Home
Gadgets

SD ಕಾರ್ಡ್ ಕಥೆ ಮುಗಿಯಿತು, ಬರುತ್ತಿದೆ ಹೊಸ ಮಾದರಿಯ NM ಕಾರ್ಡ..!

ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಹುವಾವೆ ಕಂಪನಿಯೂ ಹೊಸ ಮಾದರಿ ತಂತ್ರಜ್ಞಾನವೊಂದನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಇದು ಮುಂದೆ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸುವ SD ಕಾರ್ಡ್ ಅನ್ನು ಬದಲಾಯಿಸಲಿದೆ ಎನ್ನಲಾಗಿದೆ. ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ NM ಕಾರ್ಡ್ ಗಳನ್ನು ಅಭಿವೃದ್ಧಿ ಮಾಡಲು ಮುಂದಾಗಿದೆ. ಇದರಿಂದಾಗಿ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸುವ ಹೆಚ್ಚು ವರಿ ಮೆಮೊರಿಯೂ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಮೈಕ್ರೋ ಎಸ್ ಡಿ ಕಾರ್ಡ್ ಮಾದರಿಯಲ್ಲಿ ಕಾಣಿಸಿಕೊಳ್ಳುವ ಹೊಸ ಮಾದರಿಯ ಕಾರ್ಡ್ ಗಳು ಬಳಕೆದಾರರಿಗೆ ದೊಡ್ಡ ಮಟ್ಟದ ಮೆಮೊರಿಯನ್ನು ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದು ಸ್ಮಾರ್ಟ್ ಫೋನ್ ಮೆಮೊರಿ ವಿಭಾಗದಲ್ಲಿ ಹೊಸ ಭಾಷ್ಯವನ್ನು ಬರೆಯಲಿದೆ ಎನ್ನುವ ಮಾತು ಕೇಳಿ ಬಂದಿದೆ.

SD ಕಾರ್ಡ್ ಕಥೆ ಮುಗಿಯಿತು, ಬರುತ್ತಿದೆ ಹೊಸ ಮಾದರಿಯ NM ಕಾರ್ಡ..!

ಈಗಾಗಲೇ ಮಾರುಕಟ್ಟೆಯಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ ಮೆಮೊರಿ ಕಾರ್ಡ್ ಗಳನ್ನು ಕಾಣಬಹುದಾಗಿದೆ. ಇವುಗಳೊಂದಿಗೆ ಹೊಸದಾಗಿ ಕಾಣಿಸಿಕೊಳ್ಳುವ NM ಕಾರ್ಡ್ಗಳು 90 ಎಂಬಿಪಿಎಸ್ ವೇಗದಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಡೇಟಾ ವರ್ಗವಣೆಯನ್ನು ವೇಗವಾಗಿ ಮಾಡಿಕೊಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ.

ಹುವಾವೆ ಹೊಸದಾಗಿ ಲಾಂಚ್ ಮಾಡಲಿರುವ NM ಕಾರ್ಡ್ ಮೊದಲಿಗೆ ಹುವಾವೆ ಟಾಪ್ ಎಂಡ್ ಫೋನ್ ಗಳಾದ ಮೆಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳಿದೆ. ಇದಾದ ನಂತರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ನಂತರದಲ್ಲಿ ಮಾತ್ರವೇ ಬೇರೆ ಕಡೆಗಳಲ್ಲಿಯೂ ತನ್ನ ಸೇವೆಯನ್ನು ವಿಸ್ತರಿಸಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಳಕೆದಾರರಿಗೆ ಹೊಸ ತಂತ್ರಜ್ಞಾನವೊಂದು ಲಭ್ಯವಾಗಲಿದೆ.

ಸದ್ಯ ಮಾರುಕಟ್ಟೆಯಲ್ಲಿ NM ಕಾರ್ಡ್ 256 GB ಆವೃತ್ತಿಯಲ್ಲಿ ಮಾತ್ರವೇ ದೊರೆಯುತ್ತಿದೆ. ಇದಾದ ನಂತರದಲ್ಲಿ ಶೀಘ್ರವೇ 128GB ಮತ್ತು 64 GB ಆವೃತ್ತಿಯೂ ಮಾರಾಟವಾಗಲಿದೆ ಎನ್ನಲಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೊಸ ಬೇಡಿಕೆ ಸೃಷ್ಟಿಯಾಗಲಿದೆ.

ಈಗಾಗಲೇ ಹೆಚ್ಚಿನ ಗಾತ್ರದ ಮೆಮೊರಿ ಕಾರ್ಡ್ ಗಳನ್ನು ಕಾಣಬಹುದಾಗಿದೆ. ಇದರೊಂದಿಗೆ ಕಾಣಿಸಿಕೊಳ್ಳಲಿರುವ NM ಕಾರ್ಡ್ ಹೊಸ ಇತಿಹಾಸವನ್ನು ಸೃಷ್ಠಿಸಲಿದೆ ಎನ್ನುವ ಮಾತೊಂದು ಕೇಳಿ ಬಂದಿದೆ. ಶೀಘ್ರವೇ ಮೊಮೊರಿ ಕಾರ್ಡ್ ಗಳ ಜಾಗವನ್ನು ಇವೇ ಆವರಿಸಿಕೊಂಡರು ಆಶ್ಚರ್ಯ ಪಡಬೇಕಾಗಿಲ್ಲ. ಮುಂದಿನ ದಿನದಲ್ಲಿ ಇದು ಬಳಕೆದಾರರಿಗೆ ಸಾಕಷ್ಟು ಸಹಾಯ ಮಾಡಲಿದೆ.

Best Mobiles in India

English summary
Huawei's NM cards try to shrink down the micro-SD for some reason. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+