗಿದೆ.

ಫಿಟ್ ಬಿಟ್ ವರ್ಸಾ
ಫಿಟ್ ಬಿಟ್ ವರ್ಸಾ ಟ್ರೆಂಡಿಯಾಗಿರುವ ಮತ್ತು ಸ್ಪೋರ್ಟಿಯಾಗಿರುವ ವಾಚ್ ನ್ನು ಬಯಸುವವರಿಗೆ ಹೇಳಿ ಮಾಡಿಸಿದ ಡಿವೈಸ್ ಆಗಿದೆ. ಯುನೀಕ್ ಆಗಿರುವ ಡಿಸೈನ್ ನ್ನು ಇದು ಹೊಂದಿದ್ದು ಟಿಪಿಕಲ್ ಸ್ಮಾರ್ಟ್ ವಾಚ್ ಗಳಿಗಿಂತ ಭಿನ್ನವಾಗಿದೆ. ಇದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

ಪೂಮಾ ಪಿಟಿ9100
ಪೂಮಾ ಪಿಟಿ9100 ಲಕ್ಸುರಿ ಸ್ಮಾರ್ಟ್ ವಾಚ್ ಆಗಿದೆ ಮತ್ತು ಯುನಿಸೆಕ್ಸ್ ಡಿಸೈನ್ ನ್ನು ಹೊಂದಿದೆ. ಹಾಗಾಗಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಕೂಡ ಬಳಕೆ ಮಾಡಬಹುದು. ಇದು WearOS ನ್ನು ಹೊಂದಿದ್ದು ಸ್ಮಾರ್ಟ್ ಫೋನ್ ಗಳಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

ಫೋಸಿಲ್ ಜನರೇಷನ್ 3 ಕ್ಯೂ ಎಕ್ಸ್ಫೋರಿಸ್ಟ್
ಫೋಸಿಲ್ ಜನರೇಷನ್ 3 ಕ್ಯೂ ಎಕ್ಸ್ಪೋರಿಸ್ಟ್ ಆಗಾಗ ಪ್ರವಾಸ ಕೈಗೊಳ್ಳುವವರಿಗೆ ಮತ್ತು ಅಧ್ಯಯನಕಾರರಿಗೆ ಹೇಳಿ ಮಾಡಿಸಿದ ಡಿವೈಸ್ ಆಗಿದೆ.ಸ್ಟೈಲ್ ಲೆಸ್ ಸ್ಟೀಲ್ ನಿಂದ ಈ ಸ್ಮಾರ್ಟ್ ವಾಚನ್ನು ತಯಾರಿಸಲಾಗಿದೆ. ಪ್ರೀಮಿಯಂ ಫಿನಿಶ್ ನ್ನು ಇದು ಹೊಂದಿದೆ.ಫಿಸಿಕಲ್ ಬಟನ್ ಗಳನ್ನು ಬಳಸಿ ಅಥವಾ ಸಕ್ಯುಲರ್ OLED ಟಚ್ ಸ್ಕ್ರೀನ್ ಬಳಸಿ ಈ ಡಿವೈಸ್ ಗಳನ್ನು ಹ್ಯಾಂಡಲ್ ಮಾಡಬಹುದು.


Click it and Unblock the Notifications








