Home
Gadgets

Google Pixel 7a ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್; ಈ ಬ್ಯಾಂಕ್‌ ಕಾರ್ಡ್‌ ಇದ್ಯಾ.. ಹಾಗಿದ್ರೆ ಶುಭಕಾಲ!

ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಇದೀಗ ಭರ್ಜರಿ ಡಿಸ್ಕೌಂಟ್‌ ಆರಂಭವಾಗಿದೆ. ಫ್ಲಿಪ್‌ಕಾರ್ಟ್, ಅಮೇಜಾನ್‌‌ನಲ್ಲಿ ಗ್ರಾಹಕರು ಶಾಪಿಂಗ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ನಿಮ್ಮ ಜೇಬಿನ ಭಾರ ಕಡಿಮೆ ಮಾಡಲು ಇ ಕಾಮರ್ಸ್‌ ವೆಬ್‌ಸೈಟ್‌ಗಳು ಮುಂದಾಗುತ್ತಿವೆ. ನೀವು ಸಹ ಅತ್ಯುತ್ತಮ ಫೀಚರ್‌, ಒಳ್ಳೆಯ ಹೈ ಕ್ವಾಲಿಟಿ, ಉತ್ತಮ ತಂತ್ರಜ್ಞಾನದ ಸ್ಮಾರ್ಟ್‌ಫೋನ್‌ ಖರೀದಿಸುವ ಪ್ಲಾನ್ ಹಾಕಿಕೊಂಡಿದ್ದೀರಾ? ಹಾಗಿದ್ರೆ, ನಿಮಗೆ ಇಲ್ಲಿದೆ ಭರ್ಜರಿ ಆಫರ್‌. ಫ್ಲಿಪ್‌ಕಾರ್ಟ್‌ ಗ್ರಾಹಕರಿಗೆ ಬಂಪರ್ ಆಫರ್‌ ಘೋಷಿಸಿದೆ. Google Pixelನ ಈ ಫೋನ್‌ ಖರೀದಿಸಿದರೆ ನಿಮಗೆ ಭರಪೂರ ರಿಯಾಯಿತಿ ಸಿಗುತ್ತದೆ. ಆ ಮೊಬೈಲ್‌ ಯಾವುದು? Flipkart ಏನೆಲ್ಲಾ ಆಫರ್‌ ಘೋಷಿಸಿದೆ ಎನ್ನುವುದನ್ನು ತಿಳಿಯೋಣ ಬನ್ನಿ.

Google Pixel 7a ಸ್ಮಾರ್ಟ್‌ಫೋನ್ ಅನ್ನು ಕಳೆದ ವರ್ಷ ಮಾರುಕಟ್ಟೆಗೆ ಪರಿಚಯಿಸಲಾಯಿತು. ಬಿಡುಗಡೆಯ ಸಮಯದಲ್ಲಿ ಇದರ ಬೆಲೆ 43,999 ರೂ. ಇತ್ತು. ಈ ಮಧ್ಯೆ ನಡೆಯುತ್ತಿರುವ ಫ್ಲಿಪ್‌ಕಾರ್ಟ್ ಮೆಗಾ ಜೂನ್ ಬೊನಾಂಜಾ ಸೇಲ್-2024ರ ಭಾಗವಾಗಿ ಈ ಮೊಬೈಲ್‌ ಅನ್ನು 35,000 ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ ಅನೇಕ ಅತ್ಯಾಕರ್ಷಕ ಫೀಚರ್‌ಗಳು ಮತ್ತು ವಿಶೇಷತೆಗಳನ್ನು ಹೊಂದಿದೆ. ಇನ್ನೂ, ಈ ವರ್ಷ Google Pixel 8 ಫೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ.

Google Pixel: ಈ ಫೋನ್‌ ಮೇಲೆ ಭರಪೂರ ಆಫರ್‌; ಶುಭಕಾಲ ಆರಂಭ!

Google Pixel 7a ಸ್ಮಾರ್ಟ್‌ಫೋನ್ 8GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 34,999 ರೂ. ಆಗಿದೆ . ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳು ಸೇರಿದಂತೆ ಹಳೆಯ ಫೋನ್‌ಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೂಲಕ 1,000 ರೂಪಾಯಿ ರಿಯಾಯಿತಿ ಲಭ್ಯವಿದೆ. Flipkart Access Bank ಕಾರ್ಡ್ ಮೂಲಕ ಶೇ.5 ರಷ್ಟು ರಿಯಾಯಿತಿಯನ್ನು ಸಹ ಪಡೆಯಬಹುದು.

Google Pixel 7a ಫೀಚರ್‌ಗಳು

ಮೊದಲಿಗೆ Google Pixel 7a ಸ್ಮಾರ್ಟ್‌ಫೋನ್‌ನ ಫೀಚರ್‌ ಬಗ್ಗೆ ತಿಳಿಯೋಣ. 6.1 ಇಂಚಿನ ಪೂರ್ಣ HD+ ಡಿಸ್‌ಪ್ಲೇ ಹೊಂದಿದೆ. ಇದು 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಈ ಮೊಬೈಲ್‌ನ ಡಿಸ್ಲ್ಪೇ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಈ Google Pixel 7a ಸ್ಮಾರ್ಟ್‌ಫೋನ್ Android 13 ಆಧಾರಿತ OS ನಲ್ಲಿ ಕಾರ್ಯನಿರ್ವಹಿಸುತ್ತದೆ.

Google Pixel 7aನ ಪ್ರೊಸೆಸರ್ ಏನು?

ಈ ಫೋನ್‌ನ ಪ್ರೊಸೆಸರ್ ಬಗ್ಗೆ ಮಾತನಾಡುವುದಾದರೆ, Google Pixel 7a ಮೊಬೈಲ್ Tensor G2 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಹೊರತಾಗಿ, ಟೈಟಾನ್ M2 ಭದ್ರತಾ ಸಹ-ಪ್ರೊಸೆಸರ್ ಅನ್ನು ಸಹ ಹೊಂದಿದೆ. ಫಲಿತಾಂಶವು ಉತ್ತಮ ಕಾರ್ಯಕ್ಷಮತೆಯಾಗಿದೆ. ಇದು 18W ವೈರ್ ಚಾರ್ಜಿಂಗ್ ಬೆಂಬಲದೊಂದಿಗೆ 4300mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಸಹ ಹೊಂದಿದೆ .

Google Pixel 7a ಕ್ಯಾಮೆರಾ ಸೆಟಪ್

ಮೊಬೈಲ್‌ ಪ್ರಿಯರು ಹೆಚ್ಚಿನದಾಗಿ ಕ್ಯಾಮೆರಾ ಸೆಟಪ್‌ ಬಗ್ಗೆ ಗಮನಹರಿಸುತ್ತಾರೆ. ಈ Google Pixel 7a ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದೆ. OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಬೆಂಬಲದೊಂದಿಗೆ 64MP ಮುಖ್ಯ ಕ್ಯಾಮೆರಾ ಇದೆ. ಮತ್ತು 13MP ಅಲ್ಟ್ರಾ ವೈಡ್ ಕ್ಯಾಮೆರಾ ಹೊಂದಿದೆ. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 13MP ಕ್ಯಾಮೆರಾವನ್ನು ಒಳಗೊಂಡಿದೆ.

ಈ ಫೋನ್‌ನ ಕನೆಕ್ಟಿವಿಟಿ ಆಯ್ಕೆಗಳು

ಈ ಗೂಗಲ್ ಸ್ಮಾರ್ಟ್‌ಫೋನ್ IP67 ರೇಟಿಂಗ್‌ನೊಂದಿಗೆ ನೀರು ಮತ್ತು ಧೂಳು ನಿರೋಧಕವಾಗಿದೆ. ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಹೇಳುವುದಾದರೆ, ಇದು ಬ್ಲೂಟೂತ್ 5.3, Wi-Fi 6, NFC, USB-C ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಪ್ರಸ್ತುತ, ಈ Google Pixel 7a ಮೊಬೈಲ್‌ ಅನ್ನು ಫ್ಲಿಪ್‌ಕಾರ್ಟ್ ಮೆಗಾ ಜೂನ್ ಬೊನಾಂಜಾ ಮಾರಾಟದಲ್ಲಿ ಖರೀದಿಸಬಹುದು. ಪೀಮಿಯಂ ಫೋನ್‌ ತೆಗೆದುಕೊಳ್ಳುವ ಆಸೆಯನ್ನು ಹೊಂದಿರುವ ಗ್ರಾಹಕರಿಗೆ ಇದು ಖಷಿ ಸುದ್ದಿ.

ಜೂನ್ 19 ರವರೆಗೆ ಇರಲಿದೆ ಬೊನಾಂಜಾ ಸೇಲ್

ಪ್ರಸಿದ್ದ ಇ-ಕಾಮರ್ಸ್‌ ತಾಣವಾಗಿರುವ ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗಾಗಿ ಆಗಾಗ ರಿಯಾಯಿತಿ ಮಾರಾಟದ ಆಫರ್ ನೀಡುತ್ತಾ ಬಂದಿದೆ. ಇದೀಗ ಇಂದಿನಿಂದ ಅಂದರೆ ಜೂನ್ 13 ರಿಂದ ಫ್ಲಿಪ್‌ಕಾರ್ಟ್‌ ತನ್ನ ಮೆಗಾ ಜೂನ್ ಬೊನಾಂಜಾ ಮಾರಾಟ (Bonanza sale) ಆರಂಭಿಸಿದೆ. ಇದು ಜೂನ್ 19 ರವರೆಗೆ ಇರಲಿದೆ. ಮಾರಾಟದ ಸಮಯದಲ್ಲಿ ಹಲವಾರು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದೆ.

ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಯೋಜನೆ ಮಾಡಿದ್ದರೆ ಇದು ನಿಮಗೆ ಪರ್ಫೆಕ್ಟ್‌ ಟೈಮ್. iPhone 15, Motorola Edge 50 Pro, realme 12x 5G ಸೇರಿದಂತೆ ಇನ್ನೂ ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಈ ಪೈಕಿ Google Pixel 7a ಸ್ಮಾರ್ಟ್‌ಫೋನ್ ಕೂಡ ಒಂದಾಗಿದೆ. 43,999 ರೂ. ಬೆಲೆಯ ಈ ಮೊಬೈಲ್‌ ಅನ್ನು 35,000 ರೂ.ಗಿಂತ ಕಡಿಮೆ ಬೆಲೆಗೆ ನೀವು ಖರೀದಿಸಬಹುದು.

Best Mobiles in India

English summary
Google Pixel 7a is available at a huge discount on Flipkart. The phone can be yours for under Rs 35,000 without any bank offers. There are additional deals available too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+