ಬಂದಿದೆ ಗೂಗಲ್ ನ ಓರಿಯೋ ಆಧಾರಿತ ನೂತನ ಆಂಡ್ರಾಯ್ಡ್ ವೇರ್ ಬೀಟಾ
ಗೂಗಲ್ ಹೊಸ ಆಂಡ್ರಾಯ್ಡ ವೇರ್ ನ ಬೀಟಾ ಅವೃತ್ತಿಯನ್ನು ಬಿಡುಗಡೆ ಮಾಡಿದ್ದು ಸಧ್ಯಕ್ಕೆ ಒಂದು ಟೆಸ್ಟ್ ಡಿವೈಸ್ ಗೆ ಫ್ಲ್ಯಾಶ್ ಮಾಡಲು ಅಥವಾ ಆಂಡ್ರಾಯ್ಡ್ ಎಮ್ಯುಲೇಟರ್ ಮೂಲಕ ಬಳಸಲು ಮಾತ್ರ ಲಭ್ಯವಿದೆ
ಗೂಗಲ್ ನ ಹೊಸ ಆಂಡ್ರಾಯ್ಡ್ ವೇರ್ ಬೀಟಾ ಈಗ ಲಭ್ಯವಿದೆ ಎಂದು ಗೂಗಲ್ ಘೋಷಿಸಿದೆ. ಆಂಡ್ರಾಯ್ಡ್ ವೇರ್ ಬೀಟಾ ಸಧ್ಯಕ್ಕೆ ಒಂದು ಟೆಸ್ಟ್ ಡಿವೈಸ್ ಗೆ ಫ್ಲ್ಯಾಶ್ ಮಾಡಲು ಅಥವಾ ಆಂಡ್ರಾಯ್ಡ್ ಎಮ್ಯುಲೇಟರ್ ಮೂಲಕ ಬಳಸಲು ಮಾತ್ರ ಲಭ್ಯವಿದೆ. ಆದರೆ ಈ ಹೊಸ ಆವೃತ್ತಿಯಲ್ಲಿ ಏನೂ ಮಹತ್ತರ ಬದಲಾವಣೆಗಳಿಲ್ಲ ಎಂದು ಗೂಗಲ್ ತಿಳಿಸಿದೆ.

ಗೂಗಲ್ ನ ಅನುಸಾರ ಈ ಸುಧಾರಿತ ಆವೃತ್ತಿ ಮೂಲತಃ APU26 ಗೆ ಒಂದು ತಾಂತ್ರಿಕ ಅಪ್ಗ್ರೇಡ್ ಆಗಿದ್ದು, ಬ್ಯಾಕ್ಗೌಂಡ್ನಲ್ಲಿ ನಡೆಯುವ ಪ್ರಾಸೆಸ್ಗಳ ಮೇಲೆ ಮಿತಿಯನ್ನು ಹೇರುವುದು ಮತ್ತು ನೋಟಿಫಿಕೇಶನ್ ಚ್ಯಾನೆಲ್ಗಳು ಈ ಆವೃತ್ತಿಯಲ್ಲಿ ಕಾಣಬಹುದಾದ ಸುಧಾರಣೆಗಳು. ಹಾಗಾಗಿ ನೂತನ ಆಂಡ್ರಾಯ್ಡ್ ವೇರ್ ಬೀಟಾ ಸುಮಾರಾಗಿ ಆಂಡ್ರಾಯ್ಡ್ ವೇರ್ 2.X ನಂತೆಯೇ ಇರಲಿದೆ.
ಹೊಸ ಆಂಡ್ರಾಯ್ಡ್ ವೇರ ನಲ್ಲಿ ಗೂಗಲ್ ನೋಟಿಫಿಕೇಶನ್ ಚ್ಯಾನಲ್ಗಳನ್ನು ನೀಡುತ್ತಿದ್ದು, ಬಳಕೆದಾರರು ಯಾವ ರೀತಿಯ ನೋಟಿಫಿಕೇಶನ್ ಸ್ಮಾರ್ಟ್ ವಾಚ್ ಮೂಲಕ ಬರಬಹುದು ಎಂಬುದನ್ನು ಕಾನ್ಫಿಗರ್ ಮಾಡಬಹುದು.
ಅಷ್ಟೇ ಅಲ್ಲದೆ ಹೊಸ ಆಂಡ್ರಾಯ್ಡ್ ವೇರ್ ನಲ್ಲಿ ಬ್ಯಾಟರಿಯ ಬಾಳಿಕೆ ಸುಧಾರಿಸಲಿದೆಯಂತೆ. ಹಾಗೆಯೇ ಅಗ್ಗಾಗ್ಗೆ ನಡೆಯುವ ಬ್ಯಾಕ್ಗ್ರೌಂಡ್ ಲೊಕೇಶನ್ ಚೆಕ್ ಗಳ ಸಂಖ್ಯೆ ಕಡಿಮೆಯಾಗಲಿದೆ. ಅಲ್ಲದೆ ಹೊಸ ಆಂಡ್ರಾಯ್ಡ್ ವೇರ್ ಬ್ಯಾಕ್ಗ್ರೌಂಡ್ ನಲ್ಲಿ ಓಡುವ ಸೇವೆಗಳ ಮೇಲೂ ಕಡಿವಾಣ ಹಾಕುತ್ತದೆ.
ಈ ಸಂದರ್ಭದಲ್ಲಿ ನಾವು ತಿಳಿಯಲೇ ಬೇಕಾದ ವಿಷಯವೇನೆಂದರೆ, ಎಲ್ಲಾ ಸ್ಮಾರ್ಟ್ ವಾಚ್ಗಳು ಹೊಸ ಆಂಡ್ರಾಯ್ಡ್ ವೇರ್ ಬೀಟಾ ಗೆ ಟೆಸ್ಟ್ ಸಾಧನಗಳಾಗುವ ಅರ್ಹತೆ ಪಡೆದಿಲ್ಲ. ಸಧ್ಯಕ್ಕೆ LG ವಾಚ್ ಸ್ಪೋರ್ಟ್ ಹೊಸ ಆಂಡ್ರಾಯ್ಡ್ ವೇರ್ ಬೀಟಾ ಗೆ ಟೆಸ್ಟ್ ಸಾಧನವಾಗಬಲ್ಲ ಏಕೈಕ ಸ್ಮಾರ್ಟ್ ವಾಚ್ ಆಗಿದ್ದು, ಅದರ ROM ಅನ್ನು ಫ್ಲ್ಯಾಶ್ ಮಾಡುವ ಮೂಲಕ ಟೆಸ್ಟ್ ಡಿವೈಸ್ ಆಗಿ ಪರಿವರ್ತಿಸಬಹುದು.
ನಿರಾಶರಾಗಬೇಡಿ, ಆಂಡ್ರಾಯ್ಡ್ ವೇರ್ ಬೀಟಾ ದ ಅನುಭವ ಪಡೆಯಲು ಇನ್ನೊಂದು ಮಾರ್ಗವಿದೆ. ಆಂಡ್ರಾಯ್ಡ್ ವೇರ್ ಆಪ್ಸ್ಗಳನ್ನು ನೀವು ಆಂಡ್ರಾಯ್ಡ್ ಎಮ್ಯುಲೇಟರ್ ಮೂಲಕ ಪ್ರಯತ್ನಿಸಬಹುದು. ಈ ರೀತಿಯಾಗಿ ನೀವು ಆಂಡ್ರಾಯ್ಡ್ ವೇರ್ ಗೆ ಹೊಸ ಆಪ್ಗಳನ್ನು ಕೂಡ ಸೃಷ್ಟಿಸಬಹುದು.
ಗೂಗಲ್ ತನ್ನ ಆಂಡ್ರಾಯ್ಡ್ ವೇರ್ ಗೆ ಉತ್ತಮ ಸುಧಾರಣೆಗಳನ್ನು ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಸ್ಯಾಮಸಂಗ್ ನ ಟೈಜೆನ್ ಅಥವಾ ಆಪಲ್ ನ ವಾಚ್ OS ಗೆ ಗೂಗಲ್ ಆಂಡ್ರಾಯ್ಡ್ ವೇರ್ ಸರಿಸಾಟಿಯಾಗಿಲ್ಲ. ಈ ಸಂದರ್ಭದಲ್ಲಿ ಆಪಲ್ ವಾಚ್ ಸೀರೀಸ್ 3 ಭಾರತದಲ್ಲಿ ಪ್ರೀ-ಬುಕಿಂಗ್ ಗೆ ಲಭ್ಯವಿದೆ ಎಂಬುದನ್ನು ನಿಮಗೆ ತಿಳಿಸಲು ಬಯಸುತ್ತೇವೆ.


Click it and Unblock the Notifications








