ಹೊಸ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ಭಾರತೀಯ ಕಂಪನಿ....! ಬೆಲೆ ತೀರಾ ಕಡಿಮೆ...!
ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಗಳ ಹಾವಳಿ ಹೆಚ್ಚಾಗಿದ್ದು, ದಿನಕ್ಕೋಂದು ಹೊಸ ಬ್ರಾಂಡ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೇ ಮಾದರಿಯಲ್ಲಿ ಮುಂಬೈ ಮೂಲದ ಕ್ಲವ್ಡ್ ವಾಕ್ಸ್ ಹೊಸದೊಂದು ಸ್ಮಾರ್ಟ್ ಟಿವಿಯನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಒಟ್ಟು ಮೂರು ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಡಲಿದೆ.

ಮೂರು ಮಾದರಿಯಲ್ಲಿ 4K ರೆಡಿ, FHD ಮತ್ತು HD ರೆಡಿ ಗುಣಮಟ್ಟವನ್ನು ಹೊಂದಿದ್ದು, ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ಕಾಣಬಹುದಾಗಿದೆ. ಇದಲ್ಲದೇ ಎಲ್ಲಾ ಟಿವಿಗಳಲ್ಲಿಯೂ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿವೆ. ಇದಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಟಿವಿಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಮೂರು ಮಾದರಿಯಲ್ಲಿ:
ಕ್ಲವ್ಡ್ ವಾಕ್ಸ್ ಬಿಡುಗಡೆ ಮಾಡಿರುವ ಸ್ಮಾರ್ಟ್ ಟಿವಿಗಳು ಮೂರು ಮಾದರಿಯಲ್ಲಿ ಕಾಣಿಸಿಕೊಂಡಿದ್ದು, 32 ಇಂಚಿನ ಡಿಸ್ ಪ್ಲೇ, 50 ಇಂಚಿನ ಡಿಸ್ ಪ್ಲೇಯನ್ನು ಹೊಂದಿರುವುದು ಮತ್ತು 55 ಇಂಚಿನ ಡಿಸ್ ಪ್ಲೇಯನ್ನು ಹೊಂದಿರುವ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಯನ್ನ ಪ್ರವೇಶಿಸಿವೆ. ಇವುಗಳು ವಿವಿಧ ಬೆಲೆಯಲ್ಲಿ ಮಾರಾಟವಾಗಲಿದೆ.

ವಿವಿಧ ಕ್ವಾಲಿಟಿ:
ಕ್ಲವ್ಡ್ ವಾಕ್ಸ್ ಬಿಡುಗಡೆ ಮಾಡಿರುವ ಸ್ಮಾರ್ಟ್ ಟಿವಿಯೂ ಮೂರು ಗುಣಮಟ್ಟದಲ್ಲಿ ಕಾಣಿಸಿಕೊಳ್ಳಲಿದೆ. ಒಂದು HD ರೆಡಿ ಗುಣಮಟ್ಟದಲ್ಲಿ ಕಾಣಿಸಿಕೊಳ್ಳಲಿದೆ. ಇದಲ್ಲದೇ ಮತ್ತೊಂದು ಆವೃತ್ತಿಯೂ FHD ಗುಣಮಟ್ಟದಲ್ಲಿ ಕಾರ್ಯನಿರ್ವಹಿಸಲಿದ್ದು, ಇದಾದ ನಮತರದಲ್ಲಿ ಇನ್ನು ಉತ್ತಮ ಗುಣಮಟ್ಟಕ್ಕಾಗಿ 4K ರೆಡಿ ಕ್ವಾಲಿಟಿಯ್ನು ಹೊಂದಿರುವ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ನ್ಯಾಗಾ:
ಕ್ಲವ್ಡ್ ವಾಕ್ಸ್ ಬಿಡುಗಡೆ ಮಾಡಿರುವ ಸ್ಮಾರ್ಟ್ ಟಿವಿಗಳು ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಿಂದಾಗಿ ಬಳಕೆದಾರರಿಗೆ ಹೊಸ ಹೊಸ ಆಯ್ಕೆಯೂ ದೊರೆಯಲಿದೆ. ಇದರಿಂದಾಗಿ ಹೊಸ ಮಾದರಿಯಲ್ಲಿ ಟಿವಿಯೂ ಕಾರ್ಯನಿರ್ವಹಿಸದ್ದು, ಬಳಕೆದಾರರು ಉತ್ತಮ ಅನುಭವನ್ನು ಪಡೆಯಬಹುದಾಗಿದೆ.

1 GB RAM – 8 GB ROM:
ಕ್ಲವ್ಡ್ ವಾಕ್ಸ್ ಬಿಡುಗಡೆ ಮಾಡಿರುವ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳು 1GB RAM ಅನ್ನು ಕಾಣಬಹುದಾಗಿದ್ದು, ಬಳಕೆದಾರರಿಗೆ 8 GB ಇಂಟರ್ನಲ್ ಮೆಮೊರಿಯೊಂದಿಗೆ ಬಳಕೆಗೆ ದೊರೆಯಲಿದೆ. ಅಲ್ಲದೇ ಎಲ್ಲಾ ಆಂಡ್ರಾಯ್ಡ್ ಆಪ್ ಗಳನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.


ಅಮೆಜಾನ್ ನಲ್ಲಿ ಲಭ್ಯ:
ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿರುವ ಕ್ಲವ್ಡ್ ವಾಕ್ಸ್, ಜೂನ್ 30 ರಿಂದ ಅಮೆಜಾನ್ ನಲ್ಲಿ ಮಾರಾಟ ಮಾಡಲಿದೆ. ಅಲ್ಲದೇ ಇದು ಆರಂಭಿಕ ಬೆಲೆ ರೂ.14,990ಕ್ಕೆ ಮಾರಾಟವಾಗಲಿದೆ. ಕಡಿಮೆ ಬೆಲೆಗೆ ಉತ್ತಮ ಟಿವಿ ಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.


Click it and Unblock the Notifications








