ಸೆಪ್ಟೆಂಬರ್ 5ಕ್ಕೆ ಲಾಂಚ್ ಆಗಲಿದೆ ಹಾನರ್ ಬ್ಯಾಂಡ್ 4..!
ಸೆಪ್ಟೆಂಬರ್ 5 ಕ್ಕೆ ಹುವಾಯಿಯ ಸಬ್ ಬ್ರ್ಯಾಂಡ್ ಆಗಿರುವ ಹಾನರ್ ಎರಡು ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುತ್ತಿದೆ. ಹಾನರ್ ಮಾಡಿರುವ ಹೊಸ ಪ್ರಕಟಣೆಯಲ್ಲಿ ಹೊಸ ಸ್ಮಾರ್ಟ್ ಬ್ಯಾಂಡ್ ಹಾನರ್ ಬ್ಯಾಂಡ್ 4 ನ್ನು ಅದೇ ದಿನ ಬಿಡುಗಡೆಗೊಳಿಸುವುದಾಗಿ ಸಂಸ್ಥೆ ಹೇಳಿದೆ. ಇದನ್ನು ಪ್ರಕಟ ಮಾಡಲು ಹಾನರ್ ಸಂಸ್ಥೆ ಮೈಕ್ರೋ ಬ್ಲಾಗ್ಲಿಂಗ್ ವೆಬ್ ಸೈಟ್ Weibo ವನ್ನು ಬಳಸಿಕೊಂಡಿದೆ.


ಎರಡು ವಿಭಿನ್ನ ಎಡಿಷನ್ ಗಳಲ್ಲಿ ಹಾನರ್ ಬ್ಯಾಂಡ್ 4:
ಕಳೆದ ವರ್ಷ ಬಿಡುಗಡೆಗೊಂಡಿದ್ದ ಹಾನರ್ ಬ್ಯಾಂಡ್ 3 ಸಕ್ಸಸರ್ ಹಾನರ್ ಬ್ಯಾಂಡ್ 4 ಆಗಿದ್ದು ಎರಡು ವಿಭಿನ್ನ ಬಣ್ಣಗಳಲ್ಲಿ ಮಾರುಕಟ್ಟೆಗೆ ಎಂಟ್ರಿಯಾಗಲಿದೆ. ರೆಗ್ಯುಲರ್ ಎಡಿಷನ್ ಮತ್ತು ಸ್ಪೆಷಲ್ ರನ್ನಿಂಗ್ ಎಡಿಷನ್ ಎಂದು ಇದನ್ನು ನಾಮಕರಣ ಮಾಡಲಾಗಿದೆ. ಮೊದಲನೆಯದು ಮಾಮೂಲಿನಂತೆಯೇ ಇರುತ್ತದೆ. ಆದರೆ ಸ್ವಲ್ಪ ವಿಭಿನ್ನ ಇದನ್ನು ನೀವು ನಿಮ್ಮ ಶೂಗಳಿಗೆ ಹಾಕಿಕೊಳ್ಳಬಹುದು.

ಸ್ಮಾರ್ಟ್ ಬ್ಯಾಂಡ್ ವೈಶಿಷ್ಟ್ಯತೆಗಳು:
NFC, ಸ್ಲೀಪ್ ಟ್ರ್ಯಾಕಿಂಗ್, ಹಾರ್ಟ್ ರೇಟ್ ಮಾನಿಟರಿಂಗ್ ಮತ್ತು ಓಡುವುದು ಮತ್ತು ಈಜುವ ಆಕ್ಟಿವಿಟಿಯ ಟ್ರ್ಯಾಕ್ ಇಟ್ಟುಕೊಳ್ಳುವ ಸಾಮರ್ಥ್ಯವನ್ನು ಈ ಸ್ಮಾರ್ಟ್ ಬ್ಯಾಂಡ್ ಹೊಂದಿರುತ್ತದೆ ಎಂದು ಹಾನರ್ ಸಂಸ್ಥೆ ತಿಳಿಸಿದೆ. ಡಿಸೈನ್ ಬಗ್ಗೆ ಹೇಳುವುದಾದರೆ ಹಾನರ್ ಬ್ಯಾಂಡ್ 4 ನಲ್ಲಿ ಕಲರ್ ಡಿಸ್ಪ್ಲೇ ಇರಲಿದೆ ಮತ್ತು ಹಾನರ್ ಬ್ಯಾಂಡ್ 3 ಯಂತೆ ಸರ್ಕ್ಯುಲರ್ ಆಗಿರುವ ಬಾಟಮ್ ಇರುತ್ತದೆ.

ಸ್ಮಾರ್ಟ್ ಬ್ಯಾಂಡ್ ನ ಬೆಲೆ ಎಷ್ಟಿರುತ್ತದೆ?
ಇದುವರೆಗೂ ಸ್ಮಾರ್ಟ್ ಬ್ಯಾಂಡ್ ನ ಬೆಲೆ ಎಷ್ಟಾಗಿರುತ್ತದೆ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಆದರೆ ಶಿಯೋಮಿ ಎಂಐ 3 ಸ್ಮಾರ್ಟ್ ಬ್ಯಾಂಡ್ ನೊಂದಿಗೆ ಸ್ಪರ್ಧೆಗಿಳಿಯುವ ಸ್ಮಾರ್ಟ್ ಬ್ಯಾಂಡ್ ಇದಾಗಿರುವುದರಿಂದಾಗಿ ಹೆಚ್ಚು ಕಡಿಮೆ 3,490 ರುಪಾಯಿ ಅಂದಾಜಿಸಲಾಗಿದೆ.

ಹಾನರ್ ಬ್ಯಾಂಡ್ 3
ಹಾನರ್ ಸಂಸ್ಥೆ ತನ್ನ ಹಾನರ್ ಬ್ಯಾಂಡ್ 3 ಯನ್ನು 2017 ರ ಜೂನ್ ನಲ್ಲಿ ಬಿಡುಗಡೆಗೊಳಿಸಿತ್ತು ಮತ್ತು ಅದರ ಭಾರತೀಯ ಬೆಲೆ 2,799 ರುಪಾಯಿಗಳು. ಈ ಬ್ಯಾಂಡ್ 0.91-ಇಂಚಿನ POLED ಡಿಸ್ಪ್ಲೇ ಜೊತೆಗೆ 128x32 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ಹಾರ್ಟ್ ರೇಟ್ ಮಾನಿಟರ್ ಮತ್ತು 50 ಮೀಟರ್ ವರೆಗೆ ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯವನ್ನು ಇದು ಹೊಂದಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಬಳಕೆ ಮಾಡಲು ಇದು ಯೋಗ್ಯವಾಗಿದೆ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿಗೂ ಇದು ಬೆಂಬಲ ನೀಡುತ್ತದೆ. ವಿಭಿನ್ನ ಬಣ್ಣಗಳ ಆಯ್ಕೆಯಲ್ಲೂ ಇದು ದೊರೆಯುತ್ತಿತ್ತು ಅದರಲ್ಲಿ ಡೈನಾಮಿಕ್ ಆರೆಂಜ್, ಕ್ಲಾಸಿಕ್ ನೇವಿ ಬ್ಲೂ ಮತ್ತು ಕಾರ್ಬನ್ ಬ್ಲಾಕ್ ಆಗಿತ್ತು.


Click it and Unblock the Notifications








