Home
Gadgets

ಭಾರತದಲ್ಲಿ ಸೆ.29 ರಂದು CMF Headphone Pro ಬಿಡುಗಡೆ ಅಧಿಕೃತ!

ಕಡಿಮೆ ಬೆಲೆಯ ಟೆಕ್ ಉತ್ಪನ್ನಗಳಿಗೆ ಹೆಸರಾಗಿರುವ, ನಥಿಂಗ್ ಕಂಪನಿಯ ಉಪಬ್ರ್ಯಾಂಡ್ CMF ತನ್ನ ಹೊಸ ಆಡಿಯೋ ಡಿವೈಸ್ CMF Headphone Pro (ಓವರ್-ದಿ-ಇಯರ್ ಶೈಲಿಯ ಕಂಪೆನಿಯ ಮೊದಲ ಸಾಧನ) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಈ ಕುರಿತಂತೆ ಟೀಸರ್ ಒಂದನ್ನು ಹಂಚಿಕೊಂಡಿದ್ದು, "Remix Everything" ಎಂಬ ಟ್ಯಾಗ್‌ಲೈನ್‌ನೊಂದಿಗೆ ಈ ಹೊಸ CMF Headphone Pro ಹೆಡ್‌ಫೋನ್‌ ಡಿವೈಸ್ ಅನ್ನು ಪರಿಚಯಿಸುವುದಾಗಿ ತಿಳಿಸಿದೆ. ಬಿಡುಗಡೆಗೆ ಮುನ್ನವೇ ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿರುವ ಈ ಹೊಸ CMF ಹೆಡ್‌ಫೋನ್‌ಗಳು ಹೇಗಿರಬಹುದು ಎಂಬುದನ್ನು ನೋಡೋಣ ಬನ್ನಿ.

ಬಿಡುಗಡೆ ದಿನಾಂಕ, ವಿನ್ಯಾಸ ಮತ್ತು ಬಣ್ಣಗಳು
ನಥಿಂಗ್ ಕಂಪನಿಯು ಹಂಚಿಕೊಂಡ ಟೀಸರ್ ಪ್ರಕಾರ, ಹೊಸ CMF Headphone Pro ಹೆಡ್‌ಫೋನ್‌ಗಳು ಸೆಪ್ಟೆಂಬರ್ 29ರಂದು ಅಧಿಕೃತವಾಗಿ ಪರಿಚಯಗೊಳ್ಳುತ್ತವೆ. ಈ ಹೆಡ್‌ಫೋನ್‌ಗಳು ಓವರ್-ದಿ-ಇಯರ್ ಶೈಲಿಯ (Over-Ear Headphones) ವಿನ್ಯಾಸವನ್ನು (ಹೊಂದಿದ್ದು, ಬಳಸಲು ಸುಲಭವಾಗುವಂತೆ ರೂಪುಗೊಂಡಿದೆ. "Remix Everything" ಎಂಬ ಟ್ಯಾಗ್‌ಲೈನ್‌ನಂತೆಯೇ, ವಾಲ್ಯೂಮ್ ನಿಯಂತ್ರಣಕ್ಕಾಗಿ ಸ್ಕ್ರೋಲ್ ಬಟನ್, ಪವರ್ ಬಟನ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಎಲ್‌ಇಡಿ ಪವರ್ ಸೂಚಕ ನೀಡಲಾಗಿರುವುದು ದೃಢಪಟ್ಟಿದೆ.

ಈ ಸಾಧನದ ಇಯರ್‌ಕಪ್ ಒಳಭಾಗದಲ್ಲಿ ಎಡ (L) ಮತ್ತು ಬಲ (R) ಗುರುತುಗಳನ್ನು ನೀಡಲಾಗಿದೆ. ಹೊರಭಾಗದಲ್ಲಿ "CMF by Nothing" ಎಂಬ ಬ್ರ್ಯಾಂಡಿಂಗ್ ಕಂಡುಬರುತ್ತದೆ. ಇನ್ನು ಈ ಹೆಡ್‌ಫೋನ್‌ಗಳು ಪ್ರಾರಂಭದಲ್ಲಿ ಕಿತ್ತಳೆ (Orange) ಮತ್ತು ನೀಲಿ (Blue) ಬಣ್ಣಗಳಲ್ಲಿ ಲಭ್ಯವಾಗಲಿವೆ ಎಂದು ಟೀಸರ್ ಸೂಚಿಸಿದೆ. ಆದರೆ ಮೃದು ಫೋಮ್ ಇಯರ್‌ಕಪ್‌ಗಳು, ದೀರ್ಘಕಾಲದ ಬಳಕೆಯ ಆರಾಮ ಇತ್ಯಾದಿ ವಿವರಗಳು ಇನ್ನೂ ಕಂಪನಿಯಿಂದ ಅಧಿಕೃತವಾಗಿ ಘೋಷಿಸಲಾಗಿಲ್ಲ. ಇವು ಪ್ರಸ್ತುತ ಲೀಕ್‌ಗಳಲ್ಲಿ ಮಾತ್ರ ಉಲ್ಲೇಖವಾಗಿವೆ.

ಭಾರತದಲ್ಲಿ ಸೆ.29 ರಂದು CMF Headphone Pro ಬಿಡುಗಡೆ ಅಧಿಕೃತ!

ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಇರಲಿದೆಯೇ?
ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ನಥಿಂಗ್ ಈ CMF Headphone Pro ಹೆಡ್‌ಫೋನ್‌ನಲ್ಲಿವ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ತಂತ್ರಜ್ಞಾನವನ್ನು ನೀಡಬಹುದು ಎಂಬ ಊಹೆಗಳು ಕೇಳಿಬರುತ್ತಿವೆ. ಸ್ಲೈಡರ್ ಮತ್ತು ಸಕ್ರಿಯ ಶಬ್ದ ರದ್ದತಿ (ANC) ಅನ್ನು ಸಕ್ರಿಯಗೊಳಿಸಲು ಮೀಸಲಾದ ಸ್ವಿಚ್ ಇರಬಹುದು, ಇದು ಕೇಳುವ ಅನುಭವವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಮುಂಬರುವ ಈ ಹೆಡ್‌ಫೋನ್‌ಗಳು ವರ್ಧಿತ ಸೌಕರ್ಯಕ್ಕಾಗಿ ಫೋಮ್ ಇಯರ್‌ಕಪ್‌ಗಳನ್ನು ಒಳಗೊಂಡಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಇಯರ್‌ಕಪ್‌ಗಳ ಒಳಗೆ, ಎಡ ಮತ್ತು ಬಲ ಗುರುತುಗಳು ಮೆಶ್‌ನಲ್ಲಿ ಗೋಚರಿಸುತ್ತವೆ. ಆದರೆ ಕಂಪನಿಯು ಈ ಯಾವುದೇ ಮಾಹಿತಿಯನ್ನು ಇನ್ನೂ ದೃಢಪಡಿಸಿಲ್ಲ. ಆದ್ದರಿಂದ, ಅಧಿಕೃತ ಬಿಡುಗಡೆ ವೇಳೆ ಮಾತ್ರ ಈ ವೈಶಿಷ್ಟ್ಯಗಳು ಬಹಿರಂಗಗೊಳ್ಳಲಿದೆ.

CMF ಇತ್ತೀಚೆಗೆ ತನ್ನ CMF Phone 2 Pro ಮತ್ತು CMF Watch 3 Pro ಉತ್ಪನ್ನಗಳ ಜೊತೆಗೆ ಹೊಸ ಹೆಡ್‌ಫೋನ್‌ಗಳ ಚಿತ್ರವನ್ನು ಹಂಚಿಕೊಂಡಿತ್ತು. ಇದರಿಂದ ಕಂಪನಿ ಒಂದೇ ವೇದಿಕೆಯಲ್ಲಿ ಹಲವಾರು ಸಾಧನಗಳನ್ನು ಪರಿಚಯಿಸುವ ನಿರೀಕ್ಷೆ ಬಲವಾಗಿದೆ. ಹೆಡ್‌ಫೋನ್‌ನ ಅಧಿಕೃತ ಬೆಲೆ ಹಾಗೂ ಸಂಪೂರ್ಣ ವೈಶಿಷ್ಟ್ಯಗಳು ಇನ್ನೂ ಘೋಷಣೆಗೊಂಡಿಲ್ಲ. ಕೆಲವು ಪ್ರಮುಖ ವರದಿಗಳ ಅಭಿಪ್ರಾಯದಂತೆ, ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಗಮನಿಸಿದರೆ ಇದರ ಬೆಲೆ ಸ್ಪರ್ಧಾತ್ಮಕವಾಗಿರಬಹುದು. ಸೆಪ್ಟೆಂಬರ್ 29ರಂದು ಅಧಿಕೃತ ಬಿಡುಗಡೆ ವೇಳೆ ಎಲ್ಲಾ ವಿವರಗಳು ಬಹಿರಂಗಗೊಳ್ಳಲಿವೆ.

ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು? ನೀವು ಯಾವ ಬೆಲೆಯಲ್ಲಿ ಈ ಹೊಸ CMF Headphone Pro ಹೆಡ್‌ಪೋನ್ ಸಾಧನವನ್ನು ನಿರೀಕ್ಷಿಸುತ್ತಿದ್ದೀರಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
CMF confirms the India launch date of its first over-ear headphones, the CMF Headphone Pro, expanding its audio lineup.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+