Home
Gadgets

6 ಗ್ರಾಂ ಕ್ಕಿಂತ ಕಡಿಮೆ ತೂಕದ boAt Valour Ring 1 ಸ್ಮಾರ್ಟ್‌ರಿಂಗ್ ಬಿಡುಗಡೆ!

ಭಾರತೀಯ ವೇರಬಲ್ ಮಾರುಕಟ್ಟೆಗೆ boAt ತನ್ನ ಹೊಸ ಪ್ರಯೋಗವಾಗಿ Valour Ring 1 ಸ್ಮಾರ್ಟ್‌ರಿಂಗ್ ಅನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಸ್ಮಾರ್ಟ್ ವಾಚ್ ಧರಿಸುವ ಅಗತ್ಯವಿಲ್ಲದೆ, ದಿನನಿತ್ಯದ ಆರೋಗ್ಯ ಮತ್ತು ಫಿಟ್‌ನೆಸ್ ಮಾಹಿತಿಯನ್ನು ಹಿನ್ನಲೆಯಲ್ಲಿ ಸಂಗ್ರಹಿಸುವ ಉದ್ದೇಶದಿಂದ ಈ ಡಿವೈಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು, ಬೆರಳಲ್ಲಿ ಸುಲಭವಾಗಿ ಧರಿಸಬಹುದಾದ ಈ ಸ್ಮಾರ್ಟ್ ರಿಂಗ್, ಸರಳತೆ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ತರುವ ಪ್ರಯತ್ನವಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದರೆ, boAt ಪರಿಚಯಿಸಿರುವ ಹೊಸ Valour Ring 1 ಸ್ಮಾರ್ಟ್‌ರಿಂಗ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

boAt Valour Ring 1 ಸ್ಮಾರ್ಟ್‌ರಿಂಗ್: ವಿನ್ಯಾಸ ಮತ್ತು ಪ್ರಮುಖ ವೈಶಿಷ್ಟ್ಯಗಳು
ಹೊಸ boAt Valour Ring 1 ಹಗುರವಾದ ಟೈಟಾನಿಯಂ ಫ್ರೇಮ್‌ನಿಂದ ನಿರ್ಮಿತವಾಗಿದ್ದು, ತೂಕ 6 ಗ್ರಾಂಗೂ ಕಡಿಮೆ ಇದೆ. ಸ್ಕ್ರೀನ್ ಇಲ್ಲದ ವಿನ್ಯಾಸವೇ ಇದರ ವಿಶೇಷತೆಯಾಗಿದ್ದು, ಯಾವುದೇ ಡಿಸ್ಪ್ಲೇ ಅಥವಾ ನೋಟಿಫಿಕೇಷನ್‌ಗಳಿಲ್ಲದೆ, ಬಳಕೆದಾರರ ಆರೋಗ್ಯದ ಮೇಲೆ ಮಾತ್ರ ಗಮನ ಕೇಂದ್ರೀಕರಿಸುವುದು ಇದರ ಕಾರ್ಯನಿರ್ವಹಣೆ. ಹಾಗಾಗಿ, ಸಾಂಪ್ರದಾಯಿಕ ವಾಚ್‌ಗಳನ್ನು ಧರಿಸುವವರಿಗೆ ಇದು ಅಡ್ಡಿಯಾಗುವುದಿಲ್ಲ.

ಇನ್ನು ಫೀಚರ್ಸ್ ಕುರಿತು ನೋಡುವುದಾದರೆ, ಆರೋಗ್ಯ ಟ್ರ್ಯಾಕಿಂಗ್ ವಿಚಾರದಲ್ಲಿ Valour Ring 1 ಸಂಪೂರ್ಣ ಪ್ಯಾಕೇಜ್‌ನಂತೆ ಕಾಣಿಸುತ್ತದೆ. 24x7 ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, HRV ವಿಶ್ಲೇಷಣೆ, ಸ್ಕಿನ್ ತಾಪಮಾನ ಮಾಪನ, ಒತ್ತಡ ಮಟ್ಟದ ಮಾಹಿತಿ ಮತ್ತು VO2 Max ಅಂದಾಜು ಮುಂತಾದ ಪ್ರಮುಖ ಫೀಚರ್‌ಗಳು ಇದರಲ್ಲಿ ಲಭ್ಯ. ದಿನನಿತ್ಯದ ಹೆಜ್ಜೆ ಎಣಿಕೆ ಮತ್ತು ಚಟುವಟಿಕೆ ಟ್ರ್ಯಾಕಿಂಗ್ ಸಹ ಇದರ ಭಾಗವಾಗಿದೆ.

ನಿದ್ರೆಯ ಗುಣಮಟ್ಟವನ್ನು ಗಮನಿಸುವ ಬಳಕೆದಾರರಿಗೆ ಈ Valour Ring 1 ಸ್ಮಾರ್ಟ್‌ರಿಂಗ್ ಉಪಯುಕ್ತವಾಗಬಹುದು. ನಿದ್ರೆಯ ಹಂತಗಳು, ಆಳವಾದ ನಿದ್ರೆ, ಲಘು ನಿದ್ರೆ ಹಾಗೂ ದಿನದ ವೇಳೆ ತೆಗೆದುಕೊಳ್ಳುವ ನಾಪ್‌ಗಳನ್ನೂ ಇದು ಪತ್ತೆಹಚ್ಚುತ್ತದೆ. ಈ ಎಲ್ಲಾ ಮಾಹಿತಿಯನ್ನು ಹೊಸ ವಿನ್ಯಾಸದ boAt Crest ಆ್ಯಪ್ ಮೂಲಕ ಸ್ಪಷ್ಟವಾಗಿ ನೋಡಬಹುದು.

6 ಗ್ರಾಂ ಕ್ಕಿಂತ ಕಡಿಮೆ ತೂಕದ boAt Valour Ring 1 ಸ್ಮಾರ್ಟ್‌ರಿಂಗ್ ಬಿಡುಗಡೆ!
Photo Credit:
Photo credit: Boat

ಫಿಟ್‌ನೆಸ್ ಪ್ರಿಯರಿಗೆ boAt Valour Ring 1 40ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಒದಗಿಸುತ್ತದೆ. ಓಟ, ವಾಕಿಂಗ್, ಸೈಕ್ಲಿಂಗ್, ಸ್ಟ್ರೆಂಗ್ತ್ ಟ್ರೈನಿಂಗ್ ಸೇರಿದಂತೆ ವಿವಿಧ ವ್ಯಾಯಾಮ ಚಟುವಟಿಕೆಗಳನ್ನು ಇದು ಸಪೋರ್ಟ್ ಮಾಡುತ್ತದೆ. ಹಗುರ ಮತ್ತು ಕಾಂಪ್ಯಾಕ್ಟ್ ವಿನ್ಯಾಸದ ಕಾರಣ, ವ್ಯಾಯಾಮ ಮಾಡುವಾಗಲೂ ಧರಿಸಿರುವ ಅನುಭವವೇ ಕಡಿಮೆ ಆಗಿರುತ್ತದೆ.

ಬ್ಯಾಟರಿ ಲೈಫ್ ವಿಷಯದಲ್ಲಿ boAt ಈ ಸ್ಮಾರ್ಟ್ ರಿಂಗ್ ಮೇಲೆ ಹೆಚ್ಚಿನ ಒತ್ತು ನೀಡಿದೆ. ಒಂದೇ ಬಾರಿ ಚಾರ್ಜ್ ಮಾಡಿದರೆ 15 ದಿನಗಳವರೆಗೆ ಬಳಸಬಹುದೆಂದು ಕಂಪನಿ ಹೇಳಿಕೊಂಡಿದೆ. USB Type-C ಚಾರ್ಜಿಂಗ್ ಡಾಕ್ ಮೂಲಕ 90 ನಿಮಿಷಗಳೊಳಗೆ ಪೂರ್ಣ ಚಾರ್ಜ್ ಸಾಧ್ಯ. 5 ATM ವಾಟರ್ ರೆಸಿಸ್ಟನ್ಸ್ ಇರುವುದರಿಂದ, ಮಳೆ, ಸ್ನಾನ ಅಥವಾ ಈಜುವಾಗಲೂ ಇದನ್ನು ಸುರಕ್ಷಿತವಾಗಿ ಬಳಸಬಹುದು.

Valour Ring 1 ಸ್ಮಾರ್ಟ್‌ರಿಂಗ್: ಬೆಲೆ ಮತ್ತು ಲಭ್ಯತೆ
boAt Valour Ring 1 ಬೆಲೆ ಭಾರತದಲ್ಲಿ ರೂ. 11,999 ಆಗಿದ್ದು, Amazon, Flipkart, boAt ಅಧಿಕೃತ ವೆಬ್‌ಸೈಟ್ ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ. ಕಾರ್ಬನ್ ಬ್ಲ್ಯಾಕ್ ಮ್ಯಾಟ್ ಬಣ್ಣದಲ್ಲಿ ಬಿಡುಗಡೆಯಾಗಿರುವ ಈ ರಿಂಗ್ 7 ರಿಂದ 12 ರವರೆಗೆ ಗಾತ್ರದಲ್ಲಿ ದೊರೆಯುತ್ತದೆ. ಸರಿಯಾದ ಫಿಟ್ ಆಯ್ಕೆ ಮಾಡಲು ಗ್ರಾಹಕರಿಗೆ ಮನೆ ಬಳಕೆಗಾಗಿ ಸೈಜಿಂಗ್ ಕಿಟ್ ಸಹ ಒದಗಿಸಲಾಗುತ್ತಿದೆ. ಜೊತೆಗೆ ಖರೀದಿದಾರರಿಗೆ ವಿಶೇಷ ಆರೋಗ್ಯ ಪ್ರಯೋಜನ ಪ್ಯಾಕೇಜ್‌ಗೂ ಪ್ರವೇಶ ಸಿಗುತ್ತದೆ.

boAt Valour Ring 1 ಸ್ಮಾರ್ಟ್ ವಾಚ್‌ಗೆ ಪರ್ಯಾಯವಾಗಿ ಆರೋಗ್ಯವನ್ನು ಸರಳವಾಗಿ ಟ್ರ್ಯಾಕ್ ಮಾಡಲು ಬಯಸುವವರಿಗೆ ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮಿದೆ. ದೀರ್ಘ ಬ್ಯಾಟರಿ ಲೈಫ್, ಡಿಸ್ಕ್ರೀಟ್ ವಿನ್ಯಾಸ ಮತ್ತು ಅಗತ್ಯವಾದ ಎಲ್ಲಾ ಆರೋಗ್ಯ ಫೀಚರ್‌ಗಳೊಂದಿಗೆ, ಇದು ಭಾರತದಲ್ಲಿ ಸ್ಮಾರ್ಟ್ ರಿಂಗ್ ವಿಭಾಗವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಸಾಧ್ಯತೆ ಇದೆ. ನೀವು ಕೂಡ ಸ್ಮಾರ್ಟ್‌ರಿಂಗ್ ಬಳಸಲು ಉತ್ಸುಕರಾಗಿದ್ದೀರಾ?, ಹಾಗಾದರೆ, ಈ ಕೆಳಗೆ ಹೌದು ಎಂದು ಕಾಮೆಂಟ್ ಮಾಡಿ. ಇದರ ವಿಮರ್ಶೆಯನ್ನು ಬಹುಬೇಗ ತರುತ್ತೇವೆ.!

Best Mobiles in India

English summary
boAt has launched the Valour Ring 1 smart ring in India, offering discreet health and fitness tracking without the need for a smartwatch. Designed to be worn on the finger, it collects daily wellness data in the background while focusing on simplicity and comfort.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+