Home
Gadgets

ಭರ್ಜರಿ ಸಿಹಿಸುದ್ದಿ: CMF Buds 2 ವೈಶಿಷ್ಟ್ಯಗಳು ಮತ್ತು ನಿರೀಕ್ಷಿತ ಬೆಲೆ ಬಹಿರಂಗ!

Nothing ಕಂಪನಿಯ ಉಪ-ಬ್ರ್ಯಾಂಡ್ ಆಗಿರುವ CMF, ಇದೇ ಏಪ್ರಿಲ್ 28 ರಂದು ಭಾರತದಲ್ಲಿ 'CMF Buds 2'ಟ್ರೂ-ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್ ಸಾಧನವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬಿಡುಗಡೆಗೆ ಮುಂಚಿತವಾಗಿ, CMF Buds 2 ಇಯರ್‌ಬಡ್ ಸಾಧನವನ್ನು ಆನ್‌ಲೈನ್‌ನಲ್ಲಿ ಅಧಿಕೃತವಾಗಿ ಪಟ್ಟಿ ಮಾಡಲಾಗಿದ್ದು, ಸಾಧನದ ಬಹುತೇಕ ಎಲ್ಲಾ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಹೌದು, ಈ CMF ಪ್ರಕಟಿಸಿರುವ ಹೊಸ ಪಟ್ಟಿಯ ಪ್ರಕಾರ, ಈ CMF Buds 2 ಇಯರ್‌ಬಡ್‌ಗಳು ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಅನ್ನು ಬೆಂಬಲಿಸಲಿವೆ, ಇದು ಗದ್ದಲದ ವಾತಾವರಣದಲ್ಲಿಯೂ ಉತ್ತಮ ಆಲಿಸುವ ಅನುಭವವನ್ನು ನೀಡುತ್ತದೆ. ಜೊತೆಗೆ ChatGPT ಸಪೋರ್ಟ್ ಕೂಡ ಇರಲಿದೆ ಎಂದು ತಿಳಿದುಬಂದಿದೆ. ಹಾಗಾದರೆ, ಹೊಸ CMF Buds 2 ಇಯರ್‌ಬಡ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

CMF Buds 2 ಇಯರ್‌ಬಡ್ ಸಾಧನವು ಡೈರಾಕ್ ಆಪ್ಟಿಯೊ ಸೌಂಡ್ ಟ್ಯೂನಿಂಗ್ ಮತ್ತು ನಥಿಂಗ್ ಅಲ್ಟ್ರಾ ಬಾಸ್ ಟೆಕ್ನಾಲಜಿ 2.0 ನೊಂದಿಗೆ 11mm ಕಸ್ಟಮ್ ಡ್ರೈವರ್‌ಗಳನ್ನು ಹೊಂದಿವೆ. ಇದು ಉತ್ತಮ ಗುಣಮಟ್ಟದ ಮತ್ತು ಆಳವಾದ ಬಾಸ್‌ನೊಂದಿಗೆ ಸ್ಪಷ್ಟವಾದ ಆಡಿಯೊವನ್ನು ನೀಡುತ್ತದೆ. ಇದರೊಂದಿಗೆ, ಈ ಇಯರ್‌ಫೋನ್‌ಗಳು ಪ್ರಾದೇಶಿಕ ಆಡಿಯೊ ಮತ್ತು ಡ್ಯುಯಲ್ ಸಂಪರ್ಕವನ್ನು ಸಹ ಬೆಂಬಲಿಸುತ್ತವೆ, ಇದು ಏಕಕಾಲದಲ್ಲಿ ಎರಡು ಸಾಧನಗಳಿಗೆ ಸಂಪರ್ಕ ಸಾಧಿಸಲು ಮತ್ತು ತಡೆರಹಿತ ಆಡಿಯೊ ಅನುಭವವನ್ನು ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಸಾಧನವು ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP55 ರೇಟಿಂಗ್ ಅನ್ನು ಹೊಂದಿದೆ, ವ್ಯಾಯಾಮ ಮಾಡುವಾಗ ಅಥವಾ ಹಗುರವಾದ ಮಳೆಯಲ್ಲಿಯೂ ಸಹ ಇವುಗಳನ್ನು ಬಳಸಬಹುದು. ಆದಾಗ್ಯೂ, ಚಾರ್ಜಿಂಗ್ ಕೇಸ್ ಕೇವಲ IPX2 ರೇಟಿಂಗ್ ಅನ್ನು ಹೊಂದಿದೆ.

ಕರೆಗಳಿಗಾಗಿ, ಈ CMF Buds 2 ಇಯರ್‌ಬಡ್‌ಗಳು ಕ್ಲಿಯರ್ ವಾಯ್ಸ್ ಟೆಕ್ನಾಲಜಿ 3.0 ಮತ್ತು ವಿಂಡ್ ನಾಯ್ಸ್ ರಿಡಕ್ಷನ್ 3.0 ನಂತಹ ವೈಶಿಷ್ಟ್ಯಗಳೊಂದಿಗೆ ಆರು HD ಮೈಕ್ರೊಫೋನ್‌ಗಳನ್ನು ಒಳಗೊಂಡಿರುತ್ತವೆ, ಇದು ಸ್ಪಷ್ಟವಾದ ಧ್ವನಿ ಸಂವಹನವನ್ನು ಖಚಿತಪಡಿಸುತ್ತದೆ. ಇವು 5,200Hz ಆವರ್ತನ ಶ್ರೇಣಿಯ ಬೆಂಬಲದೊಂದಿಗೆ 48dB ಹೈಬ್ರಿಡ್ ANC ಅನ್ನು ಸಹ ಹೊಂದಿವೆ. ಈ ಸಾಧನವಯ ಒಂದೇ ಚಾರ್ಜ್‌ನಲ್ಲಿ 13.5 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಕೇವಲ 10 ನಿಮಿಷಗಳ ಚಾರ್ಜ್‌ನೊಂದಿಗೆ 7.5 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಅನ್ನು ಆನಂದಿಸಬಹುದು. ಚಾರ್ಜಿಂಗ್ ಕೇಸ್‌ನೊಂದಿಗೆ ಒಟ್ಟು ಪ್ಲೇಬ್ಯಾಕ್ ಸಮಯವು 55 ಗಂಟೆಗಳವರೆಗೆ ಇರುತ್ತದೆ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ, ಇದು ದೀರ್ಘಕಾಲದವರೆಗೆ ಸಂಗೀತವನ್ನು ಆಲಿಸಲು ಅಥವಾ ಕರೆಗಳನ್ನು ಮಾಡಲು ಸೂಕ್ತವಾಗಿದೆ.

ಭರ್ಜರಿ ಸಿಹಿಸುದ್ದಿ: CMF Buds 2 ವೈಶಿಷ್ಟ್ಯಗಳು ಮತ್ತು ನಿರೀಕ್ಷಿತ ಬೆಲೆ ಬಹಿರಂಗ

ಈ CMF Buds 2 ಇಯರ್‌ಬಡ್ ಸಾಧನದ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ChatGPT ಯ ಏಕೀಕರಣ. ಈ ವೈಶಿಷ್ಟ್ಯವು ಈಗಾಗಲೇ Nothing ಮತ್ತು ಅದರ ಅಂಗಸಂಸ್ಥೆಯ ಇತರ ಆಡಿಯೊ ಉತ್ಪನ್ನಗಳಲ್ಲಿ ಲಭ್ಯವಿದೆ. ಇದರ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಾಧನದ ಅಗತ್ಯವಿಲ್ಲದೆ ನೇರವಾಗಿ ChatGPT ಯೊಂದಿಗೆ ಸಂವಹನ ನಡೆಸಬಹುದು. ಕೇವಲ ಇಯರ್‌ಫೋನ್‌ಗಳ ಕಾಂಡವನ್ನು ಪಿಂಚ್ ಮಾಡುವ ಮೂಲಕ AI ಚಾಟ್‌ಬಾಟ್ ಅನ್ನು ಸಕ್ರಿಯಗೊಳಿಸಬಹುದು ಮತ್ತು ತಮ್ಮ ಪ್ರಶ್ನೆಗಳನ್ನು ಮೌಖಿಕವಾಗಿ ಕೇಳಬಹುದು. ಸಾಮಾನ್ಯ ಜ್ಞಾನದ ಪ್ರಶ್ನೆಗಳಿಂದ ಹಿಡಿದು ಕಥೆಗಳನ್ನು ಕೇಳುವವರೆಗೆ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಲು ಇದು ಅನುವು ಮಾಡಿಕೊಡುತ್ತದೆ. ಇನ್ನು ಈ ಇಯರ್‌ಫೋನ್‌ಗಳು ತಿಳಿ ಹಸಿರು, ಗಾಢ ಬೂದು ಮತ್ತು ಕಿತ್ತಳೆ ಬಣ್ಣಗಳಲ್ಲಿ ಲಬ್ಯವಿರಲಿವೆ.

CMF Buds 2 ಇಯರ್‌ಬಡ್ ಬೆಲೆ ಎಷ್ಟು?
ಇದೀಗ CMF Buds 2 ಇಯರ್‌ಬಡ್ ಸಾಧನದ ನಿರೀಕ್ಷಿತ ಬೆಲೆಯ ಕುರಿತು ಮಾಹಿತಿಯು ಆನ್‌ಲೈನ್‌ನಲ್ಲಿ ಲಭ್ಯವಾಗಿದೆ. GSMArena ವರದಿಯ ಪ್ರಕಾರ, ಈ ಇಯರ್‌ಬಡ್‌ಗಳ ಬೆಲೆಯು US ನಲ್ಲಿ $59 (ಸುಮಾರು ರೂ. 5,000) ರಿಂದ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಭಾರತದಲ್ಲಿ ಬೆಲೆಯ ಮಾಹಿತಿಯನ್ನು ತೋರಿಸುತ್ತಿಲ್ಲ. ಆದರೆ, ಭಾರತದಲ್ಲಿ ಯುಎಸ್‌ಗಿಂತಲೂ ಕಡಿಮೆ ಬೆಲೆಯಲ್ಲಿ ಈ ಇಯರ್‌ಫೋನ್‌ಗಳು ಬಿಡುಗಡೆಯಾಗುತ್ತವೆ. ಒಟ್ಟಾರೆಯಾಗಿ, CMF Buds 2 ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ಧವಾಗಿದೆ. ಹೈಬ್ರಿಡ್ ANC, ChatGPT ಏಕೀಕರಣ, ಉತ್ತಮ ಬ್ಯಾಟರಿ ಬಾಳಿಕೆ ಮತ್ತು IP55 ರೇಟಿಂಗ್‌ನಂತಹ ವೈಶಿಷ್ಟ್ಯಗಳು ಈ ಇಯರ್‌ಬಡ್‌ಗಳನ್ನು ಸ್ಪರ್ಧಾತ್ಮಕವಾಗಿಸುತ್ತವೆ. ಹಾಗಾಗಿ, ಏಪ್ರಿಲ್ 28 ರಂದು ನಡೆಯುವ ಅಧಿಕೃತ ಬಿಡುಗಡೆಗಾಗಿ ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ.

Best Mobiles in India

English summary
The soon-to-be-released CMF Buds 2 feature an IP55 rating for dust and water resistance, while the charging case has an IPX2 rating.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+