ಭಾರತದಲ್ಲಿ ಕಡಿಮೆ ಬೆಲೆಯ 4 ಹೊಸ Dell Plus ಮಾನಿಟರ್‌ಗಳು ಬಿಡುಗಡೆ!
ಭಾರತದ ಸಾಮಾನ್ಯ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಡೆಲ್ (Dell) ಕಂಪನಿಯು ದೇಶದಲ್ಲಿ ಕಡಿಮೆ ಬೆಲೆಯ ಹೊಸ Dell 24 Plus ಮತ್ತು Dell 27 Plus ಮಾನಿಟರ್‌ಗಳು ಹಾಗೂ ಮಧ್ಯಮ ಬೆಲೆಯಲ್ಲಿ USB-C ಮಾದರಿಯ Dell 27 Plus QHD ಮತ್ತು Dell 27 Plus QHD ಎಂಬ ನಾಲ್ಕು ಮಾನಿಟರ್‌ಗಳನ್ನು ಪರಿಚಯಿಸಿದೆ. ಡೆಲ್ ಕಂಪೆನಿಯು ಈ ಬಾರಿ ಗೇಮಿಂಗ್ ಅಥವಾ ಪ್ರೊ-ಎಡಿಟಿಂಗ್‌ಗಾಗಿ ಅತ್ಯುನ್ನತ ಸ್ಪೆಕ್ಸ್ ನೀಡುವುದಕ್ಕಿಂತ, ದಿನನಿತ್ಯದ ಕೆಲಸ ಮತ್ತು ಮನರಂಜನೆಗೆ ಸೂಕ್ತವಾದತೆ ಈ ಮಾನಿಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗಮನಸೆಳೆದಿದೆ.
ಎಲ್ಲಾ ನಾಲ್ಕು ಮಾನಿಟರ್‌ಗಳ ಪ್ರಮುಖ ವೈಶಿಷ್ಟ್ಯಗಳು ಹೀಗಿವೆ,
ಕೆಲಸ, ಅಧ್ಯಯನ ಮತ್ತು ಮನರಂಜನೆ ಮೂರು ಕ್ಷೇತ್ರಗಳಿಗೂ ಉಪಯುಕ್ತವಾಗುವಂತೆ, Dell 24 Plus, Dell 27 Plus, Dell 27 Plus QHD ಮತ್ತು Dell 27 Plus QHD ಈ ಎಲ್ಲಾ ನಾಲ್ಕು ಮಾನಿಟರ್‌ಗಳಲ್ಲಿಯೂ AMD FreeSync, 144Hz ರಿಫ್ರೆಶ್ ರೇಟ್, ಮತ್ತು 1ms Motion Picture Response Time (MPRT) ತಂತ್ರಜ್ಞಾನಗಳಿವೆ. ಈ ವೈಶಿಷ್ಟ್ಯಗಳಿಂದ ಚಿತ್ರಗಳು ಹೆಚ್ಚು ಸ್ಮೂತ್ ಆಗಿ ಕಾಣುತ್ತವೆ ಮತ್ತು ವೇಗದ ದೃಶ್ಯಗಳಲ್ಲಿಯೂ ಮೋಶನ್ ಬ್ಲರ್ ಅಥವಾ ಸ್ಕ್ರೀನ್ ಟಿಯರಿಂಗ್ ಕಡಿಮೆಯಾಗುತ್ತದೆ ಎಂದು ಡೆಲ್ ಹೇಳಿಕೊಂಡಿದೆ.
ಈ ಸರಣಿಯಲ್ಲಿ Full HD (S2425HSM, S2725HSM) ಮತ್ತು Quad HD (S2725DSM, S2725DC) ಮಾದರಿಗಳು ಲಭ್ಯವಿದ್ದು, ಎಲ್ಲವೂ IPS ಪ್ಯಾನೆಲ್‌ಗಳೊಂದಿಗೆ ಬರುತ್ತವೆ. ಇವುಗಳ ಬಣ್ಣದ ನಿಖರತೆ ಮತ್ತು ವಿಶಾಲ ವೀಕ್ಷಣಾ ಕೋನಗಳಿಂದ ಇದು ಮನೆ ಮತ್ತು ಕಚೇರಿಯ ಬಳಕೆಗೂ ಸೂಕ್ತವಾಗಿದೆ. ಎಲ್ಲಾ ಮಾದರಿಗಳು TÜV Rheinland 4-ಸ್ಟಾರ್ ಐ ಕಂಫರ್ಟ್ ಪ್ರಮಾಣಪತ್ರ ಪಡೆದಿವೆ. ಇದು ನೀಲಿ ಬೆಳಕಿನ ಪ್ರಮಾಣವನ್ನು ಕಡಿಮೆ ಮಾಡಿ ಕಣ್ಣಿನ ಒತ್ತಡವನ್ನು ತಗ್ಗಿಸುತ್ತದೆ. ದಿನವಿಡೀ ಡಿಸ್‌ಪ್ಲೇ ಮುಂದೆ ಕೆಲಸ ಮಾಡುವವರಿಗೆ ಇದು ಸಹಾಯಕವಾಗಲಿದೆ.

ವಿನ್ಯಾಸದ ವಿಷಯದಲ್ಲಿ, ಇತ್ತೀಚಿನ ಈ ಡೆಲ್ಮಾನಿಟರ್‌ಗಳು ಟಿಲ್ಟ್ ಅಡ್ಜಸ್ಟ್‌ಮೆಂಟ್ ಸೌಲಭ್ಯವನ್ನು ಹೊಂದಿವೆ. ಇವುಗಳ ಸಣ್ಣ ಬೆಸೆಲ್ ವಿನ್ಯಾಸವು ಪ್ರೀಮಿಯಂ ಲುಕ್ ನೀಡುತ್ತದೆ. ನಿರ್ದಿಷ್ಟವಾಗಿ USB-C ಮಾದರಿಯು ಆಧುನಿಕ ಸೆಟಪ್ ಮಾಡುವಂತಹ ರೀತಿಯಲ್ಲಿದೆ.ವಿಶೇಷವಾಗಿ USB-C ಮಾದರಿ (S2725DC), ಒಂದು ಕೇಬಲ್‌ನಲ್ಲೇ ಲ್ಯಾಪ್‌ಟಾಪ್ ಚಾರ್ಜ್ ಮಾಡುವುದಕ್ಕೂ, ವೀಡಿಯೋ ಪ್ರಸಾರಕ್ಕೂ ಅವಕಾಶ ನೀಡುತ್ತದೆ. ಇದು ಇಂದಿನ ಹೈಬ್ರಿಡ್ ವರ್ಕ್ ಸೆಟ್‌ಅಪ್‌ಗಳಿಗೆ ಇದು ಅತ್ಯಂತ ಉಪಯುಕ್ತವಾಗಿರುವುದನ್ನು ನಾವು ಗಮನಿಸಬಹುದು.
ಇದರೊಂದಿಗೆ, ಈ ಎಲ್ಲಾ ಮಾನಿಟರ್‌ಗಳು ಇನ್‌ಬಿಲ್ಟ್ 3W ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿರುವುದು ವಿಶೇಷ. ಇದರಿಂದ ಹೊರಗಿನ ಸೌಂಡ್ ಸಿಸ್ಟಂ ಅವಶ್ಯಕತೆ ಇಲ್ಲದಂತೆ ಬಳಕೆದಾರರಿಗೆ ಒಂದು ರೀತಿಯ ನೆಮ್ಮದಿ ದೊರೆಯಲಿದೆ. ಇಷ್ಟೇ ಅಲ್ಲದೆ, ಬಳಕೆದಾರರು ಸಿನಿಮಾಗಳು, ಸಂಗೀತ ಅಥವಾ ಆನ್‌ಲೈನ್ ಮೀಟಿಂಗ್‌ಗಳ ಸಮಯದಲ್ಲಿ ವಿಭಿನ್ನ ಅನುಭವ ನೀಡುವಂತೆ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಇವುಗಳ ಧ್ವನಿ ಪ್ರೊಫೈಲ್‌ಗಳನ್ನು ಕಸ್ಟಮೈಸ್ ಮಾಡಬಹುದು. ಇದು ಬಳಕೆದಾರರಿಗೆ ವಿಭಿನ್ನ ಅನುಭವ ನೀಡುತ್ತದೆ ಎಂದು ಕಂಪೆನಿಯು ಹೇಳಿಕೊಂಡಿದೆ.
ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
Dell 24 Plus (S2425HSM) - ₹11,399
Dell 27 Plus (S2725HSM) - ₹14,499
Dell 27 Plus QHD (S2725DSM) - ₹22,399
Dell 27 Plus QHD USB-C (S2725DC) - ₹23,699
ಈ ಎಲ್ಲಾ ಮಾದರಿಗಳು ಪ್ರಸ್ತುತ Dell ಅಧಿಕೃತ ವೆಬ್‌ಸೈಟ್, ಅಮೆಜಾನ್, ಹಾಗೂ ಪ್ರಮುಖ ರಿಟೇಲ್ ಪಾರ್ಟ್ನರ್‌ಗಳ ಮೂಲಕ ಖರೀದಿಗೆ ಲಭ್ಯವಿವೆ.
ಡೆಲ್‌ನ ಇತ್ತೀಚಿನ ಈ ಎಲ್ಲಾ ಹೊಸ 24 ಮತ್ತು 27 ಪ್ಲಸ್ ಮಾನಿಟರ್‌ಗಳು ಕೆಲಸ, ಓದು ಮತ್ತು ಮನರಂಜನೆಗೆ ಸಮತೋಲನದಿಂದ ಒದಗಿಸುವ ಭರವಸೆಯೊಂದಿಗೆ ಬಂದಿವೆ. ಉತ್ತಮ ಚಿತ್ರ ಗುಣಮಟ್ಟ, ಆರಾಮದಾಯಕ ದೃಶ್ಯಾನುಭವ ಮತ್ತು ಸುಲಭ ಸಂಪರ್ಕ ಆಯ್ಕೆಗಳು ಇದರ ಪ್ರಮುಖ ಆಕರ್ಷಣೆ. ನೀವು ಮನೆ ಅಥವಾ ಕಚೇರಿಗೆ ಹೊಸ ಮಾನಿಟರ್ ಹುಡುಕುತ್ತಿದ್ದರೆ, ಈ ಸರಣಿ ಖಂಡಿತವಾಗಿಯೂ ಪರಿಗಣಿಸಬಹುದಾದ ಆಯ್ಕೆಯಾಗಿದೆ. ಅದರಲ್ಲೂ QHD ಮಾನಿಟರ್ ಬಳಕೆಯನ್ನು ಎದುರುನೋಡುತ್ತಿರುವ ಗ್ರಾಹಕರಿಗೆ ಇದು ಒಂದು ಅತ್ಯುತ್ತಮ ಆಯ್ಕೆ ಎನ್ನಬಹುದು.


Click it and Unblock the Notifications








