3,499 ರೂ.ಗೆ ಹೊಸ boAt Chrome Iris ಸ್ಮಾರ್ಟ್‌ವಾಚ್ ಬಿಡುಗಡೆ!
ಭಾರತದ ವೇಯರಬಲ್ ಮಾರುಕಟ್ಟೆಗೆ boAt ತನ್ನ ಹೊಸ Chrome Iris ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ. ಸ್ಟೈಲಿಶ್ ವಿನ್ಯಾಸ, ಪ್ರೀಮಿಯಂ ಫಿನಿಷ್ ಮತ್ತು ದಿನನಿತ್ಯದ ಬಳಕೆಗೆ ಅಗತ್ಯವಿರುವ ಸ್ಮಾರ್ಟ್ ಫೀಚರ್‌ಗಳ ಸಂಯೋಜನೆಯೊಂದಿಗೆ ಈ ಹೊಸ ಮಾದರಿಯು Chrome Iris ಸ್ಮಾರ್ಟ್‌ವಾಚ್ ಗ್ರಾಹಕರ ಗಮನ ಸೆಳೆಯುತ್ತಿದ್ದು, ಕಡಿಮೆ ದಪ್ಪದ ಮೆಟಲ್ ಬಾಡಿ ಮತ್ತು AMOLED ಡಿಸ್ಪ್ಲೇ ಹೊಂದಿರುವ Chrome Iris, ಫ್ಯಾಷನ್ ಮತ್ತು ತಂತ್ರಜ್ಞಾನ ಎರಡನ್ನೂ ಒಟ್ಟಿಗೆ ನೀಡುತ್ತದೆ.
Chrome Iris ಸ್ಮಾರ್ಟ್‌ವಾಚ್: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ boAt Chrome Iris ಸ್ಮಾರ್ಟ್‌ವಾಚ್‌ನ್ನು ರೂ. 3,499 ಬೆಲೆಯಲ್ಲಿ ಪರಿಚಯಿಸಲಾಗಿದೆ. Amazon, Flipkart, boAt India ಅಧಿಕೃತ ವೆಬ್‌ಸೈಟ್ ಹಾಗೂ ಆಯ್ದ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಇದು ಖರೀದಿಗೆ ಲಭ್ಯವಿದ್ದು, ಗ್ರಾಹಕರು Metal Gold, Rose Pink, Velvet Wine, Silk Skin ಮತ್ತು Frosted Sky ಎಂಬ ಆಕರ್ಷಕ ಬಣ್ಣ ಆಯ್ಕೆಗಳು ನೀಡಲಾಗಿವೆ.
Chrome Iris ಸ್ಮಾರ್ಟ್‌ವಾಚ್: ಪ್ರಮುಖ ವೈಶಿಷ್ಟ್ಯಗಳು
ಹೊಸ boAt Chrome Iris ಸ್ಮಾರ್ಟ್‌ವಾಚ್ ನಲ್ಲಿ 1.32 ಇಂಚಿನ AMOLED ಡಿಸ್ಪ್ಲೇ ನೀಡಲಾಗಿದ್ದು, ಇದು 466x466 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. Always-On Display ಸಪೋರ್ಟ್ ಇರುವ ಈ ಸ್ಕ್ರೀನ್, ಗರಿಷ್ಠವಾಗಿ 1000 ನಿಟ್ಸ್ ಪೀಕ್ ಬ್ರೈಟ್‌ನೆಸ್ ನೀಡುವ ಮೂಲಕ ಹೊರಾಂಗಣದಲ್ಲೂ ಸ್ಪಷ್ಟ ವೀಕ್ಷಣಾ ಅನುಭವ ಒದಗಿಸುತ್ತದೆ. ಕೇವಲ 8 ಮಿಮೀ ಸ್ಲಿಮ್ ಪ್ರೊಫೈಲ್ ಇರುವುದರಿಂದ ಇದು ಕೈಗೆ ತೂಕವಾಗದ ಆರಾಮದಾಯಕ ಫಿಟ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಆರೋಗ್ಯ ಮತ್ತು ಫಿಟ್ನೆಸ್ ವಿಭಾಗದಲ್ಲಿ Chrome Iris ಹಲವು ಅಗತ್ಯ ಫೀಚರ್‌ಗಳನ್ನು ಒಳಗೊಂಡಿದೆ. ನಿರಂತರ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ನಿದ್ರೆ ವಿಶ್ಲೇಷಣೆ, ಮಾರ್ಗದರ್ಶಿತ ಉಸಿರಾಟ ವ್ಯಾಯಾಮಗಳು, ದಿನನಿತ್ಯದ ಸ್ಟೆಪ್ಸ್ ಮತ್ತು ಕ್ಯಾಲರಿ ಲೆಕ್ಕಾಚಾರ ಜೊತೆಗೆ Female Wellness Tracking ಕೂಡ ಲಭ್ಯವಿದೆ. ಫಿಟ್ನೆಸ್ ಆಸಕ್ತರಿಗಾಗಿ ವಿವಿಧ ಸ್ಪೋರ್ಟ್ಸ್ ಮೋಡ್‌ಗಳನ್ನೂ ಈ ಸ್ಮಾರ್ಟ್‌ವಾಚ್ ಬೆಂಬಲಿಸುತ್ತದೆ.
ಸ್ಮಾರ್ಟ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು boAt Chrome Iris ನಲ್ಲಿ ಬ್ಲೂಟೂತ್ ಕಾಲಿಂಗ್ ಸಪೋರ್ಟ್ ನೀಡಲಾಗಿದೆ. ಕ್ಲೌಡ್ ಆಧಾರಿತ ವಾಚ್ ಫೇಸ್‌ಗಳು, ಕಸ್ಟಮೈಸ್ ಮಾಡಬಹುದಾದ ಮೆನು ಲೇಔಟ್ ಮತ್ತು 2.5D ಯೂಸರ್ ಇಂಟರ್‌ಫೇಸ್ ನ್ಯಾವಿಗೇಶನ್ ಅನುಭವವನ್ನು ಸರಳಗೊಳಿಸುತ್ತವೆ. ಮ್ಯೂಸಿಕ್ ಹಾಗೂ ಕ್ಯಾಮೆರಾ ಕಂಟ್ರೋಲ್, ಕ್ಯಾಲ್ಕುಲೇಟರ್, ಗೇಮ್‌ಗಳು, ಹವಾಮಾನ ಮಾಹಿತಿ, ಸ್ಟಾಪ್‌ವಾಚ್, ಅಲಾರಂ ಮತ್ತು ಟೈಮರ್ ಸೇರಿದಂತೆ ಹಲವು ಉಪಯುಕ್ತ ಟೂಲ್ಸ್‌ಗಳು ದಿನನಿತ್ಯದ ಬಳಕೆಗೆ ಸಹಕಾರಿಯಾಗುತ್ತವೆ.
ಬ್ಯಾಟರಿ ಕಾರ್ಯಕ್ಷಮತೆಯ ವಿಷಯದಲ್ಲಿ, ಈ ಸ್ಮಾರ್ಟ್‌ವಾಚ್‌ನಲ್ಲಿ 180mAh ಬ್ಯಾಟರಿ ಅಳವಡಿಸಲಾಗಿದ್ದು, ಸಾಮಾನ್ಯ ಬಳಕೆಯಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ ಐದು ದಿನಗಳವರೆಗೆ ಬ್ಯಾಟರಿ ಲೈಫ್ ನೀಡುತ್ತದೆ ಎಂದು boAt ಹೇಳಿದೆ. ಪವರ್ ಸೇವಿಂಗ್ ಮೋಡ್ ಸಹ ಲಭ್ಯವಿದ್ದು, ಶೂನ್ಯದಿಂದ ಶೇಕಡಾ 100 ರವರೆಗೆ ಚಾರ್ಜ್ ಆಗಲು ಸುಮಾರು ಎರಡು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
boAt Chrome Iris ಗೆ IP68 ರೇಟಿಂಗ್ ನೀಡಲಾಗಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ಒದಗಿಸುತ್ತದೆ. ಇದರಿಂದ ವ್ಯಾಯಾಮ, ಮಳೆ ಅಥವಾ ದಿನನಿತ್ಯದ ಚಟುವಟಿಕೆಗಳ ವೇಳೆ ಬಳಸಬಹುದು.ಒಟ್ಟಿನಲ್ಲಿ, ಪ್ರೀಮಿಯಂ ಲುಕ್, AMOLED ಡಿಸ್ಪ್ಲೇ, ಸಮಗ್ರ ಆರೋಗ್ಯ ಟ್ರ್ಯಾಕಿಂಗ್ ಮತ್ತು ಬ್ಲೂಟೂತ್ ಕಾಲಿಂಗ್ ಫೀಚರ್‌ಗಳೊಂದಿಗೆ boAt Chrome Iris, ಮಧ್ಯಮ ಬೆಲೆ ವಿಭಾಗದಲ್ಲಿ ಸ್ಮಾರ್ಟ್‌ವಾಚ್ ಖರೀದಿಸಲು ಯೋಚಿಸುವವರಿಗೆ ಒಂದು ಆಕರ್ಷಕ ಹಾಗೂ ಮೌಲ್ಯಯುತ ಆಯ್ಕೆಯಾಗಿ ಕಾಣಿಸುತ್ತದೆ.


Click it and Unblock the Notifications