ನಿಮ್ಮ ಮನೆಯ TV ಬದಲಾಯಿಸುವ ಟೈಮ್ ಬಂತು..! ಅಮೆಜಾನ್ ಪ್ರೈಮ್ ನಲ್ಲಿ ಬೆಸ್ಟ್ ಸ್ಮಾರ್ಟ್ TV
ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಮಾರ್ಟ್ ಟಿವಿಗಳು ಲಾಂಚ್ ಆಗಿದ್ದು, ಇದೇ ಸಾಲಿಗೆ ಮತ್ತೊಂದು ಸೇರ್ಪಡೆಯಾಗದೆ. ಶಿಯೋಮಿ ಟಿವಿ ಮಾರುಕಟ್ಟೆಗೆ ಕಾಲಿಟ್ಟ ನಂತರದಲ್ಲಿ ಅನೇಕ ಕಂಪನಿಗಳು ಒಂದರ ಹಿಂದ ಒಂದರಂತೆ ಟಿವಿಗಳನ್ನು ಲಾಂಚ್ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ಟಿವಿ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ ಕ್ಲೌಡ್ ವಾಕರ್ ಕಂಪನಿಯೂ ಒಂದೇ ಬಾರಿಗೆ ಎರಡು ಸ್ಮಾರ್ಟ್ ಟಿವಿಗಳನ್ನು ಲಾಂಚ್ ಮಾಡುತ್ತಿದೆ. ಅಲ್ಲದೇ ಬಳಕೆದಾರರಿಗೆ ಶೀಘ್ರವೇ ತಲುಪಿಸುವ ಸಲುವಾಗಿ ಹೊಸ ತಂತ್ರವನ್ನು ಅನುಸರಿಸುತ್ತಿದೆ.

ಇಂದಿನಿಂದ ಭಾರತೀಯ ಇ ಕಾರ್ಮಸ್ ಮಾರುಕಟ್ಟೆ ದೈತ್ಯ ಅಮೆಜಾನ್ ಸೇಲ್ ಆರಂಭಿಸಿದ್ದು, ಅಮೆಜಾನ್ ಪ್ರೈಮ್ ಡೇ ಸೇಲ್ ಅಂಗವಾಗಿ ಕ್ಲೌಡ್ ವಾಕರ್ ಕಂಪನಿಯೂ ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಿದೆ. ಬಳಕೆದಾರರಿಗೆ ಆಫರ್ ನಲ್ಲಿ ಟಿವಿಯನ್ನು ಸೇಲ್ ಮಾಡುವ ಮೂಲಕ ಒಂದೇ ಬಾರಿಗೆ ಎರಡು ಟಿವಿ ಬಿಡುಗಡೆ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಪ್ರಯತ್ನಕ್ಕೆ ಕೈ ಹಾಕಿದೆ.

ಒಟ್ಟು ಮೂರು ಟಿವಿ:
ಈಗಾಗಲೇ ಸ್ಮಾರ್ಟ್ ಫೋನ್ ಮಾರುಕಟ್ಟೆ ಮಾದರಿಯಲ್ಲಿ ಟಿವಿ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿ ಹಾವಳಿಯೂ ಹೆಚ್ಚಾಗಿದ್ದು, ದಿನಕ್ಕೊಂದು ಹೊಸ ಟಿವಿಗಳು ಲಾಂಚ್ ಆಗುತ್ತಿದೆ. ಇದೇ ಮಾದರಿಯಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಒಂದೇ ಬಾರಿಗೆ ಕ್ಲೌಡ್ ವಾಕರ್ ಕಂಪನಿಯೂ 40 ಮತ್ತು 43 ಇಂಚಿನ ಸ್ಮಾರ್ಟ್ ಟಿವಿಯ ಬಿಡುಗಡೆ ಮಾಡಿದ್ದು, ಇದರ ಜೊತೆಗೆ 55 ಇಂಚಿನ ಟಿವಿಯನ್ನು ಲಾಂಚ್ ಮಾಡಿದೆ.

ಕ್ಲೌಡ್ ವಾಕರ್ 40 ಇಂಚಿನ ಸ್ಮಾರ್ಟ್ ಟಿವಿ:
ಸದ್ಯದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ವಿಭಾಗವು ಇದಾಗಿದ್ದು, ಹೆಚ್ಚಿನ ಮಂದಿ ಬಜೆಟ್ ಬೆಲೆಯಲ್ಲಿ ದೊರೆಯುತ್ತಿದೆ ಎನ್ನುವ ಒಂದು ಕಾರಣಕ್ಕೆ 40 ಇಂಚಿನ ಸ್ಮಾರ್ಟ್ ಟಿವಿ ಕೊಳ್ಳತ್ತಿದ್ದಾರೆ. ಹೀಗಾಗಿ ಕ್ಲೌಡ್ ವಾಕರ್ ಸಹ ಕ್ಲೌಡ್ TV X2 40 ಇಂಚಿನ ಸ್ಮಾರ್ಟ್ ಟಿವಿಯನ್ನು ಪರಿಚಯಿಸಿದೆ. ಈ ಟಿವಿ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, 1 GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಬಳಕೆಗೆ ನೀಡಲಿದೆ.

ಕ್ಲೌಡ್ ವಾಕರ್ 43 ಇಂಚಿನ ಸ್ಮಾರ್ಟ್ ಟಿವಿ:
ಕ್ಲೌಡ್ TV X2 43 ಇಂಚಿನ FHD ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿರುವ ಸ್ಮಾರ್ಟ್ ಟಿವಿ, 4K ವಿಡಿಯೋಗಳನ್ನು ಪ್ಲೇ ಮಾಡುವ ಸಾಧ್ಯತೆಯನ್ನು ಹೊಂದಿದೆ. ಈ ಟಿವಿಯೂ ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ1 GB RAM ಮತ್ತು 8GB ಇಂಟರ್ನಲ್ ಮೆಮೊರಿಯನ್ನು ಬಳಕೆಗೆ ಲಭ್ಯವಿದೆ.

ಕ್ಲೌಡ್ ವಾಕರ್ 55 ಇಂಚಿನ ಸ್ಮಾರ್ಟ್ ಟಿವಿ:
ಈ ಟಿವಿಯೂ ಶಿಯೋಮಿಗೆ ಸೆಡ್ಡು ಹೊಡೆಯುವ ಸಲುವಾಗಿಯೇ ಲಾಂಚ್ ಮಾಡಲಾಗಿದೆ. 4K ರೆಡಿ ಗುಣಮಟ್ಟದಲ್ಲಿ ಸೇವೆಯನ್ನು ನೀಡಲಿರುವ ಕ್ಲೌಡ್ ವಾಕರ್ 55 ಇಂಚಿನ ಸ್ಮಾರ್ಟ್ ಟಿವಿ ಉತ್ತಮ ಆಯ್ಕೆಗಳನ್ನು ಒಳಗೊಂಡಿದೆ. ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಮೂವಿ ಲೈಬ್ರೆರಿಯನ್ನು ಕಾಣಬಹುದಾಗಿದೆ.

ಆಂಡ್ರಾಯ್ಡ್ ಆಪ್ ಗಳನ್ನು ಡೌನ್ ಲೋಡ್ ಮಾಡಬಹುದು:
ಕ್ಲೌಡ್ ವಾಕರ್ ಕ್ಲೌಡ್ TV X2 ಟಿವಿಗಳಲ್ಲಿ ಬಳಕೆದಾರರು ಸ್ಮಾರ್ಟ್ ಫೋನಿನಲ್ಲಿ ಆಪ್ ಗಳನ್ನು ಡೌನ್ ಲೋಡ್ ಮಾಡುವ ರೀತಿಯಲ್ಲಿಯೇ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದದೇ ಕ್ವಾಡ್ ಕೋರ್ ಪ್ರೋಸೆಸರ್ ಅಹ ಇದ್ದು, ವೇಗವಾಗಿ ಕಾರ್ಯಚರಣೆಯನ್ನು ನಡೆಸಲು ಇದು ಶಕ್ತವಾಗಿದೆ.

ಮೊಬೈಲ್ ನೊಂದಿಗೆ ಕನೆಕ್ಟ್:
ಕ್ಲೌಡ್ ವಾಕರ್ ಕ್ಲೌಡ್ TV X2 ಟಿವಿಗಳು ಸುಲಭವಾಗಿ ಮೊಬೈಲ್ ನೊಂದಿಗೆ ಕನೆಕ್ಟ್ ಆಗಲಿದ್ದು, ಬಳಕೆದಾರರ ಮೊಬೈಲ್ ಫೋನ್ ಅನ್ನು ಟಿವಿಯೊಂದಿಗೆ ನೇರವಾಗಿ ಕೆನೆಕ್ಟ್ ಮಾಡಿಕೊಂಡು ಬಳಕೆಯನ್ನು ಮಾಡುವ ಅವಕಾಶವೂ ಲಭ್ಯವಿದೆ. ಇದರಿಂದಾಗಿ ಹೆಚ್ಚಿನ ಲಾಭ ಬಳಕೆದಾರರಿಗೆ.


Click it and Unblock the Notifications








