ಈ ದೀಪಾವಳಿಗೆ ಕೊಡಲು ಸೂಕ್ತವಾದ 5 ಬೆಸ್ಟ್ ಗ್ಯಾಜೆಟ್ ಗಿಫ್ಟ್‌ಗಳು!
ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಂತೋಷ, ಕುಟುಂಬದ ಕ್ಷಣಗಳು ಮತ್ತು ಉಡುಗೊರೆಗಳ ವಿನಿಮಯ ಆಗಿರುತ್ತದೆ. ಸಿಹಿತಿಂಡಿಗಳು ಹಾಗೂ ಸಾಂಪ್ರದಾಯಿಕ ಉಡುಪುಗಳ ಜೊತೆಗೆ ಈ ವರ್ಷ ನಿಮ್ಮ ಉಡುಗೊರೆಯಲ್ಲಿ ಸ್ವಲ್ಪ ತಂತ್ರಜ್ಞಾನ ಕೂಡ ಇದ್ದರೆ ಹೇಗೆ?. ಹೌದು, ನೀವು ದಿನನಿತ್ಯದ ಸಾಮಾನ್ಯ ಬಳಕೆಯ ಕೆಲವು ಗ್ಯಾಜೆಟ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ನಿಮ್ಮ ಪ್ರೀತಿಪಾತ್ರರ ದಿನನಿತ್ಯದ ಜೀವನಕ್ಕೆ ಅನುಕೂಲತೆ ತರಲು ಸಹಾಯಕವಾಗುವ ಮತ್ತು ಹಬ್ಬದ ನೆನಪುಗಳನ್ನು ಹೆಚ್ಚು ವಿಶಿಷ್ಟಗೊಳಿಸುವ ಕೆಲವು ಗ್ಯಾಜೆಟ್ ಉಡುಗೊರೆ ಆಯ್ಕೆಗಳು ಕೈಗೆಟುಕುವ ಬೆಲೆಗಳಲ್ಲಿ ಲಭ್ಯವಿವೆ. ಬಜೆಟ್ ಬೆಲೆಯ ಆಯ್ಕೆಯಂತೆ, ಈ ದೀಪಾವಳಿಗೆ ನೀವು ನೀಡಬಹುದಾದ ಟಾಪ್ 5 ಗ್ಯಾಜೆಟ್ ಉಡುಗೊರೆ ಆಯ್ಕೆಗಳು ಹೀಗಿವೆ,
1. ಸ್ಮಾರ್ಟ್ ಹೋಮ್ ಸ್ಪೀಕರ್‌ಗಳು: ಮನೆಯನ್ನು ಸ್ಮಾರ್ಟ್ ಆಗಿಸಿ
ಪೂಜೆ ವೇಳೆ ಭಜನೆ ಹಾಕುವುದು ಅಥವಾ ಅಡುಗೆ ಮಾಡುವಾಗ ಟೈಮರ್ ಹೊಂದಿಸುವುದು ಎಲ್ಲವೂ ಧ್ವನಿ ಆಜ್ಞೆಯಿಂದ ಸಾಧ್ಯವಾಗುವಂತಹ ಸ್ಮಾರ್ಟ್ ಹೋಮ್ ಸ್ಪೀಕರ್‌ಗಳು ನಿಮ್ಮ ಉಡುಗೊರೆಯ ಭಾಗವಾಗಬಹುದು. ಈ ಉಡುಗೊರೆ ಮನೆಯನ್ನು ನಿಜವಾದ ಸ್ಮಾರ್ಟ್ ಹೋಮ್ ಆಗಿ ಪರಿವರ್ತಿಸುತ್ತದೆ.
Amazon Echo Dot (5th Gen) - ₹4,449
Google Nest Mini (2nd Gen) - ₹2,550 - ₹2,850
Amazon Echo Pop - ₹2,949
2. ಟ್ರೂ ವೈರ್‌ಲೆಸ್ (TWS) ಇಯರ್‌ಬಡ್ಸ್‌ಗಳು: ಸಂಗೀತಪ್ರಿಯರಿಗೆ ಪರಿಪೂರ್ಣ ಉಡುಗೊರೆ
ಆಫೀಸ್ ಕೆಲಸ, ಟ್ರಾವೆಲ್ ಅಥವಾ ವಿಶ್ರಾಂತಿ ಎಲ್ಲಕ್ಕೂ ಸೂಕ್ತ ಟ್ರೂ ವೈರ್‌ಲೆಸ್ (TWS) ಇಯರ್‌ಬಡ್ಸ್‌ಗಳ. ಉತ್ತಮ ಧ್ವನಿ ಗುಣಮಟ್ಟ ಮತ್ತು ಆರಾಮದಾಯಕ ವಿನ್ಯಾಸದ ಕೆಲವು ಸ್ಮಾರ್ಟ್ ಆಯ್ಕೆಗಳು ಹೀಗಿವೆ.
OnePlus Nord Buds 3 (32dB ANC) - ₹1,799
Samsung Galaxy Buds (Entry-Level) - ₹2,500 - ₹3,500
Noise Buds VS102 - ₹999 - ₹1,299

3. ಸ್ಮಾರ್ಟ್‌ವಾಚ್‌ಗಳು / ಫಿಟ್‌ನೆಸ್ ಟ್ರ್ಯಾಕರ್‌ಗಳು: ಆರೋಗ್ಯದ ಕಾಳಜಿ
ಸ್ಮಾರ್ಟ್‌ವಾಚ್‌ಗಳು ಈಗ ಕೇವಲ ಸಮಯವನ್ನು ಮಾತ್ರ ಸೂಚಿಸುವುದಿಲ್ಲ. ಬದಲಾಗಿ, ಹೃದಯ ಬಡಿತ, SpO₂ ಮತ್ತು ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ ಪರಿಪೂರ್ಣ ಆಯ್ಕೆಯಾಗಿವೆ. ನಿಮ್ಮ ಪ್ರೀತಿಪಾತ್ರರ ಆರೋಗ್ಯ ಕಾಪಾಡುವ ಅತ್ಯುತ್ತಮ ದೀಪಾವಳಿ ಗಿಫ್ಟ್ ಇದಾಗಬಹುದು.
Noise ColorFit Ultra 3 - ₹2,999
Redmi Watch 5 Lite - ₹3,299
Samsung Galaxy Watch (Entry-Level) - ₹7,999 - ₹9,999
4. ಪೋರ್ಟಬಲ್ ಬ್ಲೂಟೂತ್ ಸ್ಪೀಕರ್‌ಗಳು: ಪಾರ್ಟಿ ಮೂಡ್‌ಗೆ ಪರ್ಫೆಕ್ಟ್
ಉತ್ತಮ ಬಾಸ್, ಧ್ವನಿ ಗುಣಮಟ್ಟ ಮತ್ತು ಪೋರ್ಟಬಿಲಿಟಿ ಎಲ್ಲವೂ ಒಂದೇ ಉಡುಗೊರೆಯಲ್ಲಿ ದೊರೆತರೆ.? ಖಂಡಿತವಾಗಿಯೂ ಕುಟುಂಬ ಸಮಾರಂಭಗಳು ಮತ್ತು ಹಬ್ಬದ ಪಾರ್ಟಿಗಳಿಗೆ ಸೂಕ್ತ ಸಂಗೀತದ ಆಯ್ಕೆಯಾಗುತ್ತದೆ.
JBL Flip 6 (IP67 ವಾಟರ್‌ಪ್ರೂಫ್) - ₹7,499
Sony SRS-XB100 - ₹3,990 - ₹4,490
boAt Stone 650 - ₹1,499 - ₹1,999
5. ಏರ್ ಪ್ಯೂರಿಫೈಯರ್‌ಗಳು: ಶುದ್ಧ ಗಾಳಿಯ ಉಡುಗೊರೆ
ವಾಯುಮಾಲಿನ್ಯ ಹೆಚ್ಚುತ್ತಿರುವ ಕಾಲದಲ್ಲಿ ಆರೋಗ್ಯದ ಕಾಳಜಿಯುಳ್ಳ ಉಡುಗೊರೆಯು ಈ ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಶುದ್ಧ ಗಾಳಿ ಮತ್ತು ಆರೋಗ್ಯಕರ ಜೀವನಕ್ಕೆ ತಂತ್ರಜ್ಞಾನೀಕ ಉಡುಗೊರೆ ಇದಾಗಲಿದೆ.
Honeywell Air Touch V5 (Alexa Control) - ₹9,699
Dyson Purifier Cool TP10 - ₹33,900
Mi Air Purifier 3/4 Lite - ₹8,999 - ₹9,999
ಈ ಮೇಲೆ ಪಟ್ಟಿ ಮಾಡಲಾಗಿರುವ ಗ್ಯಾಜೆಟ್‌ಗಳು ಹಬ್ಬದ ನೆನಪುಗಳನ್ನು ಹೆಚ್ಚು ವಿಶಿಷ್ಟಗೊಳಿಸುವ ಗ್ಯಾಜೆಟ್ ಉಡುಗೊರೆಗಳಾಗಿ ನೀವು ನೋಡಬಹುದು. ಈ ದೀಪಾವಳಿಯಲ್ಲಿ ತಂತ್ರಜ್ಞಾನದಿಂದ ತುಂಬಿದ ಉಡುಗೊರೆಯೊಂದಿಗೆ ಸಂತೋಷ ಹಂಚಿಕೊಳ್ಳಿ. ನಿಮ್ಮ ಪ್ರೀತಿಪಾತ್ರರಿಗೆ ಹೊಸ ಅನುಭವ, ನವೀನತೆ ಮತ್ತು ಸಂತೋಷದ ನೆನಪು ನೀಡಿ. ಜೊತೆಗೆ, ಈ ಮೇಲೆ ಪಟ್ಟಿ ಮಾಡಲಾದ ಯಾವ ಗ್ಯಾಜೆಟ್ ನಿಮ್ಮ ಗಮನಸೆಳೆಯಿತು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








