ಹೆಡ್ ಫೋನ್ ಗಳು ಮತ್ತು ಸ್ಪೀಕರ್ ಗಳಿಗೆ 70% ದ ವರೆಗೆ ರಿಯಾಯಿತಿ ನೀಡುತ್ತಿರುವ ಫ್ಲಿಪ್ ಕಾರ್ಟ್
ಫ್ಲಿಪ್ ಕಾರ್ಟ್ ನಲ್ಲಿ ಸೇಲ್ ಸ್ಕೀಮ್ ನಡೆಯುತ್ತಿದ್ದು ಇದರಲ್ಲಿ ಗ್ರಾಹಕರಿಗೆ 70% ರಿಯಾಯಿತಿಯಲ್ಲಿ ಕೆಲವು ಹೆಡ್ ಫೋನ್ ಗಳು ಮತ್ತು ಸ್ಪೀಕರ್ ಗಳು ಲಭ್ಯವಾಗಲಿದೆ. ಅಂತಹ ಕೆಲವು ಪ್ರೊಡಕ್ಟ್ ಗಳ ವಿವರವನ್ನು ನಾವಿಲ್ಲಿ ನಿಮಗೆ ಹಂಚಿಕೊಳ್ಳುತ್ತಿದ್ದೇವೆ. ಈ ಆಫರ್ ಗಳು ಖಂಡಿತ ನಿಮ್ಮ ಸೌಂಡ್ ಸಿಸ್ಟಮ್ ನ್ನು ಇನ್ನಷ್ಟು ಅಪ್ ಡೇಟ್ ಮಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ಅಷ್ಟೇ ಅಲ್ಲ ಆಕರ್ಷಕವಾಗಿರುವ ಈ ಆಫರ್ ಗಳು ನಿಮ್ಮ ಹಣವನ್ನೂ ಕೂಡ ಉಳಿತಾಯ ಮಾಡಲಿದೆ.

5% ಅನಿಯಮಿತ ಕ್ಯಾಷ್ ಬ್ಯಾಕ್ ಸೌಲಭ್ಯವು ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಸಿಗುತ್ತದೆ. 10% ಆಫರ್ ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ, ಹೆಚ್ಚುವರಿ 6% ರಿಯಾಯಿತಿ, ನೋ ಕಾಸ್ಟ್ ಇಎಂಐ ಆಯ್ಕೆ ಪ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಲಭ್ಯವಿದೆ.ವಾರೆಂಟಿ ಸೇವೆಗಳು ಕೂಡ ಲಭ್ಯವಾಗುತ್ತದೆ.

ಬ್ಲೂಟೂತ್ ಹೆಡ್ ಫೋನ್
ಜೆಬಿಲ್, ಸ್ಯಾಮ್ ಸಂಗ್, ಬೋಟ್ ಮತ್ತು ಇತ್ಯಾದಿ ಬ್ರ್ಯಾಂಡ್ ಗಳ ಹೆಡ್ ಫೋನ್ ಗಳು ಆಫರ್ ಬೆಲೆಯಲ್ಲಿ ಲಭ್ಯವಿದೆ. ಈ ಪ್ರೊಡಕ್ಟ್ ಗಳು 6 ತಾಸುಗಳ ಬ್ಯಾಟರಿ ಲೈಫ್ ನ್ನು ಒಂದು ಬಾರಿ ಚಾರ್ಜ್ ಮಾಡಿದರೆ ನೀಡುತ್ತದೆ. ಇವುಗಳು IPX5 ರೇಟೆಡ್ ಆಗಿರುವ ಹೆಡ್ ಫೋನ್ ಗಳು ಕೂಡ ಆಗಿವೆ.

ಬ್ಲೂಟೂತ್ ಸ್ಪೀಕರ್ ಗಳು
ಬೋಟ್ ರಗ್ಬೈ ಬ್ಲೂಟೂತ್ ಸ್ಪೀಕರ್ 1,699 ರುಪಾಯಿ ಬೆಲೆಗೆ ಅಂದರೆ 57% ರಿಯಾಯಿತಿಯಲ್ಲಿ ಸಿಗುತ್ತದೆ. ಇದು ವಯರ್ ಲೆಸ್ ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆಯನ್ನು ಬ್ಲೂಟೂತ್ ಮೂಲಕ ಪಡೆಯುವುದಕ್ಕೆ ಅವಕಾಶ ಮಾಡುತ್ತದೆ ಮತ್ತು ಸ್ಪೋರ್ಟ್ಸ್ ಬಿಲ್ಟ್ ಇನ್ ಮೈಕ್ ಕೂಡ ಇದರಲ್ಲಿರುತ್ತದೆ.

ವಯರ್ಡ್ ಹೆಡ್ ಫೋನ್ ಗಳು
ಬೋಟ್ ಬಾಸ್ ಹೆಡ್ಸ್ 100 ವಯರ್ಡ್ ಹೆಡ್ ಸೆಟ್ ಜೊತೆಗೆ ಮೈಕ್ ಮತ್ತು ಜೆಬಿಎಲ್ ಸಿ 150ಎಸ್ಐ ವಯರ್ ಹೆಡ್ ಸೆಟ್ ಜೊತೆಗೆ ಮೈಕ್ರ್ ಕ್ರಮವಾಗಿ 379 ರುಪಾಯಿ ಮತ್ತು 749 ರುಪಾಯಿ ಬೆಲೆಗೆ ಲಭ್ಯವಿದೆ. ಇನ್ನು ಬೇರೆಬೇರೆ ಬ್ರ್ಯಾಂಡಿನ ಹಲವು ಹೆಡ್ ಫೋನ್ ಗಳು ಕೂಡ ಸಾಕಷ್ಟು ವಿಭಿನ್ನವಾಗಿರುವ ಆಫರ್ ಬೆಲೆಯಲ್ಲಿ ನಿಮ್ಮ ಕೈಸೇರಲು ಪ್ಲಿಪ್ ಕಾರ್ಟ್ ನಲ್ಲಿ ಕಾಯುತ್ತಿವೆ..

ಲ್ಯಾಪ್ ಟಾಪ್ ಸ್ಪೀಕರ್ ಗಳು
ಈ ಸ್ಪೀಕರ್ ಗಳು ಮಲ್ಟಿ-ಫಂಕ್ಷನಲ್ ಪನೆಲ್ ಕೀಗಳನ್ನು ಹೊಂದಿರುತ್ತದೆ ಮತ್ತು ಇವುಗಳು ವಾಲ್ಯೂಮ್ ಬದಲಾವಣೆಗೆ ನೆರವು ನೀಡುತ್ತದೆ ಮತ್ತು ಇತರೆ ಆಕ್ಟಿವಿಟಿಗಳನ್ನು ಮಾಡುವುದಕ್ಕೆ ಸಹಕಾರಿಯಾಗಿವೆ.ಈ ಪ್ರೊಡಕ್ಟ್ ಗಳು ಅಧಿಕ-ಡೆಫಿನೇಷನ್ ಸೌಂಡ್ ವ್ಯವಸ್ಥೆಯನ್ನು ನಿಮಗೆ ಆಫರ್ ಮಾಡುತ್ತದೆ F&D 203G 11 W ಪೋರ್ಟೇಬಲ್ ಲ್ಯಾಪ್ ಟಾಪ್/ಡೆಸ್ಕ್ ಟಾಪ್ ಸ್ಪೀಕರ್ ನ್ನು ನೀವು ಇದೀಗ 1,199 ರುಪಾಯಿ ಬೆಲೆಗೆ ಖರೀದಿಸಬಹುದಾಗಿದೆ.

ಮನೆಯ ಮನರಂಜನೆಗೆ ಅಗತ್ಯವಾಗುವ ಸ್ಪೀಕರ್ ಗಳು
ಈ ಮನರಂಜನೆಯ ಸ್ಪೀಕರ್ ಗಳು 1,999 ರುಪಾಯಿ ಬೆಲೆಗೆಲ್ಲ ಲಭ್ಯವಿದೆ.ಈ ಸ್ಪೀಕರ್ ಗಳು ಮೆಮೊರಿ ಕಾರ್ಡ್ ಸ್ಲಾಟ್, ಎಲ್ ಸಿಡಿ, ಸೂಪರ್ ಸೌಂಡ್ ಎಫೆಕ್ಟ್, ಯುಎಸ್ ಬಿ, ಆಡಿಯೋ ಇನ್ ಪ್ಲೇಬ್ಯಾಕ್, ಬಳಕೆದಾರ ಸ್ನೇಹಿ ರಿಮೋಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ.

ಸೌಂಡ್ ಬಾರ್ ಗಳು
ಪ್ಲಿಪ್ ಕಾರ್ಟ್ ನಲ್ಲಿ ಈ ಸೌಂಡ್ ಬಾರ್ ಗಳನ್ನು 5,999 ರುಪಾಯಿ ಬೆಲೆಗೆ ಖರೀದಿಸಬಹುದು. MarQ ನ FS23S 120 W ಬ್ಲೂಟೂತ್ ಸೌಂಡ್ ಬಾರ್ ನ್ನು ಪ್ಲಿಪ್ ಕಾರ್ಟ್ ನಲ್ಲಿ 5,999 ರುಪಾಯಿ ಅಂದರೆ 25% ರಿಯಾಯಿತಿಯಲ್ಲಿ ಖರೀದಿಸಬಹುದು.ಆಕರ್ಷಕ ಫೀಚರ್ ಗಳನ್ನು ಹೊಂದಿರುವ ಇನ್ನೂ ಹಲವು ಸೌಂಡ್ ಬಾರ್ ಗಳು ಪ್ಲಿಪ್ ಕಾರ್ಟ್ ನಲ್ಲಿ ಆಫರ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಟ್ರೂ ವಯರ್ ಲೆಸ್ ಇಯರ್ ಫೋನ್ ಗಳು
ಈ ಇಯರ್ ಫೋನ್ ಗಳು 5.5 ಘಂಟೆಗಳ ಪ್ಲೇಬ್ಯಾಕ್ ಟೈಮ್ ನ್ನು ನೀಡುತ್ತದೆ . ಪೋರ್ಟೇಬಲ್ ಚಾರ್ಜಿಂಗ್ ಕೇಸ್ ನಲ್ಲಿ ಹೆಚ್ಚುವರಿಯಾಗಿ 33 ಘಂಟೆಗಳ ಬ್ಯಾಕ್ ಅಪ್ ಸಿಗುತ್ತದೆ.ಇದು IPX4 ರೇಟೆಡ್ ಆಗಿರುತ್ತದೆ ಮತ್ತು ಬೆವರು, ಧೂಳು ನಿರೋಧಕ ಸಾಮರ್ಥ್ಯವನ್ನು ಇವುಗಳು ಹೊಂದಿವೆ.

ಪಾರ್ಟಿ ಸ್ಪೀಕರ್ ಗಳು
ಕೆಲವು ಪಾರ್ಟಿ ಸ್ಪೀಕರ್ ಗಳು ಸ್ವಿಚ್ ನ್ನು ಹೊಂದಿರುತ್ತದೆ ಮತ್ತು ಕೆಲವು ಮಲ್ಟಿ ಕಲರ್ ರೇಸಿಂಗ್ ಲೈಟ್ ಗಳನ್ನು ಕಂಟ್ರೋಲ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಈ ಸ್ಪೀಕರ್ ಗಳು ಕೂಡ ದೊಡ್ಡ ರಿಯಾಯಿತಿ ಮತ್ತು ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸುವುದಕ್ಕೆ ಫ್ಲಿಪ್ ಕಾರ್ಟ್ ನಲ್ಲಿ ಅವಕಾಶವಿದೆ.


Click it and Unblock the Notifications








