ಫ್ಲಿಪ್‌ಕಾರ್ಟ್ ಫೋನ್ ಪೇಯಿಂದ 699.ರೂಗೆ "ಪಿಒಎಸ್" ಸಾಧನ ಬಿಡುಗಡೆ!!..ಏನಿದು ಗೊತ್ತಾ?
ಒಎಸ್ ಸೇವೆಯು ಗ್ರಾಹಕರಿಗೆ ಹಣಕಾಸಿನ ವಹಿವಾಟುಗಳನ್ನು ಬಹಳ ಸುಲಭವಾಗಿಸಲಿದೆ.!!
ಡಿಜಿಟಲ್ ಪೇಮೆಂಟ್‌ಗೆ ಮಹತ್ತರ ಬದಲಾವಣೆ ತರುವ ದೃಷ್ಟಿಯಿಂದ, ಭಾರತದಲ್ಲಿ ವೇಗದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಹಣ ಪಾವತಿ ಸಂಸ್ಥೆ ಫ್ಲಿಪ್‌ಕಾರ್ಟ್ ಒಡೆತನದ "ಫೋನ್ ಪೇ" ದೇಶಿಯವಾಗಿ ನಿರ್ಮಿಸಲಾದ ಬ್ಲೂಟೂಥ್ ತಂತ್ರಜ್ಞಾನ ಹೊಂದಿರುವ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಎಂಬ ವಿಶೇಷ ಸಾಧನವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.!
ಈ ಪಿಒಎಸ್ ಸಾಧನವು ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿಯೇ ಒಂದು ವಿನೂತನ ಪ್ರಯತ್ನವಾಗಿದ್ದು, ಪಿಒಎಸ್ ಸೇವೆಯು ಗ್ರಾಹಕರಿಗೆ ಹಣಕಾಸಿನ ವಹಿವಾಟುಗಳನ್ನು ಬಹಳ ಸುಲಭವಾಗಿಸಲಿದೆ.!! ಹಾಗಾದರೆ, ಏನಿದು ಪಾಯಿಂಟ್ ಆಫ್ ಸೇಲ್ ಸಾಧನ? ಇದರ ವಿಶೇಷತೆಗಳೇನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪಾಯಿಂಟ್ ಆಫ್ ಸೇಲ್ (ಪಿಒಎಸ್)!!
ಗ್ರಾಹಕರಿಗೆ ಹಣಕಾಸಿನ ವಹಿವಾಟುಗಳನ್ನು ಬಹಳ ಸುಲಭವಾಗಿಸಲು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಅಭಿವೃದ್ದಿಯಾಗಿದ್ದು, ಹಣಕಾಸಿನ ವಹಿವಾಟಿನ ಸಮಯದಲ್ಲಿ ಗ್ರಾಹಕರ ಫೋನ್ ಅನ್ನು ಪಿಒಎಸ್ ಸಾಧನದ ಹತ್ತಿರ ತಂದರೆ ಸಾಕು. ಆಗ ಫೋನ್ ಪೇ ಆಪ್‌ನಲ್ಲಿ ವ್ಯಾಪಾರಿ ವಿವರಗಳು ಮತ್ತು ಪಾವತಿಸಬೇಕಾದ ಮೊತ್ತವನ್ನು ತೋರಿಸುವ ಡಿವೈಸ್ ಇದಾಗಿದೆ.!!

ಪಿಒಎಸ್ ಕಾರ್ಯನಿರ್ವಹಣೆ ಹೇಗೆ?
ಫೋನ್ ಪೇ ಆಪ್‌ನಲ್ಲಿ ವ್ಯಾಪಾರಿ ವಿವರಗಳು ಮತ್ತು ಪಾವತಿಸಬೇಕಾದ ಮೊತ್ತ ತೋರಿಸುವ ಸಾಧನ ಇದಾಗಿದ್ದು, ಬ್ಲೂಟೂತ್ ಮೂಲಕ ಈ ಡಿವೈಸ್ ಕಾರ್ಯನಿರ್ವಹಿಸುತ್ತದೆ.!! ಅಂದರೆ ಗ್ರಾಹಕ ಮತ್ತು ವ್ಯಾಪಾರಿ ವಹಿವಾಟು ಪೂರ್ತಿಯಾಗಿದೆ ಎಂಬುದನ್ನು ಖಚಿತಪಡಿಸಲು ಇಂಟರ್‌ನೆಟ್ ಹೊಂದಿರಬೇಕಾದ ಅವಶ್ಯಕತೆ ಇಲ್ಲ.!!

ಡಿವೈಸ್ ಅನ್ನು ಎಲ್ಲೆಲ್ಲಿ ಬಳಕೆ ಮಾಡಬಹುದು?
ಈ ಪಿಒಎಸ್ ಸಾಧನವು ಭಾರತದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿಯೇ ಒಂದು ವಿನೂತನ ಪ್ರಯತ್ನವಾಗಿದ್ದು, ಈ ಸಾಧನವನ್ನು ಚಿಲ್ಲರೆ ಅಂಗಡಿ, ದಾರಿಬದಿ ಅಂಗಡು, ರೆಸ್ಟೊರೆಂಟ್ ಹೀಗೆ ಪೆಟ್ರೋಲ್ ಬಂಕ್ ಸೇರಿದಂತೆ ಎಲ್ಲಾ ಗಾತ್ರದ ಅಂಗಡಿಗಳಲ್ಲಿ ಬಳಸಬಹುದು ಎಂದು ಫೋನ್ ಪೇ ಮುಖ್ಯಸ್ಥ ಸಮೀರ್ ನಿಗಮ್ ಹೇಳಿದ್ದಾರೆ.!!

ಪಿಒಎಸ್ ಡಿವೈಸ್ ಫೀಚರ್ಸ್?
ಕ್ಯಾಲ್ಯುಕಲೇಟರ್ ಮಾದರಿಯಲ್ಲರುವ ಈ ಪಿಒಎಸ್ ಸಾಧನವನ್ನು ಒಂದೆಡೆಯಿಂದ ಇನ್ನೊಂದೆಡೆ ಒಯ್ಯಬಹುದಾಗಿದ್ದು, 8-12 ತಿಂಗಳವರೆಗೆ ಬ್ಯಾಟರಿ ಬದಲಿಸುವ ಅವಶ್ಯಕತೆ ಇದಕ್ಕಿಲ್ಲ. ಮತ್ತು ಡಿವೈಸ್‌ನಲ್ಲಿ ನಿಯರ್ ಫೀಲ್ಡ್ ಕಮ್ಯೂನಿಕೇಷನ್ ಮಾದರಿ ಸೇವಾ ಅನುಭವ ಸಿಗಲಿದೆ ಎಂದು ಫೋನ್ ಪೇ ಸಿಟಿಒ ರಾಹುಲ್ ಚಾರಿ ಹೇಳಿದ್ದಾರೆ.

ಬೆಲೆ ಮತ್ತು ಸುರಕ್ಷತೆ?
ಈ ಡಿವೈಸ್ ಅನೇಕ ಸ್ತರದ ಸುರಕ್ಷತೆಯನ್ನು ಹೊಂದಿದ್ದು, ಗ್ರಾಹಕರ ವಹಿವಾಟಿಗೆ ಸಂಪೂರ್ಣ ಸುರಕ್ಷತೆ ಭರವಸೆ ಒದಗಿಸುತ್ತದೆ ಎಂದು ಫೋನ್ ಪೇ ಮುಖ್ಯಸ್ಥ ಸಮೀರ್ ನಿಗಮ್ ತಿಳಿಸಿದ್ದಾರೆ.! ಇದರ ಮಾರುಕಟ್ಟೆಯ ಬೆಲೆ 699.ರೂಪಾಯಿಗಳಾಗಿವೆ.!!


Click it and Unblock the Notifications








