ಬೈಕ್ ಸವಾರರಿಗಾಗಿ ಗೂಗಲ್ ನಿಂದ ಸ್ಮಾರ್ಟ್ ಜಾಕೆಟ್.!!
ಈ ಹೊಸ ಮಾದರಿಯ ಜಾಕೆಟ್ ಇಂಟರನೆಟ್ ನೊಂದಿಗೆ ಕನೆಕ್ಟ್ ಆಗಲಿದ್ದು, ನೀವು ಬೈಕ್ ರೈಡ್ ಮಾಡುತ್ತಿರುವ ಸಂದರ್ಭದಲ್ಲಿ ನಿಮಗೆ ಯಾವುದಾರು ಮೇಸೆಜ್ ಬಂದರೆ ಅದನ್ನು ಓದಲು ಈ ಜಾಕೆಟ್ ಶಕ್ತವಾಗಿದೆ ಎನ್ನಲಾಗಿದೆ.
ಸರ್ಜ್ ಇಂಜಿನ್ ದೈತ್ಯ ಗೂಗಲ್ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಫ್ಯಾಷನ್ ಲೋಕಕ್ಕೆ ಕಾಲಿಟ್ಟಿರುವ ಗೂಗಲ್ ಹೊಸ ಮಾದರಿಯ ಜಾಕೆಟ್ ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ನೀವು ತೊಡುವ ಬಟ್ಟೆಗಳನ್ನು ಸ್ಮಾರ್ಟ್ ಮಾಡುವ ಮೊದಲ ಪ್ರಯತ್ನ ಇದಾಗಿದ್ದು, ಈ ಜಾಕೆಟ್ ಇಂಟರ್ನೆಟ್ ನೊಂದಿಗೆ ಕನೆಕ್ಟ್ ಆಗಲಿದೆ.

ಈ ಹೊಸ ಮಾದರಿಯ ಜಾಕೆಟ್ ಇಂಟರನೆಟ್ ನೊಂದಿಗೆ ಕನೆಕ್ಟ್ ಆಗಲಿದ್ದು, ನೀವು ಬೈಕ್ ರೈಡ್ ಮಾಡುತ್ತಿರುವ ಸಂದರ್ಭದಲ್ಲಿ ನಿಮಗೆ ಯಾವುದಾರು ಮೇಸೆಜ್ ಬಂದರೆ ಅದನ್ನು ಓದಲು ಈ ಜಾಕೆಟ್ ಶಕ್ತವಾಗಿದೆ ಎನ್ನಲಾಗಿದೆ.

ಬೈಕ್ ರೈಡರ್ಸ್‌ಗಾಗಿಯೇ ವಿನ್ಯಾಸ:
ಈ ಜಾಕೆಟ್ ಅನ್ನು ಗೂಗಲ್ ಬೈಕ್ ಮತ್ತು ಸೈಕಲ್ ಓಡಿಸುವವರಿಗಾಗಿಯೇ ವಿನ್ಯಾಸ ಮಾಡಲಾಗಿದ್ದು, ಈ ಜಾಕೆಟ್ ಹಾಕಿಕೊಂಡು ನೀವು ರೈಡ್ ಮಾಡುತ್ತಿರುವ ಸಂದರ್ಭದಲ್ಲಿ ನಿಮಗೆ ಮೇಸೆಜ್ ಬಂದರೆ ಅನ್ನು ಓದಿ ಹೇಳುತ್ತದೆ.

ಸ್ಮಾರ್ಟ್ ಜಾಕೆಟ್:
ನೀವು ಈ ಜಾಕೆಟ್ ಹಾಕಿಕೊಂಡು ಇಯರ್ ಫೋನ್ ನಲ್ಲಿ ಹಾಡು ಕೇಳುತ್ತಿರುವ ಸಂದರ್ಭದಲ್ಲಿ ವಾಲ್ಯೂಮ್ ಕಡಿಮೆ ಮಾಡಲು ಹೆಚ್ಚು ಮಾಡುವುದನ್ನು ನೀವು ಜಾಕೆಟ್ ನಿಂದಲೇ ನಿಯಂತ್ರಿಸಬಹುದಾಗಿದೆ.

ಬೆಲೆ ಎಷ್ಟು?
ಈ ಸ್ಮಾರ್ಟ್ ಜಾಕೆಟ್ ಬೆಲೆಯೂ $350 ಎನ್ನಲಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿದ್ದು, ಮುಂದಿನ ವಾರದಲ್ಲಿ ಲಾಂಚ್ ಆಗಲಿದೆ. ಇದನ್ನು ಲಿವಿಸ್ ತಯಾರಿಸಿದೆ ಎನ್ನಲಾಗಿದೆ. ಚ್ ಆಗಲಿದೆ. ಇದನ್ನು ಲಿವಿಸ್ ತಯಾರಿಸಿದೆ ಎನ್ನಲಾಗಿದೆ.


Click it and Unblock the Notifications








