ಮಕ್ಕಳ ಪ್ರತಿ ಹೆಜ್ಜೆಯನ್ನು ನಿಮಗೆ ತಿಳಿಸುವ ಈ ಸ್ಮಾರ್ಟ್ ವಾಚ್ ಗಳು..!!!!
ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ವಾಚ್ ಗಳನ್ನು ನಿಮ್ಮ ಮಕ್ಕಳ ಕೈಗೆ ಕಟ್ಟಿದರೆ ಸಾಕು ಅವರು ಎಲ್ಲಿದ್ದಾರೆ ಎಂಬುದು ನಿಮಗೆ ತಿಳಿಯುತ್ತದೆ.
ಇಂದು ಮಕ್ಕಳನ್ನು ಶಾಲೆಗೆ ಇಲ್ಲವೇ ಆಟಕ್ಕೆ ಕಳುಹಿಸಿದ ಮೇಲೆ ತಂದೆ ತಾಯಿಗಳಿಗೆ ಮಕ್ಕಳು ಎಲ್ಲಿ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಕಳವಳ ಇದ್ದೇ ಇರುತ್ತದೆ. ಇದಕ್ಕಾಗಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಮಕ್ಕಳ ಹಿಂದೆಯೇ ಇರುತ್ತಾರೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ವಾಚ್ ಗಳನ್ನು ನಿಮ್ಮ ಮಕ್ಕಳ ಕೈಗೆ ಕಟ್ಟಿದರೆ ಸಾಕು ಅವರು ಎಲ್ಲಿದ್ದಾರೆ ಎಂಬುದು ನಿಮಗೆ ತಿಳಿಯುತ್ತದೆ.

ನಿಮ್ಮ ಮಕ್ಕಳು ಎಲ್ಲಿ ಹೋಗುತ್ತಿದ್ದಾರೆ ಎಂಬುದನ್ನು ಟ್ರಾಕ್ ಮಾಡಲು ಈ ಸ್ಮಾರ್ಟ್ ವಾಚ್‌ಗಳು ಸಹಾಯಕಾರಿಯಾಗಲಿದ್ದು, ಅಲ್ಲದೇ ಇವು ನೋಡಲು ಆಕರ್ಷಕವಾಗಿದ್ದು, ಮಕ್ಕಳು ಅದನ್ನು ಧರಿಸಲು ಇಷ್ಟಪಡುತ್ತಾರೆ. ಅವರಿಗೆ ಸಮಯವನ್ನು ತೋರಿಸಲಿದೆ ಅದೇ ಮಾದರಿಯಲ್ಲಿ ನಿಮಗೂ ಮಾಹಿತಿ ದೊರೆಯುತ್ತಿರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ನಿಮ್ಮ ಮಕ್ಕಳ ಲೋಕೆಷನ್ ತೋರಿಸುತ್ತಿರುತ್ತದೆ.

ಲಿಫ್ ವೆರ್ಬಲ್ ಸೆಫರ್ ಕಿಡ್:
ಲಿಫ್ ವೆರ್ಬಲ್ ಸ್ಟಾರ್ಟಪ್ ಕಂಪನಿಯಾಗಿದ್ದು, ಇದು ಮಕ್ಕಳ ಮತ್ತು ವಯಸ್ಕರ ಲೋಕೆಷನ್ ಟ್ರಾಕಿಂಗ್ ಬಾಂಡ್ ಗಳನ್ನು ತಯಾರಿಕೆ ಮಾಡುತ್ತದೆ. ಸದ್ಯ ಬಿಡುಗಡೆ ಮಾಡಿರುವ ಸೆಫರ್ ಕಿಡ್ ಇದು ಮಕ್ಕಳ ಸುರಕ್ಷತೆಗೆ ಮಾಡಿರುವ ವಾಚ್ ಮಾದರಿಯ ವೈರ್ ಬ್ಯಾಂಡ್ ಆಗಿದೆ. ಇದರಲ್ಲಿ ಎಮರ್ಜನ್ಸಿ ಬಟನ್ ಇದ್ದು, ಮಕ್ಕಳು ತೊಂದರೆಯಲ್ಲಿ ಸಿಕ್ಕಿಕೊಂಡ ಸಂದರ್ಭದಲ್ಲಿ ಸೂಚನೆ ನೀಡಲು ಸಹಕಾರಿಯಾಗಿದೆ. ಅಲ್ಲದೇ ಇದು ಸ್ಮಾರ್ಟ್ ಫೋನ್ ನಲ್ಲಿ ಲೈವ್ ಲೋಕೆಷನ್ ಮಾಹಿತಿಯನ್ನು ನೀಡುತ್ತದೆ. ಇದಲ್ಲದೇ ಇದು ಆಪ್ ನೊಂದಿಗೆ ಸಂಪರ್ಕ ಸಾಧಿಸಲಿದೆ, ಅದಕ್ಕಾಗಿ ಆಪ್ ವೊಂದನ್ನು ಬಿಡಗಡೆ ಮಾಡಿದೆ. ಇದಕ್ಕೆ ಸಿಮ್ ಕಾರ್ಡ್ ಹಾಕಬಹುದಾಗಿದೆ. ಬೆಲೆ: ರೂ. 5000.

ಲೆಟ್ಸ್ ಟ್ರಾಕ್ ಕಿಡೊ:
ಲೆಟ್ಸ್ ಟ್ರಾಕ್ ಅಮೆರಿಕಾ ಮೂಲದ ಕಂಪನಿಯಾಗಿದ್ದು, ಇದು ಲೋಕೆಷನ್ ಟ್ರ್ಯಾಕ್ ಡಿವೈಸ್ ಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇದು GPS ಮೂಲಕ ಟ್ರಾಕಿಂಗ್ ಮಾಡಲಿದ್ದು, ರಿಯಲ್ ಟೈಮಿನಲ್ಲಿ ನಿಮ್ಮ ಮಕ್ಕಳ ಲೋಕೆಷ್ ತೋರಿಸಲಿದೆ. ಅಲ್ಲದೇ ಅವರು ಸಾಗುತ್ತಿರುವ ವಾಹನದ ವೇಗವನ್ನು ತಿಳಿಸಲಿದೆ. ಇದರ ಬೆಲೆ ರೂ.5,999ಗಳಾಗಿದ್ದು, ಪ್ರತಿ ತಿಂಗಳು ರೂ. 99 ನೀಡಿ ಚಂದದಾರಾಗಬೇಕಿದೆ.

ಆಲ್ಕಟೆಲ್ ಮೂವ್ ಟೈಮ್:
ಆಲ್ಕಟೆಲ್ ಮೂವ್ ಟೈಮ್ ವಾಚ್ ಗಳು ನಿಮ್ಮ ಮಕ್ಕಳ ಟ್ರಾಕಿಂಗ್ ಮಾಡಲು ಸಹಾಯಕಾರಿಯಾಗಿದೆ. ಇದರ ಬೆಲೆ ರೂ.3,999 ಆಗಿದ್ದು, ಅಲ್ಲದೇ ಯಾವುದೇ ತಿಂಗಳ ವೆಚ್ಚ ಇಲ್ಲ. ಇದರಲ್ಲಿ 10 ನಂಬರ್ ನಿಂದ ಇನ್ ಕಂಮಿಂಗ್ ಕಾಲ್ ರಿಸಿವ್ ಮಾಡಬಹುದಾಗಿದೆ. ಮಕ್ಕಳು ಕರೆ ಸ್ವೀಕರಿಸಬಹುದಾಗಿದೆ. ಅಲ್ಲದೇ ಮಕ್ಕಳು ತೊಂದರೆಯಲ್ಲಿ ಸಿಲುಕಿದರೆ ನಿಮಗೆ ಕರೆಯನ್ನು ಮಾಡಬಹುದು. ಮಕ್ಕಳು ಇರುವ ಜಾಗವನ್ನು ಗುರುತಿಸಬಹುದು. ಇದು ಸಹ ಆಪ್ ಹೊಂದಿದೆ.


Click it and Unblock the Notifications








