Home
Gadgets

ಜನರನ್ನು ತಲುಪಲಿಲ್ಲ ಭಾರೀ ಹೈಪ್ ಸೃಷ್ಟಿಸಿದ್ದ ಈ ಉತ್ಪನ್ನಗಳು..!

By Avinash

ಆಧುನಿಕ ಯುಗದಲ್ಲಿ ದಿನಕ್ಕೊಂದು ತಂತ್ರಜ್ಞಾನ ರೂಪುಗೊಳ್ಳುತ್ತಿದೆ. ಗ್ಯಾಡ್ಜೆಟ್ಸ್‌ ಲೋಕದಲ್ಲಂತೂ ಹೊಸ ಹೊಸ ಉತ್ಪನ್ನಗಳು ಜಗತ್ತಿನ ಮುಂದೆ ಬರುತ್ತಲೆ ಇರುತ್ತವೆ. ಆಪಲ್, ಗೂಗಲ್, ಮೈಕ್ರೋಸಾಫ್ಟ್‌, ಸ್ಯಾಮ್‌ಸಂಗ್‌ನಂತಹ ದೊಡ್ಡ ಕಂಪನಿಗಳು ಜನರಿಗೆ ಹೊಸತನ್ನು ಕೊಡಲು ತಾ ಮುಂದು ನಾ ಮುಂದು ಎಂದು ನಿಂತಿವೆ. ಆದರೆ, ಜನ ಕೊಟ್ಟಿದ್ದೆಲ್ಲ ಒಪ್ಪಿಕೊಳ್ಳಲ್ಲ ಎನ್ನುವುದಕ್ಕೆ ಬಹಳಷ್ಟು ಉದಾಹರಣೆಗಳು ಸಿಗುತ್ತವೆ.

ಜನರನ್ನು ತಲುಪಲಿಲ್ಲ ಭಾರೀ ಹೈಪ್ ಸೃಷ್ಟಿಸಿದ್ದ ಈ ಉತ್ಪನ್ನಗಳು..!

ಹೌದು, ತಂತ್ರಜ್ಞಾನ ಲೋಕದಲ್ಲಿ ಎಷ್ಟೇ ದೊಡ್ಡ್ ಹೆಸರು ಹೊಂದಿದ್ದರೂ, ಕೆಲವೊಂದು ಕಂಪನಿಯ ಉತ್ಪನ್ನಗಳು ಅಷ್ಟೊಂದು ಯಶಸ್ಸು ಗಳಿಸಿಲ್ಲ. ಬಹು ದೊಡ್ಡ ಕನಸಿನೊಂದಿಗೆ ಲಾಂಚ್ ಮಾಡಿದ ಉತ್ಪನ್ನಗಳು ನಿರೀಕ್ಷಿತ ಗುರಿ ಮುಟ್ಟದೆ ಮಕಾಡೆ ಮಲಗಿವೆ. ಅಂತಹ ಇತ್ತೀಚಿನ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

1. ಗೂಗಲ್ ಪ್ಲಸ್ (ಸಾಮಾಜಿಕ ಜಾಲತಾಣ)

1. ಗೂಗಲ್ ಪ್ಲಸ್ (ಸಾಮಾಜಿಕ ಜಾಲತಾಣ)

ಫೇಸ್‌ಬುಕ್‌ ಎಂದರೆ 2010ರ ಪೂರ್ವದಲ್ಲಿ ಭಾಗಶಃ ಅಷ್ಟೊಂದು ಜನಕ್ಕೆ ಗೊತ್ತಿದ್ದಿಲ್ಲ. ಆ ಸಮಯದಲ್ಲಿ ಗೂಗಲ್ ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸಿತ್ತು. ಆದರೆ, 2010ರ ನಂತರ ಫೇಸ್‌ಬುಕ್ ದೊಡ್ಡಮಟ್ಟದ ಯಶಸ್ಸು ಗಳಿಸಿತು. 2011ರಲ್ಲಿ ಗೂಗಲ್ ತನ್ನ ಗೂಗಲ್ ಪ್ಲಸ್ ಎಂಬ ಸಾಮಾಜಿಕ ಜಾಲತಾಣವನ್ನು ಬಿಡುಗಡೆ ಮಾಡುತ್ತದೆ. ಆದರೆ, ಗ್ರಾಹಕರ ನಿರೀಕ್ಷೆಗೆ ತಕ್ಕ ಸೇವೆ ನೀಡಲಾಗದೆ ಗೂಗಲ್ ಪ್ಲಸ್ ಸೋಲನ್ನು ಒಪ್ಪಿಕೊಂಡಿತು.

2. ಮೈಕ್ರೊಸಾಫ್ಟ್‌ ಜೂನ್ (ಮ್ಯೂಸಿಕ್ ಪ್ಲೇಯರ್)

2. ಮೈಕ್ರೊಸಾಫ್ಟ್‌ ಜೂನ್ (ಮ್ಯೂಸಿಕ್ ಪ್ಲೇಯರ್)

ಫೇಸ್‌ಬುಕ್ ಎದುರು ಗೂಗಲ್ ಪ್ಲಸ್ ಬಂದಂಗೆ ಆಪಲ್ ಗುರಿಯಾಗಿಸಿಕೊಂಡು ಐಟಿ ದಿಗ್ಗಜ ಮೈಕ್ರೊಸಾಫ್ಟ್‌ ಹೊಸ ಮ್ಯೂಸಿಕ್ ಪ್ಲೇಯರ್‌ ಲಾಂಚ್ ಮಾಡಿತು. 2006ರಲ್ಲಿ ಆಪಲ್ನ್ನು ಹಿಂದೆ ಹಾಕ್ತಿನಿ ಎಂದು ಘೋಷಿಸಿಕೊಂಡು ಹೊರಬಂದಿದ್ದ ಜೂನ್ ಆಪಲ್‌ಗೆ ಸರಿಸಮಾನವಾಗಿ ನಿಲ್ಲಲು ಸಾಧ್ಯವಾಗಲಿಲ್ಲ. 2008ರ ಕೊನೆ ತ್ರೈಮಾಸಿಕದಲ್ಲಿ ಮೈಕ್ರೊಸಾಫ್ಟ್‌ ಜೂನ್ 85 ಮಿಲಿಯನ್ ಡಾಲರ್ ಆದಾಯ ಹೊಂದಿದ್ದರೆ, ಆಪಲ್‌ 3.37 ಬಿಲಿಯನ್ ಡಾಲರ್ ಆದಾಯ ಹೊಂದಿತ್ತು ಎಂದು ವಾಲ್‌ಸ್ಟ್ರೀಟ್‌ ಜರ್ನಲ್ ವರದಿ ಮಾಡಿತ್ತು.

3. ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್‌ 7 (ಸ್ಮಾರ್ಟ್‌ಫೋನ್)

3. ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್‌ 7 (ಸ್ಮಾರ್ಟ್‌ಫೋನ್)

ಸ್ಯಾಮ್‌ಸಂಗ್ ಗೆಲಾಕ್ಷಿ ನೋಟ್‌ 7 ಯಾವುದೇ ರೀತಿಯಲ್ಲೂ ಕೆಟ್ಟ ಸ್ಮಾರ್ಟ್‌ಫೋನ್ ಎಂದೆನಿಸಿಕೊಳ್ಳುವುದಿಲ್ಲ. ಆದರೆ, ಒಂದು ಸಣ್ಣ ತೊಂದರೆಯಿಂದ ಸ್ಯಾಮ್‌ಸಂಗ್‌ ಗೆಲಾಕ್ಷಿ ನೋಟ್‌ 7 ಯಶಸ್ಸು ಕಾಣಲಿಲ್ಲ. ಚಾರ್ಜಿಂಗ್ ಸಮಯದಲ್ಲಿ ಮೊಬೈಲ್ ಬ್ಲಾಸ್ಟ್‌ ಆಗಿದ್ದರಿಂದ ಕೋರಿಯಾ ಮೂಲದ ಕಂಪನಿ ತನ್ನ ಬ್ರಾಂಡ್‌ನ್ನು ನಿರೀಕ್ಚಿತ ರೀತಿಯಲ್ಲಿ ಮುಟ್ಟಿಸಲು ಆಗಲಿಲ್ಲ.

4. ಆಪಲ್‌ ಬಂಡಾಯಿ ಪಿಪ್ಪಿನ್ (ಗೇಮಿಂಗ್ ಕನ್ಸೋಲ್)

4. ಆಪಲ್‌ ಬಂಡಾಯಿ ಪಿಪ್ಪಿನ್ (ಗೇಮಿಂಗ್ ಕನ್ಸೋಲ್)

ಆಪಲ್ ಉತ್ಪನ್ನಗಳಲ್ಲಿಯೇ ಅತಿ ಕೆಳಗಿರುವ ಉತ್ಪನ್ನ ಎಂದರೆ ಬಂಡಾಯಿ ಪಿಪ್ಪಿನ್. 1996ರಲ್ಲಿ ಈ ಗೇಮಿಂಗ್ ಕನ್ಸೋಲ್‌ನ್ನು ಜಪಾನಿನ ವಿಡಿಯೋ ಗೇಮ್‌ ಕಂಪನಿಯ ಜತೆ ಸೇರಿ ಲಾಂಚ್‌ ಮಾಡಲಾಯಿತು. ಆದರೆ, ನಿರೀಕ್ಷಿತ ಗುರಿ ಕಾಣದೇ ಒಂದೇ ವರ್ಷದಲ್ಲಿ ಸೇವೆಯನ್ನು ಸ್ಥಗಿತಗೊಳಿಸಿತು.

5. ಬ್ಲಾಕ್‌ಬೆರ್ರಿ ಪ್ಲೇಬುಕ್ (ಟ್ಯಾಬ್ಲೆಟ್)

5. ಬ್ಲಾಕ್‌ಬೆರ್ರಿ ಪ್ಲೇಬುಕ್ (ಟ್ಯಾಬ್ಲೆಟ್)

2011ರಲ್ಲಿ ಆಪಲ್ ಐಪಾಡ್‌ ಎದುರು ಬ್ಲಾಕ್‌ಬೆರ್ರಿ ತನ್ನ ಟ್ಯಾಬ್ಲೆಟ್‌ ಪ್ಲೇಬುಕ್‌ನ್ನು ಪರಿಚಯಿಸಿತು. ಉತ್ತಮ ವಿನ್ಯಾಸದೊಂದಿಗೆ ಬಂದರೂ ಸಹ ಬ್ಲಾಕ್‌ಬೆರ್ರಿ ಮೆಸ್ಸೆಂಜರ್ ಮತ್ತು ನೇಟಿವ್ ಇಮೇಲ್ ಕ್ಲೈಂಟ್ ಸೌಲಭ್ಯ ಇಲ್ಲದಿರುವುದು ಬ್ಲಾಕ್‌ಬೆರ್ರಿಗೆ ಹಿನ್ನಡೆಯಾಯಿತು.

6. ಮೈಕ್ರೊಸಾಫ್ಟ್‌ ವಿಂಡೋಸ್‌ 8 (ಆಪರೇಟಿಂಗ್ ಸಿಸ್ಟಮ್)

6. ಮೈಕ್ರೊಸಾಫ್ಟ್‌ ವಿಂಡೋಸ್‌ 8 (ಆಪರೇಟಿಂಗ್ ಸಿಸ್ಟಮ್)

ಮೈಕ್ರೊಸಾಫ್ಟ್‌ 2012ರಲ್ಲಿ ವಿಂಡೋಸ್‌ 8 ಒಎಸ್‌ನ್ನು ಬಿಡುಗಡೆಗೊಳಿಸಿತು. ಆದರೆ, ಈ ಒಎಸ್ ಜನರನ್ನು ತಲುಪವಲ್ಲಿ ಎಡವಿದ್ದಂತೂ ನಿಜ. ಕೇವಲ ಶೇ. 2.6ರಷ್ಟು ಮಾರುಕಟ್ಟೆ ಶೇರ್ ಹೊಂದಿ ಹಿನ್ನಡೆ ಕಂಡಿತು. ಟ್ಯಾಬ್ಲೆಟ್‌ ಡಿವೈಸ್‌ಗಳನ್ನು ಗುರಿಯಾಗಿಟ್ಟುಕೊಂಡು ಹೊರಬಂದಿದ್ದ ವಿಂಡೋಸ್ 8 ಒಎಸ್ ಟ್ಯಾಬ್ಲೆಟ್‌ ಮತ್ತು ಪಿಸಿ ಎರಡರಲ್ಲೂ ದೊಡ್ಡ ಸೋಲನ್ನು ಕಂಡಿತು.

7. ಟ್ವಿಟ್ಟರ್ ಮ್ಯೂಸಿಕ್ (ಆಪ್)

7. ಟ್ವಿಟ್ಟರ್ ಮ್ಯೂಸಿಕ್ (ಆಪ್)

2013ರಲ್ಲಿ ಟ್ವಿಟ್ಟರ್‌ ತನ್ನ ಮ್ಯೂಸಿಕ್ ಆಪ್‌ನ್ನು ಲಾಂಚ್ ಮಾಡಿತು. ಟ್ವಿಟ್ಟರ್ ಕೆಲವು ಸೆಲೆಬ್ರಿಟಿಗಳನ್ನು ಬಳಸಿಕೊಂಡು ತನ್ನ ಆಪ್‌ಗೆ ದೊಡ್ಡ ಮಟ್ಟದಲ್ಲಿ ಹೈಪ್ ಸೃಷ್ಟಿಸಿಕೊಂಡಿತ್ತು. ಆದರೆ, ಕೇವಲ 6 ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪದೇ ಆಪ್‌ ಸೇವೆಯನ್ನು ನಿಲ್ಲಿಸಬೇಕಾಯಿತು.

8. ಫೇಸ್‌ಬುಕ್‌ ಡೀಲ್ಸ್‌ (ಆನ್‌ಲೈನ್ ಸೇವೆಗಳು)

8. ಫೇಸ್‌ಬುಕ್‌ ಡೀಲ್ಸ್‌ (ಆನ್‌ಲೈನ್ ಸೇವೆಗಳು)

ಟ್ವಿಟ್ಟರ್ ಕೇವಲ 6 ತಿಂಗಳಲ್ಲಿ ತನ್ನ ಮ್ಯೂಸಿಕ್ ಆಪ್ ನಿಲ್ಲಿಸಿದ ರೀತಿಯಲ್ಲಿಯೇ ಫೇಸ್‌ಬುಕ್ ತನ್ನ ಆನ್‌ಲೈನ್ ಸೇವೆಯಾದ ಡೀಲ್ಸ್‌ನ್ನು ಕೇವಲ 4 ತಿಂಗಳಲ್ಲಿ ನಿಲ್ಲಿಸಿತು. 2011ರಲ್ಲಿ ಫೇಸ್‌ಬುಕ್‌ ತನ್ನ ಡೀಲ್ಸ್‌ ಸೇವೆಗಳನ್ನು ಪ್ರಾರಂಭಿಸಿತ್ತು.

Android ಫೋನಿನಲ್ಲಿ Face Unlock ಫೀಚರ್ ಬಳಸುವುದು ಹೇಗೆ?
9. ಗೂಗಲ್ ವೇವ್‌ (ಕಮ್ಯುನಿಕೇಷನ್ ಪ್ಲಾಟ್‌ಫಾರ್ಮ್)

9. ಗೂಗಲ್ ವೇವ್‌ (ಕಮ್ಯುನಿಕೇಷನ್ ಪ್ಲಾಟ್‌ಫಾರ್ಮ್)

ಗೂಗಲ್ ಪ್ಲಸ್ ಲಾಂಚ್ ಮಾಡುವುದಕ್ಕಿಂತ ಮುಂಚೆ ಗೂಗಲ್ ತನ್ನ ಕಮ್ಯೂನಿಕೇಷನ್ ಪ್ಲಾಟ್‌ಫಾರ್ಮ್‌ ಗೂಗಲ್ ವೇವ್‌ನ್ನು 2009ರಲ್ಲಿ ಬಿಡುಗಡೆಗೊಳಿಸಿತ್ತು. ಇದರಲ್ಲಿ ಇನ್‌ಸ್ಟಾಂಟ್ ಮೆಸೆಂಜರ್, ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಮತ್ತು ಇಮೇಲ್ ಸೇವೆಯನ್ನು ನೀಡಿತ್ತು. ಆದರೆ, ಗ್ರಾಹಕರಿಗೆ ತಾನೂ ಅಂದುಕೊಂಡ ರೀತಿಯಲ್ಲಿ ಮುಟ್ಟದೇ ಇರುವುದರಿಂದ 2010ರಲ್ಲಿ ಗೂಗಲ್ ವೇವ್‌ನ್ನು ಹಿಂದಕ್ಕೆ ಪಡೆಯಿತು.

10. ಆಪಲ್ ಐಪೋನ್ 5C (ಸ್ಮಾರ್ಟ್‌ಫೋನ್)

10. ಆಪಲ್ ಐಪೋನ್ 5C (ಸ್ಮಾರ್ಟ್‌ಫೋನ್)

2013ರಲ್ಲಿ ಅಗ್ಗದ ದರದಲ್ಲಿ ಆಪಲ್ ಐಪೋನ್ 5ಸಿ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿತು. ಬೇರೆ ಐಪೋನ್‌ಗಳಿಗೆ ಹೋಲಿಸಿದರೆ ತೀರಾ ಕಳಪೆ ಮಟ್ಟದಲ್ಲಿದ್ದ ಐಪೋನ್ 5ಸಿ ಗ್ರಾಹಕರನ್ನು ತಲುಪಲಿಲ್ಲ. 99 ಡಾಲರ್‌ಗಳಿಗೆ ಐಪೋನ್ 5ಸಿಯನ್ನು ಬಿಡುಗಡೆಗೊಳಿಸಿದ್ದ ಆಪಲ್ ಪ್ಲಾಸ್ಟಿಕ್ ಬಾಡಿಯನ್ನು ಹೊಂದಿತ್ತು.

11. ಮೈಕ್ರೊಸಾಫ್ಟ್‌ ವಿಂಡೋಸ್‌ ವಿಸ್ತಾ (ಆಪರೇಟಿಂಗ್‌ ಸಿಸ್ಟಮ್)

11. ಮೈಕ್ರೊಸಾಫ್ಟ್‌ ವಿಂಡೋಸ್‌ ವಿಸ್ತಾ (ಆಪರೇಟಿಂಗ್‌ ಸಿಸ್ಟಮ್)

ಜನಪ್ರಿಯ ವಿಂಡೋಸ್‌ XP ಒಎಸ್‌ ನಂತರ ಮೈಕ್ರೊಸಾಫ್ಟ್‌ ವಿಂಡೋಸ್‌ ವಿಸ್ತಾ ಆಪರೇಟಿಂಗ್ ಸಿಸ್ಟಮ್ ಬಿಡುಗಡೆಗೊಳಿಸಿತು. ಆದರೆ, ಬಹಳ ನಿಧಾನವಾಗಿ ಕಾರ್ಯನಿರ್ವಹಿಸುತ್ತಿದ್ದ ವಿಸ್ತಾ ಜನರನ್ನು ತಲುಪಲಿಲ್ಲ. 2006ರಲ್ಲಿ ಬಿಡುಗಡೆಯಾದ ವಿಸ್ತಾ ಬಹಳಷ್ಟು ಮೆಮೊರಿಯನ್ನು ಸಹ ಬಳಸುತ್ತಿತ್ತು. ಇದರಿಂದ ಇದು ಸಣ್ಣ ಅವಧಿಯಲ್ಲಿಯೇ ಸೇವೆ ಸ್ಥಗಿತಗೊಳಿಸಿತು.

Best Mobiles in India

English summary
'flop' products from Apple, Google, Samsung and others. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+