ಮಾರುಕಟ್ಟೆಗೆ ದುಬಾರಿ ಬೆಲೆಯ ಸುಂದರ ಹೆಡ್ ಫೋನ್ ಗಳು..!
ಡಿಸೈನರ್ ಮತ್ತು ಮ್ಯಾನಿಫ್ಚರ್ ಆಗಿರುವ 'ಫಿಲ್’ ಆಡಿಯೋ ಪ್ರಾಡೆಕ್ಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇಂದು ಮಾರುಕಟ್ಟೆಗೆ ಹೊಸ ಮಾದರಿಯ ಫಿಲ್ ವೈರ್ ಲೈಸ್ ಇಯರ್ ಹೆಡ್ ಫೋನ್ ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ವೈರ್ ಲೈಸ್ ಬ್ಲೂಟೂತ್ ಹೆಡ್ ಪೋನ್ ಮಾರುಕಟ್ಟೆಯಲ್ಲಿ ಇರುವ ಇರುವ ಹೆಡ್ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ.

ಈ ಬ್ಲೂಟೂತ್ ಹೆಡ್ ಫೋನ್ ಗಳು ನ್ಯಾಯ್ಡ್ ಕರೆಕ್ಷನ್ ಆಯ್ಕೆಯನ್ನು ಒಳಗೊಂಡಿದ್ದು, ವೈಡ್ ಫ್ರಿಕ್ವೆನ್ಸಿ ರೆಸ್ಪಾನ್ ಹೊಂದಿದ್ದು, ವಿವಿಧ ಸೌಂಡ್ ಪ್ರೋಫೈಲ್ ಗನ್ನು ಒಳಗೊಂಡಿದೆ. ಅಲ್ಲದೇ ಉತ್ತಮವಾದ ವಿನ್ಯಾಸವನ್ನು ಹೊಂದಿದ್ದು, ನೋಡಲು ಸುಂದರವಾಗಿದೆ ಎನ್ನಲಾಗಿದೆ.
ಈ ಹೆಡ್ ಫೋನ್ ಗಳು ಪ್ಲಾಸ್ಟಿಕ್ ನಿಂದ ಮಾಡಲಾಗಿದೆ. ಅಲ್ಲದೇ ಉತ್ತಮವಾದ ಆಯ್ಕೆಯನ್ನು ಗಳನ್ನು ಒಳಗೊಂಡಿದ್ದು, ಸೌಂಡ್ ಸಹ ಚೆನ್ನಾಗಿ ಕೇಳಿಸಲಿದೆ. ಈ ಹೆಡ್ ಫೋನ್ ಗಳ ಮತ್ತೊಂದು ವಿಶೇಷತೆ ಎಂದರೆ ಹೊರ ಭಾಗದ ಯಾವುದೇ ಶಬ್ದಗಳು ನಿಮಗೆ ಹಾಡು ಕೇಳುವಾಗ ಕಿರಿಕಿರಿಯನ್ನು ಮಾಡುವುದಿಲ್ಲ ಎನ್ನಲಾಗಿದೆ.

ಈ ಹೆಡ್ ಫೋನ್ ಗಳಲ್ಲಿ ನಿಯಂತ್ರಕಗಳನ್ನು ಒಳಗೊಂಡಿದ್ದು, ವ್ಯಾಲ್ಯೂಮ್ ಬಟನ್, ಟ್ರಾಕ್ ಚೆಂಜ್ ಮಾಡುವ ಬಟನ್ ಅನ್ನ ನೀಡಲಾಗಿದೆ. ಕಪ್ ಮಾದರಿಯ ವಿನ್ಯಾಸವನ್ನ ಹೊಂದಿದ್ದು, ಕಿವಿಯಲ್ಲಿ ಸರಿಯಾಗಿ ಕುಳಿತುಕೊಳ್ಳಲಿದೆ. ಅಲ್ಲದೇ ಮ್ರೈಕ್ರೋ USB ಪೋರ್ಟ್ ಅನ್ನು ಬಾಟಮ್ ನಲ್ಲಿ ಒಳಗೊಂಡಿದೆ.
ಇದಲ್ಲದೇ ವೈರ್ ಮೂಲಕ ಕೇಳುವ ಸಲುವಾಗಿ 3.5 ಹೆಡ್ ಫೋನ್ ಜ್ಯಾಕ್ ಸಹ ನೀಡಲಾಗಿದ್ದು, ಬ್ಯಾಟರಿ ಚಾರ್ಜ್ ಮುಗಿದ ನಂತರದಲ್ಲಿ ಹಾಡು ಕೇಳಲು ಇದು ಸಹಾಯಕವಾಗಿದೆ. ಈ ಹೆಡ್ ಫೋನ್ ಗಳು 33 ಗಂಟೆಗಳ ಕಾಲ ಬ್ಯಾಟರಿ ಬ್ಯಾಕಪ್ ಹೊಂದಿರಲಿದೆ ಎನ್ನಲಾಗಿದೆ. ಆಂಡ್ರಾಯ್ಡ್ ಮತ್ತು ಆಪಲ್ ಡಿವೈಸ್ ಗಳೊಂದಿಗೆ ಸಿಂಕ್ ಆಗಲಿದೆ.
ಈ ಹೆಡ್ ಫೋನ್ ಗಳು ರೂ.17,499ಕ್ಕೆ ದೊರೆಯಲಿದ್ದು, ಒಂದು ವರ್ಷದ ವ್ಯಾರೆಂಟಿಯನ್ನು ಕಾಣಬಹುದಾಗಿದೆ. ಅಲ್ಲದೇ ಇದು ಅಮೆಜಾನ್ ಮತ್ತು ಪೇಟಿಎಂ ಗಳಲ್ಲಿ ಈ ಹೆಡ್ ಫೋನ್ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಇದು ಎರಡು ಬಣ್ಣಗಳಲ್ಲಿ ದೊರೆಯಲಿದೆ. ರೆಡ್ ಮತ್ತು ಸಿಲ್ವರ್ ಬಣ್ಣದಲ್ಲಿ ಲಭ್ಯವಿದೆ.


Click it and Unblock the Notifications








