ಸೆಲ್ಫ್ ಬ್ಯಾಲೆಂನ್ಸಿಂಗ್ ಬೈಕ್: ಆಕ್ಸಿಡೆಂಟ್ ಆದ್ರೂ ನೆಲಕ್ಕೆ ಬೀಳದ ತಂತ್ರಜ್ಞಾನ..!
ದೊಡ್ಡ ಪ್ರಮಾಣದ ನಿರೀಕ್ಷೆಗಳು ಇದೆ. ಈಗಾಗಲೇ ಖ್ಯಾತ ಕಂಪನಿಗಳೆಲ್ಲವೂ ದೊಡ್ಡ ಪ್ರಮಾಣದ ಹೂಡಿಕೆಯನ್ನು ಮಾಡಿ ಸೆಲ್ಫ್ ಡ್ರೈವಿಂಗ್ ಕಾರುಗಳನ್ನು ನಿರ್ಮಾಣ ಮಾಡುತ್ತಿವೆ. ಇದೇ ಮಾದರಿಯಲ್ಲಿ ಬೈಕ್ ನಿರ್ಮಾಣದಲ್ಲಿ ಖ್ಯಾತಿಯನ್ನು ಪಡೆದುಕೊಂಡಿರುವ ಹೊಂಡ ಕಂಪನಿಯೂ ಸೆಲ್ಪ್ ಬ್ಯಾಲೆಂನ್ಸಿಂಗ್ ಬೈಕ್ ನಿರ್ಮಾಣಕ್ಕೆ ಮುಂದಾಗಿದ್ದು, ಶೀಘ್ರವೇ ಲಾಂಚ್ ಮಾಡಲಿದೆ ಎನ್ನಲಾಗಿದೆ.

ಸದ್ಯ ರಸ್ತೆ ಅಪಘಾತಗಳಲ್ಲಿ ಬೈಕ್ ನಿಂದ ಬಿದ್ದು ಸಾಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಮಾದರಿಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೊಂಡಾ ಬೈಕ್ ಅನ್ನು ನಿರ್ಮಾಣ ಮಾಡಿದೆ ಎನ್ನಲಾಗಿದೆ. ಈ ಬೈಕ್ ಏನೇ ಮಾಡಿದರು ಕೆಳಗೆ ಬಿಳುವುದಿಲ್ಲ ಎನ್ನಲಾಗಿದ್ದು, ಇದಕ್ಕಾಗಿ ರೆಡಿಂಗ್ ಅಸಿಸ್ಟ್ ಟೆಕ್ನಾಲಜಿಯನ್ನು ಬಳಕೆ ಮಾಡಿಕೊಂಡಿದೆ. ಇದು ಸೆಲ್ಫ್ ಬ್ಯಾಲೆಂಸ್ಸಿಂಗ್ ಮಾಡಲಿದೆ ಎಂದು ಹೊಂಡ ತಿಳಿಸಿದೆ. ಇದಲ್ಲದೇ ಇದರಲ್ಲಿ ಸ್ಮಾರ್ಟ್ ಆಯ್ಕೆಗಳನ್ನು ಕಾಣಬಹುದಾಗಿದೆ.

ರೈಡ್ ಅಸಿಸ್ಟ್:
ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಬೇಡಿಕೆಯೂ ಹೆಚ್ಚಾಗಿರುವ ಕಾರಣದಿಂದಾಗಿ ಹೊಂಡಾ ಹೊಸದಾಗಿ ರೈಡ್ ಅಸಿಸ್ಟ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದೆ. ಇದು ಬೈಕ್ ಆಯಾ ತಪ್ಪುವುದನ್ನು ತಪ್ಪಿಸಲಿದೆ ಎನ್ನಲಾಗಿದೆ. ಇದರಿಂದಾಗಿ ಬೈಕ್ ಸವಾರರಿಗೆ ಬೈಕ್ ನಿಂದ ಬೀಳುವ ಭಯವಿರುವುದಿಲ್ಲ ಎನ್ನಲಾಗಿದೆ.
ಸೆಲ್ಫ್ ಡ್ರೈವಿಂಗ್:
ಇದಲ್ಲದೇ ಹೊಂಡಾ ಹೊಸದಾಗಿ ವಿನ್ಯಾಸ ಮಾಡಿರುವ ಬೈಕ್‌ನಲ್ಲಿ ಸೆಲ್ಪ್ ಡ್ರೈವಿಂಗ್ ಕಾಣಬಹುದಾಗಿದೆ. ನೀವು ಇರುವ ಕಡೆಗೆ ಬೈಕ್ ಅನ್ನು ಬರುವಂತೆ ಆಜ್ಞೆ ಮಾಡಿದರೆ ಅದರೆ ನಮ್ಮ ಹಿಂಬಾಲಿಸಿಕೊಂಡು ಬರುವಂತೆ ವಿನ್ಯಾಸ ಮಾಡಲಾಗಿದೆ. ಇದು ಬೈಕ್ ವಿನ್ಯಾಸದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡಲಿದೆ.

ಮುಂದಿನ ಬೈಕ್‌ಗಳಲ್ಲಿ:
ಹೊಂಡಾ ಮುಂದೆ ಬಿಡುಗಡೆ ಮಾಡುವ ಬೈಕ್‌ಗಳಲ್ಲಿ ಈ ಹೊಸ ತಂತ್ರಜ್ಞಾನವನ್ನು ಅಳವಡಿಸಲಿದೆ ಎನ್ನಲಾಗಿದೆ. ಆದರೆ ಇದು ದುಬಾರಿ ಬೆಲೆಯ ಸ್ಪೋಡ್ಸ್ ಬೈಕ್ ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳಲಿದೆ. ಕಾರಣ ಈ ತಂತ್ರಜ್ಞಾನದ ಅಭಿವೃದ್ಧಿಗೆ ಸಾಕಷ್ಟು ವೆಚ್ಚವನ್ನು ಮಾಡಲಾಗಿದೆ.

ಕೈ ಬಿಟ್ಟು ಓಡಿಸಬಹುದು:
ಹೊಂಡ ಹೊಸದಾಗಿ ಅಭಿವೃದ್ಧಿ ಮಾಡಿರುವ ತಂತ್ರಜ್ಞಾನದಲ್ಲಿ ಬಳಕೆದಾರರಿಗೆ ಕೈ ಬಿಟ್ಟು ಬೈಕ್ ರೈಡ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಂದರೆ ಬಳಕೆದಾರರ ಸೆಫ್ಟಿಗಾಗಿ. ಶೋಕಿಗೆ ಬಳಕೆ ಮಾಡದಂತೆ ವಿನ್ಯಾಸ ಮಾಡಿದೆ ಎನ್ನಲಾಗಿದೆ. ಇದಲ್ಲದೇ ಇದು ಬಳಕೆದಾರರ ಸೆಫ್ಟಿಗಾಗಿಯೇ ನಿರ್ಮಿಸಲಾಗಿದೆ.

ಈಗಾಗಲೇ ಟೆಸ್ಟ್:
ಸೆಲ್ಪ್ ಬ್ಯಾಲೆಂನ್ಸಿಂಗ್ ಬೈಕ್ ಅನ್ನು ಅಭಿವೃದ್ಧಿ ಮಾಡಿರುವ ಹೊಂಡಾ, ಈಗಾಗಲೇ ಇದನ್ನು ಪರೀಕ್ಷೆಯನ್ನು ಮಾಡಿದೆ ಎನ್ನಲಾಗಿದೆ. ಇದಕ್ಕಾಗಿಎ ಬೈಕ್ ಹಾಂಡಲ್ ನಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಇದಲ್ಲದೇ ಇದು ಸ್ಮಾರ್ಟ್ ಬೈಕ್ ಮಾದರಿಯಲ್ಲಿಯೂ ಕಾರ್ಯನಿರ್ವಹಿಲಿದ್ದು, ಇದು ಸ್ಮಾರ್ಟ್‌ಫೋನ್ ನೊಂದಿಗೆ ಕನೆಕ್ಟ್ ಆಗಲಿದೆ ಎನ್ನಲಾಗಿದೆ.


Click it and Unblock the Notifications








