Home
Gadgets

HP ಲೇಸರ್ M300 ಸರಣಿಯ ಪ್ರಿಂಟರ್ ಬಿಡುಗಡೆ: ಕಡಿಮೆ ಬೆಲೆ, ಹೆಚ್ಚು ದಕ್ಷತೆ!

ಭಾರತದಲ್ಲಿ ಸಣ್ಣ ವ್ಯವಹಾರಗಳು ಮತ್ತು ಉದ್ಯೋಗಾಧಾರಿತ ಸಂಸ್ಥೆಗಳನ್ನು ದೃಷ್ಠಿಯಟ್ಟುಕೊಂಡು HP ಹೊಸದಾಗಿ ಲೇಸರ್ M300 ಸರಣಿಯನ್ನು ಬಿಡುಗಡೆಗೊಳಿಸಿದೆ. ದೈನಂದಿನ ಕೆಲಸಕಾರ್ಯಗಳಿಗೆ ಪ್ರಿಂಟಿಂಗ್ ಅತ್ಯಂತ ಅಗತ್ಯವಾಗಿರುವುದು ಮುಂದುವರಿದಿದೆ. ಸಣ್ಣ ವ್ಯವಹಾರಗಳು ಮತ್ತು ಸ್ಥಳೀಯ ಪ್ರಿಂಟಿಂಗ್ ಶಾಪ್ ಗಳಿಗೆ ನಿರ್ವಹಣೆ ಮಾಡಲು ವೇಗವಾದ, ಬಳಕೆಗೆ ಸುಲಭವಾದ ಪ್ರಿಂಟರ್‌ಗಳು ಬೇಕಿವೆ. ಹಾಗಾಗಿ, ಹೊಸ HP M300 ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ವೇಗದ ಪ್ರಿಂಟಿಂಗ್, ಆಟೋ ಡ್ಯುಪ್ಲೆಕ್ಸ್ ವೈಶಿಷ್ಟ್ಯತೆಗಳು, ಮೊಬೈಲ್ ಪ್ರಿಂಟಿಂಗ್ ಮತ್ತು ಕಡಿಮೆ ವೆಚ್ಚಗಳಿಂದ ಕೂಡಿದೆ ಎಂದು HP ತಿಳಿಸಿದೆ.

ಸ್ಥಳೀಯ ಪ್ರಿಂಟಿಂಗ್ ಅಂಗಡಿಗಳು ಮತ್ತು ಉದ್ಯೋಗಿಗಳು ಸಾಮಾನ್ಯವಾಗಿ ದೊಡ್ಡ ಪ್ರಮಾಣದ ಫಾರ್ಮ್ ಗಳು, ಲೀಗಲ್ ಫೈಲ್ ಗಳು, ಬುಕ್ ಲೆಟ್ ಗಳು ಮತ್ತು ವರದಿಗಳನ್ನು ಪ್ರಿಂಟ್ ತೆಗೆಯುತ್ತಾರೆ. ಈ ವೇಳೆ ವೇಗದ ಪ್ರಿಂಟಿಂಗ್ ಮತ್ತು ಸ್ಥಿರವಾದ ಗುಣಮಟ್ಟ ಮುಖ್ಯವಾಗಿರುತ್ತದೆ. HP Laser M300 ಸರಣಿಯು 30ppm(A4) ವರೆಗೆ ಮುದ್ರಿಸುತ್ತದೆ. 15ipmವರೆಗೆ ಡ್ಯುಪ್ಲೆಕ್ಸ್ ಮುದ್ರಣವನ್ನು ಬೆಂಬಲಿಸುತ್ತದೆ ಮತ್ತು ಸುಮಾರು 8.5 ಸೆಕೆಂಡುಗಳ ಮೊದಲ-ಪುಟ-ಔಟ್ ಸಮಯವನ್ನು ನೀಡುತ್ತದೆ. ಎಲ್ಲಾ ಮಾದರಿಗಳಲ್ಲಿ ಸ್ವಯಂಚಾಲಿತ ಡ್ಯುಪ್ಲೆಕ್ಸ್ ಮುದ್ರಣವು ಸಮಯವನ್ನು ಉಳಿಸಲಿವೆ.

ಬಹುಪಯೋಗಿ ಟ್ರೇ ಕಾರ್ಯನಿರತ ಸಮಯದಲ್ಲಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ. HP ಅಪ್ಲಿಕೇಶನ್ ಮೂಲಕ ಮೊಬೈಲ್ ಪ್ರಿಂಟಿಂಗ್ ನೊಂದಿಗೆ ವಾಕ್-ಇನ್ ಗ್ರಾಹಕರು ಮತ್ತು ಕಚೇರಿ ತಂಡಗಳು ತಮ್ಮ ಸ್ಮಾರ್ಟ್ ಫೋನ್ ಗಳಿಂದ ನೇರವಾಗಿ ಪ್ರಿಂಟ್ ತೆಗೆದುಕೊಳ್ಳಬಹುದು ಭಾರತದಾದ್ಯಂತ ಈ ಪ್ರಿಂಟರ್ ಗಳಿಗೆ ಟೋನರ್ ಸರಬರಾಜು ಸುಲಭವಾಗಿ ಲಭ್ಯವಿದ್ದು, ಪ್ರಿಂಟಿಂಗ್ ವಿಳಂಬವಿಲ್ಲದೇ ಸರಾಗವಾಗಿ ಮುಂದುವರಿಯುವುದನ್ನು ಖಚಿತಪಡಿಸುತ್ತದೆ ಎಂದು HP ತಿಳಿಸಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಅಂದರೆ SMBಗಳು ನಿರ್ವಹಣೆ ಮಾಡಲು ಸುಲಭವಾದ ಮತ್ತು ದೈನಂದಿನ ಕೆಲಸದ ಹೊರೆಗಳನ್ನು ಯಾವುದೇ ಅಡೆತಡೆಗಳಿಲ್ಲದೇ ನಿಭಾಯಿಸಬಲ್ಲ ಪ್ರಿಂಟರ್ ಗಳ ಅಗತ್ಯವಿರುತ್ತದೆ. HP Laser M300 ಸರಣಿಯ ಪ್ರಿಂಟರ್ 1,500 ದಿಂದ 3,000 ಪುಟಗಳನ್ನು ಪ್ರಿಂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. HP 181A/X ಟೋನರ್ ಕಾರ್ಟ್ರಿಡ್ಜ್ ಗಳು ಇದನ್ನು ಸಾಧ್ಯವಾಗಿಸುತ್ತವೆ. ಆಗಾಗ್ಗೆ ಬದಲಿಸುವ ಪ್ರಮೇಯವೇ ಬರುವುದಿಲ್ಲ. 250 ಶೀಟ್ ಇನ್ ಪುಟ್ ಟ್ರೇ, ಬಹುಪಯೋಗಿ ಟ್ರೇ ಜೊತೆಗೆ ನಿರಂತರವಾದ ಪ್ರಿಂಟಿಂಗ್ ಅನ್ನು ಬೆಂಬಲಿಸುತ್ತದೆ.

HP ಲೇಸರ್ M300 ಸರಣಿಯ ಪ್ರಿಂಟರ್ ಬಿಡುಗಡೆ: ಕಡಿಮೆ ಬೆಲೆ, ಹೆಚ್ಚು ದಕ್ಷತೆ!

30,000 ಪೇಜ್ ಗಳವರೆಗಿನ ಕರ್ತವ್ಯ ಸಾಮರ್ಥ್ಯದೊಂದಿಗೆ ಪ್ರಿಂಟರ್ ಗಳನ್ನು ನಿಯಮಿತ ಕಚೇರಿ ಅಗತ್ಯತೆಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. USB ಅಥವಾ ವೈರ್ ಲೆಸ್ ಆಯ್ಕೆಗಳ ಮೂಲಕ ಸರಳ ಸೆಟಪ್ ಮತ್ತು HP ಅಪ್ಲಿಕೇಶನ್ ಬಳಕೆದಾರರಿಗೆ ಸುಲಭವಾಗಿ ಪ್ರಿಂಟ್ ತೆಗೆಯಲು, ಸ್ಕ್ಯಾನ್ ಮಾಡಲು ಮತ್ತು ಜೆರಾಕ್ಸ್ ತೆಗೆಯಲು ಅನುಮತಿ ನೀಡುತ್ತದೆ. ಇದು M300 ಸರಣಿಯನ್ನು ಹೆಚ್ಚಿನ ಸಂಖ್ಯೆಯ ಜನರು ಸೇರುವ ಕೌಂಟರ್ ಗಳು, ಬಹು-ಇಲಾಖೆಯ ಕಚೇರಿಗಳು ಮತ್ತು ಬೆಳೆಯುತ್ತಿರುವ ವ್ಯವಹಾರಗಳಿಗೆ ಹೊಸ ಟೀಂಗಳು ಅಥವಾ ಸ್ಥಳಗಳನ್ನು ಸ್ಥಾಪನೆ ಮಾಡಲು ಸೂಕ್ತವಾಗಿದೆ.

HP Laser M300 ಸರಣಿಯನ್ನು ಶೇ.20 ರಷ್ಟು ಮರುಬಳಕೆಯ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದೆ. ಇದರಲ್ಲಿ ಕಡಿಮೆ ಶಕ್ತಿಯ ಬಳಕೆಗಾಗಿ HP ಆಟೋ-ಆಫ್ ತಂತ್ರಜ್ಞಾನ ಮತ್ತು ತ್ಯಾಜ್ಯವನ್ನು ಕಡಿಮೆ ಮಾಡುವ ಬಾಳಿಕೆ ಬರುವ ಉತ್ಪನ್ನಗಳಂತಹ ಸುಸ್ಥಿರ ವಿನ್ಯಾಸ ವೈಶಿಷ್ಟ್ಯತೆಗಳಿವೆ. ಈ ವೈಶಿಷ್ಟ್ಯತೆಗಳು ಉತ್ಪಾದಕತೆಯನ್ನು ಪರಿಸರ ಜವಾಬ್ದಾರಿಯೊಂದಿಗೆ ಸಮತೋಲನಗೊಳಿಸಲು ಬಯಸುವ ಆಧುನಿಕ ವ್ಯವಹಾರಗಳನ್ನು ಬೆಂಬಲಿಸುತ್ತವೆ ಎಂದು ಕಂಪೆನಿ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ ( HP eStore)

HP Laser 335dn ಬೆಲೆ INR 24,000

HP Laser 335dw ಬೆಲೆ INR 25,500

HP Laser MFP 355sdnw ಬೆಲೆ INR 37,875

ಇಷ್ಟೇ ಅಲ್ಲದೆ. SMBಗಳು ಮತ್ತು ಉದ್ಯೋಗಿಗಳಿಗೆ ಕೈಗೆಟುಕುವಿಕೆಯು ಇತರೆ ಆಯ್ಕೆಗಳು ಸಹ ಇದ್ದು, Laser 303d (13,999 ರೂಪಾಯಿ), Laser 303dw (15,999 ರೂಪಾಯಿ), MFP 323d (19,499 ರೂಪಾಯಿ), MFP 323dnw (22,499 ರೂಪಾಯಿ) ಮತ್ತು MFP 323sdnw (25,499 ರೂಪಾಯಿ) ದರದಲ್ಲಿ ಖರೀದಿಸಬಹುದಾಗಿದೆ. ಆಟೋ ಡ್ಯೂಪ್ಲೆಕ್ಸ್ ಪ್ರಿಂಟಿಂಗ್ ಕಾಗದದ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಟೋನರ್ ಗಳ ಬಾಳಿಕೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ನಿರೀಕ್ಷೆಗೂ ಮೀರಿದ ಕಾರ್ಯಾಚರಣಾ ವೆಚ್ಚವನ್ನು ಖಚಿತಪಡಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

Best Mobiles in India

English summary
HP has launched the new Laser M300 series, targeting small businesses and job-based organizations in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+