Home
Gadgets

Boult FluidX ಮತ್ತು FluidX Pro ಹೆಡ್‌ಫೋನ್ಸ್ ಪರಿಚಯ: ಬೆಲೆ 1,999 ರೂ. ಮಾತ್ರ!

ಜನಪ್ರಿಯ ಆಡಿಯೋ ಬ್ರ್ಯಾಂಡ್ Boult ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಓವರ್-ದಿ-ಇಯರ್ ಹೆಡ್‌ಫೋನ್‌ಗಳಾದ Boult FluidX ಮತ್ತು Boult FluidX Pro ಸಾಧನಗಳನ್ನು ಸದ್ದಿಲ್ಲದಂತೆ ಪರಿಚಯಿಸಿದೆ. ಬಾಸ್-ಬೂಸ್ಟೆಡ್ ಆಡಿಯೋ, ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಮತ್ತು ಉತ್ತಮ ಬ್ಯಾಟರಿ ಅವಧಿಯಂತಹ ಇತ್ತೀಚಿನ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಈ ಹೊಸ ಓವರ್-ದಿ-ಇಯರ್ ಹೆಡ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಈ ಆಡಿಯೋ ಸಾಧನಗಳ ಬೆಲೆ ಕೂಡ ಅತ್ಯಾಕರ್ಷಕವಾಗಿ ಕಾಣುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.

Boult FluidX ಮತ್ತು FluidX Pro : ಬೆಲೆ ಮತ್ತು ಲಭ್ಯತೆ
ಭಾರತದದಲ್ಲಿ Boult FluidX ಮತ್ತು FluidX Pro ಹೆಡ್‌ಫೋನ್‌ಗಳನ್ನು ಕ್ರಮವಾಗಿ ₹5,999 ಮತ್ತು ₹7,999 ಬಿಡುಗಡೆ ಮಾಡಲಾಗಿದೆ. ಆದರೆ, ಕೊಡುಗೆಯ ಬೆಲೆಯಾಗಿ boultaudio ಆಡಿಯೋ ವೆಬ್‌ಸೈಟ್‌ನಲ್ಲಿ ಕೇವಲ ₹1,999 ಬೆಲೆಯಲ್ಲಿ ಮಾರಾಟಕ್ಕಿಡಲಾಗಿದೆ. ಆದರೆ,ಇದೇ Boult FluidX ಅನ್ನು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಲ್ಲಿ ₹2,299 ಗಳಿಗೆ ಮಾರಾಟಕ್ಕಿಡಲಾಗಿದೆ. ಇನ್ನು Boult FluidX Pro ಅನ್ನು Myntra ನಲ್ಲಿ ₹2,499 ಗೆ ಹಾಗೂ ಅಮೆಜಾನ್‌ನಲ್ಲಿ ₹2,791 ಗೆ ಪಟ್ಟಿ ಮಾಡಲಾಗಿದೆ. ಗ್ರಾಹಕರು ಈ ಬೆಲೆಗಳಲ್ಲಿ Boult FluidX ಸಾಧನವನ್ನು ಕಪ್ಪು, ಹಸಿರು ಮತ್ತು ಐವರಿ ವೈಟ್ ಬಣ್ಣಗಳಲ್ಲಿ, ಹಾಗೂ FluidX Pro ಸಾಧನವನ್ನು ರಾವೆನ್ ಬ್ಲಾಕ್ ಮತ್ತು ಸ್ಕಿನ್ ಬೀಜ್ ಬಣ್ಣಗಳಲ್ಲಿ ಖರೀದಿಸಲು ಅವಕಾಶವಿದೆ.

Boult FluidX ಮತ್ತು FluidX Pro : ಸಂಪೂರ್ಣ ವೈಶಿಷ್ಟ್ಯಗಳು

Boult FluidX ಮತ್ತು FluidX Pro ಹೆಡ್‌ಫೋನ್ಸ್ ಪರಿಚಯ: ಬೆಲೆ 1,999 ರೂ. ಮಾತ್ರ!

ವಿನ್ಯಾಸ ಮತ್ತು ಬಾಳಿಕೆ

Boult FluidX ಮತ್ತು FluidX Pro ಎರಡೂ ಹೆಡ್‌ಫೋನ್‌ ಮಾದರಿಗಳು ಪ್ಯಾಡೆಡ್, ಆಯತಾಕಾರದ ಇಯರ್‌ಕಪ್‌ಗಳನ್ನು ಹೊಂದಿದ್ದು, ಇದು ತಿರುಗುವ ಮತ್ತು ದುಂಡಾದ ಮೂಲೆಗಳನ್ನು ಹೊಂದಿದೆ. ಇವು ಹೊಂದಾಣಿಕೆ ಮಾಡಬಹುದಾದ ಮತ್ತು ಮಡಚಬಹುದಾದ ಹೆಡ್‌ಬ್ಯಾಂಡ್‌ಗಳೊಂದಿಗೆ ಬರುತ್ತವೆ, ಇದು ಬಳಕೆದಾರರಿಗೆ ಆರಾಮದಾಯಕ ಅನುಭವ ನೀಡುತ್ತದೆ. ಈ ಹೆಡ್‌ಫೋನ್‌ಗಳು IPX5 ನೀರಿನ ಪ್ರತಿರೋಧ ರೇಟಿಂಗ್ ಹೊಂದಿದ್ದು, ಸ್ಪ್ಲಾಶ್ ಮತ್ತು ಬೆವರಿನಿಂದ ರಕ್ಷಣೆ ನೀಡುತ್ತವೆ.

ಆಡಿಯೋ ಮತ್ತು ಶಬ್ದ ರದ್ದತಿ

Boult FluidX ಮತ್ತು FluidX Pro ಹೆಡ್‌ಫೋನ್‌ಗಳು 40mm ಬಾಸ್-ಬೂಸ್ಟೆಡ್ ಡ್ರೈವರ್‌ಗಳನ್ನು ಹೊಂದಿವೆ. ಇವು Boult ನ BoomX ತಂತ್ರಜ್ಞಾನವನ್ನು ಬೆಂಬಲಿಸುತ್ತವೆ, ಇದು ಆಡಿಯೋದಲ್ಲಿ ಆಳ ಮತ್ತು ಡೈನಾಮಿಕ್ ಬಾಸ್ ಅನ್ನು ಹೆಚ್ಚಿಸುತ್ತದೆ. ಉತ್ತಮ ಶಬ್ದ ರದ್ದತಿ ಮತ್ತು ಸ್ಪಷ್ಟ ಕರೆಗಳಿಗಾಗಿ, ಇವು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಮತ್ತು ಎನ್ವಿರಾನ್‌ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ (ENC) ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಇತರೆ ವೈಶಿಷ್ಟ್ಯಗಳು

ಗೇಮರ್‌ಗಳಿಗಾಗಿ, ಈ ಹೆಡ್‌ಫೋನ್‌ಗಳು ಡೆಡಿಕೇಟೆಡ್ ವಾರ್ ಗೇಮಿಂಗ್ ಮೋಡ್‌ನೊಂದಿಗೆ ಬರುತ್ತವೆ, ಇದು 60ms ಕಡಿಮೆ ಲೇಟೆನ್ಸಿಯನ್ನು ಬೆಂಬಲಿಸಿ ಉತ್ತಮ ಆಡಿಯೋ-ವಿಷುವಲ್ ಸಿಂಕ್ ಅನ್ನು ಖಾತ್ರಿಪಡಿಸುತ್ತದೆ. ಇವು ಬ್ಲೂಟೂತ್ 5.4 ಮತ್ತು ಬ್ಲಿಂಕ್ & ಪೇರ್ ಕನೆಕ್ಟಿವಿಟಿಯನ್ನು ಬೆಂಬಲಿಸುತ್ತವೆ. ಇದರ ಜೊತೆಗೆ, ಅರ್ಥಗರ್ಭಿತ ಟಚ್ ಕಂಟ್ರೋಲ್‌ಗಳು ಮತ್ತು ವಾಯ್ಸ್ ಅಸಿಸ್ಟೆಂಟ್ ಬೆಂಬಲವನ್ನೂ ಹೊಂದಿವೆ ಎಂದು ಕಂಪೆನಿಯು ತಿಳಿಸಿದೆ.

ಬ್ಯಾಟರಿ ಬಾಳಿಕೆ ಮತ್ತು ಫಾಸ್ಟ್ ಚಾರ್ಜಿಂಗ್

Boult FluidX Pro ಹೆಡ್‌ಫೋನ್‌ಗಳು ANC ಇಲ್ಲದೆ ಒಂದೇ ಚಾರ್ಜ್‌ನಲ್ಲಿ 70 ಗಂಟೆಗಳ ಬ್ಯಾಟರಿ ಬಾಳಿಕೆ ನೀಡುತ್ತವೆ. Boult FluidX ಮಾದರಿಯು ಇದೇ ಪರಿಸ್ಥಿತಿಯಲ್ಲಿ 60 ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ. ತ್ವರಿತ ಚಾರ್ಜಿಂಗ್ ಸಾಮರ್ಥ್ಯಗಳೂ ಇವೆ: Pro ಮಾದರಿಯಲ್ಲಿ 10 ನಿಮಿಷಗಳ ಚಾರ್ಜ್ ಐದು ಗಂಟೆಗಳವರೆಗೆ ಬಳಕೆಯನ್ನು ಒದಗಿಸಿದರೆ, ಪ್ರಮಾಣಿತ ಆವೃತ್ತಿಯು ಅದೇ ಚಾರ್ಜಿಂಗ್ ಅವಧಿಯಲ್ಲಿ ಮೂರು ಗಂಟೆಗಳ ಪ್ಲೇಬ್ಯಾಕ್ ನೀಡುತ್ತದೆ.

Best Mobiles in India

English summary
Boult FluidX and Boult FluidX Pro over-ear headphones have been launched in India. They feature 40mm bass-enhanced drivers and are rated IPX5 for water resistance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+