Home
Gadgets

ಭಾರತದಲ್ಲಿ ಬೋಟ್‌ 'ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್' ಬಿಡುಗಡೆ: ಬೆಲೆ 2,999 ರೂ.

ಟೆಕ್ ಉದ್ಯಮದಲ್ಲಿ ತನ್ನ ವೈವಿಧ್ಯಮಯ ಉತ್ಪನ್ನಗಳಿಗೆ ಹೆಸರುವಾಸಿಯಾದ ಭಾರತೀಯ ಟೆಕ್ ಬ್ರ್ಯಾಂಡ್ ಬೋಟ್ ತನ್ನ ಹೊಸ "ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್" (Boat SmartRing Active Plus) ಅನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ನವೀನ ಸ್ಮಾರ್ಟ್‌ರಿಂಗ್ ಆರು ವಿವಿಧ ಗಾತ್ರಗಳು ಮತ್ತು ಮೂರು ಆಕರ್ಷಕ ಬಣ್ಣ ಆಯ್ಕೆಗಳಲ್ಲಿ ಪರಿಚಯಗೊಂಡಿದ್ದು, ಸ್ಟೇನ್‌ಲೆಸ್ ಸ್ಟೀಲ್‌ನಿಂದ ನಿರ್ಮಿಸಲ್ಪಟ್ಟಿರುವ ಈ ಸಾಧನವು ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಜೊತೆಗೆ ಹಲವಾರು ಆರೋಗ್ಯ ಟ್ರ್ಯಾಕಿಂಗ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಸಾಧನದ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

ಬೋಟ್‌ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್: ಆರೋಗ್ಯ ಟ್ರ್ಯಾಕಿಂಗ್ ಫೀಚರ್ಸ್ ಮತ್ತು ವೈಶಿಷ್ಟ್ಯಗಳು
ಬೋಟ್‌ ಪರಿಚಯಿಸಿರುವ ಹೊಸ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್ ಸಾಧನವು ಹೃದಯ ಬಡಿತ ವ್ಯತ್ಯಾಸ (HRV), ರಕ್ತದ ಆಮ್ಲಜನಕ ಶುದ್ಧತ್ವ (SpO2) ಮಟ್ಟಗಳು, ನಿದ್ರೆ ಮತ್ತು ಒತ್ತಡದಂತಹ ಪ್ರಮುಖ ಆರೋಗ್ಯ ಮಾನದಂಡಗಳನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಲು ಸುಧಾರಿತ ಸಂವೇದಕಗಳನ್ನು ಹೊಂದಿದೆ. ಇದಲ್ಲದೆ, ಈ ಧರಿಸಬಹುದಾದ ಸಾಧನವು ಸೈಕ್ಲಿಂಗ್, ಓಟ ಮತ್ತು ಯೋಗದಂತಹ ವಿವಿಧ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಮಲ್ಟಿ-ಸ್ಪೋರ್ಟ್ಸ್ ಮೋಡ್ ಅನ್ನು ಹೊಂದಿದೆ. ಇದು ಬಳಕೆದಾರರ ಚರ್ಮದ ತಾಪಮಾನವನ್ನು ಸಹ ಮೇಲ್ವಿಚಾರಣೆ ಮಾಡಬಹುದು.

ಸಂಪರ್ಕಕ್ಕಾಗಿ, ಬೋಟ್‌ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್ ಸಾಧನವು ಬ್ಲೂಟೂತ್ 5.0 ಅನ್ನು ಹೊಂದಿದೆ. ಇದರ ಬಾಳಿಕೆ ಬರುವ ವಿನ್ಯಾಸವು 5ATM ಧೂಳು, ಬೆವರು ಮತ್ತು ಸ್ಪ್ಲಾಶ್-ನಿರೋಧಕವಾಗಿದ್ದು, ದೈನಂದಿನ ಬಳಕೆಗೆ ಸೂಕ್ತವಾಗಿದೆ. ಬಳಕೆದಾರರ ಅನುಕೂಲಕ್ಕಾಗಿ, ಇದು ಕ್ಯಾಮೆರಾ ನಿಯಂತ್ರಣ ವೈಶಿಷ್ಟ್ಯವನ್ನು ನೀಡುತ್ತದೆ, ಇದರಿಂದ ಶೇಕ್ ಗೆಸ್ಚರ್ ಮೂಲಕ ಫೋಟೋಗಳನ್ನು ಸೆರೆಹಿಡಿಯಬಹುದು. ಬಳಕೆದಾರರಯ Boat Crest ಅಪ್ಲಿಕೇಶನ್ ಮೂಲಕ, ಬಳಕೆದಾರರು ತಮ್ಮ ಆರೋಗ್ಯ ಡೇಟಾವನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ನಿರ್ವಹಿಸಬಹುದು.

ಭಾರತದಲ್ಲಿ ಬೋಟ್‌ 'ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್' ಬಿಡುಗಡೆ: ಬೆಲೆ 2,999 ರೂ.

ವಿನ್ಯಾಸದಲ್ಲಿ, ಈ ಬೋಟ್ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್ 4.7 ಗ್ರಾಂ ತೂಕವಿದ್ದು, ಸ್ಟೇನ್‌ಲೆಸ್ ಸ್ಟೀಲ್ ನಿರ್ಮಾಣವನ್ನು ಹೊಂದಿದೆ. ಬ್ಯಾಟರಿ ವಿಭಾಗದಲ್ಲಿ, ಒಂದೇ ಚಾರ್ಜ್‌ನಲ್ಲಿ ಐದು ದಿನಗಳವರೆಗೆ ಬ್ಯಾಟರಿ ಬಾಳಿಕೆ ನೀಡಲುಬೋಟ್‌ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ. ಇದು USB ಟೈಪ್-ಸಿ ಪೋರ್ಟ್‌ನೊಂದಿಗೆ ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಸ್‌ನೊಂದಿಗೆ ಬರುತ್ತದೆ. ಚಾರ್ಜಿಂಗ್ ಕೇಸ್‌ನೊಂದಿಗೆ, ಈ ಸ್ಮಾರ್ಟ್ ರಿಂಗ್ 30 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತದೆ ಎಂದು ಬೋಟ್ ಕಂಪೆನಿ ಹೇಳಿಕೊಂಡಿದೆ.

ಬೋಟ್‌ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಬೋಟ್‌ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್ ಸಾಧನವನ್ನು 2,999 ರೂ. ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಇದು ಮಿಡ್‌ನೈಟ್ ಬ್ಲ್ಯಾಕ್, ರೋಸ್ ಗೋಲ್ಡ್ ಮತ್ತು ರೇಡಿಯಂಟ್ ಸಿಲ್ವರ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಆಸಕ್ತ ಗ್ರಾಹಕರು ಇದನ್ನು ಪ್ರಸ್ತುತ ಬೋಟ್ ಇಂಡಿಯಾ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು. ಇನ್ನು ಈ ಬೋಟ್ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್ ಸಾಧನವು ಮ್ಯಾಗ್ನೆಟಿಕ್ ಚಾರ್ಜಿಂಗ್ ಕೇಸ್‌ನೊಂದಿಗೆ ಬರುತ್ತದೆ.

ಬೋಟ್‌ ಸ್ಮಾರ್ಟ್‌ರಿಂಗ್ ಆಕ್ಟಿವ್ ಪ್ಲಸ್ ಸಾಧನದ ಪ್ರಮುಖ ವೈಶಿಷ್ಟ್ಯಗಳು ಬುಲೆಟ್ ಪಾಯಿಂಟ್‌ಗಳಲ್ಲಿ,
ಬಣ್ಣಗಳು: ಮಿಡ್‌ನೈಟ್ ಬ್ಲ್ಯಾಕ್, ರೋಸ್ ಗೋಲ್ಡ್, ರೇಡಿಯಂಟ್ ಸಿಲ್ವರ್.
ಗಾತ್ರಗಳು: ಏಳರಿಂದ 12 ರವರೆಗೆ ಆರು ಗಾತ್ರಗಳಲ್ಲಿ ಲಭ್ಯ.
ನಿರ್ಮಾಣ: ಸ್ಟೇನ್‌ಲೆಸ್ ಸ್ಟೀಲ್.
ಆರೋಗ್ಯ ಟ್ರ್ಯಾಕಿಂಗ್: ಹೃದಯ ಬಡಿತ ವ್ಯತ್ಯಾಸ, ರಕ್ತದ ಆಮ್ಲಜನಕ ಶುದ್ಧತ್ವ, ನಿದ್ರೆ ಮೇಲ್ವಿಚಾರಣೆ, ಒತ್ತಡ ಮೇಲ್ವಿಚಾರಣೆ, ಚರ್ಮದ ತಾಪಮಾನ ಟ್ರ್ಯಾಕಿಂಗ್
ಕ್ರೀಡಾ ವಿಧಾನಗಳು: ಸೈಕ್ಲಿಂಗ್, ಓಟ, ಯೋಗ ಸೇರಿದಂತೆ ವಿವಿಧ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಮಲ್ಟಿ-ಸ್ಪೋರ್ಟ್ಸ್ ಮೋಡ್.
ಸಂಪರ್ಕ: ಬ್ಲೂಟೂತ್ 5.0.
ನಿರೋಧಕತೆ: 5ATM ಧೂಳು, ಬೆವರು ಮತ್ತು ಸ್ಪ್ಲಾಶ್-ನಿರೋಧಕ.
ಕ್ಯಾಮೆರಾ ನಿಯಂತ್ರಣ: ಶೇಕ್ ಗೆಸ್ಚರ್ ಮೂಲಕ ಶಾಟ್‌ಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.
ಬ್ಯಾಟರಿ ಬಾಳಿಕೆ:ಒಂದೇ ಚಾರ್ಜ್‌ನಲ್ಲಿ 5 ದಿನಗಳವರೆಗೆ., ಚಾರ್ಜಿಂಗ್ ಕೇಸ್‌ನೊಂದಿಗೆ 30 ದಿನಗಳವರೆಗೆ.
ಚಾರ್ಜಿಂಗ್: ವೈರ್‌ಲೆಸ್ ಚಾರ್ಜಿಂಗ್ ಬೆಂಬಲ, USB ಟೈಪ್-ಸಿ ಪೋರ್ಟ್‌ನೊಂದಿಗೆ ಮ್ಯಾಗ್ನೆಟಿಕ್ ಕೇಸ್.
ಅಪ್ಲಿಕೇಶನ್ ಬೆಂಬಲ: Boat Crest ಅಪ್ಲಿಕೇಶನ್.

Best Mobiles in India

English summary
Boat SmartRing Active Plus is available for Rs. 2,999 and comes in three color options: Midnight Black, Rose Gold, and Radiant Silver.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+