Smart TV: 20,000 ರೂ. ಒಳಗಿನ ಉತ್ತಮ ಸ್ಮಾರ್ಟ್ ಟಿವಿಗಳಿವು !: ಏನೆಲ್ಲಾ ಫೀಚರ್ಸ್ ಹೊಂದಿವೆ ?
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿ (Smart Tv) ಗಳನ್ನು ನಾವು ಪ್ರತೀ ಮನೆಯಲ್ಲಿಯೂ ಕಾಣಬಹುದು, ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಟಿವಿಗಳನ್ನು ಖರೀದಿಸಲು ನಾವು ಹೆಚ್ಚಿನ ಹಣ ವ್ಯಯ ಮಾಡಬೇಕಾಗುತ್ತದೆ, ಆದ್ರೆ ಉತ್ತಮ ಫೀಚರ್ಸ್ ಜೊತೆಗೆ ಕಡಿಮೆ ಬೆಲೆಯ ಸ್ಮಾರ್ಟ್ ಟಿವಿ ಖರೀದಿಸಬೇಕೆಂದು ನೀವು ಬಯಸಿದ್ದರೆ ನಾವು ಆ ರೀತಿಯ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಸ್ಮಾರ್ಟ್ ಟಿವಿಗಳ ಕುರಿತು ಮಾಹಿತಿ ನೀಡಲಿದ್ದೇವೆ, ನೀವೇನಾದ್ರೂ 20,000 ಕ್ಕಿಂತ ಕಡಿಮೆ ಬೆಲೆಯ ಟಿವಿ ಖರೀದಿಸುವ ಬಯಕೆ ಹೊಂದಿದ್ದರೆ ತಪ್ಪದೆ ಈ ಲೇಖನ ಪೂರ್ತಿಯಾಗಿ ಓದಿ
ಹೌದು, ಜನರಿಗೆ ಮನರಂಜನೆ ಒದಗಿಸುವಲ್ಲಿ ಸ್ಮಾರ್ಟ್‌ಟಿವಿ (Smart TV) ಗಳ ಪಾತ್ರ ಬಹಳ ಮುಖ್ಯವಾಗಿದೆ, ಸ್ಮಾರ್ಟ್‌ಟಿವಿ ವಿಭಾಗದಲ್ಲಿ ಸಾಕಷ್ಟು ಟಿವಿಗಳನ್ನು ನಾವು ಕಾಣಬಹುದಾಗಿದ್ದು, ಈ ಟಿವಿಗಳು ತಮ್ಮದೇ ಆದ ಫೀಚರ್ಸ್ ಮೂಲಕ ಜನರನ್ನು ಆಕರ್ಷಿಸುತ್ತಿವೆ ಸ್ಮಾರ್ಟ್ ಟಿವಿಗಳಿಗೆ ಅತೀ ಹೆಚ್ಚು ಹಣ ವ್ಯಯ ಮಾಡುವ ಬದಲು 20,000 ರೂ ಒಳಗಿನ ಉತ್ತಮ ಸ್ಮಾರ್ಟ್ ಟಿವಿಗಳನ್ನು ನೋಡೋಣ ಬನ್ನಿ.

1- ಎಲ್‌ಜಿ LR65 ಎಐ ಸ್ಮಾರ್ಟ್ ಹೆಚ್‌ಡಿ ಎಲ್‌ಸಿಡಿ ಟಿವಿ: 32 ಇಂಚಿನ ಈ ಸ್ಮಾರ್ಟ್ ಟಿವಿ (Smart TV) 19,499 ರೂ. ಗಳಿಗೆ ಗ್ರಾಹಕರ ಕೈ ಸೇರಲಿದೆ. 32 ಇಂಚಿನ ಈ ಟಿವಿ 1,366 x 768 ಪಿಕ್ಸೆಲ್ ಹೆಚ್‌ಡಿ ಎಲ್‌ಇಡಿ ಸ್ರೀನ್ ಹೊಂದಿದೆ. 60 Hz ರಿಫ್ರೆಶ್ ರೇಟ್. ವೆಬ್ OS 23 ಜೊತೆಗೆ ಎ5 ಆಲ್ ಪ್ರೊಸೆಸರ್ Gen 6 ನೊಂದಿಗೆ ಕಾರ್ಯ ನಿರ್ವಹಿಸುವುದು ಸೇರಿದಂತೆ ಇನ್ನೂ ಅನೇಕ ಫೀಚರ್ಸ್‌ಗಳನ್ನು ಈ ಟಿವಿ ಹೊಂದಿದೆ.
2- ಇನ್ಫಿನಿಟಿ X3IN ಆಂಡ್ರಾಯ್ಡ್ ಸ್ಮಾರ್ಟ್ ಟಿವಿ: ಬರೋಬ್ಬರಿ 43 ಇಂಚಿನಷ್ಟು ದೊಡ್ಡ ಗಾತ್ರದ ಸ್ಕ್ರೀನ್ ಹೊಂದಿರುವ ಈ ಟಿವಿ 16,999 ರೂ. ಗಳಿಗೆ ಗ್ರಾಹಕರು ಖರೀದಿಸಬಹುದು. 1GB RAM ಜೊತೆಗೆ 6GB ಸ್ಟೋರೆಜ್ ಸಾಮರ್ಥ್ಯದ ಈ ಸ್ಮಾರ್ಟ್ ಟಿವಿ ಹಲವಾರು ವಿಭಿನ್ನ ಫೀಚರ್ಸ್ ಹೊಂದಿದೆ. ಪ್ರಮುಖವಾಗಿ 1920 x 1080 ಪಿಕ್ಸೆಲ್ ಜೊತೆಗೆ ಫುಲ್ ಹೆಚ್‌ಡಿ ಎಲ್‌ಇಡಿ ರೆಸಲ್ಯೂಶನ್ ಹೊಂದಿದೆ. ಇದರ ಜೊತೆಗೆ ಮಿಡಿಯಾಟೆಕ್ ಕ್ವಾಡ್ ಕೋರ್ ಪ್ರೊಸೆಸರ್ ಜೊತಗೆ ಆಂಡ್ರಾಯ್ಡ್ 11 ನಲ್ಲಿ ಕಾರ್ಯ ನಿರ್ವಹಿಸುತ್ತದೆ,
3- ಟಿಸಿಎಲ್ S5400 ಸ್ಮಾರಟ್ ಎಲ್‌ಇಡಿ ಗೂಗಲ್ ಟಿವಿ: 32 ಇಂಚಿನ ಈ ಸ್ಮಾರ್ಟ್ ಟಿವಿ 15,990 ರೂ. ಬೆಲೆ ಹೊಂದಿದೆ. ಇದು 81ಸಿಎಂ ಅಂದರೆ 32 ಇಂಚು ಗಾತ್ರ ಹೊಂದಿದ್ದು, LED ಸ್ಕ್ರೀನ್, ಹೆಚ್‌ಡಿ ರೆಸಲ್ಯೂಶನ್, 1920 x 1080 ಪಿಕ್ಸೆಲ್ ಜೊತೆಗೆ 60 Hz ರಿಫ್ರೆಶ್ ರೇಟ್ ಹೊಂದಿದೆ. ಜೊತೆಗೆ 1.5GB RAM ಜೊತೆಗೆ 16GB ಸ್ಟೋರೆಜ್ ಸಾಮರ್ಥ್ಯವನ್ನು ಸಹ ಹೊಂದಿದೆ.
4- ಐಟೆಲ್ G ಸಿರೀಸ್ ಸ್ಮಾರ್ಟ್ ಟಿವಿ: 43 ಇಂಚು ಗಾತ್ರದ ಈ ಟಿವಿ 18,999 ರೂ. ಬೆಲೆ ಹೊಂದಿದೆ. 108ಸಿಎಂ ಅಂದರೆ 43 ಇಂಚು ಗಾತ್ರದ ಸ್ಮಾರ್ಟ್ ಟಿವಿ ಡಿಎಲ್‌ಇಡಿ ತರಹದ ಸ್ಕ್ರೀನ್ ಹೊಂದಿದೆ. ಇನ್ನು ಇದು 1920x1080 ಪಿಕ್ಸೆಲ್ ರೆಸಲ್ಯೂಶನ್ A+ ರೀತಿಯ ಪ್ಯಾನೆಲ್, ವೈಡ್ ವೀವಿಂಗ್ ಆಂಗಲ್, ಹಾಗೂ 60Hz ರಿಫ್ರೆಸ್ ರೇಟ್ ಹೊಂದಿದೆ.
5- ಹೈಯರ್ K800GT ಗೂಗಲ್ ಟಿವಿ: ಈ ಸ್ಮಾರ್ಟ್‌ಟಿವಿಯನ್ನು 15,990 ರೂ. ಗಳಿಗೆ ನೀವು ಖರೀದಿ ಮಾಡಬಹುದಾಗಿದೆ. 32 ಇಂಚಿನ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, 2160 x 3840 ಪಿಕ್ಸೆಲ್ ರೆಸಲ್ಯೂಶನ್ ರೇಟ್ ಹೊಂದಿದೆ. ಜೊತೆ ಇದು 1.5 GB ಹಾಗೂ 8 GB ಸ್ಟೋರೆಜ್ ಸಾಮರ್ಥ್ಯ ಹೊಂದಿದೆ.


Click it and Unblock the Notifications








