ಬಂತು ಸೊಗಸಾದ HONOR ಟ್ಯಾಬ್; 10,100mAh ಬ್ಯಾಟರಿ.. 8 ಸ್ಪೀಕರ್‌ಗಳು.. ಬೆಲೆ ಎಷ್ಟು ಗೊತ್ತಾ?
ಹಾನರ್ ಕಂಪನಿಯು ಹೊಸ ಹಾನರ್ ಪ್ಯಾಡ್ V9 (HONOR Pad V9 Tablet) ಬಿಡುಗಡೆ ಮಾಡಿದೆ. ಕಂಪನಿಯು ಕಳೆದ ವರ್ಷ ಇದನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿತ್ತು. ಇದು ಹಾನರ್ ಸಂಸ್ಥೆಯ ಪ್ರಮುಖ ಟ್ಯಾಬ್ಲೆಟ್ ಆಗಿದೆ. ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಟ್ಯಾಬ್ 10,100mAh ಶಕ್ತಿಶಾಲಿ ಬ್ಯಾಟರಿ ಹೊಂದಿದೆ. ಇದರೊಂದಿಗೆ ಸ್ಯಾಮ್‌ಸಂಗ್‌ನಂತೆ, ಮ್ಯಾಜಿಕ್ ಪೆನ್ಸಿಲ್ 3ಗೆ ಬೆಂಬಲ ಪಡೆದಿದೆ. ಬನ್ನಿ, ಈ ಹೊಸ ಹಾನರ್ ಪ್ಯಾಡ್ V9 ಟ್ಯಾಬ್‌ನ ಬೆಲೆ ಮತ್ತು ಮತ್ತಷ್ಟು ವಿಶೇಷತೆಗಳನ್ನು ತಿಳಿಯೋಣ.
ಹಾನರ್ ಸಂಸ್ಥೆಯು ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ (MWC) ತನ್ನ ನೂತನ ಟ್ಯಾಬ್ಲೆಟ್ ಅನ್ನು ಜಾಗತಿಕವಾಗಿ ಬಿಡುಗಡೆ ಮಾಡಿದೆ. ಈ ಹಾನರ್ ಪ್ಯಾಡ್ V9 ಟ್ಯಾಬ್ 8 ಸ್ಪೀಕರ್‌ಗಳು ಸೇರಿದಂತೆ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಡೈಮೆನ್ಸಿಟಿ 8350 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಟ್ಯಾಬ್ 144Hz ರಿಫ್ರೆಶ್ ದರ ಬೆಂಬಲವನ್ನು ಹೊಂದಿದೆ. ಇದು 2.8K ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಅಲ್ಲದೆ ಇದು 6.1mm ದಪ್ಪ ಮತ್ತು 475 ಗ್ರಾಂ ತೂಕವಿದೆ. ಈ ಟ್ಯಾಬ್‌ನಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ.

ಹಾನರ್ ಪ್ಯಾಡ್ V9 ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹಾನರ್ ಪ್ಯಾಡ್ V9 ಟ್ಯಾಬ್ 11.5 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ದರ ಬೆಂಬಲವನ್ನು ಹೊಂದಿದೆ. ಅಲ್ಲದೆ ಈ ಡಿಸ್ಪ್ಲೇ 2.8K ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಫೋನ್ 500 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದರ ಸ್ಕ್ರೀನ್ ಟು ಬಾಡಿ ಅನುಪಾತವು ಶೇ. 88 ರಷ್ಟಿದೆ. ಈ ಟ್ಯಾಬ್ TUV ರೈನ್‌ಲ್ಯಾಂಡ್ ಪ್ರಮಾಣೀಕೃತ ಡಿಸ್ಪ್ಲೇ ಆಗಿದೆ. ಇದು ಎಐ (AI) ಚಾಲಿತ ಕಣ್ಣಿನ ಆರಾಮ ಮೋಡ್ ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಹೊಸ ಹಾನರ್ ಪ್ಯಾಡ್ V9 ಟ್ಯಾಬ್ ಡೈಮೆನ್ಸಿಟಿ 8350 ಎಲೈಟ್ ಪ್ರೊಸೆಸರ್ ಹೊಂದಿದೆ. ಈ ಟ್ಯಾಬ್ ಆಂಡ್ರಾಯ್ಡ್ 9.0 ಆಧಾರಿತ ಮ್ಯಾಜಿಕ್ಓಎಸ್ 15 ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಟ್ಯಾಬ್‌ನೊಂದಿಗೆ ಸ್ಮಾರ್ಟ್ ಬ್ಲೂಟೂತ್ ಕೀಬೋರ್ಡ್ ಮತ್ತು ಮ್ಯಾಜಿಕ್ ಪೆನ್ಸಿಲ್ 3 ಬೆಂಬಲವನ್ನು ಒದಗಿಸಲಾಗಿದೆ. ಈ ಟ್ಯಾಬ್ ಬಯೋಮೆಟ್ರಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಬೆಂಬಲದೊಂದಿಗೆ ಬರುತ್ತದೆ.

ಕ್ಯಾಮೆರಾ ಸೆಟಪ್
ಹಾನರ್ ಪ್ಯಾಡ್ V9 ಟ್ಯಾಬ್‌ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಈ ಟ್ಯಾಬ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಇದು 30fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಸಪೋರ್ಟ್ ಮಾಡುತ್ತದೆ. ಈ ಟ್ಯಾಬ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಹಾನರ್ ಪ್ಯಾಡ್ V9 ಟ್ಯಾಬ್ಲೆಟ್ 10,00mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 66W ವೇಗದ ಟರ್ಬೊ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಟ್ಯಾಬ್ SGS ಗೋಲ್ಡ್ ಫೈವ್ ಸ್ಟಾರ್ ಪ್ರಮಾಣೀಕರಿಸಲ್ಪಟ್ಟಿದೆ. ಅಂದರೆ, ಈ ಟ್ಯಾಬ್ ಸಾಕಷ್ಟು ಬಾಳಿಕೆ ಬರುತ್ತದೆ. ಇದು 8 ಸ್ಪೀಕರ್‌ಗಳನ್ನು ಹೊಂದಿದೆ. ಈ ಟ್ಯಾಬ್‌ನಲ್ಲಿ ಡ್ಯುಯಲ್ ಬ್ಯಾಂಡ್ ವೈ-ಫೈ ಬೆಂಬಲವನ್ನು ಒದಗಿಸಲಾಗಿದೆ.
ಹಾನರ್ ಪ್ಯಾಡ್ V9 ಬೆಲೆ
ಹಾನರ್ ಪ್ಯಾಡ್ V9 ಟ್ಯಾಬ್ ಬಿಳಿ ಮತ್ತು ಬೂದು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 40,830 ರೂ. (466 ಡಾಲರ್) ಆಗಿದೆ. ಪ್ರಸ್ತುತ ಯುರೋಪ್ ಮತ್ತು ಯುಕೆ ಸೇರಿದಂತೆ ಹಲವು ದೇಶಗಳಲ್ಲಿ ಈ ಟ್ಯಾಬ್ ಈಗಾಗಲೇ ಖರೀದಿಗೆ ಲಭ್ಯವಿದೆ. ಇದು ಭಾರತದಲ್ಲಿ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ? ಎಂಬ ಬಗ್ಗೆ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲ. ಕಳೆದ ವರ್ಷ ಹಾನರ್ ಕಂಪನಿಯು ಅನೇಕ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆದರೆ, ಇವೆಲ್ಲವೂ ಬಜೆಟ್ ಮತ್ತು ಮಧ್ಯಮ ಬಜೆಟ್ ವಿಭಾಗದ ಸ್ಮಾರ್ಟ್‌ಫೋನ್‌ಗಳಾಗಿವೆ. ಇದೀಗ, ಭಾರತೀಯ ಗ್ರಾಹಕರು ಹಾನರ್‌ನ ಪ್ರಮುಖ ಗ್ಯಾಜೆಟ್‌ಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ.


Click it and Unblock the Notifications








