Father's Day 2024: ನಿಮ್ಮ ತಂದೆಗೆ ಗಿಫ್ಟ್ ನೀಡಲು ಇವು ಬೆಸ್ಟ್ ಮೊಬೈಲ್‌ಗಳು.. ಆರಂಭಿಕ ಬೆಲೆ 8,500 ರೂ.!
ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ.. ಅಪ್ಪ ಜೊತೆಗಿದ್ರೆ ಪ್ರಪಂಚದಲ್ಲಿ ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಏನೋ ವಿಶ್ವಾಸ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗೆ ಮೀಸಲು. ಆದ್ರೆ, ಸ್ನೇಹ, ಅಕ್ಕರೆಯ ಪ್ರತಿರೂಪ ಅಂದ್ರೆ ತಂದೆ ಅಪ್ಪ ಮಾತ್ರ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ರಿಯಲ್ ಹೀರೋ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿ. ತಂದೆ ಹಾಗೂ ಮಕ್ಕಳ ನಡುವಿನ ಪ್ರೀತಿಯ ಸಂಕೇತವಾಗಿ 'ತಂದೆಯರ ದಿನವನ್ನು (Father's Day) ಆಚರಿಸಲಾಗುತ್ತದೆ.
ಹೌದು, ತಂದೆ ಮತ್ತು ಮಕ್ಕಳ ನಡುವಿನ ಸಂಬಂಧವು ತುಂಬಾ ವಿಶೇಷ. ಈ ಸಂಬಂಧವನ್ನು ಆಚರಿಸಲು ನಾವು ಪ್ರತಿ ವರ್ಷ 'ತಂದೆಯರ ದಿನ'ವನ್ನು ಆಚರಿಸುತ್ತೇವೆ. ಈ ಬಾರಿ ಜೂನ್ 16 (ಇಂದು) ರಂದು 'ಅಪ್ಪಂದಿರ ದಿನ' ಬಂದಿದೆ. ಇಂದು ನಿಮ್ಮ ಅಪ್ಪನಿಗೆ ಮೊಬೈಲ್ ಉಡೊಗೊರೆ ನೀಡಲು ಬಯಸಿದರೆ.. ಇಲ್ಲಿವೆ ಕಡಿಮೆ ಬೆಲೆಯ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು.

ಮಾರುಕಟ್ಟೆಯಲ್ಲಿ ಹಲವು ವಿದಧ ಮೊಬೈಲ್‌ಗಳು ಇವೆ. ಈ ಪೈಕಿ Samsung Galaxy M14 4G, Redmi 13C 5G, Motorola Moto G34 5G, Vivo Y18, Realme C65 5G, Lava O2 ಸ್ಮಾರ್ಟ್‌ಫೋನ್‌ಗಳು ಉತ್ತಮ ಆಯ್ಕೆಯಾಗಬಲ್ಲವು. ಇವು ಅತ್ಯಾಕರ್ಷಕ ವಿನ್ಯಾಸ ಹಾಗೂ ಫೀಚರ್‌ಗಳನ್ನು ಹೊಂದಿವೆ. ಕೈಗೆಟುಕುವ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿವೆ. ಈ ಫೋನ್‌ಗಳ ವಿಶೇಷತೆಗಳ ಬಗ್ಗೆ ತಿಳಿಯೋಣ ಬನ್ನಿ.
10,000 ರೂ. ಒಳಗಿನ ಮೊಬೈಲ್‌ಗಳು
Samsung Galaxy M14 4G: ಮೊದಲಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ Samsung Galaxy M14 4G ಬಗ್ಗೆ ತಿಳಿಯೋಣ. ಈ ಫೋನ್ ಬೆಲೆ 8,499 ರೂಪಾಯಿ. ಇದು 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. 50MP + 2MP + 2MP ಟ್ರಿಪಲ್ ಲೆನ್ಸ್ ಪ್ರಾಥಮಿಕ ಕ್ಯಾಮೆರಾ, 13MP ಮುಂಭಾಗದ ಕ್ಯಾಮೆರಾದ ಸೌಲಭ್ಯದಲ್ಲಿ ಇದೆ. 5000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ.
Vivo Y18: ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಅತ್ಯಾಕರ್ಷಕ ಫೀಚರ್‌ನ ಸ್ಮಾರ್ಟ್‌ಫೋನ್‌ಗಳಲ್ಲಿ Vivo Y18 ಮೊಬೈಲ್ ಒಂದಾಗಿದೆ. ಈ ಸ್ಮಾರ್ಟ್‌ಫೋನ್ ಬೆಲೆ 8,999 ರೂಪಾಯಿ. ಡಿಸ್ಲ್ಪೇ 6.56 ಇಂಚು ಹಾಗೂ 720 x 1612 ಪಿಕ್ಸೆಲ್‌ಗಳ ಡಿಸ್‌ಪ್ಲೇ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. 50MP + 0.08 AI ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಹೊಂದಿದೆ. Li-Ion 5000 mAh ಬ್ಯಾಟರಿ ಸಾಮರ್ಥ್ಯ ಒದಗಿಸುತ್ತದೆ.

Tecno Spark 20C: ಟೆಕ್ನೋ ಸ್ಪಾರ್ಕ್ 20 ಸಿ ಸ್ಮಾರ್ಟ್‌ಫೋನ್ 8,999 ರೂ.ಗೆ ಲಭ್ಯವಿದೆ. ಇದು 6.56 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇನ್ನು 720 x 1612 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. 50MP + AI ಡ್ಯುಯಲ್ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಹೊಂದಿದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಒಳಗೊಂಡಿದೆ.
Realme C65: Realme C65 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 9,999 ರೂ.ಗೆ ಲಭ್ಯವಿದೆ. ಈ ಫೋನ್ ಡಿಸ್‌ಪ್ಲೇ 6.67 ಇಂಚು ಹಾಗೂ 720 x 1604 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದು, 50MP + 2MP ಪ್ರಾಥಮಿಕ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ.
Realme C65 5G: ಈ Realme C65 5G ಮೊಬೈಲ್ ಅನ್ನು 9,999 ರೂ.ನಲ್ಲಿ ಖರೀದಿಸಬಹುದು. ಇದರ ಡಿಸ್ಪ್ಲೇ 6.67 ಇಂಚು ಹಾಗೂ 720 x 1604 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. 50MP + 2MP ಪ್ರಾಥಮಿಕ ಕ್ಯಾಮೆರಾ, 8MP ಫ್ರಂಟ್ ಕ್ಯಾಮೆರಾ ಹಾಗೂ Li-Ion 5000 mAh ಬ್ಯಾಟರಿ ಬ್ಯಾಕಪ್ ಪಡೆದಿದೆ.
POCO M6 5G: POCO M6 5G ಮೊಬೈಲ್ ಅನ್ನು 10,499 ರೂ.ನಲ್ಲಿ ಖರೀದಿಸಬಹುದು. 6.74 ಇಂಚು ಡಿಸ್ಲ್ಪೇ ಹಾಗೂ 720 x 1600 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. 50MP + AI ಡ್ಯುಯಲ್ ಕ್ಯಾಮೆರಾ ಹಾಗೂ 8MP ಫ್ರಂಟ್ ಕ್ಯಾಮೆರಾ ಪಡೆದಿದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಪಡೆದಿದೆ.

Motorola Moto G34 5G: ಇದರ ಬೆಲೆ 10,999 ರೂಪಾಯಿ. ಡಿಸ್‌ಪ್ಲೇ 6.5 ಇಂಚು ಹಾಗೂ 720 x 1600 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಇದೆ. 50MP + 2MP ಡ್ಯುಯಲ್ ಪ್ರಾಥಮಿಕ ಕ್ಯಾಮೆರಾ, 16MP ಫ್ರಂಟ್ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ, Li-Ion 5000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯ ಹೊಂದಿದೆ.
Redmi 13C 5G: ಇದು ಸಹ 10,999 ರೂಪಾಯಿ ಬೆಲೆಯಲ್ಲಿ Redmi 13C 5G ಸ್ಮಾರ್ಟ್‌ಫೋನ್ ಖರೀದಿಸಬಹುದು. ಇದು6.74 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 1080 x 2400 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದೆ. 50MP + AI ಡ್ಯುಯಲ್ ಕ್ಯಾಮೆರಾ ಹಾಗೂ 5MP ಫ್ರಂಟ್ ಕ್ಯಾಮೆರಾ ಹೊಂದಿದೆ. Li-Ion 5000 mAh ಬ್ಯಾಟರಿ ಬ್ಯಾಕಪ್ ಇದೆ.
ಪ್ರತಿಯೊಬ್ಬರೂ ಅಪ್ಪಂದಿರ ದಿನವನ್ನು ಆಚರಿಸುತ್ತಾರೆ. ಅಪ್ಪನ ಬಗ್ಗೆ ಬಣ್ಣಿಸಲು ಪದಗಳೇ ಸಾಲಲ್ಲಾ. ಅಂತಹ ಮೇರು ವ್ಯಕ್ತಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಜೂನ್ ತಿಂಗಳ 3ನೇ ಭಾನುವಾರ 'ತಂದೆಯರ ದಿನ'ವನ್ನು ಆಚರಿಸಲಾಗುತ್ತದೆ. ನಾವೆಲ್ಲರೂ ಇಂದು ಈ ವಿಶೇಷ ದಿನದ ಸಂಭ್ರಮದಲ್ಲಿದ್ದೇವೆ. ಈ ದಿನವನ್ನು ಸ್ಮರಣೀಯವಾಗಿಸಲು ತಮ್ಮ ಅಪ್ಪನಿಗೆ ಒಂದು ಗಿಫ್ಟ್ ಕೊಟ್ಟರೆ ಎಷ್ಟು ಚೆಂದ ಅಲ್ವಾ? ಹಾಗಿದ್ರೆ, ಇನ್ನೂ ಯೋಚನೆ ಮಾಡಿ ಲಾಭವಿಲ್ಲ. ನಾವು ಮೇಲೆ ತಿಳಿಸಿರುವ ಮೊಬೈಲ್‌ಗಳಲ್ಲಿ ನಿಮಗೆ ಬೆಸ್ಟ್ ಎನಿಸುವ ಫೋನ್ ಅನ್ನು ಖರೀದಿಸಿ ನಿಮ್ಮ ತಂದೆಗೆ ಉಡುಗೊರೆ ನೀಡಿ.


Click it and Unblock the Notifications








