Home
Gadgets

ಜಸ್ಟ್‌ 10,000 ಸಾಕು! ಜನ ಮೆಚ್ಚಿದ 5G ಫೋನ್‌ಗಳು.. Flipkartನಲ್ಲಿ ಬಂಪರ್ ಡಿಸ್ಕೌಂಟ್! ಇಲ್ಲಿದೆ ಪಟ್ಟಿ

Flipkart Big Diwali Sale: ದೀಪಾವಳಿ ಪ್ರಯುಕ್ತ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಸೇಲ್ (Flipkart Big Diwali Sale) ನಡೆಯುತ್ತಿದೆ. ದೈತ್ಯ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಭರ್ಜರಿ ಆಫರ್‌ಗಳು ಲಭ್ಯವಿದೆ. ವಿಶೇಷವಾಗಿ, 10 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಪ್ರಸಿದ್ಧ ಕಂಪನಿಗಳ 5G ಮೊಬೈಲ್‌ಗಳನ್ನು ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಖರೀದಿ ಮೇಲೆ ಬಂಪರ್ ಡಿಸ್ಕೌಂಟ್ ಪಡೆಯಬಹುದು. ಬನ್ನಿ, ಯಾವ 5G ಮೊಬೈಲ್‌ಗಳಿಗೆ ಎಷ್ಟು ರಿಯಾಯಿತಿ ಲಭ್ಯವಿದೆ ಎನ್ನುವುದನ್ನು ತಿಳಿಯೋಣ.

ಹೌದು, 5G ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ಹೊರತುಪಡಿಸಿ, ಎಕ್ಸ್‌ಚೇಂಜ್ ಆಫರ್‌ ಮತ್ತು ಬ್ಯಾಂಕ್ ಕಾರ್ಡ್ ರಿಯಾಯಿತಿಯ ಲಾಭ ಪಡೆಯಬಹುದು. ಈ ಪಟ್ಟಿಯಲ್ಲಿ ಇನ್ಫಿನಿಕ್ಸ್ (Infinix), ಸ್ಯಾಮ್‌ಸಂಗ್ (Samsung), ಮೊಟೊರೊಲಾ (Motorola), ಪೊಕೊ (Poco) ಮತ್ತು ರೆಡ್ಮಿ (Redmi) ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಸೇರಿವೆ. ನೀವು, ಕಡಿಮೆ ಬಜೆಟ್‌ನಲ್ಲಿ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುವ ಈ ಐದು ಅಗ್ಗದ 5G ಫೋನ್‌ಗಳನ್ನು ಮನೆಗೆ ಕೊಂಡೊಯ್ಯಬಹುದು.

Flipkart: ಜಸ್ಟ್‌ 10,000 ಸಾಕು! ಜನ ಮೆಚ್ಚಿದ 5G ಫೋನ್‌ಗಳು.. ಬಂಪರ್ ಡಿಸ್ಕೌಂಟ್

ಇನ್ಫಿನಿಕ್ಸ್ ಹಾಟ್ 50 5G ಫೋನ್ = ಬೆಲೆ 9,999 ರೂ.

ಇನ್ಫಿನಿಕ್ಸ್ ಕಂಪನಿಯ ಈ 5G (Infinix Hot 50 5G) ಫೋನಿನ 4GB + 128GB ಸ್ಟೋರೇಜ್ ರೂಪಾಂತರವನ್ನು ಶೇ.23 ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ನೀವು, ಡಿಸ್ಕೌಂಟ್‌ನೊಂದಿಗೆ ಕೇವಲ 9,999 ರೂ.ಗೆ ಖರೀದಿಸಬಹುದು. ಈ ಫೋನ್ 6.7 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ, 48 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಮತ್ತು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A14 5G = ಬೆಲೆ 9,999 ರೂ.

ಈ ಸ್ಯಾಮ್‌ಸಂಗ್ (Samsung Galaxy A14 5G) ಸ್ಮಾರ್ಟ್‌ಫೋನ್‌ನ 4GB + 128GB ಸ್ಟೋರೇಜ್ ರೂಪಾಂತರದ ಮೇಲೆ ಶೇ.35 ರಷ್ಟು ಡಿಸ್ಕೌಂಟ್‌ ಲಭ್ಯವಿದೆ. ನೀವು, ರಿಯಾಯಿತಿಯೊಂದಿಗೆ ಕೇವಲ 9,999 ರೂ.ಗೆ ಕೊಳ್ಳಬಹುದು. ಈ ಮೊಬೈಲ್ 6.6 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಫೋನ್ ಎಕ್ಸಿನೋಸ್ 1330 ಪ್ರೊಸೆಸರ್, 5000mAh ಸಾಮರ್ಥ್ಯ ಬ್ಯಾಟರಿ, 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಮೊಟೊರೊಲಾ G45 5G = ಬೆಲೆ 9,999 ರೂ.

ಮೊಟೊರೊಲಾ ಕಂಪನಿಯ ಈ (Motorola G45 5G) ಫೋನಿನ 4GB + 128GB ಸ್ಟೋರೇಜ್ ರೂಪಾಂತರವನ್ನು ಶೇ.23 ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ನೀವು, ಡಿಸ್ಕೌಂಟ್‌ನೊಂದಿಗೆ 9,999 ರೂ.ಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ 6.5 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ, ಸ್ನಾಪ್ಡ್ರಾಗನ್ 6S ಜೆನ್ 3 ಪ್ರೊಸೆಸರ್, 16 ಮೆಗಾಪಿಕ್ಸೆಲ್ ಸೆಲ್ಫಿ ಮತ್ತು 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಮತ್ತು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಪೊಕೊ M6 5G = ಬೆಲೆ 9,499 ರೂ.

ಪೊಕೊ ಕಂಪನಿಯ ಈ (Poco M6 5G) ಮೊಬೈಲ್‌ನ 6GB + 128GB ಸ್ಟೋರೇಜ್‌ ಆಯ್ಕೆಯ ಮೇಲೆ ಶೇ.32 ರಷ್ಟು ಡಿಸ್ಕೌಂಟ್ ನೀಡಲಾಗುತ್ತಿದೆ. ರಿಯಾಯಿತಿ ಬಳಿಕ 9,499 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಪ್ರೊಸೆಸರ್‌ ಹೊಂದಿದೆ. ಈ ಫೋನ್ 6.74 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ, 50 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರೆಡ್ಮಿ 13c 5G = ಬೆಲೆ 8,749 ರೂ.

ರೆಡ್ಮಿ ಕಂಪನಿಯ ಈ (Redmi 13c 5G) ಸ್ಮಾರ್ಟ್‌ಫೋನ್‌ನ 4GB + 128GB ಸ್ಟೋರೇಜ್ ರೂಪಾಂತರದ ಮೇಲೆ ಶೇ.38 ರಷ್ಟು ಡಿಸ್ಕೌಂಟ್ ಲಭ್ಯವಿದೆ. ನೀವು, ರಿಯಾಯಿತಿಯೊಂದಿಗೆ 8,749 ರೂ.ಗೆ ಖರೀದಿಸಬಹುದು. ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ 5G ಪ್ರೊಸೆಸರ್ ಹೊಂದಿದೆ. 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ, 6.74 ಇಂಚಿನ ಎಚ್‌ಡಿ ಪ್ಲಸ್ ಡಿಸ್ಪ್ಲೇ ಮತ್ತು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

Best Mobiles in India

English summary
Flipkart Big Diwali Sale discount on 5g smartphones under Rs 10,000: check flipkart offers and phone list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+