Home
Gadgets

ಭಾರತಕ್ಕೆ CMF Headphone Pro ಮತ್ತು Watch 3 Pro ಎಂಟ್ರಿ ಅಧಿಕೃತ!

ಜನಪ್ರಿಯ ಟೆಕ್ ಬ್ರ್ಯಾಂಡ್ Nothing ಕಂಪೆನಿಯ ಸಬ್‌-ಬ್ರ್ಯಾಂಡ್ CMF ತಮ್ಮ ಹೊಸ ತಲೆಮಾರಿನ CMF Headphone Pro ಮತ್ತು CMF Watch 3 Pro ವೇರೇಬಲ್ ಸಾಧನಗಳನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸದಿದ್ದರೂ, ಮುಂದಿನ ದಿನಗಳಲ್ಲಿ ಬೆಲೆ, ಲಭ್ಯತೆ ಮತ್ತು ಮಾರಾಟ ವಿವರಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿರುವ ಈ ಎರಡೂ ಭಾರತೀಯ ರೂಪಾಂತರಗಳ ಹೆಚ್ಚಿನ ಪ್ರಮುಖ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಅಂಶಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ನಾವು ಈಗಾಗಲೇ ತಿಳಿದಿರುವಂತೆ, CMF Headphone Pro ಕಂಪನಿಯ ಮೊದಲ ಓವರ್-ಇಯರ್ ವೈರ್‌ಲೆಸ್ ಹೆಡ್‌ಫೋನ್ ಆಗಿದ್ದು, ವಿನ್ಯಾಸ ಮತ್ತು ಆಡಿಯೋ ಗುಣಮಟ್ಟದ ವಿಷಯದಲ್ಲಿ ಗಮನ ಸೆಳೆಯುತ್ತಿದೆ. ಭಾರತದಲ್ಲಿ ಇದು ಲೈಟ್ ಗ್ರೀನ್, ಲೈಟ್ ಗ್ರೇ ಅಥವಾ ವೈಟ್ ಹಾಗೂ ಬ್ಲ್ಯಾಕ್-ಆರೆಂಜ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಅದೇ ವೇಳೆ, CMF Watch 3 Pro ಕೂಡ ಡಾರ್ಕ್ ಗ್ರೇ, ಲೈಟ್ ಗ್ರೇ ಮತ್ತು ಆರೆಂಜ್ ಷೇಡ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುಳಿವುಗಳು ಲಭ್ಯವಾಗಿವೆ. ಈ ಎರಡೂ ಸಾಧನಗಳು ಮಧ್ಯಮ ಪ್ರೀಮಿಯಂ ಆಸಕ್ತರನ್ನು ಸೆಳೆಯಲು ತಯಾರಾದಂತಿವೆ. ಏಕೆಂದರೆ,

ಭಾರತಕ್ಕೆ CMF Headphone Pro ಮತ್ತು Watch 3 Pro ಎಂಟ್ರಿ ಅಧಿಕೃತ!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬೆಲೆಗಳನ್ನು ಗಮನಿಸಿದರೆ, CMF Watch 3 Pro ಯು ಮಧ್ಯಮ ದರ್ಜೆಯ ಸ್ಮಾರ್ಟ್ ವಾಚ್ ವಿಭಾಗದಲ್ಲಿ ಸ್ಪರ್ಧಾತ್ಮಕ ಸ್ಥಾನ ಪಡೆಯುವ ಸಾಧ್ಯತೆ ಇದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಇದು ಸುಮಾರು ₹8,000 ರಿಂದ ₹10,000 ಬೆಲೆಯೊಳಗೆ ಲಭ್ಯವಿದ್ದು, ಭಾರತದಲ್ಲಿಯೂ ಇದೇ ಬೆಲೆಯನ್ನು ನಿರೀಕ್ಷಿಸಲಾಗುತ್ತಿದೆ. CMF Headphone Pro ಕೂಡ ಜಾಗತಿಕವಾಗಿ ಸುಮಾರು ₹8,000 ರಿಂದ ₹10,000 ಬೆಲೆ ಶ್ರೇಣಿಯಲ್ಲಿ ಮಾರಾಟವಾಗುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಪ್ರೀಮಿಯಂ ಹೆಡ್‌ಫೋನ್ ಆಯ್ಕೆಯಾಗಿ ಕಾಣಿಸಿಕೊಳ್ಳಬಹುದು.

CMF Headphone Pro ಮತ್ತು CMF Watch 3 Pro: ಪ್ರಮುಖ ವೈಶಿಷ್ಟ್ಯಗಳು
ಇನ್ನು CMF Watch 3 Pro ವೈಶಿಷ್ಟ್ಯಗಳನ್ನು ನೋಡುವುದಾದರೆ, ಇದರಲ್ಲಿ 1.43 ಇಂಚಿನ ರೌಂಡ್ AMOLED ಡಿಸ್ಪ್ಲೇ ನೀಡಲಾಗಿದ್ದು, 466×466 ರೆಸಲ್ಯೂಷನ್ ಮತ್ತು 60Hz ರಿಫ್ರೆಶ್ ರೇಟ್ ಹೊಂದಿದೆ. ಹೆಚ್ಚಿನ ಬ್ರೈಟ್‌ನೆಸ್ ಇರುವುದರಿಂದ ಹೊರಾಂಗಣ ಬಳಕೆಗೆ ಇದು ಸೂಕ್ತವಾಗಿದೆ. ಆರೋಗ್ಯ ಟ್ರ್ಯಾಕಿಂಗ್ ವಿಷಯದಲ್ಲಿ ಹೃದಯ ಬಡಿತ, ನಿದ್ರೆ, ರಕ್ತದ ಆಮ್ಲಜನಕ ಮಟ್ಟ, ಒತ್ತಡ ಹಾಗೂ ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಒಳಗೊಂಡಿದೆ.

ಬ್ಯಾಟರಿ ಸಾಮರ್ಥ್ಯದ ವಿಚಾರದಲ್ಲಿ, CMF Watch 3 Pro ಯಲ್ಲಿ 350mAh ಬ್ಯಾಟರಿ ನೀಡಲಾಗಿದ್ದು, ಸಾಮಾನ್ಯ ಬಳಕೆಯಲ್ಲಿ 10 ರಿಂದ 13 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಅಪ್ ನೀಡುತ್ತದೆ ಎಂದು ಕಂಪನಿ ಹೇಳಿದೆ. IP68 ರೇಟಿಂಗ್ ಹೊಂದಿರುವ ಮೆಟಲ್ ಬಾಡಿ ಮತ್ತು ಸಿಲಿಕೋನ್ ಸ್ಟ್ರ್ಯಾಪ್‌ನಿಂದ ಇದು ದಿನನಿತ್ಯದ ಬಳಕೆಗೆ ಬಲಿಷ್ಠ ಹಾಗೂ ಆರಾಮದಾಯಕವಾಗಿದೆ. ಬ್ಲೂಟೂತ್ ಕಾಲಿಂಗ್, GPS, ಜೆಶ್ಚರ್ ಕಂಟ್ರೋಲ್ ಮತ್ತು ChatGPT ಆಧಾರಿತ ಸ್ಮಾರ್ಟ್ ಫೀಚರ್‌ಗಳು ಇದನ್ನು ಇನ್ನಷ್ಟು ಆಕರ್ಷಕವಾಗಿಸುತ್ತವೆ.

ಇನ್ನೊಂದೆಡೆ, CMF Headphone Pro 40dB ವರೆಗೆ ಆಕ್ಟಿವ್ ನೊಯ್ಸ್ ಕ್ಯಾನ್ಸಲೇಶನ್ ನೀಡುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 40mm ಡ್ರೈವರ್‌ಗಳು, LDAC ಮತ್ತು Hi-Res ಆಡಿಯೋ ಸಪೋರ್ಟ್ಇದೆ. Nothing X ಆಪ್ ಮೂಲಕ ಕಸ್ಟಮೈಸ್ ಮಾಡಬಹುದಾದ ಬಟನ್‌ಗಳು, ರೋಲರ್ ಡಯಲ್ ಮತ್ತು ಇಯರ್ ಕುಶನ್‌ಗಳ ವಿನ್ಯಾಸವು ಬಳಕೆದಾರ ಅನುಭವವನ್ನು ಮತ್ತಷ್ಟು ಸುಧಾರಿಸುತ್ತದೆ. ಬ್ಯಾಟರಿ ಬ್ಯಾಕ್‌ಅಪ್ ವಿಷಯದಲ್ಲಿ, ANC ಆಫ್ ಮಾಡಿದರೆ ಸುಮಾರು 100 ಗಂಟೆಗಳವರೆಗೆ ಮತ್ತು ಆನ್ ಮಾಡಿದರೆ ಸುಮಾರು 50 ಗಂಟೆಗಳವರೆಗೆ ಪ್ಲೇಬ್ಯಾಕ್ ನೀಡುತ್ತದೆ.

ಒಟ್ಟಾರೆಯಾಗಿ, CMF Headphone Pro ಮತ್ತು CMF Watch 3 Pro ಭಾರತದಲ್ಲಿ ಬಿಡುಗಡೆಯಾದ ನಂತರ ಸ್ಮಾರ್ಟ್ ವಾಚ್ ಮತ್ತು ಆಡಿಯೋ ವಿಭಾಗದಲ್ಲಿ ಹೊಸ ಆಯ್ಕೆಗಳನ್ನು ನೀಡಲಿವೆ. ವೈಶಿಷ್ಟ್ಯಗಳು, ವಿನ್ಯಾಸ ಮತ್ತು ನಿರೀಕ್ಷಿತ ಬೆಲೆಗಳನ್ನು ಗಮನಿಸಿದರೆ, ಈ ಸಾಧನಗಳು ಟ್ರೆಂಡಿಂಗ್ ಆಗುವ ಸಾಮರ್ಥ್ಯ ಹೊಂದಿದ್ದು, ಭಾರತೀಯ ಗ್ರಾಹಕರ ಗಮನ ಸೆಳೆಯುವ ಸಾಧ್ಯತೆ ಹೆಚ್ಚು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?.. CMF Headphone Pro ಮತ್ತು CMF Watch 3 Pro ಕುರಿತು ನೀವು ಆಸಕ್ತಿ ಹೊಂದಿದ್ದೀರಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Nothing’s sub-brand CMF is set to bring the CMF Headphone Pro and Watch 3 Pro to India soon, featuring premium design, multiple color options, and a focus on mid-premium users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+