ಈ ದೀಪಾವಳಿಗೆ ನಿಮ್ಮ ನೆಚ್ಚಿನ ಹುವಾಯಿ ಪ್ರೊಡಕ್ಟ್ ಗಳನ್ನು ಅತ್ಯಾಕರ್ಷಕ ಆಫರ್ ನಲ್ಲಿ ಖರೀದಿಸಿ
ಹುವಾಯಿ ಸಂಸ್ಥೆ ಗ್ರ್ಯಾಂಡ್ ಸೇಲ್ ನ್ನು ತನ್ನ ವೆಬ್ ಸೈಟ್ ನಲ್ಲಿ ಆಯೋಜಿಸಿದ್ದು ದೀಪಾವಳಿಗಾಗಿ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಅಕ್ಟೋಬರ್ 20 ರಿಂದಲೇ ಈ ಸೇಲ್ ಆರಂಭವಾಗಿದ್ದು ಅಕ್ಟೋಬರ್ 28 ರ ವರೆಗೆ ನಡೆಯಲಿದೆ. ಈ ಸಮಯದಲ್ಲಿ ಸ್ಮಾರ್ಟ್ ಫೋನ್ ಗಳು ಮತ್ತು ಇತರೆ ಹಲವು ಎಲೆಕ್ಟ್ರಾನಿಕ್ ವಸ್ತುಗಳಿಗೆ ಹುವಾಯಿ ಸಂಸ್ಥೆ ರಿಯಾಯಿತಿ ಬೆಲೆಯನ್ನು ನೀಡುತ್ತಿದೆ. ಅಮೇಜಾನ್, ಫ್ಲಿಪ್ ಕಾರ್ಟ್ ಮತ್ತು ಇತರೆ ಕೆಲವು ಆಫ್ ಲೈನ್ ರೀಟೈಲರ್ ಗಳ ಬಳಿ ಕೂಡ ನೀವು ಈ ಹುವಾಯಿ ಪ್ರೊಡಕ್ಟ್ ಗಳನ್ನು ಖರೀದಿಸುವುದಕ್ಕೆ ಅವಕಾಶಿದೆ.

ಅಮೇಜಾನ್ ನಲ್ಲಿ ಲಭ್ಯವಿರುವ ಹುವಾಯಿ ಪ್ರೊಡಕ್ಟ್ ಗಳಲ್ಲಿ ಹುವಾಯಿ ವೈ9 ಪ್ರೈಮ್ 2019, ಹುವಾಯಿ ವೈ9 2019, ಹುವಾಯಿ ಪಿ30 ಪ್ರೋ, ಹುವಾಯಿ ಮೇಟ್ 20 ಪ್ರೋ, ಹುವಾಯಿ ಮೀಡಿಯಾ ಪ್ಯಾಡ್ ಟಿ5, ಹುವಾಯಿ ವಾಚ್ ಜಿಟಿ ಸ್ಪೋರ್ಟ್ ಮತ್ತು ಹುವಾಯಿ ವಾಚ್ ಜಿಟಿ ಕ್ಲಾಸಿಕ್ ಗಳು ಸೇರಿವೆ.
ಇನ್ನೊಂದೆಡೆ ಹುವಾಯಿ ಮೀಡಿಯಾ ಪ್ಯಾಡ್ ಎಂ5 ಲೈಟ್, ಹುವಾಯಿ ವಾಚ್ ಜಿಟಿ ಆಕ್ಟೀವ್, ಹುವಾಯಿ ಫ್ರೀಲೇಸ್ ಮತ್ತು ಹುವಾಯಿ ಮಿನಿ ಸ್ಪೀಕರ್ ಗಳು ಫ್ಲಿಪ್ ಕಾರ್ಟ್ ನಲ್ಲಿ ಆಫರ್ ಬೆಲೆಯಲ್ಲಿ ಲಭ್ಯವಿದೆ.
ಕೊನೆಯದಾಗಿ ಹುವಾಯಿ ವೈ9 ಪ್ರೈಮ್ 2019, ಹುವಾಯಿ ಪಿ30 ಪ್ರೋ ಮತ್ತು ಹುವಾಯಿ ಪಿ30 ಲೈಟ್ ಗಳು ಇತರೆ ಆಫ್ ಲೈನ್ ಸ್ಟೋರ್ ಗಳಲ್ಲಿ ವಿಶೇಷ ಬೆಲೆಯಲ್ಲಿ ಸಿಗುತ್ತದೆ.

ಹುವಾಯಿ ವೈ9 ಪ್ರೈಮ್ 2019
ಹುವಾಯಿ ವೈ9 ಪ್ರೈಮ್ ನ್ನು 15,990 ರುಪಾಯಿ ಬೆಲೆಗೆ ಅಮೇಜಾನ್ ನಿಂದ ಖರೀದಿಸುವ ಅವಕಾಶವಿದೆ. ಅಮೇಜಾನ್ ಪೇ ಮೂಲಕ 500 ರುಪಾಯಿಯ ಇನ್ಸೆಂಟ್ ಕ್ಯಾಷ್ ಬ್ಯಾಕ್ ಆಫರ್ ಇದೆ. 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದೆ. ಹಳೆಯ ಡಿವೈಸ್ ನ್ನು ಎಕ್ಸ್ ಚೇಂಜ್ ಮಾಡಿ ಖರೀದಿಸುವುದಾದರೆ 1,500 ರುಪಾಯಿವರೆಗೆ ರಿಯಾಯಿತಿ ಸಿಗುತ್ತದೆ.

ಹುವಾಯಿ ಪಿ30 ಲೈಟ್
ಈ ಡಿವೈಸ್ ನ್ನು ಖರೀದಿಸುವ ಮೂಲಕ ಬಳಕೆದಾರರು 10% ಇನ್ಸೆಂಟ್ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಎಸ್ ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡಿದರೆ ಬೋನಸ್ ಆಫರ್ ಕೂಡ ಸಿಗುತ್ತದೆ. ಇದು 6.15 ಇಂಚಿನ FHD ಡಿಸ್ಪ್ಲೇ ಜೊತೆಗೆ ಡ್ಯೂಡ್ರಾಪ್ ನಾಚ್ ಮತ್ತು 32ಎಂಪಿ ಸೆಲ್ಫೀ ಸ್ನ್ಯಾಪರ್ ನ್ನು ಒಳಗೊಂಡಿರುತ್ತದೆ.

ಹುವಾಯಿ ವೈ9
11,990 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಈ ಡಿವೈಸ್ ನ್ನು ಖರೀದಿಸುವ ಅವಕಾಶವಿದೆ. ಇದು 6.5-ಇಂಚಿನ ಸ್ಕ್ರೀನ್, 4,000mAh ನ ಬ್ಯಾಟರಿ ಸಾಮರ್ಥ್ಯ ಮತ್ತು 12nm ಕಿರಿನ್ 710 ಚಿಪ್ ಸೆಟ್ ನ್ನು ಹೊಂದಿರುತ್ತದೆ.

ಹುವಾಯಿ ಪಿ30 ಪ್ರೋ
ಅಮೇಜಾನ್ ನಲ್ಲಿ ಈ ಫೋನ್ 63,990 ರುಪಾಯಿ ಜೊತೆಗೆ 8,000 ರುಪಾಯಿ ರಿಯಾಯಿತಿಯಲ್ಲಿ ಲಭ್ಯವಿದೆ. 9 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಈ ಡಿವೈಸ್ ಗೆ ಲಭ್ಯವಿದೆ. ಇದರ ಪ್ರಮುಖ ವೈಶಿಷ್ಟ್ಯತೆಯೇನೆಂದರೆ ಕ್ವಾಡ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಹೊಂದಿದೆ.

ಹುವಾಯಿ ಮೇಟ್ 20 ಪ್ರೋ
ಈ ಹ್ಯಾಂಡ್ ಸೆಟ್ ಕೂಡ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು 44,990 ರುಪಾಯಿಗೆ ಖರೀದಿಸಬಹುದು. ಈ ಡಿವೈಸ್ ಖರೀದಿಸುವುದರ ಮೂಲಕ ನಿಮಗೆ 16,990 ರುಪಾಯಿ ಬೆಲೆಬಾಳುವ ಹುವಾಯಿ ಜಿಟಿ ವಾಚ್ ಉಚಿತವಾಗಿ ಸಿಗುತ್ತದೆ. ಇದನ್ನು 7ಎನ್ಎಂ ಚಿಪ್ ಸೆಟ್ ಹೊಂದಿರುವ ವಿಶ್ವದ ಮೊದಲ ಡಿವೈಸ್ ಎಂದು ಪರಿಗಣಿಸಲಾಗಿದೆ.

ಹುವಾಯಿ ಮೀಡಿಯಾ ಪ್ಯಾಡ್ ಟಿ5
ಈ ಟ್ಯಾಬ್ಲೆಟ್ ನಿಮಗೆ 11,990 ಮತ್ತು 13,990 ರುಪಾಯಿಗೆ ಕ್ರಮವಾಗಿ 16ಜಿಬಿ ಮತ್ತು 32ಜಿಬಿ ವೇರಿಯಂಟ್ ಗಳು ಲಭ್ಯವಾಗುತ್ತದೆ. ಇದು 10.1-ಇಂಚಿನ ಡಿಸ್ಪ್ಲೇ ಮತ್ತು ತೆಳುವಾದ, ಭಾರವಿಲ್ಲದ, ಹೆಚ್ಚು ಬಾಳಿಕೆ ಬರುವ ಡಿಸೈನ್ ನ್ನು ಹೊಂದಿದೆ.

ಹುವಾಯಿ ವಾಚ್ ಜಿಟಿ ಸ್ಪೋರ್ಟ್
ಸ್ಪೋರ್ಟ್ಸ್ ವಾಚ್ ನ ಬೆಲೆ 8,990 ರುಪಾಯಿಗಳು ಜೊತೆಗೆ ರಿಯಾಯಿತಿ ಬೆಲೆ 5,991 ರುಪಾಯಿಗಳು. ಇದರಲ್ಲಿ ಅತೀ ಹೆಚ್ಚಿನ ಆಯಸ್ಸು ಹೊಂದಿರುವ ಬ್ಯಾಟರಿ ವ್ಯವಸ್ಥೆ ಇದೆ ಮತ್ತು ವೈಜ್ಞಾನಿಕ ನಿದ್ದೆ ಮಾನಿಟರ್, ಫಿಟ್ನೆಸ್ ಮಾನಿಟರಿಂಗ್, ಇನ್ಫರ್ಮೇಷನ್ ಅಸಿಸ್ಟೆಂಟ್ ಇತ್ಯಾದಿಗಳು ಲಭ್ಯವಿದೆ.

ಹುವಾಯಿ ವಾಚ್ ಜಿಟಿ ಕ್ಲಾಸಿಕ್
ಈ ವಾಚ್ 1.39-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. 24 ಘಂಟೆಗಳ ಹಾರ್ಟ್ ರೇಟ್ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು ದೀರ್ಘಾವಧಿಯ ಬ್ಯಾಟರಿ ಲೈಫ್ ನ್ನು ಹೊಂದಿದೆ. ಇದರ ಬೆಲೆ 11,990 ರುಪಾಯಿಗಳು ಜೊತೆಗೆ 5000 ರುಪಾಯಿಯ ರಿಯಾಯಿತಿ ಇದೆ.


Click it and Unblock the Notifications








