15 ಸಾವಿರಕ್ಕೆ ವಿಶ್ವದ ಮೊದಲ ಎಚ್‌ಪಿ 'ಲೇಸರ್ ಟ್ಯಾಂಕ್ ಪ್ರಿಂಟರ್' ಬಿಡುಗಡೆ!
ಪ್ರಿಂಟರ್ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಎಚ್‌ಪಿ ಇಂಕ್ ವಿಶ್ವದ ಮೊದಲ ಲೇಸರ್ ಟ್ಯಾಂಕ್ ಪ್ರಿಂಟರ್ ಅನ್ನು ಭಾರತದಲ್ಲಿ ಇಂದು ಬಿಡುಗಡೆ ಮಾಡಿದೆ. ಭಾರತದ ವ್ಯವಹಾರಗಳಿಗೆ ಸೂಕ್ತವಾದ ಸ್ಮಾರ್ಟ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಒಳಗೊಂಡಿರುವ ಈ 'ಎಚ್‌ಪಿ ನೆವರ್‍ಸ್ಟಾಪ್' ಲೇಸರ್ ಪ್ರಿಂಟರ್ ಮೊಬೈಲ್‌ಗೂ ಸಹ ಕನೆಕ್ಟ್ ಮಾಡಬಹುದಾದ ಸೌಲಭ್ಯವನ್ನು ಹೊತ್ತು ಭಾರತದ ಪ್ರಿಂಟರ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.

ಹೌದು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಹೇಳಿ ಮಾಡಿಸಿದಂತೆ ಹೊಚ್ಚ ಹೊಸದಾಗಿ ಬಿಡುಗಡೆಯಾಗಿರುವ ಲೇಸರ್ ಪ್ರಿಂಟರ್ ಇದಾಗಿದ್ದು, ಆವಿಷ್ಕಾರ ಮತ್ತು ಡಿಜಿಟಲ್ ತಂತ್ರಜ್ಞಾನ ಸಮ್ಮಿಳಿತದಿಂದಾಗಿ ಸಾಮಾನ್ಯವಾಗಿ ಪ್ರಿಂಟಿಂಗ್ ಸಂದರ್ಭದಲ್ಲಿ ಎದುರಾಗಲಿರುವ ಅಡ್ಡಿಗಳ ಪ್ರಮಾಣವನ್ನು ಕಡಿಮೆ ಮಾಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದರ ಮತ್ತೊಂದು ಪ್ರಯೋಜನವೆಂದರೆ ಕೇವಲ 15 ಸೆಕೆಂಡುಗಳಲ್ಲಿ ಟೋನರ್ ಬದಲಿಸಬಹುದು ಎಂದು ಕಂಪೆನಿ ತಿಳಿಸಿದೆ.
ಈ ಲೇಸರ್ ಪ್ರಿಂಟರ್ ಪ್ರಿಂಟರ್ 20ಪಿಪಿಎಂ(ಎ4)ನಷ್ಟು ಪ್ರಿಂಟಿಂಗ್ ಸ್ಪೀಡ್ ಅನ್ನು ಹೊಂದಿದೆ. ಇದರಲ್ಲಿ ಸಿಂಗಲ್ ಮತ್ತು ಡ್ಯುಯಲ್ ಲೇಸರ್ ಟೋನರ್ ರೀಲೋಡ್ ಕಿಟ್‍ಗಳು ಇದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿವೆ. ಗ್ರಾಹಕರು ತಮ್ಮ ವ್ಯಾಪಾರವನ್ನು ಮುಂದುವರಿಸಲು ಅವರ ಅಗತ್ಯತೆಗಳಿಗೆ ತಕ್ಕಂತೆ ಬಳಕೆ ಮಾಡಬಹುದಾಗಿದೆ. ಇದರಲ್ಲಿ ಒಂದು ಪುಟ ಪ್ರಿಂಟ್ ತೆಗೆಯಲು ಕೇವಲ 29 ಪೈಸೆ (ಡ್ಯುಯಲ್ ಲೇಸರ್ ಟೋನರ್ ರೀಲೋಡ್ ಕಿಟ್) ಖರ್ಚು ಬರುತ್ತದೆ.

ಈ ಪ್ರಿಂಟರ್‌ನಲ್ಲಿ ಯಾವುದೇ ಅಡೆತಡೆ ಇಲ್ಲದೇ 5,000 ಪುಟಗಳವರೆಗೆ ಪ್ರಿಂಟ್ ನೀಡಬಹುದು ಮತ್ತು ಟೋನರ್ ಅನ್ನು ಕೆಲವೇ ಸೆಕೆಂಡುಗಳಲ್ಲಿ ರೀಲೋಡ್ ಮಾಡಬಹುದು. ಜೊತೆಗೆ ಇದು ವ್ಯವಹಾರಗಳ ಪ್ರಕ್ರಿಯೆಯ ವೆಚ್ಚವನ್ನು ಕಡಿಮೆ ಮಾಡಲಿದೆ ಹಾಗೂ ಅತ್ಯಮೂಲ್ಯವಾದ ಸಮಯವನ್ನು ಉಳಿತಾಯ ಮಾಡಲಿದೆ. ಈ ಮೂಲಕ ವ್ಯವಹಾರಸ್ಥರು ಮತ್ತು ವ್ಯಾಪಾರಿಗಳು ತಮ್ಮ ಉತ್ಪಾದನೆಯನ್ನು ಹೆಚ್ಚಳ ಮಾಡಿಕೊಳ್ಳಬಹುದಾಗಿದೆ ಎಂದು ಎಚ್‌ಪಿ ಸಂಸ್ಥೆ ಹೇಳಿಕೊಂಡಿದೆ.
ವ್ಯವಹಾರಗಳಿಗೆ ಕೈಗೆಟುಕುವ ದರದಲ್ಲಿ ಲೇಸರ್ ಟ್ಯಾಂಕ್‍ನಂತಹ ಅತ್ಯುತ್ಕಷ್ಠ ದರ್ಜೆಯ ಲೇಸರ್ ಪ್ರಿಂಟಿಂಗ್ ಅನ್ನು ನಾವು ನೀಡುತ್ತಿದ್ದೇವೆ. ಇದರ ಮೂಲಕ ಪ್ರಿಂಟ್ ಆಧಾರಿತ ಕಾರ್ಯಗಳನ್ನು ಯಾವುದೇ ಅಡ್ಡಿ ಇಲ್ಲದೇ ನಡೆಸಬಹುದಾಗಿದೆ. ಇದೀಗ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಲೇಸರ್ ಪ್ರಿಂಟಿಂಗ್ ತಂತ್ರಜ್ಞಾನದ ಪ್ರಯೋಜನವನ್ನು ಗ್ರಾಹಕರು ಕೈಗೆಟುಕುವ ದರದಲ್ಲಿ ಪಡೆಯಲಿದ್ದಾರೆ ಎಂದು ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಚಂದ್ರ ಅವರು ಹೇಳಿದ್ದಾರೆ.
ಇನ್ನು ಎಚ್‌ಪಿ ಲೇಸರ್ 1000 ಸರಣಿ ಸಾಧನಗಳು 15,846 ರೂ (ನಾನ್-ವೈರ್‌ಲೆಸ್) ಹಾಗೂ 17,236 ರೂಪಾಯಿ(ವೈರ್‌ಲೆಸ್)ಗಳಿಗೆ ಬಿಡುಗಡೆಯಾಗಿವೆ. .ಹಾಗೇಯೇ ಎಚ್‌ಪಿ ನೆವರ್‍ಸ್ಟಾಪ್ ಲೇಸರ್ ಎಂಎಫ್‍ಪಿ 1200 ಸರಣಿ ಸಾಧನಗಳು 22,057 ರೂಪಾಯಿ(ನಾನ್-ವೈರ್‌ಲೆಸ್) ಮತ್ತು 23,460 ರೂಪಾಯಿ(ವೈರ್‌ಲೆಸ್ ಬೆಲೆಗಳಲ್ಲಿ ಪ್ರಿಂಟರ್ ಲಭ್ಯವಿವೆ. ಎಚ್‌ಪಿ ನೆವರ್‍ಸ್ಟಾಪ್ ಲೇಸರ್ ಟೋನರ್ ಬೆಲೆ ರೀಲೋಡ್ ಕಿಟ್ 849 ರೂಪಾಯಿ(ಸಿಂಗಲ್ ಪ್ಯಾಕ್) ಮತ್ತು 1449 ರೂಪಾಯಿ (ಡಬಲ್ ಪ್ಯಾಕ್)ಗಳಿಗೆ ನಿಗದಿಯಾಗಿದೆ.


Click it and Unblock the Notifications








