1-ಇಂಚ್ CMOS ಸೆನ್ಸಾರ್‌ನ ಹೊಸ DJI Mini 5 Pro ಡ್ರೋನ್ ಬಿಡುಗಡೆ!
ಚೀನಾ ಮೂಲದ ಜನಪ್ರಿಯ ಡ್ರೋನ್ ತಯಾರಕ ಕಂಪನಿ DJI ತನ್ನ ಹೊಸ ಡ್ರೋನ್ ಮಾದರಿ DJI Mini 5 Pro ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಈ ಹೊಸ ಡ್ರೋನ್, ಅದರ ಗಾತ್ರ ಮತ್ತು ಕಾರ್ಯಕ್ಷಮತೆಯಿಂದಾಗಿ ಗಮನ ಸೆಳೆಯುತ್ತಿದೆ. ಕೇವಲ 250 ಗ್ರಾಂ ತೂಕದ ಈ ಡ್ರೋನ್, 1-ಇಂಚಿನ CMOS ಕ್ಯಾಮೆರಾ ಸಂವೇದಕವನ್ನು ಹೊಂದಿರುವ ವಿಶ್ವದ ಮೊದಲ ಮಿನಿ ಡ್ರೋನ್ ಎಂದು ಕಂಪನಿ ಹೇಳಿಕೊಂಡಿದೆ. ವೃತ್ತಿಪರ ಛಾಯಾಗ್ರಾಹಕರು ಮತ್ತು ವೀಡಿಯೊಗ್ರಾಫರ್‌ಗನ್ನು ಗುರಿಯಾಗಿಸಿಕೊಂಡು ಬಂದಿರುವ ಹೊಸ ಡ್ರೋಣ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ನೋಡೋಣ ಬನ್ನಿ.
ಪ್ರಮುಖ ವೈಶಿಷ್ಟ್ಯಗಳು
DJI Mini 5 Pro ಡ್ರೋನ್‌ನ ಪ್ರಮುಖ ವೈಶಿಷ್ಟ್ಯಗಳೆಂದರೆ ಅದರ ಕ್ಯಾಮೆರಾ ಮತ್ತು ಬ್ಯಾಟರಿ ಸಾಮರ್ಥ್ಯ. ಇದು 84-ಡಿಗ್ರಿ ಫೀಲ್ಡ್ ಆಫ್ ವ್ಯೂ, 24mm ಫೋಕಲ್ ಲೆಂತ್ ಮತ್ತು f/1.8 ಅಪರ್ಚರ್ ಹೊಂದಿರುವ 50-ಮೆಗಾಪಿಕ್ಸೆಲ್, 1-ಇಂಚಿನ CMOS ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ. ಈ ಕ್ಯಾಮೆರಾ 4K ವೀಡಿಯೊಗಳನ್ನು 3x ಡಿಜಿಟಲ್ ಜೂಮ್ ಮತ್ತು ಪೂರ್ಣ-HD ವೀಡಿಯೊಗಳನ್ನು 4x ಜೂಮ್‌ನಲ್ಲಿ ಶೂಟ್ ಮಾಡುವ ಸಾಮರ್ಥ್ಯ ಹೊಂದಿದೆ. ಫೋಟೋ ಮೋಡ್‌ನಲ್ಲಿ, ಇದು 12-ಮೆಗಾಪಿಕ್ಸೆಲ್ ಮತ್ತು 50-ಮೆಗಾಪಿಕ್ಸೆಲ್ ರೆಸಲ್ಯೂಶನ್‌ಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯಬಹುದು.
ಇತರ ಪ್ರಮುಖ ವೈಶಿಷ್ಟ್ಯಗಳು:
ಆಯಾಮಗಳು ಮತ್ತು ತೂಕ: ಪ್ರೊಪೆಲ್ಲರ್‌ಗಳೊಂದಿಗೆ 255×181×91mm ಮತ್ತು ಮಡಿಸಿದಾಗ 157×95×68mm ಆಯಾಮಗಳನ್ನು ಹೊಂದಿದೆ. ಇದರ ತೂಕ ಸುಮಾರು 249.9 ಗ್ರಾಂ.
ಸುರಕ್ಷತೆ: ಇದು 'ನೈಟ್‌ಸ್ಕೇಪ್ ಓಮ್ನಿಡೈರೆಕ್ಷನಲ್ ಅಡಚಣೆ ಸೆನ್ಸಿಂಗ್' ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ, ಇದು ಡ್ರೋನ್ ಹಾರಾಟದ ಸಮಯದಲ್ಲಿ ಅಡಚಣೆಗಳನ್ನು ಪತ್ತೆಹಚ್ಚಿ ತಪ್ಪಿಸಲು ಸಹಾಯ ಮಾಡುತ್ತದೆ.
ಶೂಟಿಂಗ್ ಮೋಡ್‌ಗಳು: ಲಂಬ ಶೂಟಿಂಗ್ ಮತ್ತು 225-ಡಿಗ್ರಿ ಗಿಂಬಲ್ ತಿರುಗುವಿಕೆ ಬೆಂಬಲವೂ ಇದರಲ್ಲಿ ಲಭ್ಯವಿದೆ.

ಹಾರಾಟದ ಅವಧಿ ಮತ್ತು ವೇಗ
DJI Mini 5 Pro ಡ್ರೋನ್ ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದೆ:
ಇಂಟೆಲಿಜೆಂಟ್ ಫ್ಲೈಟ್ ಬ್ಯಾಟರಿ: 2788mAh ಸಾಮರ್ಥ್ಯದ ಈ ಬ್ಯಾಟರಿ, ಗರಿಷ್ಠ 36 ನಿಮಿಷಗಳ ಹಾರಾಟದ ಸಮಯವನ್ನು ನೀಡುತ್ತದೆ.
ಇಂಟೆಲಿಜೆಂಟ್ ಫ್ಲೈಟ್ ಬ್ಯಾಟರಿ ಪ್ಲಸ್: 4680mAh ಸಾಮರ್ಥ್ಯದ ಈ ಬ್ಯಾಟರಿ, ಗರಿಷ್ಠ 52 ನಿಮಿಷಗಳವರೆಗೆ ಹಾರಾಟಕ್ಕೆ ಅವಕಾಶ ಮಾಡಿಕೊಡುತ್ತದೆ. ದೊಡ್ಡ ಬ್ಯಾಟರಿಯೊಂದಿಗೆ, ಡ್ರೋನ್ 32 ಕಿ.ಮೀ ದೂರದವರೆಗೆ ಹಾರಬಲ್ಲದು.
ಇದಲ್ಲದೆ, ಡ್ರೋನ್‌ನ ವೇಗ ಕೂಡ ಉತ್ತಮವಾಗಿದೆ. S ಮೋಡ್‌ನಲ್ಲಿ ಇದು ಗರಿಷ್ಠ 19m/s ಹಾರಾಟದ ವೇಗ, 10m/s ಗರಿಷ್ಠ ಏರುವ ವೇಗ ಮತ್ತು 8m/s ಗರಿಷ್ಠ ಇಳಿಯುವ ವೇಗವನ್ನು ತಲುಪಬಹುದು.
ಬೆಲೆ ಮತ್ತು ಲಭ್ಯತೆ
DJI Mini 5 Pro ನ ಬೆಲೆಯನ್ನು ಯುರೋಪ್‌ನಲ್ಲಿ EUR 799 (ಸುಮಾರು ರೂ. 83,000) ಎಂದು ನಿಗದಿಪಡಿಸಲಾಗಿದೆ. ಇದರೊಂದಿಗೆ, ಕಂಪನಿಯು ಎರಡು ಕಾಂಬೊ ಪ್ಯಾಕ್‌ಗಳನ್ನು ಸಹ ಪರಿಚಯಿಸಿದೆ:
* DJI Mini 5 Pro Fly More Combo (RC-N3 ರಿಮೋಟ್): ಬೆಲೆ EUR 999 (ಸುಮಾರು ರೂ. 1,04,000).
* DJI Mini 5 Pro Fly More Combo (RC 2 ರಿಮೋಟ್): ಬೆಲೆ EUR 1,129 (ಸುಮಾರು ರೂ. 1,17,000).
ಭಾರತದಲ್ಲಿ ಡ್ರೋನ್ ಆಮದು ನಿರ್ಬಂಧಗಳ ಕಾರಣ, DJI ತನ್ನ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವುದಿಲ್ಲ. ಆದರೆ, ನೀವು HobiTech, Jetayu Gadgets ಮತ್ತು Dronevex ನಂತಹ ಅಧಿಕೃತ ಡೀಲರ್‌ಗಳ ಮೂಲಕ ಇದನ್ನು ಖರೀದಿಸಬಹುದು. ಭಾರತೀಯ ಚಿಲ್ಲರೆ ವ್ಯಾಪಾರಿಗಳ ಪಟ್ಟಿಗಳ ಪ್ರಕಾರ, Fly More Combo ದ ಬೆಲೆ ಸುಮಾರು ₹1,34,990 ರಿಂದ ₹1,38,999 ರವರೆಗೆ ಇರಬಹುದು. ಚಿಲ್ಲರೆ ವ್ಯಾಪಾರಿ ಮತ್ತು ಪ್ರಚಾರಗಳನ್ನು ಅವಲಂಬಿಸಿ ಬೆಲೆಯಲ್ಲಿ ವ್ಯತ್ಯಾಸವಿರಬಹುದು. ಈ ಮಿನಿ ಡ್ರೋನ್ ವೃತ್ತಿಪರ ಛಾಯಾಗ್ರಾಹಕರು ಮತ್ತು ವೀಡಿಯೊಗ್ರಾಫರ್‌ಗಳಿಗೆ ಉತ್ತಮ ಆಯ್ಕೆಯಾಗಬಹುದು


Click it and Unblock the Notifications








