ಭಾರತದಲ್ಲಿ ಹೊಸ HP Laser M300 ಸರಣಿ ಪ್ರಿಂಟರ್‌ಗಳು ಬಿಡುಗಡೆ: ಸಂಪೂರ್ಣ ಮಾಹಿತಿ!
ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ HP, ಭಾರತೀಯ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ HP Laser M300 ಸರಣಿಯ ಪ್ರಿಂಟರ್‌ಗಳನ್ನು ಬಿಡುಗಡೆ ಮಾಡಿದೆ. ಜುಲೈ 10 ರಂದು ಪರಿಚಯಿಸಲಾದ ಈ ಪ್ರಿಂಟರ್‌ಗಳನ್ನು, ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು (SMBs), ಸ್ಥಳೀಯ ವ್ಯಾಪಾರಗಳು ಮತ್ತು ಪ್ರಿಂಟಿಂಗ್ ಸೇವಾ ಕೇಂದ್ರಗಳ ಅಗತ್ಯಗಳನ್ನು ಪೂರೈಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿಯು ತಿಳಿಸಿದೆ. HP Laser M300 ಸರಣಿಯು Laser MFP 323sdnw, 323dnw, 323d, 303dw, ಮತ್ತು 303d ಎಂಬ ಐದು ಮಾಡೆಲ್‌ಗಳಲ್ಲಿ ಲಭ್ಯವಿದ್ದು, ಈ ಸರಣಿ ಪ್ರಿಂಟರ್‌ಗಳ ಕುರಿತು ಸಂಪೂರ್ಣ ಮಾಹಿತಿಯು ಈ ಕೆಳಕಂಡಂತಿದೆ.
HP Laser M300 ಸರಣಿ: ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು ಹೀಗಿವೆ,
ವೇಗದ ಮತ್ತು ದಕ್ಷ ಮುದ್ರಣ:
- ಪ್ರತಿ ನಿಮಿಷಕ್ಕೆ 30 ಪುಟಗಳವರೆಗೆ (A4) ಮುದ್ರಣ ಸಾಮರ್ಥ್ಯ.
- ಎಲ್ಲಾ ಮಾಡೆಲ್‌ಗಳಲ್ಲಿ ಫಾಸ್ಟ್ ಆಟೋ-ಡ್ಯುಪ್ಲೆಕ್ಸ್ (ಎರಡೂ ಬದಿಯ ಸ್ವಯಂಚಾಲಿತ ಮುದ್ರಣ) ಸೌಲಭ್ಯ, ಇದು ಕಾಗದದ ಬಳಕೆಯನ್ನು ಕಡಿಮೆ ಮಾಡುತ್ತದೆ.
- ಮೊದಲ ಪುಟದ ಮುದ್ರಣಕ್ಕೆ ಕೇವಲ 8.5 ಸೆಕೆಂಡುಗಳು
- ತಡೆರಹಿತ ಕಾರ್ಯಾಚರಣೆಗಳಿಗಾಗಿ 256 MB ಮೆಮೊರಿ ಮತ್ತು 600 MHz ಪ್ರೊಸೆಸರ್.
- ಗತ್ಯಕ್ಕೆ ಅನುಗುಣವಾಗಿ ಕೇವಲ ಮುದ್ರಣ (ಪ್ರಿಂಟ್) ಅಥವಾ ಬಹು ಕಾರ್ಯಗಳ (ಪ್ರಿಂಟ್, ಸ್ಕ್ಯಾನ್, ಕಾಪಿ) ಆಯ್ಕೆ.
- ಹೆಚ್ಚು ಮುದ್ರಣ ಅಗತ್ಯಗಳಿಗಾಗಿ 250 ಶೀಟ್‌ಗಳ ಇನ್‌ಪುಟ್ ಸಾಮರ್ಥ್ಯ ಮತ್ತು ಹೆಚ್ಚುವರಿ ಮಲ್ಟಿಪರ್ಪಸ್ ಟ್ರೇ.

ಸುಲಭ ಬಳಕೆ ಮತ್ತು ಸಂಪರ್ಕ:
- ಕಾಂಪ್ಯಾಕ್ಟ್ ವಿನ್ಯಾಸದಿಂದಾಗಿ ಸಣ್ಣ ಕಚೇರಿಗಳಲ್ಲಿಯೂ ಸುಲಭವಾಗಿ ಹೊಂದಿಕೊಳ್ಳುತ್ತವೆ.
- USB ಮತ್ತು ವೈರ್‌ಲೆಸ್ ಸಂಪರ್ಕ ಆಯ್ಕೆಗಳು ಸುಲಭವಾದ ಸ್ಥಾಪನೆ ಮತ್ತು ಬಳಕೆಯನ್ನು ಖಾತ್ರಿಪಡಿಸುತ್ತವೆ.
- HP ಸ್ಮಾರ್ಟ್ ಆ್ಯಪ್ ಮೂಲಕ ಸುಲಭವಾಗಿ ಮೊಬೈಲ್ ಪ್ರಿಂಟಿಂಗ್ ಸೌಲಭ್ಯ.
- ಸುಸ್ಥಿರತೆ ಮತ್ತು ಇಂಧನ ಸಮರ್ಥ ವಿನ್ಯಾಸ:
- ಎಲ್ಲಾ ಮಾದರಿಗಳ ತಯಾರಿಕೆಯಲ್ಲಿ ಶೇ.20ರಷ್ಟು ಗ್ರಾಹಕರು ಬಳಸಿದ ಪ್ಲಾಸ್ಟಿಕ್ ಅನ್ನು ಪುನರ್ಬಳಕೆ ಮಾಡಲಾಗಿದೆ.
- ವಿದ್ಯುತ್ ಉಳಿತಾಯಕ್ಕಾಗಿ HP ಆಟೋ-ಆಫ್ ತಂತ್ರಜ್ಞಾನ.
- ಭಾರತದಲ್ಲಿ ಪರಿಸರ ಮತ್ತು ಇಂಧನ ಸಮರ್ಥ ಗುಣಮಟ್ಟಗಳಿಗೆ ಪ್ರಮಾಣೀಕರಿಸಲ್ಪಟ್ಟಿದೆ.
ಶಾರ್ಪ್ ಪ್ರಿಂಟ್ ಕ್ವಾಲಿಟಿ ಮತ್ತು ವೆಚ್ಚ-ಪರಿಣಾಮಕಾರಿತ್ವ:
- ಅತ್ಯಾಧುನಿಕ ಟೋನರ್ ಬಳಕೆಯಿಂದ ಶಾರ್ಪ್ ಕಪ್ಪು ಅಕ್ಷರಗಳು ಮತ್ತು ಗ್ರಾಫಿಕ್ಸ್.
- HP 181A ಮತ್ತು 181X ಟೋನರ್ ಕಾರ್ಟ್ರಿಡ್ಜ್‌ಗಳು 1,500 ರಿಂದ 3,000 ಪುಟಗಳವರೆಗೆ ಕಡಿಮೆ ವೆಚ್ಚದಲ್ಲಿ ಮುದ್ರಿಸಲು ಅನುವು ಮಾಡಿಕೊಡುತ್ತವೆ.
ಬೆಲೆ ಮತ್ತು ಲಭ್ಯತೆ:
ಈ ಹೊಸ HP Laser M300 ಸರಣಿಯ ಪ್ರಿಂಟರ್‌ಗಳು HP eStore ನಲ್ಲಿ ಲಭ್ಯವಿವೆ. ಅವುಗಳ ಬೆಲೆ ವಿವರಗಳು ಹೀಗಿವೆ:
- HP Laser MFP 323sdnw: ₹35,250
- HP Laser MFP 323dnw: ₹31,500
- HP Laser MFP 323d: ₹29,250
- HP Laser 303dw: ₹22,500
- HP Laser 303d: ₹20,250
HP Laser M300 ಸರಣಿಯ ಪ್ರಿಂಟರ್‌ಗಳು ಭಾರತೀಯ ವ್ಯಾಪಾರ ಪರಿಸರದಲ್ಲಿ ದಕ್ಷತೆ, ವಿಶ್ವಾಸಾರ್ಹತೆ ಮತ್ತು ವೆಚ್ಚ ನಿರ್ವಹಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಪ್ರಿಂಟಿಂಗ್ ಪ್ರಕ್ರಿಯೆಯಲ್ಲಿನ ಯಾವುದೇ ಅಡಚಣೆಯು ವ್ಯಾಪಾರದ ನಿರಂತರತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದನ್ನು ಮನಗಂಡು HP, Laser M300 ಸರಣಿಯನ್ನು ಅಭಿವೃದ್ಧಿಪಡಿಸಿದೆ. ಈ ಸರಣಿಯು ಭಾರತೀಯ ವ್ಯವಹಾರಗಳಿಗೆ ಅಗತ್ಯವಿರುವ ವೇಗ, ಕಾಂಪ್ಯಾಕ್ಟ್ ವಿನ್ಯಾಸ, ಕಡಿಮೆ ನಿರ್ವಹಣೆ ಮತ್ತು ಪರಿಸರ ಸ್ನೇಹಿ ವೈಶಿಷ್ಟ್ಯಗಳನ್ನು ಒದಗಿಸುತ್ತದೆ ಎಂದು HP ಕಂಪೆನಿಯು ಹೇಳಿಕೊಂಡಿದೆ.
HP ಇಂಡಿಯಾದ BDSL ಮಾರ್ಕೆಟ್‌ನ ಪ್ರಿಂಟ್ ವಿಭಾಗದ ಹಿರಿಯ ನಿರ್ದೇಶಕ ಸತೀಶ್ ಕುಮಾರ್ ಅವರು, "HPಯಲ್ಲಿ ಪ್ರತಿಯೊಂದು ನಾವೀನ್ಯತೆಯು ಗ್ರಾಹಕರ ಆಳವಾದ ತಿಳುವಳಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಭಾರತದ ವೃತ್ತಿಪರರು, ಸಣ್ಣ ವ್ಯವಹಾರಗಳು ಮತ್ತು ಉದ್ಯಮಗಳು ದಕ್ಷತೆ, ವಿಶ್ವಾಸಾರ್ಹತೆ ಮತ್ತು ವೆಚ್ಚ ನಿರ್ವಹಣೆಯ ಯಶಸ್ಸಿಗೆ ನಿರ್ಣಾಯಕವಾಗಿರುವ ಬೇಡಿಕೆಯ, ವೇಗದ ರೂಪದಲ್ಲಿ ಕಾರ್ಯನಿರ್ವಹಿಸುತ್ತವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿ HP ಲೇಸರ್ ಎಂ300 ಸರಣಿಯ ಪ್ರಿಂಟರ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಇವುಗಳು ಕಡಿಮೆ ನಿರ್ವಹಣೆಯೊಂದಿಗೆ ವೇಗದ, ಉತ್ತಮ-ಗುಣಮಟ್ಟದ ಡ್ಯುಪ್ಲೆಕ್ಸ್ ಪ್ರಿಂಟಿಂಗ್ ಅನ್ನು ನೀಡುತ್ತವೆ. ಇದು ವ್ಯವಹಾರಗಳು ಯಾವುದೇ ಅಡೆತಡೆ ಇಲ್ಲದೆ ತಮ್ಮ ಕಾರ್ಯಾಚರಣೆಗಳನ್ನು ದಕ್ಷತೆ ಮತ್ತು ಉತ್ಪಾದಕತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ" ಎಂದು ತಿಳಿಸಿದ್ದಾರೆ
ಒHP Laser M300 ಸರಣಿಯು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ವ್ಯಾಪಾರ ವಲಯಕ್ಕೆ ಉತ್ತಮ, ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿ ಮುದ್ರಣ ಪರಿಹಾರವನ್ನು ಒದಗಿಸುತ್ತದೆ. ಇದು ವ್ಯಾಪಾರಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಕಾರ್ಯಾಚರಣೆಗಳನ್ನು ಸರಳಗೊಳಿಸಲು ಸಹಾಯ ಮಾಡುವ ನಿರಕ್ಷೆ ಇದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು?. ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








