Home
Gadgets

ನೋಕಿಯಾ ಬ್ರ್ಯಾಂಡ್ ಟಿವಿ ಚಿತ್ರ ಲೀಕ್!..ಇದೇ ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ!

ನೋಕಿಯಾ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಯಾಗುತ್ತಿರುವ ಮೊಟ್ಟ ಮೊದಲ ಸ್ಮಾರ್ಟ್‌ಟಿವಿಯ ಚಿತ್ರವು ಸೋರಿಕೆಯಾಗಿ ಟಿವಿ ಮಾರುಕಟ್ಟೆಗೆ ಅಚ್ಚರಿ ಮೂಡಿಸಿದೆ. ಇತ್ತೀಚಿಗಷ್ಟೇ ಫ್ಲಿಪ್‌ಕಾರ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡು ತನ್ನದೇ ಸ್ಮಾರ್ಟ್‌ಟಿವಿ ಪರಿಚಯಿಸುವುದಾಗಿ ನೋಕಿಯಾ ತಿಳಿಸಿತ್ತು. ಇದೀಗ ಕಂಪೆನಿಯ ಮೊದಲ ಸ್ಮಾರ್ಟ್‌ಟಿವಿ ಹೇಗಿರಲಿದೆ ಎಂಬ ವದಂತಿ ಚಿತ್ರಗಳು ಮಾಧ್ಯಮಗಳಿಗೆ ಸಿಕ್ಕಿವೆ. ವದಂತಿಗಳಂತೆ ಡಿಸೆಂಬರ್ ಆರಂಭದಲ್ಲಿ ನೋಕಿಯಾ ಸ್ಮಾರ್ಟ್‌ ಟಿವಿಯ ಘೋಷಣೆಯನ್ನು ನಿರೀಕ್ಷಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ನೋಕಿಯಾ

ಹೌದು, ನೋಕಿಯಾ ಈಗಾಗಲೇ ತನ್ನ ಹೊಸ ಸ್ಮಾರ್ಟ್​ಟಿವಿಯೊಂದನ್ನು ಸಿದ್ಧಪಡಿಸಿದ್ದು, ಸದ್ಯದಲ್ಲೇ ಭಾರತ ಸೇರಿದಂತೆ ವಿಶ್ವದಾದ್ಯಂತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಚಿಂತನೆ ನಡೆಸಿದೆ. ಭಾರತದ ಜನಪ್ರಿಯ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ನೋಕಿಯಾ ಸ್ಮಾರ್ಟ್​ಟಿವಿ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ನಾವು 55 ಇಂಚಿನ ನೋಕಿಯಾ ಸ್ಮಾರ್ಟ್ ಟಿವಿಯನ್ನು ದೇಶದ ಮಾರುಕಟ್ಟೆಯಲ್ಲಿ ನೋಡಬಹುದು. ಇದೇ ಡಿಸೆಂಬರ್ ಮೊದಲ ವಾರದಲ್ಲಿ ನೋಕಿಯಾ ಸ್ಮಾರ್ಟ್‌ಟಿವಿ ಘೋಷಣೆಯಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ನೋಕಿಯಾ

ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ನೋಕಿಯಾ ಸ್ಮಾರ್ಟ್​ಟಿವಿ ಜೆಬಿಎಲ್​ ಸೌಂಡ್​ ಎಫೆಕ್ಟ್ ಹೊಂದಿರಲಿದೆ. ಜೆಬಿಎಲ್ ಸಿಸ್ಟಮ್ನೊಂದಿಗೆ 4 ಕೆ ಎಲ್ಇಡಿ ಪ್ಯಾನಲ್ ನೀಡಲಾಗಿದ್ದು, ಈ ಸ್ಕ್ರೀನ್ ಬೆಜೆಲ್‌ಗಳು ಅತ್ಯಂತ ಕನಿಷ್ಠವಾಗಲಿವೆ ಎಂದು ತಿಳಿದುಬಂದಿದೆ. ಜೆಬಿಎಲ್ ಚಾಲಿತ ಸ್ಪೀಕರ್‌ಗಳನ್ನು ಎಲ್ಇಡಿ ಪ್ಯಾನೆಲ್ ಕೆಳಗೆ ಇಡಲಾಗುವುದು ಎಂಬುದು ಇದೀಗ ಬಹಿರಂಗವಾಗಿರುವ ಫೋಟೋಗಳಿಂದ ತಿಳಿದುಬಂದಿದೆ. ಇನ್ನು ಈ ಟಿವಿಯಲ್ಲಿ ಆಂಡ್ರಾಯ್ಡ್ 9 ಒಎಸ್ ಮೂಲಕ ಗೂಗಲ್ ಪ್ಲೇ ಸ್ಟೋರ್ ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.

ನೋಕಿಯಾ ಸ್ಮಾರ್ಟ್ ಟಿವಿ

ಇಷ್ಟು ಮಾತ್ರವಲ್ಲದೇ, ನೋಕಿಯಾ ಸ್ಮಾರ್ಟ್ ಟಿವಿಯು ಕ್ಲಿಯರ್ ವೋಕಲ್ ಟೋನ್ ಮತ್ತು ಕನಿಷ್ಟ ಹಾರ್ಮೋನಿಕ್ ಡಿಸ್ಟಾರ್ಷನ್ ಅನ್ನು ಸಹ ಹೊಂದಿರುತ್ತದೆ ಎಂದು ಫ್ಲಿಪ್ಕಾರ್ಟ್ ಮೂಲಗಳು ಬಹಿರಂಗಪಡಿಸಿವೆ. ಡಾಲ್ಬಿ ಆಡಿಯೋ ಮತ್ತು ಡಿಟಿಎಸ್ ಟ್ರೂಸರೌಂಡ್ ಸೌಂಡ್ ಕೂಡ ನಿರೀಕ್ಷಿಸಲಾಗಿದ್ದುಎಲ್ಇಡಿ ಪ್ಯಾನೆಲ್‌ನ ಕೆಳಗೆ ಜೆಬಿಎಲ್ ಸ್ಪೀಕರ್‌ಗಳನ್ನು ಹೊಂದಿರುವುದು ಸರಿಯಾದ ಟಿವಿ ಸೌಂಡ್‌ಬಾರ್ ಖರೀದಿಸುವುದರಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. ನೀವು ಅದನ್ನು ನೀವು ಗೋಡೆಯ ಮೇಲೆ ಆರೋಹಿಸಬೇಕು ಎಂದು ಫ್ಲಿಪ್‌ಕಾರ್ಟ್ ವಕ್ತಾರರು ಹೇಳಿದ್ದಾರೆ.

55 ಇಂಚಿನ ನೋಕಿಯಾ ಸ್ಮಾರ್ಟ್ ಟಿವಿ

ಇಷ್ಟೆಲ್ಲಾ ಮಾಹಿತಿ ಸಿಕ್ಕಿರುವ 55 ಇಂಚಿನ ನೋಕಿಯಾ ಸ್ಮಾರ್ಟ್ ಟಿವಿ ಬೆಲೆ ಎಷ್ಟು ಎಂಬುದು ಮಾತ್ರ ಈವರೆಗೂ ಬಹಿರಂಗವಾಗಿಲ್ಲ. ಆದರೆ, ಮಾರುಕಟ್ಟೆಯ ತಜ್ಞರು ಅಂದಾಜು ಮಾಡಿರುವಂತೆ ನೋಕಿಯಾದ ಹೊಸ ಸ್ಮಾರ್ಟ್‌ಟಿವಿ 40 ಸಾವಿರ ರೂಪಾಯಿಗಳ ಆಸುಪಾಸಿನಲ್ಲಿ ಇರಬಹುದು. ಇದು ಈಗಾಗಲೇ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಗಳಿಸಿರುವ ಒನ್‌ಪ್ಲಸ್ ಮತ್ತು ಶಿಯೋಮಿಗೆ ಸೆಡ್ಡುಹೊಡೆಯಲು ಈ ಟಿವಿ ತಯಾರಾಗಿದೆ ಎಂದು ಹೇಳಬಹುದು. ಒಟ್ಟಿನಲ್ಲೀ ಶೀಘ್ರವೇ ಒಂದು ಉತ್ತಮ ಟಿವಿ ನಮಗೆ ದೊರೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
Leaked SMART Nokia tv photos did reveal that the screen bezels are going to be minimal and that the JBL powered speakers will be placed beneath the LED panel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+