Home
Gadgets

ಕೇವಲ 6,999 ರೂ.ಗೆ CMF Headphone Pro ಬಿಡುಗಡೆ: ಹೇಗಿದೆ ಗೊತ್ತಾ?

ನಥಿಂಗ್ ಒಡೆತನದ ಬ್ಯಾಂಡ್ CMF ತನ್ನ ಹೊಸ CMF Headphone Pro ಅನ್ನು ಭಾರತದಲ್ಲಿ ಅಧಿಕೃತವಾಗಿ ಇದೀಗ ಬಿಡುಗಡೆ ಮಾಡಿದೆ. ಕಳೆದ 2025ರ ಸೆಪ್ಟೆಂಬರ್‌ನಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯವಾಗಿದ್ದ ಈ ಓವರ್-ಇಯರ್ ವೈರ್‌ಲೆಸ್ ಹೆಡ್‌ಫೋನ್‌ಗಳು . ಇದೀಗ ಭಾರತೀಯ ಗ್ರಾಹಕರಿಗೂ ಲಭ್ಯವಾಗುತ್ತಿದ್ದು, ಇಲ್ಲಿ ಮಾರಾಟವಾಗುವ ಆವೃತ್ತಿ ಜಾಗತಿಕ ಮಾದರಿಯಂತೆಯೇ ಇದೆ. CMFನ ಮೊದಲ ANC ಬೆಂಬಲಿತ ಓವರ್-ಇಯರ್ ಹೆಡ್‌ಫೋನ್ ಎಂಬುದು ಇದರ ಪ್ರಮುಖ ವಿಶೇಷತೆಯಾಗಿದೆ. ಹಾಗಾದರೆ, ಹೊಸ CMF Headphone Pro ಹೆಡ್‌ಪೋನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

CMF Headphone Pro: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ CMF Headphone Pro ಬೆಲೆ ₹7,999 ಎಂದು ನಿಗದಿಪಡಿಸಲಾಗಿದೆ. ಆದರೆ ಆರಂಭಿಕ ಆಫರ್‌ನ ಭಾಗವಾಗಿ, ಜನವರಿ 20ರಿಂದ ಸೀಮಿತ ಅವಧಿಗೆ ₹6,999ಕ್ಕೆ ಖರೀದಿಸುವ ಅವಕಾಶ ದೊರೆಯಲಿದೆ. ಈ ಹೆಡ್‌ಫೋನ್‌ಗಳು Flipkart ಹಾಗೂ ಆಯ್ದ ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದ್ದು, ಡಾರ್ಕ್ ಗ್ರೇ, ಲೈಟ್ ಗ್ರೀನ್ ಮತ್ತು ಲೈಟ್ ಗ್ರೇ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯನ್ನು ನೀಡಲಾಗುತ್ತಿದೆ.

ಕೇವಲ 6,999 ರೂ.ಗೆ CMF Headphone Pro ಬಿಡುಗಡೆ: ಹೇಗಿದೆ ಗೊತ್ತಾ?

CMF Headphone Pro:ಪ್ರಮುಖ ವೈಶಿಷ್ಟ್ಯಗಳು
ಆಡಿಯೋ ಗುಣಮಟ್ಟದ ವಿಚಾರದಲ್ಲಿ CMF Headphone Pro ಗಮನ ಸೆಳೆಯುತ್ತದೆ. ಇದರಲ್ಲಿ 40mm ನಿಕಲ್-ಪ್ಲೇಟೆಡ್ ಡ್ರೈವರ್‌ಗಳನ್ನು ಬಳಸಲಾಗಿದ್ದು, ಶಕ್ತಿಶಾಲಿ ಮತ್ತು ಸ್ಪಷ್ಟ ಧ್ವನಿಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಕಂಪನಿಯ ಪ್ರಕಾರ, ಇದರ ಹೈಬ್ರಿಡ್ ಅಡಾಪ್ಟಿವ್ ANC ತಂತ್ರಜ್ಞಾನ 40dBವರೆಗೆ ಸುತ್ತಲಿನ ಶಬ್ದವನ್ನು ಕಡಿಮೆ ಮಾಡುತ್ತದೆ. ಇದರಿಂದ ಪ್ರಯಾಣ, ಕೆಲಸ ಅಥವಾ ಗದ್ದಲದ ಪರಿಸರದಲ್ಲೂ ಉತ್ತಮ ಸಂಗೀತ ಅನುಭವ ಸಿಗುತ್ತದೆ. ಈ ಹೆಡ್‌ಫೋನ್‌ಗಳಲ್ಲಿ ಸ್ಪೇಷಿಯಲ್ ಆಡಿಯೋ ಮೋಡ್‌ಗಳು ಸೇರಿದ್ದು, ಸಿನೆಮಾ ಮತ್ತು ಕಾನ್ಸರ್ಟ್ ಆಯ್ಕೆಗಳ ಮೂಲಕ ವಿಸ್ತಾರವಾದ ಸೌಂಡ್‌ಸ್ಟೇಜ್ ಅನುಭವವನ್ನು ನೀಡುತ್ತವೆ. ಜೊತೆಗೆ LDAC ಕೋಡೆಕ್ ಹಾಗೂ Hi-Res Audio ಬೆಂಬಲವಿರುವುದರಿಂದ, ಹೈ-ಕ್ವಾಲಿಟಿ ಮ್ಯೂಸಿಕ್ ಸ್ಟ್ರೀಮಿಂಗ್‌ಗೆ ಇದು ಸೂಕ್ತ ಆಯ್ಕೆಯಾಗುತ್ತದೆ.

ಕೇವಲ 6,999 ರೂ.ಗೆ CMF Headphone Pro ಬಿಡುಗಡೆ: ಹೇಗಿದೆ ಗೊತ್ತಾ?

CMF Headphone Proನಲ್ಲಿ ಟಚ್ ಕಂಟ್ರೋಲ್‌ಗಳ ಬದಲು ಭೌತಿಕ ನಿಯಂತ್ರಣಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಾಲ್ಯೂಮ್ ಮತ್ತು ಪ್ಲೇಬ್ಯಾಕ್‌ಗಾಗಿ ರೋಲರ್ ಡಯಲ್, ಬಾಸ್ ಮತ್ತು ಟ್ರೆಬಲ್ ಹೊಂದಾಣಿಕೆಗೆ ಎನರ್ಜಿ ಸ್ಲೈಡರ್, ಹಾಗೂ ಕಸ್ಟಮೈಸಬಲ್ ಬಟನ್ ಅನ್ನು ನೀಡಲಾಗಿದೆ. ಈ ಎಲ್ಲಾ ಸೆಟ್ಟಿಂಗ್‌ಗಳನ್ನು Nothing X ಆ್ಯಪ್ ಮೂಲಕ ಬಳಕೆದಾರರು ತಮ್ಮ ಇಷ್ಟಕ್ಕೆ ತಕ್ಕಂತೆ ಕಸ್ಟಮೈಸ್ ಮಾಡಿಕೊಳ್ಳಬಹುದು.ಇದಲ್ಲದೆ, Personal Sound ಎಂಬ ವೈಶಿಷ್ಟ್ಯ ಬಳಕೆದಾರರ ಕಿವಿ ಪ್ರೊಫೈಲ್ ಆಧರಿಸಿ ಆಡಿಯೋ ಔಟ್‌ಪುಟ್ ಅನ್ನು ಹೊಂದಿಸುತ್ತದೆ. ಬದಲಾಯಿಸಬಹುದಾದ ಇಯರ್ ಕುಶನ್‌ಗಳು ಹೆಡ್‌ಫೋನ್‌ಗೆ ವೈಯಕ್ತಿಕ ಲುಕ್ ನೀಡುವ ಜೊತೆಗೆ, ದೀರ್ಘಕಾಲ ಬಳಕೆಯಲ್ಲೂ ಆರಾಮವನ್ನು ಹೆಚ್ಚಿಸುತ್ತವೆ.

ಬ್ಯಾಟರಿ ಸಾಮರ್ಥ್ಯವೂ CMF Headphone Proನ ದೊಡ್ಡ ಆಕರ್ಷಣೆಯಾಗಿದೆ. ANC ಆಫ್ ಮಾಡಿಕೊಂಡರೆ ಒಂದೇ ಚಾರ್ಜ್‌ನಲ್ಲಿ 100 ಗಂಟೆಗಳವರೆಗೆ ಪ್ಲೇಬ್ಯಾಕ್ ಸಿಗುತ್ತದೆ. ANC ಆನ್ ಮಾಡಿದಾಗಲೂ ಸುಮಾರು 50 ಗಂಟೆಗಳ ಬಳಕೆಯ ಸಮಯ ಲಭ್ಯವಿದೆ. USB Type-C ಫಾಸ್ಟ್ ಚಾರ್ಜಿಂಗ್ ಬೆಂಬಲವಿದ್ದು, ಕೇವಲ ಐದು ನಿಮಿಷಗಳ ಚಾರ್ಜ್‌ನಲ್ಲಿ ಎಂಟು ಗಂಟೆಗಳ ಬಳಕೆಯ ಸಮಯ ಸಿಗುತ್ತದೆ. ಪೂರ್ಣ ಚಾರ್ಜ್‌ಗೆ ಎರಡು ಗಂಟೆಗಳಿಗಿಂತ ಕಡಿಮೆ ಸಮಯ ಸಾಕಾಗುತ್ತದೆ.ಒಟ್ಟಾರೆಯಾಗಿ, ದೀರ್ಘ ಬ್ಯಾಟರಿ ಲೈಫ್, ಶಕ್ತಿಶಾಲಿ ANC, ಭೌತಿಕ ನಿಯಂತ್ರಣಗಳು ಮತ್ತು ಪ್ರೀಮಿಯಂ ಆಡಿಯೋ ವೈಶಿಷ್ಟ್ಯಗಳೊಂದಿಗೆ CMF Headphone Pro ಭಾರತೀಯ ಗ್ರಾಹಕರಿಗೆ ಮೌಲ್ಯಯುತ ಮತ್ತು ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮಿದೆ. ಇದು ದೈನಂದಿನ ಬಳಕೆಗೂ, ಪ್ರಯಾಣಕ್ಕೂ, ಹಾಗೂ ಸಂಗೀತ ಪ್ರೇಮಿಗಳಿಗೆ ಸಹ ಸೂಕ್ತವಾದ ಹೆಡ್‌ಫೋನ್ ಆಗಿದೆ.

Best Mobiles in India

English summary
Nothing-owned CMF has launched its first ANC-enabled over-ear headphones, the CMF Headphone Pro, in India. Priced at ₹7,999, the headphones will be available at an introductory price of ₹6,999 for a limited period starting January 20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+