ಹೆಡ್‌ಫೋನ್ ಜಾಕ್ ಇಲ್ಲದ ಫೋನ್ ಖರೀದಿಸಿದ್ದೀರಾ?..ಬ್ಲೂಟೂತ್ ಹೆಡ್‌ಫೋನ್ ಆಯ್ಕೆ ಹೀಗಿರಲಿ!!
ವಯರ್‌ಲೆಸ್ ಹೆಡ್‌ಫೋನ್‌ಗಳಲ್ಲಿ ಬ್ಲೂಟೂತ್ 5.೦ ಕಾರ್ಯನಿರ್ವಹಣೆ ಹೇಗಿರಲಿದೆ ಎಂಬುದನ್ನು ತಿಳಿಯಿರಿ.!!
ಮಾರುಕಟ್ಟೆಯಲ್ಲಿ ಹೊಸದಾಗಿ ಬರುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಹೆಡ್‌ಫೋನ್ ಜಾಕ್ ಅನ್ನು ಅಳವಿಡಿಸುತ್ತಿಲ್ಲ. ಹೆಡ್‌ಸೆಡ್ ಧರಿಸಲು ಇನ್ನು ಬ್ಲೂಟೂತ್ ಮೊರೆಹೋಗಬೇಕಿದ್ದು, ಬ್ಲೂಟೂತ್ 5.೦ ಬಳಕೆ ಹೆಚ್ಚಾಗುತ್ತಿದೆ. ಹಾಗಾಗಿ, ಶೇರ್‌ಇಟ್ ಆಪ್‌ನಿಂದಾಗಿ ಕಳೆಗುಂದಿದ್ದ ಬ್ಲೂಟೂತ್ ತಂತ್ರಜ್ಞಾನಕ್ಕೆ ಮೆರುಗು ಸಿಕ್ಕಿದೆ.!!
ನೂತನ ವಯರ್‌ಲೆಸ್ ಹೆಡ್‌ಫೋನ್‌ಗಳು ಬ್ಲೂಟೂತ್ 5.೦ ವರ್ಷನ್ ತಂತ್ರಜ್ಞಾನವನ್ನು ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿದ ನಂತರ ಬ್ಲೂಟೂತ್ ತಂತ್ರಜ್ಞಾನಕ್ಕೆ ಇದೀಗ ಇನ್ನಿಲ್ಲದ ಬೇಡಿಕೆ ಶುರುವಾಗಿದೆ. ಹಾಗಾದರೆ, ವಯರ್‌ಲೆಸ್ ಹೆಡ್‌ಫೋನ್‌ಗಳಲ್ಲಿ ಬ್ಲೂಟೂತ್ 5.೦ ಕಾರ್ಯನಿರ್ವಹಣೆ ಹೇಗಿರಲಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವಯರ್‌ಲೆಸ್ ಹೆಡ್‌ಫೋನ್‌ಗಳಿಗೆ ಬೇಡಿಕೆ.!!
ವಾಕಿಂಗ್ ಮಾಡುವಾಗ, ಜಾಕಿಂಗ್ ಅಥವಾ ಜಿಮ್‌ನಲ್ಲಿ ಕಸರತ್ತು ಮಾಡುವಾಗಸಂಗೀತ ಆಲಿಸಲು ವಯರ್ ಇರುವ ಹೆಡ್‌ಫೋನ್ ಗಳಿಗಿಂತ ವಯರ್ ಲೆಸ್‌ಹೆಡ್‌ಫೋನ್‌ಗಳೇ ಹೆಚ್ಚು ಅನುಕೂಲಕರವಾಗಿವೆ. ವಯರ್‌ನ ಕಿರಿಕಿರಿ ಇಲ್ಲದೆ ಸಂಗೀತ ಆಲಿಸಬಹುದಾದ ವಯರ್‌ಲೆಸ್ ಹೆಡ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಧ್ವನಿ ಸಂಕೇತಗಳು ಸ್ಪಷ್ಟವಾಗಿವೆ.!!
ಮೊದಲು ಬರುತ್ತಿದ್ದ ವಯರ್ ಲೆಸ್ ಹೆಡ್‌ಫೋನ್‌ಗಳಲ್ಲಿ ಧ್ವನಿ ಸರಿಯಾಗಿ ಕೇಳಿಸುವುದಿಲ್ಲ ಎಂಬ ದೂರಿತ್ತು. ಆದರೆ, ಬ್ಲ್ಯೂಟೂತ್ 5.0 ವರ್ಷನ್ ಹೆಚ್ಚು ವೇಗವಾಗಿ ಮತ್ತು ಸ್ಪಷ್ಟವಾಗಿ ಧ್ವನಿ ಸಂಕೇತಗಳನ್ನು ಡಿವೈಸ್ ನಿಂದ ಹೆಡ್‌ಫೋನ್‌ಗೆ ರವಾನಿಸುತ್ತದೆ. ಹಾಗಾಗಿ, ಉತ್ತಮ ಗುಣಮಟ್ಟದ ಧ್ವನಿ ಕೇಳಲು ಈ ಹೊಸ ವರ್ಷನ್ ಹೆಡ್‌ಫೋನ್‌ಗಳು ಉತ್ತಮವಾಗಿವೆ.!!

ನಾಯ್ಸ್ ರೆಡ್ಯೂಸ್ ಹೆಡ್‌ಫೋನ್!!
ಮೊದಲು ಬರುತ್ತಿದ್ದ ಹೆಡ್‌ಫೋನ್‌ಗಳು ಬ್ಲೂಟೂತ್ ಜೊತೆಗೆ ಸರಿಯಾದ ಸಂಪರ್ಕವನ್ನೇ ಸಾಧಿಸುತ್ತಿರಲಿಲ್ಲ. ಆದರೆ, ನೂತನವಾಗಿ ಬಿಡುಗಡೆಯಾಗುತ್ತಿರುವ ಬ್ಲ್ಯೂಟೂತ್ 5.0 ವರ್ಷನ್ ಹೊಂದಿರುವ ಹೆಡ್‌ಸೆಟ್‌ಗಳು 'ನಾಯ್ಸ್ ರೆಡ್ಯೂಸ್' ಮಾಡುವ ತಂತ್ರಜ್ಞಾನವನ್ನು ಹೊಂದಿವೆ.!!

ಬ್ಯಾಟರಿ ಬಾಳಿಕೆ ಕೂಡ ಹೆಚ್ಚಿವೆ.!!
ಬ್ಯಾಟರಿಯ ಚಾರ್ಜ್ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕಡಿಮೆ ಚಾರ್ಜ್ ಬಳಸಿಕೊಂಡು ಕಾರ್ಯನಿರ್ವಹಿಸುವ ವ್ಯವಸ್ಥೆ ಹೊಸ ಹೆಡ್‌ಫೋನ್‌ಗಳಲ್ಲಿದೆ. ಹೊಸ ತಂತ್ರಜ್ಞಾನದ ಈ ಹೆಡ್ ಫೋನ್ ಗಳಲ್ಲಿ ಬ್ಯಾಟರಿ ಬಾಳಿಕೆಯ ಗುಣಮಟ್ಟವೂ ಉತ್ತಮವಾಗಿದೆ ಎನ್ನಬಹುದು.!!


ಬೆಲೆ ಕೂಡ ಹೆಚ್ಚಿರುತ್ತದೆ.!!
ಈಗ ಮಾರುಕಟ್ಟೆಗೆ ಬಂದಿರುವ ಅತ್ಯುತ್ತಮ ಹೆಡ್‌ಫೋನ್‌ಗಳು ಖರೀದಿಸಲು ನೀವು ಸ್ವಲ್ಪ ಹೆಚ್ಚೇ ಹಣ ತೆರಬೇಕಾಗುತ್ತದೆ.! ಹೊಸ ತಂತ್ರಜ್ಞಾನದಿಂದ ತಯಾರಾಗಿರುವ ಹೆಡ್‌ಫೋನ್‌ಗಳು ಉತ್ತಮ ಧ್ವನಿ ವಾಹಕಗಳಾಗಿರುವುದರಿಂದ ಅವುಗಳ ಬೆಲೆ ಹೆಚ್ಚಾಗಿರುತ್ತವೆ ಎನ್ನುತ್ತಾರೆ ತಜ್ಞರು.!!


Click it and Unblock the Notifications








