Home
Gadgets

ಭಾರತಕ್ಕೆ ಬರುತ್ತಿದೆ Huawei Band 10: ಬೆಲೆ 5,000 ಕ್ಕಿಂತ ಕಡಿಮೆ?!

ಚೀನಾದಲ್ಲಿ ಬಿಡುಗಡೆಯಾಗಿ ಸುಮಾರು ನಾಲ್ಕು ತಿಂಗಳ ನಂತರ ಭಾರತದ ಮಾರುಕಟ್ಟೆಗೆ Huawei Band 10 ಫಿಟ್‌ನೆಸ್ ಟ್ರ್ಯಾಕರ್ ಆಗಮನವಾಗುತ್ತಿದೆ. ಈ ವರ್ಷದ ಜನವರಿಯಲ್ಲಷ್ಟೇ ದೇಶದಲ್ಲಿ Huawei Band 9 ಸಾಧನವನ್ನು ಪರಿಚಯಿಸಲಾಗಿತ್ತು. ಇದೀಗ ಇದರ ಉತ್ತರಾಧಿಕಾರಿಯಾಗಿ Huawei Band 10 ಬ್ಯಾಂಡ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದ್ದು, ಈ ಹೊಸ ಫಿಟ್‌ನೆಸ್ ಟ್ರ್ಯಾಕರ್ ಅನ್ನು ಸುಧಾರಿತ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮ ನಿರ್ವಹಣೆ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗುತ್ತಿದೆ. ಸಿಹಿಸುದ್ದಿ ಏನೆಂದರೆ, ಇದರ ಬೆಲೆ 5,000 ರೂ.ಗಿಂತ ಕಡಿಮೆಯಿರಲಿದೆ ಎನ್ನಲಾಗಿದೆ.

ಹೌದು, ಉದ್ಯಮ ಮೂಲಗಳನ್ನು ಉಲ್ಲೇಖಿಸಿ ಗ್ಯಾಜೆಟ್ 360 ವರದಿ ಮಾಡಿರುವಂತೆ, Huawei Band 10 ಬ್ಯಾಂಡ್ ಈ ವಾರ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಫಿಟ್‌ನೆಸ್ ಟ್ರ್ಯಾಕರ್ ಆರೋಗ್ಯ ಮತ್ತು ಫಿಟ್‌ನೆಸ್ ನಿರ್ವಹಣಾ ವೈಶಿಷ್ಟ್ಯಗಳ ಸಮೃದ್ಧಿಯನ್ನು ಹೊಂದಿದ್ದರೂ, ಇದರ ಬೆಲೆ 5,000 ರೂ.ಗಿಂತ ಕಡಿಮೆಯಿರಲಿದೆ. ಇದು ಹಿಂದಿನ ಮಾದರಿಯಾದ Huawei Band 9 ರ ಬೆಲೆಗೆ (3,999 ರೂ. ವಿಶೇಷ ಬೆಲೆ) ಅನುಗುಣವಾಗಿದೆ ಎಂದು ವರದಿಯು ಹೇಳಿದೆ. ಹಾಗಾದರೆ, ಈ Huawei Band 10 ಬ್ಯಾಂಡ್ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಅನುಭವವನ್ನು ನೀಡುವ ಗುರಿಯನ್ನು ಹೊಂದಿರಲಿದೆ.!

Huawei Band 10 ಬ್ಯಾಂಡ್: ಪ್ರೀಮಿಯಂ ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿರುವ Huawei Band 10 ಸಾಧನವು ಹೆಚ್ಚು ಸೊಗಸಾದ ಮತ್ತು ಪ್ರೀಮಿಯಂ ನೋಟಕ್ಕಾಗಿ ಅಲ್ಯೂಮಿನಿಯಂ ಅಲಾಯ್ ಫ್ರೇಮ್ ಹೊಂದಿದೆ. ಆಯತಾಕಾರದ ಡಯಲ್ ಮತ್ತು ಬಲ ಮಧ್ಯದಲ್ಲಿ ಒಂದು ಭೌತಿಕ ಬಟನ್ ಹೊಂದಿರುವ Huawei Band 10 ಸಾಧನವು (ಚೀನೀ ಆವೃತ್ತಿ) 1.47-ಇಂಚಿನ ಆಯತಾಕಾರದ AMOLED ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿದೆ. ಇದು 194 x 368 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 282ppi ಪಿಕ್ಸೆಲ್ ನೀಡುತ್ತದೆ. ಈ ಫಿಟ್‌ನೆಸ್ ಟ್ರ್ಯಾಕರ್ ಬ್ಲೂಟೂತ್ ಮೂಲಕ ಆಂಡ್ರಾಯ್ಡ್ ಮತ್ತು iOS ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ.

ಈ ಹೊಸ ಬ್ಯಾಂಡ್ ಫಿಟ್‌ನೆಸ್ ವೈಶಿಷ್ಟ್ಯಗಳನ್ನು ಇನ್ನಷ್ಟು ವಿಸ್ತರಿಸುತ್ತದೆ. ಇದು ಒತ್ತಡದ ಮೇಲ್ವಿಚಾರಣೆ ಮತ್ತು ಆಳವಾದ ನಿದ್ರೆಯ ವಿಶ್ಲೇಷಣೆಯಂತಹ ಸಮಗ್ರ ಆರೋಗ್ಯ-ಕೇಂದ್ರಿತ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ. ಸುಧಾರಿತ ವಿನ್ಯಾಸ, ಉತ್ತಮ ಸಂವೇದಕಗಳು ಮತ್ತು ಒಟ್ಟಾರೆಯಾಗಿ ಹೆಚ್ಚು ಸ್ಮಾರ್ಟ್ ಅನುಭವವನ್ನು ನೀಡುವ ನಿರೀಕ್ಷೆಯಿದೆ, ಅದೇ ಸಮಯದಲ್ಲಿ ಬೆಲೆಯ ವಿಷಯದಲ್ಲಿ ಜನಸಾಮಾನ್ಯರಿಗೆ ಇದು ಸುಲಭವಾಗಿ ತಲುಪುತ್ತದೆ. ಚೀನಾದಲ್ಲಿ ಫೆಬ್ರವರಿಯಲ್ಲಿ ಪರಿಚಯಿಸಲಾದ ಈ ಫಿಟ್‌ನೆಸ್ ಟ್ರ್ಯಾಕರ್‌ನ ಭಾರತೀಯ ರೂಪಾಂತರವು ಇದೇ ರೀತಿಯ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ಬರುತ್ತಿದೆ Huawei Band 10: ಬೆಲೆ 5,000 ಕ್ಕಿಂತ ಕಡಿಮೆ?!
photo credit: huawei central

ಕಂಪನಿಯ ಪ್ರಕಾರ, Huawei Band 10 ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಮತ್ತು ಫೋಟೊಪ್ಲೆಥಿಸ್ಮೋಗ್ರಫಿ (PPG) ಸೆನ್ಸರ್ ಸೇರಿದಂತೆ ಹಲವಾರು ಸೆನ್ಸರ್‌ಗಳನ್ನು ಒಳಗೊಂಡಿದೆ. ಇದು 100 ಕ್ಕೂ ಹೆಚ್ಚು ವ್ಯಾಯಾಮ ವಿಧಾನಗಳನ್ನು ಬೆಂಬಲಿಸುತ್ತದೆ. ಬಳಕೆದಾರರು ಹೃದಯ ಬಡಿತ, SpO2, ಉಸಿರಾಟದ ದರ ಮತ್ತು ಅಸಹಜ ಉಸಿರಾಟದಂತಹ ವಿವಿಧ ಮೆಟ್ರಿಕ್‌ಗಳನ್ನು ಪರಿಶೀಲಿಸಬಹುದು. ವಿಶೇಷವಾಗಿ, ಇದು ಹೊಸ ನಿದ್ರೆಯ ಹೃದಯ ಬಡಿತದ ವ್ಯತ್ಯಾಸ (HRV) ಮೆಟ್ರಿಕ್ ಅನ್ನು ಒಳಗೊಂಡಿದೆ, ಇದು ಬಳಕೆದಾರರ ನಿದ್ರೆಯ ಮಾದರಿ, ಅವಧಿ ಮತ್ತು ಗುಣಮಟ್ಟದ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ.

ಬ್ಯಾಟರಿ ಬಾಳಿಕೆಯ ವಿಷಯದಲ್ಲಿ, Huawei Band 10 ಸಾಧನವು ಒಂದೇ ಚಾರ್ಜ್‌ನಲ್ಲಿ 14 ದಿನಗಳವರೆಗೆ ಮತ್ತು ಆಲ್ವೇಸ್-ಆನ್ ಡಿಸ್ಪ್ಲೇ ಸಕ್ರಿಯಗೊಳಿಸಿದಾಗ ಮೂರು ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಕೇವಲ 45 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇಷ್ಟೇ ಅಲ್ಲದೆ, ಈ ಬ್ಯಾಂಡ್ 50 ಮೀಟರ್ ಆಳದವರೆಗೆ ನೀರು ನಿರೋಧಕವಾಗಿದೆ. ಒಟ್ಟಾರೆಯಾಗಿ, ಈ ಹೊಸ ಫಿಟ್‌ನೆಸ್ ಟ್ರ್ಯಾಕರ್ ಭಾರತೀಯ ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ನೀಡುವ ನಿರೀಕ್ಷೆಯಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Huawei Band 10 is set to launch in India soon, almost four months after its initial release in China.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+