Home
Gadgets

Smartwatches; 2000 ರೂ. ಒಳಗೆ ನೀವು ಖರೀದಿ ಮಾಡಬಹುದಾದ ಬೆಸ್ಟ್ ಸ್ಮಾರ್ಟ್‌ವಾಚ್‌ಗಳು!

ಸ್ಮಾರ್ಟ್‌ವಾಚ್‌ಗಳು (Smartwatches) ಇಂದು ಜನರಿಗೆ ಮೊಬೈಲ್‌ನಷ್ಟೇ ಅಗತ್ಯವಾದ ಸಾಧನವಾಗಿದೆ. ಯುವಕರು ಸೇರಿದಂತೆ ಮಧ್ಯ ವಯಸ್ಸಿನವರು ಕೂಡ ಸ್ಮಾರ್ಟ್‌ವಾಚ್‌ಗಳನ್ನು ಖರೀದಿಸಲು ಮುಗಿ ಬೀಳುತ್ತಿರುವುದನ್ನು ಗಮನಿಸಬಹುದಾಗಿದೆ. ಆದರೆ, ಎಲ್ಲರಿಗೂ ಹೆಚ್ಚಿನ ಬೆಲೆಯ ಸ್ಮಾರ್ಟ್‌ವಾಚ್‌ ಖರೀದಿ ಮಾಡಲು ಸಾಧ್ಯವಿರುವುದಿಲ್ಲ. ಅಂತಹವರು ಬಜೆಟ್‌ ಫ್ರೆಂಡ್ಲಿ ವಾಚ್‌ಗಳನ್ನು ಖರೀದಿ ಮಾಡಬಹುದು.

ಹೌದು, ವಿವಿಧ ಕಂಪೆನಿಗಳು ಭಿನ್ನ ಫೀಚರ್ಸ್ ಆಯ್ಕೆಯೊಂದಿಗೆ ಹೊಸ ಹೊಸ ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡುತ್ತಾ ಬಂದಿವೆ, ಈ ನಡುವೆ ರೆಡ್ಮಿ, ಫೈರ್‌ ಬೋಲ್ಟ್, ನಾಯ್ಸ್‌, (Redmi, Fire Boltt, Noise) ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿವೆ. ಅದರಂತೆ ನೀವು ಈಗ 2000 ರೂ.ಗಿಂತ ಕಡಿಮೆ ಬೆಲೆ ಇರುವ ಹಾಗೂ ಉತ್ತಮ ಫೀಚರ್ಸ್ ಇರುವ ವಾಚ್‌ಗಳಲ್ಲಿ ಖರೀದಿ ಮಾಡಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಅವುಗಳ ಕುರಿತಾದ ಲಿಸ್ಟ್‌.

Smartwatch; 2000 ರೂ. ಒಳಗೆ ನೀವು ಖರೀದಿ ಮಾಡಬಹುದಾದ ಸ್ಮಾರ್ಟ್‌ವಾಚ್‌ಗಳು!

1- ನಾಯ್ಸ್‌ ಕಲರ್ ಫಿಟ್ ಐಕಾನ್ 2 ಎಲೈಟ್ ಎಡಿಷನ್: ಇದು 1799 ರೂ. ಮೂಲ ಬೆಲೆ ಹೊಂದಿರುವ ಈ ಸ್ಮಾರ್ಟ್‌ವಾಚ್ ಒಂದು ಬಾರಿಯ ಪೂರ್ಣ ಚಾರ್ಜಿಂಗ್‌ನಲ್ಲಿ 7 ದಿನಗಳ ಕಾಲ ಬಳಕೆ ಮಾಡಬಹುದಾಗಿದೆ. ಸಖತ್ ಸ್ಟೈಲೀಶ್ ಆಗಿರುವ ಈ ವಾಚ್ ಚೌಕಾಕಾರದಲ್ಲಿದೆ. 240 x 280 ಪಿಕ್ಸಲ್‌ ಜೊತೆಗೆ 1.8 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಹೊಂದಿದೆ. ಇನ್ನೂ ಈ ವಾಚ್ ನೀರಿನಿಂದ ರಕ್ಷಣೆ ಪಡೆಯುವ ತಂತ್ರಜ್ಞಾನ, ಕಾಲ್ ರಿಸೀವ್ ಮಾಡುವ ಅವಕಾಶದ ಜೊತೆಗೆ ಫಿಟ್ನೆಸ್‌ ಟ್ರ್ಯಾಕಿಂಗ್‌ ಅನ್ನು ಸಹ ಒಳಗೊಂಡಿದೆ.

2- ಬೋಟ್‌ ಸ್ಟೋರ್ಮ್ ಕಾಲ್‌ 2: ಇದು 1,299ರೂ ಮೂಲ ಬೆಲೆಯನ್ನು ಹೊಂದಿದ್ದು ಚೌಕಾಕಾರದ ಔಟ್‌ಲುಕ್ ಹೊಂದಿದೆ. ಇದು 240 x 284 ಪಿಕ್ಸೆಲ್ ಜೊತೆಗೆ 1.83 ಇಂಚಿನ ಡಿಸ್‌ಪ್ಲೇ ಹೊಂದಿದೆ. 230 mAh ಬ್ಯಾಟರಿ ಜೊತೆಗೆ ಒಮ್ಮೆ ಪೂರ್ಣ ಚಾರ್ಜಿಂಗ್‌ ಜೊತೆಗೆ 6 ದಿನಗಳ ವರೆಗೆ ಬಳಸಬಹುದಾದ ಸೌಲಭ್ಯ ಹೊಂದಿದೆ. ಜೊತೆಗೆ ನೀರಿನಿಂದ ರಕ್ಷಣೆ ಪಡೆಯುವುದು, ಕಾಲ್ ರಿಸೀವ್ ಮಾಡುವುದು ಹಾಗೂ ಫಿಟ್ನೆಸ್‌ ಟ್ರ್ಯಾಕರ್ ಜೊತೆಗೆ ಇನ್ನೂ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

3- ನಾಯ್ಸ್‌ ಕಲರ್‌ಫಿಟ್ ಕ್ಯಾಲಿಬರ್: ಚೌಕಾಕಾರದೊಂದಿಗೆ ಸಖತ್ ಸ್ಟೈಲಿಶ್ ಆಗಿರುವ ಈ ಸ್ಮಾರ್ಟ್‌ವಾಚ್ ಪಾಲಿಕಾರ್ಬೊನೇಟ್ ಬಾಡಿ (Polycarbonate Body) ಹೊಂದಿದೆ, 1,999 ರೂ. ಮೂಲ ಬೆಲೆ ಹೊಂದಿದೆ. 240 x 280 ಜೊತೆಗೆ 1.69 ಇಂಚಿನ ಎಕ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ಸ್ಕ್ರೀನ್‌ ಸ್ಕ್ರಾಚ್‌ ಆಗವುದನ್ನು ತಡೆಯುವ ತಂತ್ರಜ್ಞಾನ. 300 mAh ಬ್ಯಾಟರಿ ಜೊತೆಗೆ ಒಮ್ಮೆ ಪೂರ್ಣ ಚಾರ್ಚ್ ಮಾಡಿದರೆ 15 ದಿನಗಳವರೆಗೆ ಬಳಸಬಹುದಾಗಿದೆ. ಹಾಗೂ ನೀರಿನಿಂದ ರಕ್ಷಣೆ, ಫಿಟ್ನೆಸ್ ಟ್ರ್ಯಾಕಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ವಾಚ್ ಹೊಂದಿದೆ.

4- ಫೈರ್ ಬೋಲ್ಟ್ ನಿಜಾ ಕಾಲಿಂಗ್ ಪ್ರೊ: 1,499 ರೂ. ಬೆಲಯ ಈ ಸ್ಮಾರ್ಟ್‌ವಾಚ್ ಚೌಕಾಕಾರದಲ್ಲಿದ್ದು, ಸಿಲಿಕಾನ್‌ ಪಟ್ಟಿ ಹೊಂದಿ ಸಖತ್ ಸ್ಟೈಲಿಶ್ ಆಗಿ ಕಾಣಲಿದೆ. 240 x 280 ಪಿಕ್ಸೆಲ್‌ ಜೊತೆಗೆ 1.69 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನೂ ಇದು ನೀರಿನಿಂದ ರಕ್ಷಣೆ ಪಡೆಯುವ ತಂತ್ರಜ್ಞಾನ, ಕಾಲ್ ರಿಸೀವ್ ಮಾಡುವುದು, ಫಿಟ್ನೆಸ್‌ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ ಇದರ ಜೊತೆಗೆ ಈ ವಾಚ್ ಬರೋಬ್ಬರಿ 5 ದಿನಗಳವರೆಗೆ ಬಳಸಬಹುದಾದ ಬ್ಯಾಟರಿ ಸೌಲಭ್ಯ ಹೊಂದಿದೆ.

5- ನಾಯ್ಸ್ ಕಲರ್‌ ಫಿಟ್ ಪ್ರೋ 2: ಇದು 1,299 ರೂ. ಬೆಲೆ ಹೊಂದಿದ್ದು, ಚೌಕಾಕಾರದ ಜೊತೆಗೆ ರಬ್ಬರ್ ಪಟ್ಟಿಯನ್ನು ಹೊಂದಿದೆ, 240 x 240 ಪಿಕ್ಸೆಲ್‌ ಜೊತೆಗೆ 1.3 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದೆ. ನೀರಿನಿಂದ ರಕ್ಷಣೆ, ಫಿಟ್ನೆಸ್ ಟ್ರಾಕಿಂಗ್ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ಈ ವಾಚ್ ಒಳಗೊಂಡಿದೆ.

6- ಬೋಟ್ ವೇವ್ ನಿಯೋ : 1,799 ರೂ ಬೆಲೆಯ ಈ ವಾಚ್, ಚೌಕಾಕರದ ಜೊತೆಗೆ ಸಿಲಿಕಾನ್ ಪಟ್ಟಿಯನ್ನು ಹೊಂದಿದೆ, 454 x 454 ಪಿಕ್ಸೆಲ್‌ ಜೊತೆಗೆ 1.69 ಇಂಚಿನ ಡಿಸ್‌ಪ್ಲೇ ಹೊಂದಿದೆ. ನೀರಿನಿಂದ ರಕ್ಷಣೆ, ಕಾಲ್‌ ರಿಸೀವ್ ಫಿಟ್ನೆಸ್‌ ಟ್ರ್ಯಾಕರ್, 220 mAh ಬ್ಯಾಟರಿ ಜೊತೆಗೆ ಒಂದು ಭಾರಿಯ ಚಾರ್ಜ್ ಮಾಡಿದರೆ 7 ದಿನಗಳವರೆಗೆ ಬಳಸಬಹುದಾದ ಸಾಮಾರ್ಥ್ಯ ಹೊಂದಿದೆ.

ಇದರ ಜೊತೆಗೆ ನಾಯ್ಸ್‌ ಕಲರ್ ಫಿಟ್‌ ಪಲ್ಸ್‌ ಗ್ರ್ಯಾಂಡ್, ಫೈರ್ ಬೋಲ್ಟ್‌ ಎಪಿಕ್ ಪ್ಲಸ್, ಬೀಟ್XP ಮರ್ವ್ ನಿಯೋ (beatXP Marv Neo), ಬೋಟ್ ವೇವ್ ಬೀಟ್, ಫಾಸ್ಟ್ರಾಕ್‌ ರಿವೋಲ್ಟ್‌FS1 ಇವುಗಳು ನೀವು ಖರೀದಿ ಮಾಡಬಹುದಾದ 2000ರೂ. ಗಿಂತ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್‌ವಾಚ್‌ಗಳಾಗಿವೆ.

Best Mobiles in India

English summary
If you are thinking of buying Smartwatches under Rs 2000 and with good features, here is a list of them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+