Home
Gadgets

ಬಡವರ ಫೋನ್! ಜಸ್ಟ್ ರೂ.999.. ಹೊಸ ಫೋನ್‌ ಬಿಡುಗಡೆ

ನೋಕಿಯಾ ಕಂಪನಿ ಹೆಸರಿನಲ್ಲಿ ಅಲ್ಲ! ಎಚ್‌ಎಂಡಿ (HMD) ಸ್ಮಾರ್ಟ್‌ಫೋನ್‌ ಕಂಪನಿ ತನ್ನ ಮೊದಲ ಫೀಚರ್ ಫೋನ್‌ಗಳಾದ ಎಚ್‌ಎಂಡಿ 105 (HMD 105) ಮತ್ತು ಎಚ್‌ಎಂಡಿ 110 (HMD 110) ಎಂಬ ಎರಡು ಫೀಚರ್ ಫೋನ್‌ಗಳನ್ನುಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡೂ ಮೊಬೈಲ್‌ಗಳು ಕನ್ನಡವೂ ಸೇರಿದಂತೆ 9 ಸ್ಥಳೀಯ ಭಾಷೆಗಳನ್ನು ಮತ್ತು ರೆಂಡರಿಂಗ್‌ಗಾಗಿ 23 ಭಾಷೆಗಳನ್ನು ಬೆಂಬಲಿಸುತ್ತವೆ. ವಿಶೇಷವೆಂದರೆ ಇಂಟರ್‌ನೆಟ್‌ನ ಅಗತ್ಯ ಇಲ್ಲದೆಯೇ ಈ ಫೋನ್‌ಗಳಲ್ಲಿ ಯುಪಿಐ ಸೇವೆಯನ್ನು ಬಳಸಬಹುದು. ಹಾಗಿದ್ರೆ, ಈ ಫೀಚರ್ ಫೋನ್‌ಗಳ ಬೆಲೆ ಎಷ್ಟು? ಮತ್ತು ಫೀಚರ್‌ಗಳೇನು? ತಿಳಿಯೋಣ ಬನ್ನಿ.

ನೋಕಿಯಾ ಫೋನ್ ತಯಾರಿಕಾ ಕಂಪನಿ HMD ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಎರಡು ಹೊಸ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎರಡೂ ಫೀಚರ್ ಫೋನ್‌ಗಳನ್ನು ನೋಕಿಯಾ ಬಿಡುಗಡೆ ಮಾಡಿಲ್ಲ. ಆದರೆ HMD, HMD 105 ಮತ್ತು HMD 110 ಎಂಬ ಹೆಸರಿನಿಂದ ಅನಾವರಣ ಮಾಡಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ, ಎರಡೂ ಮಾದರಿಗಳು ಅಂತರ್ನಿರ್ಮಿತ UPI ಅಪ್ಲಿಕೇಶನ್ ಅನ್ನು ಹೊಂದಿವೆ. ಇದರ ಸಹಾಯದಿಂದ ನೀವು ಸುಲಭವಾಗಿ UPI ಅನ್ನು ಬಳಸಬಹುದು, ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.

HMD feature Phones: ಬಡವರ ಫೋನ್! ಜಸ್ಟ್ ರೂ.999.. ಹೊಸ ಫೋನ್‌ ಲಾಂಚ್

HMD 105 ಮತ್ತು HMD 110ನ ಫೀಚರ್‌ಗಳು

HMD 105 ಮತ್ತು HMD 110 ಈ ಎರಡೂ ಮೊಬೈಲ್‌ಗಳು ಪ್ರೀಮಿಯಂ ವಿನ್ಯಾಸ ಹೊಂದಿವೆ. ಬಳಕೆದಾರರ ಕೈಯಲ್ಲಿ ಆರಾಮದಾಯಕವಾಗಿ ಇರುವಂತೆ ಮತ್ತು ಅನುಕೂಲಕರ ಗಾತ್ರದಲ್ಲಿ ಈ ಪೋನ್‌ಗಳನ್ನು ತಯಾರಿಸಲಾಗಿದೆ. ಈ ಫೋನ್ ಟಾಕರ್, ಕಾಲ್ ರೆಕಾರ್ಡಿಂಗ್, ಎಂಪಿ3 ಪ್ಲೇಯರ್, ವಯರ್ಡ್ ಮತ್ತು ವೈರ್‌ಲೆಸ್ ಎಫ್‌ಎಂ ರೇಡಿಯೊ, ಎಚ್‌ಎಂಡಿ 105-ಗೆ ಶಕ್ತಿಯುತ ಡ್ಯುಯಲ್ ಎಲ್‌ಇಡಿ ಫ್ಲ್ಯಾಷ್, ಎಚ್‌ಎಂಡಿ 110-ಗೆ ಪ್ರೀಮಿಯಂ ಕ್ಯಾಮೆರಾ ವಿನ್ಯಾಸ ಒಳಗೊಂಡಿದೆ.

HMD 105 ಮತ್ತು HMD 110 ಫೀಚರ್ ಫೋನ್‌ಗಳು 1,000 1000 mAh ಬ್ಯಾಟರಿ ಬ್ಯಾಕಪ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 18 ದಿನಗಳವರೆಗೆ ವಿಸ್ತ್ರತ ಸ್ಟ್ಯಾಂಡ್‌ಬೈ ಸಮಯವನ್ನು ನೀಡುತ್ತದೆ. ಎರಡೂ ಫೀಚರ್ ಫೋನ್‌ಗಳು ಕನ್ನಡವೂ ಸೇರಿದಂತೆ 9 ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತವೆ. ಜೊತೆಗೆ, 23 ಭಾಷೆಗಳ ಬೆಂಬಲವನ್ನು HMD ಒದಗಿಸಿದೆ.

HMD 105 ಮತ್ತು HMD 110 ಬೆಲೆ ಎಷ್ಟು?

HMD 105 ಫೀಚರ್ ಫೋನ್‌ ಬೆಲೆಯನ್ನು 999 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಇನ್ನೂ, HMD 110 ಫೀಚರ್ ಫೋನ್‌ ಬೆಲೆಯನ್ನು 1,199 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. HMD 105 ಫೀಚರ್ ಫೋನ್ ಅನ್ನು ಮೂರು ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಎಚ್‌ಎಂಡಿ 105 ಫೋನ್ ಭಾರತದಲ್ಲಿ ಕಪ್ಪು, ನೇರಳೆ ಮತ್ತು ನೀಲಿ ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಎಚ್‌ಎಂಡಿ 110 ಫೋನ್ ಕಪ್ಪು ಮತ್ತು ಹಸಿರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

HMD 105 ಮತ್ತು HMD 110 ಖರೀದಿ ಹೇಗೆ?

ಭಾರತದಲ್ಲಿ ಈ ಫೀಚರ್ ಫೋನ್‌ಗಳ ಲಭ್ಯತೆಯ ಬಗ್ಗೆ ಹೇಳುವುದಾದರೆ, ಎರಡೂ ಫೀಚರ್‌ ಫೋನ್‌ಗಳನ್ನು ಇ-ಕಾಮರ್ಸ್ ಅಂತರ್ಜಾಲ ತಾಣಗಳಲ್ಲಿ (ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು), ಎಲ್ಲಾ ರಿಟೇಲ್ ಮಳಿಗೆಗಳಲ್ಲಿ ಮತ್ತು HMDಯ ಅಧಿಕೃತ ಸೈಟ್‌ HMD.com ನಲ್ಲಿ ಖರೀದಿಗೆ ಲಭ್ಯ ಇರಲಿವೆ. ಎರಡೂ ಫೀಚರ್‌ ಫೋನ್‌ಗಳು ಕಂಪನಿಯಿಂದ 1 ವರ್ಷದ ಬದಲಿ ಗ್ಯಾರಂಟಿಯನ್ನು ಪಡೆದಿವೆ. ಫಿನ್ಸೆಂಡ್ ಮೂಲದ ಎಚ್‌ಎಂಡಿ ಕಂಪನಿ, ನೋಕಿಯಾ ಕಂಪನಿಯ ಸ್ಮಾರ್ಟ್‌ಫೋನ್ ಹಾಗೂ ಫೀಚರ್ ಫೋನ್‌ಗಳನ್ನು ಬ್ರಾಂಡಿಂಗ್ ಮಾಡಿ ಮಾರಾಟ ಮಾಡುತ್ತದೆ.

ಫೀಚರ್ ಫೋನ್‌ಗಳ ಬಿಡುಗಡೆ ಬಗ್ಗೆ HMD ಗ್ಲೋಬಲ್‌ನ ಭಾರತ ಹಾಗೂ ಎಪಿಎಸಿ ಉಪಾಧ್ಯಕ್ಷ ರವಿ ಕುನ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. HMD 105 ಮತ್ತು HMD 110 ಫೀಚ‌ರ್ ಫೋನ್‌ಗಳು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ ನಮ್ಮ ಮೊದಲ ಫೀಚ‌ರ್ ಫೋನ್‌ಗಳಾಗಿವೆ. ಹೊಸ ತಂತ್ರಜ್ಞಾನದ ಪ್ರಯೋಜನಗಳನ್ನು ಗ್ರಾಹಕರಿಗೆ ಸುಲಭವಾಗಿ ತಲುಪಿಸುವ ನಮ್ಮ ಬದ್ಧತೆಗೆ ಈ ಫೋನ್‌ಗಳು ನಿದರ್ಶನಗಳಾಗಿವೆ ಎಂದು ಹೇಳಿದ್ದಾರೆ.

Best Mobiles in India

English summary
HMD Global introduced its first set of HMD-branded feature phones, the HMD 105 and the HMD 110, on Tuesday. With a starting price of Rs 999 with built-in UPI payment app debut in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+