PS4 ಎಕ್ಸ್ ಕ್ಲೂಸಿವ್ ಗೇಮ್ ಆಫ್ ವಾರ್ ಗೇಮ್ ಶೀಘ್ರವೇ ಮಾರುಕಟ್ಟೆಗೆ...!
ಗೇಮರ್ ಗಳಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದ್ದು, PS4 ಎಕ್ಸ್ ಕ್ಲೂಸಿವ್ ಗೇಮ್ ಆಫ್ ವಾರ್ ಇದೇ ಏಪ್ರಿಲ್ 20 ರಂದು ಬಿಡುಗಡೆಯಾಗಲಿದೆ. ಸ್ಟಾಂಡೆರ್ಡ್ ಆವೃತ್ತಿಯ ಗೇಮ್ ಬೆಲೆ ರೂ.3,999 ಆಗಲಿದ್ದು, ಇದರಲ್ಲಿ ಒಟ್ಟು ಮೂರು ಆವೃತ್ತಿಗಳು ಬಳಕೆಗೆ ದೊರೆಯಲಿದ್ದು, ಗಾಡ್ ವಾರ್ ಕಲೆಕ್ಟರ್ ಎಡಿಷನ್ ಮತ್ತು ಗಾಡ್ ಆಫ್ ವಾರ್ ಲಿಮಿಟೆಡ್ ಅಡಿಷನ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಈ ಮೂರು ಆವೃತ್ತಿಯ ಗೇಮ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದ್ದು, ಸೋನಿ PS4ನಲ್ಲಿ ಈ ಗೇಮ್ ಅತ್ಯಂತ ಸುಂದರವಾಗಿ ಮೂಡಿಬರಲಿದ್ದು, ಗೇಮ್ ಆಡುವ ಅನುಭವನ್ನು ಉತ್ತಮ ಪಡಿಸಲಿದೆ.ಈಗಾಗಲೇ ಗೇಮಿಂಗ್ ಅಭಿಮಾನಿಗಳು ಈ ಹೊಸ ಗೇಮ್ ಮಾರುಕಟ್ಟೆಗೆ ಬರುವಿಕೆಯನ್ನು ಕಾಯುತ್ತಿದ್ದಾರೆ ಎನ್ನಲಾಗಿದೆ.
ಗೇಮ್ ಆಫ್ ವಾರ್ ಕೆಲವೇ ಕೆಲವು ಮಳಿಗೆಗಳಲ್ಲಿ ಮಾತ್ರವೇ ದೊರೆಯಲಿದ್ದು, ರಾಜಧಾನಿ ದೆಹಲಿ ಮತ್ತು ಮುಂಬೈಯಲ್ಲಿ ಆಗಲೇ ಈ ಗೇಮ್ ಖರೀದಿಗೆ ಪ್ರಿಬುಕ್ಕಿಂಗ್ ಆರಂಭವಾಗಿದೆ. ಶೀಘ್ರವೇ ಆನ್ ಲೈನಿನಲ್ಲಿ ಪ್ರಿ ಬುಕ್ ಮಾಡುವ ಅವಕಾಶವನ್ನು ಸೋನಿ ಮಾಡಿಕೊಡಲಿದೆ.

ಗೇಮ್ ಆಫ್ ವಾರ್ ಕಲೆಕ್ಟರ್ ಎಡಿಷನ್:
ಗೇಮ್ ಆಫ್ ವಾರ್ ಕಲೆಕ್ಟರ್ ಎಡಿಷನ್ ನಲ್ಲಿ ಬಳಕೆದಾರರಿಗೆ ಮ್ಯಾಪ್ ನೊಂದಿಗೆ 9 ಇಂಚಿನ ಸ್ಟಾಚು ದೊರೆಯಲಿದೆ. ಇದರೊಂದಿಗೆ ಗೇಮ್ ದೊರೆಯಲಿದ್ದು, ರೂ.9490 ಗಳಾಗಲಿದೆ.
ಗೇಮ್ ಆಫ್ ವಾರ್ ಲಿಮಿಟೆಡ್ ಎಡಿಷನ್
ಗೇಮ್ ಆಫ್ ವಾರ್ ಲಿಮಿಟೆಡ್ ಎಡಿಷನ್ ನಲ್ಲಿ ಬಳಕೆದಾರರಿಗೆ ಗೇಮ್ ನೊಂದಿಗೆ ಈ ಗೇಮ್ ಕುರಿತ ಬುಕ್ ದೊರೆಯಲಿದ್ದು, ಇದರ ಬೆಲೆ ರೂ.4999 ಆಗಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಈ ಹೊಸ ಗೇಮ್ ಬಳಕೆ ಮಾಡಿಕೊಳ್ಳಲು ಗೇಮರ್ ಗಳು ತುದಿಗಾಲಿನಲ್ಲಿ ನಿಂತಿದ್ದಾರೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಲಿದೆ.


Click it and Unblock the Notifications