ಭಾರತದಲ್ಲಿ Huawei Watch Fit 3 ಬಿಡುಗಡೆ: ಬೆಲೆ ಮತ್ತು ಫೀಚರ್ಸ್ ನೋಡಿ!
ಭರವಸೆಯ ಸ್ಮಾರ್ಟ್‌ವಾಚ್ ಬ್ರ್ಯಾಂಡ್ ಆಗಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಸ್ಥಾಪಿಸಿರುವ ಹುವಾವೇ, ಇಂದು ತನ್ನ ಹೊಚ್ಚ ಹೊಸ Huawei Watch Fit 3 ಸ್ಮಾರ್ಟ್‌ವಾಚ್ ಅನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಸ್ಮಾರ್ಟ್‌ವಾಚ್, ಆರೋಗ್ಯ ಮತ್ತು ಫಿಟ್‌ನೆಸ್ ಕಾಳಜಿಯುಳ್ಳ ಬಳಕೆದಾರರನ್ನು ಗುರಿಯಾಗಿಸಿಕೊಂಡು ಬಂದಿದ್ದು, ಇದರಲ್ಲಿ 1.82-ಇಂಚಿನ ಆಯತಾಕಾರದ ಡಿಸ್ಪ್ಲೇ, 5 ಎಟಿಎಂ ನೀರಿನ ಪ್ರತಿರೋಧ, ಮತ್ತು ಬ್ಲೂಟೂತ್ ಕರೆ ಸೌಲಭ್ಯ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳಿವೆ. ಹಾಗಾದರೆ, ದೇಶದಲ್ಲಿ ಇದೀಗ ಬಿಡುಗಡೆಯಾಗಿರುವ ಹೊಸ Huawei Watch Fit 3 ಸ್ಮಾರ್ಟ್‌ವಾಚ್ ಹೇಗಿದೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
Huawei Watch Fit 3 ಸ್ಮಾರ್ಟ್‌ವಾಚ್ ವೈಶಿಷ್ಟ್ಯಗಳು
Huawei Watch Fit 3 ಸ್ಮಾರ್ಟ್‌ವಾಚ್ 1.82-ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದು 60Hz ರಿಫ್ರೆಶ್ ದರ ಮತ್ತು 480x408 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದಲ್ಲಿದ್ದು. ಇದರ ಸ್ಕ್ರೀನ್-ಟು-ಬಾಡಿ ಅನುಪಾತ 77.4% ಮತ್ತು 347ppi ಪಿಕ್ಸೆಲ್ ಸಾಂದ್ರತೆ, 1,500 nits ವರೆಗೆ ಗರಿಷ್ಠ ಹೊಳಪನ್ನು ನೀಡುತ್ತದೆ. ಇದಲ್ಲದೆ, ಇದು ಆಲ್ವೇಸ್-ಆನ್ ಡಿಸ್ಪ್ಲೇ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ವಿನ್ಯಾಸದ ದೃಷ್ಟಿಯಿಂದ, ಈ ವಾಚ್ ಬಲಭಾಗದಲ್ಲಿ ತಿರುಗುವ ಕ್ರಿಯಾತ್ಮಕ ಕಿರೀಟ ಮತ್ತು ಕೆಳಗೆ ಮತ್ತೊಂದು ಕಾರ್ಯ ಬಟನ್ ಹೊಂದಿದೆ. ಇದು ಕೇವಲ 9.9 ಮಿಮೀ ದಪ್ಪ ಮತ್ತು 26 ಗ್ರಾಂ ತೂಕವನ್ನು ಹೊಂದಿದ್ದು, ಧರಿಸಲು ಹಗುರವಾಗಿದೆ. ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಪ್ಲಾಟ್‌ಫಾರ್ಮ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ.
ಆರೋಗ್ಯ ಮತ್ತು ಸ್ವಾಸ್ಥ್ಯದ ದೃಷ್ಟಿಯಿಂದ, Huawei Watch Fit 3 ಸ್ಮಾರ್ಟ್‌ವಾಚ್ ಹಲವಾರು ಗಮನಾರ್ಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕದ ಮಟ್ಟ (SpO2), ಮತ್ತು ಉಸಿರಾಟದ ದರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಮುಟ್ಟಿನ ಚಕ್ರ ಮತ್ತು ನಿದ್ರೆಯ ಗುಣಮಟ್ಟವನ್ನು ಟ್ರ್ಯಾಕ್ ಮಾಡುವ ಸೌಲಭ್ಯವೂ ಇದೆ. ಪಿಪಿಜಿ ಸಂವೇದಕವು ಬಳಕೆದಾರರ ಹೃತ್ಕರ್ಣದ ಕಂಪನ (A-fib) ಮತ್ತು ಅಕಾಲಿಕ ಬಡಿತದ ಅಪಾಯಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.ಈ ಸ್ಮಾರ್ಟ್‌ವಾಚ್ ಕ್ಯಾಲೋರಿ ಸೇವನೆಯನ್ನು ಮೇಲ್ವಿಚಾರಣೆ ಮಾಡುವುದರೊಂದಿಗೆ, ಪೌಷ್ಟಿಕಾಂಶದ ವಿಶ್ಲೇಷಣೆಯನ್ನು ಸಹ ಒದಗಿಸುತ್ತದೆ. ದೀರ್ಘಕಾಲದ ನಿಷ್ಕ್ರಿಯತೆಯನ್ನು ತಡೆಯಲು ಚಲಿಸಲು ಪ್ರೇರೇಪಿಸುವ ಎಚ್ಚರಿಕೆಗಳೂ ಇದರಲ್ಲಿ ಸೇರಿವೆ. ಅಂತರ್ನಿರ್ಮಿತ GPS ಮತ್ತು ಹಲವಾರು ಪೂರ್ವನಿಗದಿಪಡಿಸಿದ ವ್ಯಾಯಾಮ ವಿಧಾನಗಳು ಫಿಟ್‌ನೆಸ್ ಉತ್ಸಾಹಿಗಳಿಗೆ ಉಪಯುಕ್ತವಾಗಲಿವೆ.

ಬ್ಯಾಟರಿ ಬಾಳಿಕೆಯ ವಿಷಯದಲ್ಲಿ, Huawei Watch Fit 3 ಸ್ಮಾರ್ಟ್‌ವಾಚ್ 400mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಗರಿಷ್ಠ 10 ದಿನಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿಯು ತಿಳಿಸಿದೆ. ಸಾಮಾನ್ಯ ಬಳಕೆಯಲ್ಲಿ, ಇದು ಸುಮಾರು ಏಳು ದಿನಗಳ ಕಾಲ ಮತ್ತು ಆಲ್ವೇಸ್-ಆನ್ ಡಿಸ್ಪ್ಲೇ ಸಕ್ರಿಯವಾಗಿದ್ದಾಗ ನಾಲ್ಕು ದಿನಗಳ ಕಾಲ ಬಾಳಿಕೆ ನೀಡುತ್ತದೆ. ಹಾಗೆಯೇ, ಈ Huawei Watch Fit 3 ಸ್ಮಾರ್ಟ್‌ವಾಚ್ಬ್ಲೂಟೂತ್ ಕರೆಗಳನ್ನು ಬೆಂಬಲಿಸುತ್ತದೆ, ಇದರಿಂದ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸದೆ ನೇರವಾಗಿ ವಾಚ್‌ನಿಂದ ಕರೆಗಳನ್ನು ಸ್ವೀಕರಿಸಬಹುದು ಮತ್ತು ಮಾಡಬಹುದು. ಸಂಗೀತ ಪ್ರಿಯರಿಗೆ, ಜೋಡಿಯಾಗಿರುವ ಫೋನ್‌ನಲ್ಲಿ ಪ್ಲೇ ಆಗುತ್ತಿರುವ ಸಂಗೀತವನ್ನು ನಿಯಂತ್ರಿಸಲು ಮತ್ತು ಕ್ಯಾಮೆರಾ ಶಟರ್ ಅನ್ನು ನಿರ್ವಹಿಸಲು ಆಯ್ಕೆಗಳನ್ನು ನೀಡುತ್ತದೆ. ಇದು 5 ಎಟಿಎಂ ನೀರಿನ ಪ್ರತಿರೋಧ ರೇಟಿಂಗ್ ಹೊಂದಿದ್ದು, ನೀರಿನಲ್ಲಿಯೂ ಸುರಕ್ಷಿತವಾಗಿದೆ.
Huawei Watch Fit 3 ಸ್ಮಾರ್ಟ್‌ವಾಚ್ ಬೆಲೆ ಎಷ್ಟು?
ಭಾರತದಲ್ಲಿ Huawei Watch Fit 3 ರ ಆರಂಭಿಕ ಬೆಲೆ ರೂ. 14,999 ಆಗಿದ್ದು, ಇದು ಹಸಿರು, ಮಿಡ್‌ನೈಟ್ ಕಪ್ಪು, ಮೂನ್ ವೈಟ್ ಮತ್ತು ನೆಬ್ಯುಲಾ ಪಿಂಕ್ ಬಣ್ಣಗಳಲ್ಲಿ ಲಭ್ಯವಿದೆ. ಇದರ ಸ್ಪೇಸ್ ಗ್ರೇ ರೂಪಾಂತರವು ಬೂದು ನೈಲಾನ್ ಪಟ್ಟಿಯೊಂದಿಗೆ ರೂ. 15,999 ಕ್ಕೆ ಲಭ್ಯವಿದೆ ಎಂದು ಫ್ಲಿಪ್‌ಕಾರ್ಟ್ ಪಟ್ಟಿ ಮಾಡಿದೆ. ಆದರೆ, ಪ್ರಸ್ತುತ ಅಮೆಜಾನ್‌ನಲ್ಲಿ ಈ ಎಲ್ಲಾ ಮಾದರಿಗಳು ರೂ. 10,999 ರ ರಿಯಾಯಿತಿ ದರದಲ್ಲಿ ಲಭ್ಯವಿವೆ. ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿರಬಹುದು.


Click it and Unblock the Notifications








