ಭಾರತದಲ್ಲಿ Galaxy Tab S11 ಸರಣಿ ಬೆಲೆ ಈಗ ಅಧಿಕೃತ!..ಇಲ್ಲಿದೆ ಸಂಪೂರ್ಣ ವಿವರ!
ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಅತ್ಯಾಧುನಿಕ Galaxy Tab S11 ಸರಣಿಯನ್ನು ಜಾಗತಿಕವಾಗಿ ಪರಿಚಯಿಸಿದ ಬೆನ್ನಲ್ಲೇ, ಇದೀಗ ಭಾರತೀಯ ಮಾರುಕಟ್ಟೆಯಲ್ಲಿಯೂ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಪ್ರೀಮಿಯಂ ವಿಭಾಗದ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿರುವ ಈ Galaxy Tab S11 ಸರಣಿಯಲ್ಲಿ Galaxy Tab S11 ಮತ್ತು Galaxy Tab S11 Ultra ಎರಡು ಟ್ಯಾಬ್ಲೆಟ್ ಸಾಧನಗಳು ಬಿಡುಗಡೆಯಾಗಿದ್ದು, ಈ ಎರಡೂ ಮಾದರಿಗಳು ಮೀಡಿಯಾಟೆಕ್ ಡೈಮೆನ್ಸಿಟಿ 9400 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತವೆ, ಇದು ಇತ್ತೀಚಿನ ತಂತ್ರಜ್ಞಾನವನ್ನು ಸೂಚಿಸುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Galaxy Tab S11 ಸರಣಿ: ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Galaxy Tab S11 Wi-Fi ಮಾದರಿಯ ಆರಂಭಿಕ ಬೆಲೆ ₹80,999 (12GB RAM + 128GB ಸ್ಟೋರೇಜ್). ಇದರ 256GB ಮತ್ತು 512GB ಸ್ಟೋರೇಜ್ ಆವೃತ್ತಿಗಳು ಕ್ರಮವಾಗಿ ₹85,999 ಮತ್ತು ₹96,999 ಬೆಲೆ ಹೊಂದಿವೆ. 5G ಮಾದರಿಯ ಬೆಲೆ ₹93,999 ರಿಂದ ಪ್ರಾರಂಭವಾಗುತ್ತದೆ. ಇತ್ತ Galaxy Tab S11 Ultra Wi-Fi ಮಾದರಿಯು ₹1,10,999 ಮತ್ತು ₹1,21,999 ಬೆಲೆಗಳಲ್ಲಿ ಲಭ್ಯವಿದೆ, ಮತ್ತು 5G ಆವೃತ್ತಿಗಳು ₹1,24,999 ಮತ್ತು ₹1,35,999 ಬೆಲೆ ಹೊಂದಿವೆ.
ಈ ಹೊಸ ಸರಣಿಯ ಪ್ರೀ-ಆರ್ಡರ್ ಈಗಾಗಲೇ ಆರಂಭವಾಗಿದ್ದು, ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್, ಅಧಿಕೃತ ಸ್ಟೋರ್‌ಗಳು ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಖರೀದಿಸಬಹುದು. ಪ್ರೀ-ಆರ್ಡರ್ ಮಾಡಿದ ಗ್ರಾಹಕರಿಗೆ 45W ಟ್ರಾವೆಲ್ ಅಡಾಪ್ಟರ್ ಉಚಿತವಾಗಿ ಸಿಗಲಿದೆ. ಜೊತೆಗೆ 9 ತಿಂಗಳ ಬಡ್ಡಿರಹಿತ EMI ಅಥವಾ 24 ತಿಂಗಳ EMI ಆಯ್ಕೆಯೂ ಲಭ್ಯವಿದೆ. Galaxy Tab S11 ಸರಣಿಯ ಪ್ರೀ-ಆರ್ಡರ್ ಬೆಲೆಯು ₹74,999 ರಿಂದ ಶುರುವಾಗುತ್ತದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.
Galaxy Tab S11 ಸರಣಿ: ಪ್ರಮುಖ ವೈಶಿಷ್ಟ್ಯಗಳು
Galaxy Tab S11 ಮಾದರಿಯಲ್ಲಿ 11-ಇಂಚಿನ ಡೈನಾಮಿಕ್ AMOLED 2X ಸ್ಕ್ರೀನ್ ಇದ್ದರೆ, Tab S11 Ultra ಮಾದರಿಯಲ್ಲಿ ದೈತ್ಯ 14.6-ಇಂಚಿನ ಡಿಸ್ಪ್ಲೇ ನೀಡಲಾಗಿದೆ. ಎರಡೂ ಟ್ಯಾಬ್ಲೆಟ್‌ಗಳು 120Hz ರಿಫ್ರೆಶ್ ರೇಟ್ ಮತ್ತು 1,600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದ್ದು, ಇದು ವೃತ್ತಿಪರ ಕೆಲಸಗಳು ಮತ್ತು ಕಂಟೆಂಟ್ ಬಳಕೆಗೆ ಅತ್ಯುತ್ತಮ ದೃಶ್ಯ ಅನುಭವವನ್ನು ಒದಗಿಸುತ್ತದೆ. ಈ ಎರಡೂ ಸಾಧನಗಳನ್ನು ಗ್ರೇ ಮತ್ತು ಸಿಲ್ವರ್ ಬಣ್ಣಗಳಲ್ಲಿ ಪರಿಚಯಿಸಲಾಗಿದೆ.

ಆಪರೇಟಿಂಗ್ ಸಿಸ್ಟಮ್ ವಿಷಯದಲ್ಲಿ, ಎರಡೂ ಸಾಧನಗಳು ಆಂಡ್ರಾಯ್ಡ್ 16 ಆಧಾರಿತ ಒನ್ ಯುಐ 8 ನಲ್ಲಿ ಕಾರ್ಯನಿರ್ವಹಿಸುತ್ತವೆ. ಹೊಸ Galaxy AI ಸೂಟ್, ಗೂಗಲ್‌ನ ಸರ್ಕಲ್ ಟು ಸರ್ಚ್ ಮತ್ತು ಜೆಮಿನಿ AI ವೈಶಿಷ್ಟ್ಯಗಳನ್ನು ಇವು ಒಳಗೊಂಡಿರುವುದು ಗಮನಾರ್ಹವಾಗಿದೆ.ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ, Galaxy Tab S11 ಮಾದರಿಯು 8,400mAh ಬ್ಯಾಟರಿ ಹೊಂದಿದ್ದರೆ, Tab S11 Ultra ಮಾದರಿಯು 11,600mAh ಬ್ಯಾಟರಿಯನ್ನು ಹೊಂದಿದೆ.
ಸ್ಯಾಮ್‌ಸಂಗ್‌ನ ಈ ಹೊಸ ಟ್ಯಾಬ್ಲೆಟ್‌ಗಳು Apple iPad Pro ಸರಣಿಗೆ ಬಲವಾದ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಇದರ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂ ಬೆಲೆಯನ್ನು ಗಮನಿಸಿದರೆ, ಇದು ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಕಂಟೆಂಟ್ ಕ್ರಿಯೇಟರ್‌ಗಳಂತಹ ನಿರ್ದಿಷ್ಟ ಗ್ರಾಹಕ ವರ್ಗವನ್ನು ಆಕರ್ಷಿಸುವ ಸಾಧ್ಯತೆ ಇದೆ. ಭಾರತದಲ್ಲಿ ಸ್ಯಾಮ್‌ಸಂಗ್‌ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ಬಂದಿರುವ ಈಹೊಸ ಸಾಧನಗಳ ಸಂಪೂರ್ಣ ವಿಮರ್ಶೆಯನ್ನು ಮುಂದಿನ ಲೇಖನಗಳಲ್ಲಿ ಒದಗಿಸುತ್ತೇವೆ.


Click it and Unblock the Notifications








