ಭಾರತದಲ್ಲಿ ಖರೀದಿಗೆ ಲಭ್ಯವಿರುವ ಬೆಸ್ಟ್ ಕ್ಯಾಮ್ಕಾರ್ಡರ್ ಕ್ಯಾಮರಾಗಳು
ಇತ್ತೀಚೆಗೆ ಬಿಡುಗಡೆಗೊಂಡಿರುವ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ 8ಕೆ ರೆಸಲ್ಯೂಷನ್ ವರೆಗೆ ವೀಡಿಯೋ ರೆಕಾರ್ಡಿಂಗ್ ಮಾಡುವುದಕ್ಕೆ ಅವಕಾಶವಿದೆ. ಇನ್ನು ಹೆಚ್ಚಿನ ಡಿವೈಸ್ ಗಳಲ್ಲಿ ಅಂದರೆ ಎಂಟ್ರಿ ಲೆವೆಲ್ ಡಿವೈಸ್ ಗಳಲ್ಲಿ ಕೂಡ 1080pವರೆಗೆ ಜೊತೆಗೆ ಕನಿಷ್ಟ 30fps ವೀಡಿಯೋಗಳನ್ನು ಶೂಟ್ ಮಾಡುವುದಕ್ಕೆ ಸಾಧ್ಯವಿದೆ ಆಂದರೆ ಪ್ರೀಮಿಯಂ ಕ್ಯಾಮ್ ರೆಕಾರ್ಡ್ ರ್ ನಲ್ಲಿ ಉತ್ತಮ ರೀತಿಯಲ್ಲಿ ವೀಡಿಯೋ ಔಟ್ ಪುಟ್ ಪಡೆಯುವುದಕ್ಕೆ ಸಾಧ್ಯವಿದೆ.

ನಾವಿಲ್ಲಿ ಭಾರತದಲ್ಲಿ ಲಭ್ಯವಿರುವ ಪ್ರೀಮಿಯಂ ಕ್ಯಾಮ್ ರೆಕಾರ್ಡರ್ ಗಳನ್ನು ಪಟ್ಟಿ ಮಾಡಿದ್ದೇವೆ. ಇವುಗಳಲ್ಲಿ ಅತ್ಯುತ್ತಮವಾಗಿರುವ ವೀಡಿಯೋ ಕ್ವಾಲಿಟಿಯನ್ನು ನೀಡುತ್ತದೆ. ಈ ರೆಕಾರ್ಡರ್ ಗಳಲ್ಲಿ ದೊಡ್ಡ ಕ್ಯಾಮರಾ ಸೆನ್ಸರ್ ಇರುತ್ತದೆ. ಹೆಚ್ಚು ಲೈಟ್ ನ್ನು ಪಡೆಯುತ್ತದೆಮತ್ತು ಉತ್ತಮ ಕ್ವಾಲಿಟಿಯ ವೀಡಿಯೋವನ್ನು ಒದಗಿಸುತ್ತದೆ.

ಸೋನಿ HXR-NX100
ಸೋನಿ HXR-NX100 ಹೈ-ಎಂಡ್ ವೀಡಿಯೋ ಕ್ಯಾಮರಾ ಆಗಿದ್ದು ಇದರಲ್ಲಿ 1080p ರೆಸಲ್ಯೂಷನ್ ನಲ್ಲಿ ವೀಡಿಯೋ ರೆಕಾರ್ಡಿಂಗ್ ಸಾಧ್ಯವಿದೆ. ಇದು ಕಾಂಪ್ಯಾಕ್ಟ್ ಬಾಡಿ ಮತ್ತು Exmor R CMOS ಸೆನ್ಸರ್ ನ್ನು ಇದು ಬಳಸುತ್ತದೆ. ಇದು ಬ್ರೈಟ್ ಆಗಿರುವ ಮತ್ತು ಹೆಚ್ಚು ರೆಸಲ್ಯೂಷನ್ ಹೊಂದಿರುವ ಕ್ಯಾಮರಾವಾಗಿದೆ. ಹಲವು ರೀತಿಯ ವೀಡಿಯೋ ಫಾರ್ಮೇಟ್ ಗೆ ಇದು ಬೆಂಬಲ ನೀಡುತ್ತದೆ. XAVC-S 50Mbps, AVCHD, ಮತ್ತು DV ಇತ್ಯಾದಿ.ಇದಿಷ್ಟೇ ಅಲ್ಲ 12x ಆಪ್ಟಿಲ್ ಝೂಮ್ ಮತ್ತು 48x ಡಿಜಿಟಲ್ ಝೂಮ್ ಗೆ ಬೆಂಬಲ ನೀಡುತ್ತದೆ. 29mm ವೈಡ್ ಆಂಗಲ್ ಲೆನ್ಸ್ ನ್ನು ಹೊಂದಿದೆ. ಒಟ್ಟಾರೆ ಅತ್ಯುತ್ತಮ ವೀಡಿಯೋ ರೆಕಾರ್ಡಿಂಗ್ ಗೆ ಬೆಂಬಲ ನೀಡುತ್ತದೆ. 1080p ರೆಸಲ್ಯೂಷನ್ ಹೊಂದಿದೆ.

ಆಂಡೋರ್ HDV-Z82
ಆಂಡೋರ್ HDV-Z82 24MP ಇಮೇಜ್ ಸೆನ್ಸರ್ ಜೊತೆಗೆ 1080p ವೀಡಿಯೋ ರೆಕಾರ್ಡಿಂಗ್ ನ್ನು ಇದು ಹೊಂದಿದೆ. 10x ಆಪ್ಟಿಕಲ್ ಝೂಮ್ ಮತ್ತು ಎಕ್ಸ್ಟರ್ನಲ್ ಮೈಕ್ ನ್ನು ಇದು ಹೊಂದಿದೆ. ಆಂಟಿ ಶೇಕ್ ತಂತ್ರಜ್ಞಾನವನ್ನು ಹೊಂದಿದೆ.

ಪಾನಸಾನಿಕ್ HC-VX981K ಕ್ಯಾಮ್ಕಾರ್ಡರ್
ಪಾನಸಾನಿಕ್ HC-VX981K ಕ್ಯಾಮ್ಕಾರ್ಡರ್ ಲೈಕಾ ತಂತ್ರಜ್ಞಾನವನ್ನು ಇದು ಹೊಂದಿದೆ. ಇದು ಕ್ಯಾಮ್ ರೆಕಾರ್ಡರ್ 4K ರೆಸಲ್ಯೂಷನ್ ಹೊಂದಿದೆ. 20x ಆಪ್ಟಿಕಲ್ ಝೂಮ್ ಮತ್ತು 5-ಆಕ್ಸಿಸ್ ಹೈಬ್ರಿಡ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ನ್ನು ಹೊಂದಿದೆ. ಈ ಕ್ಯಾಮರಾದಲ್ಲಿ ವೀಡಿಯೋದಿಂದ 4ಕೆ ಫೋಟೋಸ್ ತೆಗೆದುಕೊಳ್ಳಬಹುದು.

ಕೆನಾನ್ XA11 ಕ್ಯಾಮ್ಕಾರ್ಡರ್
ಕೆನಾನ್ XA11 ಕ್ಯಾಮ್ಕಾರ್ಡರ್ 2.91MP HD ಇಮೇಜ್ ಸೆನ್ಸರ್ ಜೊತೆಗೆ ಸೆನ್ಸರ್ DIGIC DV 4 ಇಮೇಜ್ ಪ್ರೊಸೆಸರ್ ನ್ನು ಹೊಂದಿದೆ.ಈ ಕ್ಯಾಮರಾದಲ್ಲಿ1080p ವೀಡಿಯೋಗಳು ಮತ್ತು 20x ಆಪ್ಟಿಕಲ್ ಝೂಮ್ ಗೆ ಬೆಂಬಲ ನೀಡುತ್ತದೆ. ಡಿಸೈನ್ ವಿಷಯದಲ್ಲಿ ಇದು ಚಿಕ್ಕದಾದ ಮತ್ತು ಕಾಂಪ್ಯಾಕ್ಟ್ ಆಗಿದೆ ಹಾಗಾಗಿ ಒಂದೆಡೆಯಿಂದ ಇನ್ನೊಂದೆಡೆ ಸುಲಭವಾಗಿ ಸಾಗಿಸಿಕೊಳ್ಳಬಹುದು.

ಸೋನಿ ಹ್ಯಾಂಡಿ ಕ್ಯಾಮ್ FDR-AX53 ಕ್ಯಾಮ್ಕಾರ್ಡರ್
ಸೋನಿ ಹ್ಯಾಂಡಿ ಕ್ಯಾಮ್ FDR-AX53 ಕ್ಯಾಮ್ಕಾರ್ಡರ್ ನಲ್ಲಿ 4K ವೀಡಿಯೋಗಳನ್ನು ಶೂಟ್ ಮಾಡ್ಬಹುದು ಮತ್ತು ಇದರಲ್ಲಿ 16.6MP ಇಮೇಜ್ ಸೆನ್ಸರ್ ಜೊತೆಗೆ ಬ್ಯಾಲೆನ್ಸ್ ಆಗಿರುವ ಆಪ್ಟಿಕಲ್ ಸ್ಟೆಡಿಶೂಟ್ ತಂತ್ರಜ್ಞಾನವನ್ನು ಇದು ಹೊಂದಿದೆ.ಇದು ವೀಡಿಯೋ ಫೂಟೇಜ್ ಗಳು ಸ್ಟೇಬಲ್ ಆಗಿರುವಂತೆ ಮಾಡುತ್ತದೆ. ಇದು ವೈಫೈ ಹೊಂದಿದ್ದು ಸುಲಭವಾಗಿ ಡಾಟಾ ಟ್ರಾನ್ಫರ್ ಮಾಡುವುದಕ್ಕೆ ಸಹಕಾರಿಯಾಗಿದ್ದು ಕ್ಯಾಮರಾದಿಂದ ಕಂಪ್ಯೂಟರ್ ಗೆ ಸುಲಭವಾಗಿ ಟ್ರಾನ್ಸ್ಫರ್ ಮಾಡಬಹುದು.


Click it and Unblock the Notifications








