100 ಗಂಟೆ ಬ್ಯಾಟರಿ ಲೈಫ್ ನೀಡುವ ಈ Boat ಇಯರ್‌ಬಡ್ ಬೆಲೆ 2,499 ರೂ.!
ಜನಪ್ರಿಯ ಆಡಿಯೋ ಬ್ರ್ಯಾಂಡ್ Boat ಇತ್ತೀಚಿಗಷ್ಟೇ ಪರಿಚಯಿಸಿರುವ Boat Nirvana Crystl ಎಂಬ ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್ ಸಾಧನವು ಬರೋಬ್ಬರಿ 100 ಗಂಟೆಗಳ ಬ್ಯಾಟರಿ ಲೈಫ್ ನೀಡಲಿದೆ.! ನಮ್ಮ ಹೊಸ Boat Nirvana Crystl ಸಾಧನವು ಒಂದೇ ಚಾರ್ಜ್‌ನಲ್ಲಿ ಚಾರ್ಜಿಂಗ್ ಕೇಸ್‌ನೊಂದಿಗೆ 100 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡಬಹುದು ಎಂದು ಬೋಟ್ ಕಂಪೆನಿ ತಿಳಿಸಿದ್ದು, ಈ ಇಯರ್‌ಬಡ್ ಸಾಧನದ ಬೆಲೆ ಕೇವಲ 2,499 ರೂಪಾಯಿಗಳಾಗಿವೆ. ಹಾಗಾದರೆ, ಈ ಹೊಸ Boat Nirvana Crystl ಇಯರ್‌ಬಡ್ ಸಾಧನವು ಹೇಗಿದೆ ಎಂಬುದನ್ನು ಮುಂದೆ ನೊಡೋಣ ಬನ್ನಿ.
Boat Nirvana Crystl ವೈಶಿಷ್ಟ್ಯಗಳು ಹೀಗಿವೆ,
ನೂತನ Boat Nirvana Crystl ಇಯರ್‌ಬಡ್ ಸಾಧನವು ಇನ್-ಇಯರ್ ವಿನ್ಯಾಸವನ್ನು ಹೊಂದಿದ್ದು, ಇದು 20Hz ರಿಂದ 20,000Hz ವರೆಗೆ ಆವರ್ತನ ಪ್ರತಿಕ್ರಿಯೆ ಶ್ರೇಣಿಯೊಂದಿಗೆ ಡ್ಯುಯಲ್ 10mm ಡ್ರೈವರ್‌ಗಳನ್ನು ಒಳಗೊಂಡಿದೆ. ಇತ್ತೀಚಿನ ಬೋಟ್ ನಿರ್ವಾಣ ಬ್ರಾಂಡ್ ಇಯರ್‌ಬಡ್‌ಗಳಂತೆ, ಈ ಹೊಸ ಇಯರ್‌ಬಡ್‌ಗಳು ಸಹ ಬೀಸ್ಟ್ ಮೋಡ್‌ನಲ್ಲಿ 60ms ಲೇಟೆನ್ಸಿ ನೀಡುತ್ತವೆ. ಅಲ್ಲದೆ, ಈ ಸಾಧನವು TWS ಇಯರ್‌ಬಡ್‌ಗಳು 32dB ಸಕ್ರಿಯ ಶಬ್ದ ರದ್ದತಿಯನ್ನು ಹೊಂದಿದ್ದು, ಸುತ್ತಮುತ್ತಲಿನ ಶಬ್ದಗಳನ್ನು ಕಡಿಮೆ ಮಾಡುತ್ತವೆ.

ಈ Boat Nirvana Crystl ಸಾಧನವು ಮಲ್ಟಿಪಾಯಿಂಟ್ ಕನೆಕ್ಟಿವಿಟಿಯನ್ನು ಒದಗಿಸುತ್ತದೆ. ಇದರಿಂದ ಬಳಕೆದಾರರು ಸಂಪರ್ಕ ಕಡಿತಗೊಳಿಸದೆ ಎರಡು ಸಾಧನಗಳ ನಡುವೆ ಸುಲಭವಾಗಿ ಬದಲಾಯಿಸಬಹುದು. ಇದರ ಇಯರ್‌ಬಡ್‌ಗಳಲ್ಲಿ ಮಿಮಿಯಿಂದ ನಿರ್ವಹಿಸಲಾದ ಅಡಾಪ್ಟಿವ್ ಇಕ್ಯೂ ವೈಶಿಷ್ಟ್ಯವಿದೆ, ಇದು ಬಳಕೆದಾರರ ಶ್ರವಣ ಆದ್ಯತೆಗಳಿಗೆ ಅನುಗುಣವಾಗಿ ಆಡಿಯೊ ಆವರ್ತನಗಳನ್ನು ಟ್ಯೂನ್ ಮಾಡುತ್ತದೆ. ಇದರಿಂದ ಬಳಕೆದಾರರು ಸಿನಿಮ್ಯಾಟಿಕ್ ಅನುಭವದ ಆಡಿಯೊವನ್ನು ಆಲಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಸ
ಕನೆಕ್ಟಿವಿಟಿ ವಿಬಾಗದಲ್ಲಿ, Boat Nirvana Crystl ಸಾಧನವು ಬ್ಲೂಟೂತ್ 5.3 ಸಂಪರ್ಕವನ್ನು ಹೊಂದಿದ್ದು, IPX4-ರೇಟಿಂಗ್ ಮೂಲಕ ಸ್ಪ್ಲಾಶ್ ಮತ್ತು ಬೆವರಿನಿಂದ ರಕ್ಷಣೆ ನೀಡುತ್ತದೆ. ಧ್ವನಿ ಸೆಟ್ಟಿಂಗ್‌ಗಳು ಮತ್ತು ಶಬ್ದ ರದ್ದತಿ ಮಟ್ಟವನ್ನು ಕಸ್ಟಮೈಸ್ ಮಾಡಲು, ಇಯರ್‌ಫೋನ್‌ಗಳನ್ನು ಬೋಟ್ Hearables ಅಪ್ಲಿಕೇಶನ್ ಮೂಲಕ ಜೋಡಿಸಬಹುದು. ಹೊಂದಾಣಿಕೆಯ ಸಾಧನಗಳ ನಡುವೆ ತ್ವರಿತ ಜೋಡಣೆಗೆ ಗೂಗಲ್ ಫಾಸ್ಟ್ ಪೇರ್ (GFPS) ವೈಶಿಷ್ಟ್ಯವನ್ನು ಒದಗಿಸುತ್ತವೆ.
ಇಷ್ಟೇ ಅಲ್ಲದೆ, Boat Nirvana Crystl ಇಯರ್‌ಬಡ್‌ಗಳು ಕ್ವಾಡ್ ಮೈಕ್ರೊಫೋನ್‌ಗಳೊಂದಿಗೆ ENx ತಂತ್ರಜ್ಞಾನವನ್ನು ಹೊಂದಿವೆ. ಇವು ಇನ್-ಇಯರ್ ಡಿಟೆಕ್ಷನ್ ವೈಶಿಷ್ಟ್ಯವನ್ನು ಹೊಂದಿದ್ದು, ಬಳಕೆದಾರರು ಇಯರ್‌ಬಡ್‌ಗಳನ್ನು ತೆಗೆದುಹಾಕಿದಾಗ ಅಥವಾ ಪುನಃ ಧರಿಸಿದಾಗ ಪ್ಲೇಬಾಕ್ ಅನ್ನು ವಿರಾಮಗೊಳಿಸುತ್ತವೆ ಮತ್ತು ಪುನರಾರಂಭಿಸುತ್ತವೆ. ಹಾಗೂ ಇವುಗಳನ್ನು 360-ಡಿಗ್ರಿ ಪ್ರಾದೇಶಿಕ ಆಡಿಯೊ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
Boat Nirvana Crystl ಸಾಧನದಲ್ಲಿ 100 ಗಂಟೆ ಬ್ಯಾಟರಿ ಲೈಫ್ ನೀಡುವ ಸಾಮರ್ಥ್ಯವಿದೆ. ಇದು ಒಂದೇ ಚಾರ್ಜ್‌ನಲ್ಲಿ 100 ಗಂಟೆಗಳ ಬ್ಯಾಟರಿ ಜೀವನವನ್ನು ಒದಗಿಸುತ್ತದೆ. ಇದರ ಚಾರ್ಜಿಂಗ್ ಕೇಸ್ 480mAh ಬ್ಯಾಟರಿಯನ್ನು ಹೊಂದಿದ್ದು, ಪ್ರತಿ ಇಯರ್‌ಬಡ್ 70mAh ಬ್ಯಾಟರಿಯನ್ನು ಒಳಗೊಂಡಿದೆ. ಇಯರ್‌ಬಡ್‌ಗಳು ಕೇವಲ 10 ನಿಮಿಷಗಳ ಚಾರ್ಜ್‌ನಲ್ಲಿ 220 ನಿಮಿಷಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ ಎಂದು Boat ಕಂಪೆನಿಯು ಹೇಳಿಕೊಂಡಿದೆ.
Boat Nirvana Crystl ಇಯರ್‌ಬಡ್ ಬಣ್ಣ ಆಯ್ಕೆಗಳು
ಭಾರತದಲ್ಲಿ 2,499 ರೂ.ಗಳ ಬೆಲೆ ಯಲ್ಲಿ ಬಿಡುಗಡೆಯಾಗಿರುವ Boat Nirvana Crystl ಇಯರ್‌ಬಡ್ ಸಾಧನವು ಬ್ಲೇಜಿಂಗ್ ರೆಡ್, ಹಳದಿ ಪಾಪ್ ಮತ್ತು ಕ್ವಾಂಟಮ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ. ಪ್ರಸ್ತುತ, ಈ ಸಾಧನವನ್ನು ಬೋಟ್ ವೆಬ್‌ಸೈಟ್, ಫ್ಲಿಪ್‌ಕಾರ್ಟ್, ಅಮೆಜಾನ್, ಬ್ಲಿಂಕಿಂಗ್ ಮತ್ತು ಇತರ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು.


Click it and Unblock the Notifications








