ಭಾರತೀಯ ಮಾರುಕಟ್ಟೆಗೆ ಎರಡು ಗೇಮಿಂಗ್ ಇಯರ್‌ಬಡ್ಸ್ ಲಾಂಚ್ ಮಾಡಿದ ಬೋಲ್ಟ್: ಬೆಲೆ, ಫೀಚರ್ಸ್ ತಿಳಿಯಿರಿ
ಪ್ರತಿಯೊಂದು ಬೋಲ್ಟ್ ಡಿವೈಸ್‌ಗಳೂ ತನ್ನದೇ ಆದ ವಿಶೇಷ ತಂತ್ರಜ್ಞಾನದೊಂದಿಗೆ ಬರಲಿದ್ದು, ಬಳಕೆದಾರರಿಗೆ ವಿಶಿಷ್ಟವಾದ ಅನುಭವ ನೀಡುತ್ತವೆ. ಅದರಂತೆ ಈಗಾಗಲೇ ಹಲವಾರು ವಿವಿಧ ಹಾಗೂ ಅಗತ್ಯ ಫೀಚರ್ಸ್ ಇರುವ ಬಹಳ ಆಕರ್ಷಕವಾಗಿರುವಂತಹ ಅನೇಕ ಇಯರ್‌ಬಡ್ಸ್‌ಗಳನ್ನು ಜಾರಿಗೆ ತಂದಿರುವ ಬೋಲ್ಟ್ ಇದೀಗ ನೂತನವಾದ ಎರಡು ಇಯರ್‌ಬಡ್ಸ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ.
ಬೋಲ್ಟ್ ಕಂಪೆನಿ ಭಾರತೀಯ ಮಾರುಕಟ್ಟೆಗೆ ಎರಡು ಹೊಸ ಬಗೆಯ ಇಯರ್‌ಬಡ್ಸ್‌ಗಳಾದ ಬೋಲ್ಟ್ Z40 ಗೇಮಿಂಗ್ ಹಾಗೂ Y1 ಗೇಮಿಂಗ್ TWS ಹೆಸರಿನ ವಿಭಿನ್ನ ಫೀಚರ್ಸ್ ಹೊಂದಿರುವ ಇಯರ್ ಬಡ್ಸ್‌ಗಳನ್ನು ಇಂದಿನಿಂದ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಇವುಗಳ ಅತ್ಯಾಕರ್ಷಕ ಫೀಚರ್ಸ್‌ಗಳು ಗ್ರಾಹಕರನ್ನು ಸೆಳೆದಿದ್ದು, ಏನೆಲ್ಲಾ ಫೀಚರ್ಸ್ ಹೊಂದಿರಲಿದೆ ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ಬೋಲ್ಟ್ ಸಂಸ್ಥೆ ಭಾರತೀಯ ಮಾರುಕಟ್ಟೆಗೆ Z40 ಗೇಮಿಂಗ್ ಮತ್ತು Y1 ಗೇಮಿಂಗ್ ಇಯರ್‌ಬಡ್ಸ್‌ಗಳನ್ನು ಬಿಡುಗಡೆ ಮಾಡಿದೆ. ಡ್ಯುಯಲ್ ಡಿವೈಸ್ ಕನೆಕ್ಟಿವಿಟಿ, 5.4 ಬ್ಲೂಟೂತ್, ಮತ್ತು ಕಾಂಬ್ಯಾಟ್TM ಗೇಮಿಂಗ್ ಮೋಡ್‌ನಂತಹ ಹಲವು ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಗೇಮಿಂಗ್ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಇಯರ್‌ಬಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ಬೋಲ್ಟ್ Z40 ಗೇಮಿಂಗ್ ಹಾಗೂ Y1 ಗೇಮಿಂಗ್ TWS ಇಯರ್‌ಬಡ್ಸ್‌ನ ಫೀಚರ್ಸ್:
Z40 ಮತ್ತು Y1 ಗೇಮಿಂಗ್ ಇಯರ್‌ಬಡ್ಸ್‌ಗಳಿಗೆ ಯಾವುದೇ ಸ್ಥಳದಲ್ಲಿ ಸ್ಪಷ್ಟವಾದ ಸಂವಹನ ನೀಡುವ ಉದ್ದೇಶದಿಂದಾಗಿ ಜೆನ್TM ಕ್ವಾಡ್ Mic ENC ತಂತ್ರಜ್ಞಾನ ಅಳವಡಿಸಲಾಗಿದೆ. ಇದು IOS ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಬೋಲ್ಟ್ Amp ಅಪ್ಲಿಕೇಶನ್ ಮೂಲಕ ಕಾರ್ಯ ನಿರ್ವಹಿಸುತ್ತದೆ. ಈ TWS ಇಯರ್‌ಬಡ್ಸ್‌ಗಳು ಸ್ಪರ್ಶದಿಂದ ನಿಯಂತ್ರಿಸಬಹುದಾಗಿದೆ ಹಾಗೂ ಧ್ವನಿ ಸಹಾಯಕ ಬೆಂಬಲದೊಂದಿಗೆ ಬಳಕೆದಾರರಿಗೆ ಅನುಕೂಲ ನೀಡಲಿದೆ.
ಈ ಎರಡೂ ಡಿವೈಸ್‌ಗಳು ಗೇಮಿಂಗ್ ಸಂದರ್ಭದಲ್ಲಿ ನೀರಿನಿಂದ ರಕ್ಷಣೆ ಪಡೆಯಲು IPX5 ತಂತ್ರಜ್ಞಾನವನ್ನು ಹೊಂದಿವೆ. Boom X ಟೆಕ್ನಾಲಜಿ ಮತ್ತು 10mm ಡ್ರೈವರ್‌ಗಳಿಂದ ಕಾರ್ಯನಿರ್ವಹಿಸುವ ಈ ಇಯರ್‌ಬಡ್‌ಗಳು ಅತ್ಯುನ್ನತ ಬಾಸ್ ಹೊಂದಿವೆ, ಇವುಗಳ ಮೂಲಕ ಉತ್ತಮ ಗುಣಮಟ್ಟದ ಆಡಿಯೊ ಸೌಲಭ್ಯ ಒದಗಿಸುತ್ತವೆ.
Z40 ಗೇಮಿಂಗ್ TWS ಇದು ಬರೋಬ್ಬರಿ 60 ಗಂಟೆಗಳ ಬ್ಯಾಟರಿ ಸಾಮರ್ಥ್ಯ ಹೊಂದಿದೆ ಹಾಗೂ ಡ್ಯುಯಲ್ ಡಿವೈಸ್ ಪೇರಿಂಗ್ ಜೊತೆಗೆ 5.4 ಬ್ಲೂಟೂತ್ ಕನೆಕ್ಟಿವಿಟಿಯ ಬೆಂಬಲ ಪಡೆದಿದೆ ಮತ್ತು 40 ಎಂಎಸ್ ಕಡಿಮೆ ಲೇಟೆನ್ಸಿಯನ್ನು ಬೆಂಬಲಿಸುತ್ತದೆ. ಮತ್ತು ಇದು ಬ್ಲಾಕ್ ಮಾಸ್, RGB ಲೈಟ್ ಜೊತೆಗೆ ಎಲೆಕ್ಟ್ರಿಕ್ ವೈಟ್ ಕಲರ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
Y1 ಗೇಮಿಂಗ್ TWS ಇದು ಬರೋಬ್ಬರಿ 50 ಗಂಟೆಗಳ ಗೇಮಿಂಗ್ ಸಮಯದ ಭರವಸೆ ನೀಡುತ್ತದೆ, ಇದು ಬ್ಲ್ಯಾಕ್ ಮೆಟಲ್, ಎಲೆಕ್ಟ್ರಿಕ್ ರೆಡ್ ಮತ್ತು ಗ್ಲೇಸಿಯರ್ ಬ್ಲೂ ಕಲರ್‌ಗಳ ಜೊತೆಗೆ ರೋಮಾಂಚಕ ಲೈಟ್ RGB ಕಲರ್‌ಗಳಲ್ಲಿ ಲಭ್ಯವಿದೆ.
ಭಾರತದಲ್ಲಿ ಬೋಲ್ಟ್ Z40 ಗೇಮಿಂಗ್ ಹಾಗೂ Y1 ಗೇಮಿಂಗ್ ಬೆಲೆ ಮತ್ತು ಲಭ್ಯತೆ:
ಅಮೇಜಾನ್, ಫ್ಲಿಪ್‌ಕಾರ್ಟ್ ಹಾಗೂ ಬೋಲ್ಟ್‌ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಈ ಇಯರ್‌ಫೋನ್‌ಗಳು ಲಭ್ಯವಿದ್ದು, ಬೋಲ್ಟ್ Z40 ಗೇಮಿಂಗ್ TWS ಇದು ರೂ 1,299 ಕ್ಕೆ ಲಭ್ಯವಿದೆ. ಇದರ ಜೊತೆಗೆ Y1 ಗೇಮಿಂಗ್ TWS ಶೀಘ್ರದಲ್ಲೇ ಫ್ಲಿಪ್‌ಕಾರ್ಟ್ ಮತ್ತು ಬೋಲ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ರೂ 1,099ಕ್ಕೇ ಶೀಘ್ರದಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಗೇಮಿಂಗ್ ಆಸಕ್ತಿ ಹೊಂದಿರುವ ಗ್ರಾಹಕರಿಗಾಗಿ ಬೋಲ್ಟ್ ಇಯರ್‌ಬಡ್ಸ್‌ಗಳನ್ನು ಇನ್ನಷ್ಟು ಸುಧಾರಿಸಿ ಪ್ರತ್ಯೇಕ ಗೇಮಿಂಗ್ ಇಯರ್‌ಬಡ್ಸ್‌ಗಳನ್ನು ಜಾರಿಗೆ ತರಲಿದೆ ಎಂದು ಬೋಲ್ಟ್ ಸಹ-ಸಂಸ್ಥಾಪಕ ಮತ್ತು ಸಿಇಒ ವರುಣ್ ಗುಪ್ತಾ ಭರವಸೆ ನೀಡಿದ್ದಾರೆ.


Click it and Unblock the Notifications








