Home
Gadgets

ಗ್ಯಾಜೆಟ್ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಅದ್ಬುತ 'ಬ್ಲೂಟೂತ್ ಹೆಡ್‌ಫೋನ್'!!

ಕೆಲವು ಗ್ಯಾಜೆಟ್‌ಗಳು ಮಾಮೂಲಿ ಎನಿಸಿಸರೆ, ಹಲವು ಗ್ಯಾಜೆಟ್‌ಗಳು ವಿಶೇಷ ಎನಿಸಿಬಿಡುತ್ತವೆ. ಇನ್ನು ಕೆಲವೊಂದು ಗ್ಯಾಜೆಟ್‌ಗಳು ಮಾತ್ರ ಅದ್ಬುತ ಎನಿಸಿ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತವೆ.!!

By Bhaskar N J

ಪ್ರತಿದಿನವೂ ಒಂದೊಂದು ಗ್ಯಾಜೆಟ್ ಒಂದೊಂದು ವಿಭಿನ್ನ ವಿನ್ಯಾಸದಲ್ಲಿ ಮತ್ತು ಅತ್ಯುತ್ತಮ ತಂತ್ರಜ್ಞಾನದಲ್ಲಿ ಮಾರುಕಟ್ಟೆಗೆ ಕಾಲಿಡುತ್ತವೆ!. ಅವುಗಳಲ್ಲಿ ಕೆಲವು ಗ್ಯಾಜೆಟ್‌ಗಳು ಮಾಮೂಲಿ ಎನಿಸಿಸರೆ, ಹಲವು ಗ್ಯಾಜೆಟ್‌ಗಳು ವಿಶೇಷ ಎನಿಸಿಬಿಡುತ್ತವೆ. ಇನ್ನು ಕೆಲವೊಂದು ಗ್ಯಾಜೆಟ್‌ಗಳು ಮಾತ್ರ ಅದ್ಬುತ ಎನಿಸಿ ನಮ್ಮ ಮನಸ್ಸಿನಲ್ಲಿ ಉಳಿದುಬಿಡುತ್ತವೆ.!!

ಹೌದು, ಅದ್ಬುತ ಎನಿಸಿ ನಮ್ಮ ಮನಸ್ಸಿನಲ್ಲಿ ಉಳಿದುಬಿಡುವ ವಿಭಿನ್ನವಾದ, ವಿಶೇಷವಾದ ಬ್ಲೂಟೂತ್ ಹೆಡ್‌ಫೋನ್ ಒಂದು ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಐರಿಸ್ ಕಂಪೆನಿ ತಯಾರಿಸಿರುವ ಅತ್ಯುನ್ನತ ತಂತ್ರಜ್ಞಾನದ ನೂತನ ಬ್ಲೂಟೂತ್ ಹೆಡ್‌ಫೋನ್ ಒಂದು ತನ್ನ ಬಹು ವಿಶೇಷತೆಗಳಿಂದಲೇ ಟೆಕ್ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.!!

ಗ್ಯಾಜೆಟ್ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಅದ್ಬುತ ಹೆಡ್‌ಫೋನ್'!!

ಸಂಗೀತ ಕೇಳುತ್ತಿದ್ದಾಗ ಯಾರಾದರೂ ಮಧ್ಯ ಮಾತನಾಡಿದರೂ ಇದನ್ನು ಕಿವಿಯಿಂದ ಬಿಚ್ಚುವ ಅವಶ್ಯಕತೆಯಿಲ್ಲದ ಈ ಹೆಡ್‌ಫೋನ್ ಈವರೆಗಿನ ಎಲ್ಲಾ ಹೆಡ್‌ಫೋನ್‌ಗಳಿಂತಲೂ ವಿಶೇಷವಾಗಿ ಮೂಡಿಬಂದಿದೆ.!! ಹಾಗಾದರೆ, ಯಾವುವು ಈ ಹೆಡ್‌ಫೋನ್? ಹೆಡ್‌ಫೋನ್‌ ವಿಶೇಷತೆಗಳೇನು? ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಹೆಡ್‌ಬ್ಯಾಂಡ್ ಲೆಸ್ ಹೆಡ್‌ಫೋನ್!!

ಹೆಡ್‌ಬ್ಯಾಂಡ್ ಲೆಸ್ ಹೆಡ್‌ಫೋನ್!!

ಐರಿಸ್ ಕಂಪೆನಿ ತರಯಾರಿಸಿರುವ ನೂತನ ಹೆಡ್‌ಫೋನ್ ಹೆಡ್‌ಬ್ಯಾಂಡ್ ಲೆಸ್ ಹೆಡ್‌ಫೋನ್ ಆಗಿದೆ. ಫ್ಲೆಕ್ಸಿಬಿಲಿಟಿ ಬಯಸುವ ಯುವಜನರಿಗೆ ಹೆಚ್ಚು ಇಷ್ಟವಾಗುವ ರೀತಿಯಲ್ಲಿ ಹೆಡ್‌ಫೋನ್ ಅನ್ನು ರೂಪಿಸಲಾಗಿದೆ. ಈ ಇಷ್ಟವನ್ನು ಉದ್ದೇಶವಾಗಿಟ್ಟುಕೊಂಡೇ ಹೆಡ್‌ಬ್ಯಾಂಡ್‌ ಲೆಸ್ ಐರಿಸ್ ಹೆಡ್‌ಪೋನ್ ಮಾರುಕಟ್ಟೆಗೆ ಬರುತ್ತಿದೆ.!!

ಗುಣಮಟ್ಟದ ಸಂಗೀತ ಆಲಿಕೆ!!

ಗುಣಮಟ್ಟದ ಸಂಗೀತ ಆಲಿಕೆ!!

ನೂತನವಾಗಿ ವಿನ್ಯಾಸಗೊಂಡಿರುವ ಈ ಹೆಡ್‌ಬ್ಯಾಂಡ್ ಲೆಸ್ ಹೆಡ್‌ಫೋನ್ ಅತ್ಯುತ್ತಮ ಗುಣಮಟ್ಟದ ಸಂಗೀತವನ್ನು ಆಲಿಸಲು ಸಹಕಾರಿಯಾಗಿದೆ. ಕಡಿಮೆ ಡೆಸಿಬಲ್‌ನಲ್ಲಿ ಯಾವುದೇ ಕರ್ಕಶವಿಲ್ಲದೇ ಸಂಗೀತವನ್ನು ನೀಡುವ ಅತ್ಯುತ್ತಮ ತಂತ್ರಜ್ಞಾನವನ್ನು ಈ ಹೆಡ್‌ಫೋನಿನಲ್ಲಿ ಅಳವಡಿಸಲಾಗಿದೆ.!!

ಕಿವಿಯಿಂದ ಬಿಚ್ಚುವ ಅವಶ್ಯಕತೆಯಿಲ್ಲ!!

ಕಿವಿಯಿಂದ ಬಿಚ್ಚುವ ಅವಶ್ಯಕತೆಯಿಲ್ಲ!!

ಸಂಗೀತವನ್ನು ಆಲಿಸುವಾಗ ಯಾರಾದರೂ ಯಾರಾದರೂ ಮಧ್ಯ ಮಾತನಾಡಿದರೂ ಹೆಡ್‌ಫೋನ್ ಅನ್ನು ಕಿವಿಯಿಂದ ಬಿಚ್ಚುವ ಅವಶ್ಯಕತೆಯಿಲ್ಲ.! ಕೇವಲ ಹೆಡ್‌ಫೋನ್ ಮೇಲೆ ಮೇಲಿನಿಂದ ಕೆಳಗೆ ಸ್ವೈಪ್ ಮಾಡಿದರೆ ಎರಡೂ ಬದಿಯ ಹೆಡ್‌ಫೋಫನ್ ಕಟಕಿಗಳು ತೆರೆದುಕೊಳ್ಳುತ್ತವೆ ಮತ್ತು ಸಂಗೀತವು ನಿಲ್ಲುತ್ತದೆ.!!

ಮ್ಯಾಗ್‌ನೆಟ್ ಕ್ಲಿಪ್!!

ಮ್ಯಾಗ್‌ನೆಟ್ ಕ್ಲಿಪ್!!

ಎರಡೂ ಬದಿಯ ಸ್ಪೀಕರ್‌ಗಳು ಮ್ಯಾಗ್‌ನೆಟ್ ಕ್ಲಿಪ್‌ಗಳನ್ನು ಹೊಂದಿರುತ್ತವೆ. ಬಳಕೆದಾರರು ಹೆಡ್‌ಫೋನ್ ಅನ್ನು ಕಿವಿಗೆ ಹಾಕಿಕೊಳ್ಳುವಾಗ ಮ್ಯಾಗ್‌ನೆಟ್ ಕ್ಲಿಪ್ ತೆರೆದು ಹಾಕಿಕೊಳ್ಳಬೇಕು. ಹಾಗೇಯೇ ಬಿಚ್ಚಿಡುವಾಗ ಮ್ಯಾಗ್‌ನೆಟ್ ಕ್ಲಿಪ್ ಅಂಟಿಸಿ ಇಟ್ಟರೆ ಸಾಕು ಹೆಡ್‌ಪೋನ್ ಎರಡೂ ಧೂಳುಹಿಡಿಯದಂತೆ ಮುಚ್ಚಿಕೊಳ್ಳುತ್ತವೆ.!!

ವೈರ್‌ಲೆಸ್ ಚಾರ್ಜಿಂಗ್!!

ವೈರ್‌ಲೆಸ್ ಚಾರ್ಜಿಂಗ್!!

ಐರಿಸ್ ಕಂಪೆನಿಯ ಈ ಹೆಡ್‌ಪೋನ್ ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರಲಿದೆ ಎನ್ನಲಾಗಿದೆ. ಕನಿಷ್ಟ 4 ಗಂಟೆಗೂ ಹೆಚ್ಚಿಗೆ ಸಂಗೀತ ಆಲಿಸಬಹುದಾದ ಬ್ಯಾಟರಿ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ ಕಿವಿಗಳಿಗೆ ನಿಖರವಾಗಿ ಕೂರುತ್ತವೆ ಎಂದು ಹೇಳಲಾಗಿರುವ ಈ ಬ್ಲೂಟೂತ್ ಹೆಡ್‌ಫೋನ್ ಬೆಲೆ ಇನ್ನು ನಿಗದಿಯಾಗಿಲ್ಲ.!!

Best Mobiles in India

English summary
wireless earbuds with the isolation and audio quality of on-ear phones. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+