Home
Gadgets

ಶುರುವಾಗ್ತಿದೆ Flipkart Flagship Sale: ಸಾಲು ಸಾಲು ಆಫರ್..! ಈ ಚಾನ್ಸ್ ಬಿಡಬೇಡಿ

Independence Day 2024: ಇಡೀ ದೇಶ ಸ್ವಾತಂತ್ರ್ಯ ದಿನವನ್ನು ಆಚರಿಸಲು ಕಾಯುತ್ತಿದೆ. ಪ್ರತಿ ವರ್ಷದಂತೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ ದೇಶದ ಜನತೆ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಇಡೀ ದೇಶದಲ್ಲಿ ಸಂಭ್ರಮದ ವಾತಾವರಣವಿದೆ. ಇತ್ತ, ಆಫ್‌ಲೈನ್ ಸ್ಟೋರ್‌ಗಳು ಅಥವಾ ಆನ್‌ಲೈನ್ ಸ್ಟೋರ್‌ಗಳು ತನ್ನ ಗ್ರಾಹಕರಿಗೆ ಆಫರ್‌ಗಳ ಮಹಾಪೂರವನ್ನೇ ಘೋಷಿಸಿವೆ. ಅದರಂತೆ, ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ 'ಫ್ಲ್ಯಾಗ್‌ಶಿಪ್ ಸೇಲ್-2024' (Flipkart Flagship Sale-2024) ಆಯೋಜಿಸಿದೆ.

ಹೌದು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇ ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಭಾರತೀಯ ಗ್ರಾಹಕರಿಗಾಗಿ 'ಫ್ಲ್ಯಾಗ್‌ಶಿಪ್ ಸೇಲ್-2024' ಆರಂಭವಾಗಲಿದೆ. ಈ ವಿಶೇಷ ಮಾರಾಟ ಆಗಸ್ಟ್ 6 ರಂದು (ನಾಳೆ) ಮಧ್ಯಾಹ್ನ 12 ಗಂಟೆಯಿಂದ ಶುರುವಾಗಲಿದೆ. ಈ ಮಾರಾಟದಲ್ಲಿ ಗ್ರಾಹಕರು ಕಡಿಮೆ ದರದಲ್ಲಿ ತಮ್ಮ ನೆಚ್ಚಿನ ವಸ್ತುಗಳನ್ನು ಖರೀದಿಸಬಹುದು. ಅಮೆಜಾನ್ 'ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್' (Amazon Great Freedom Festival Sale 2024) ಮಾದರಿಯಲ್ಲಿ ಈ ಮಾರಾಟವನ್ನು ಆರಂಭಿಸಲು ಕಂಪನಿಯು ಸಜ್ಜಾಗಿದೆ.

ಶುರುವಾಗ್ತಿದೆ Flipkart Flagship Sale: ಸಾಲು ಸಾಲು ಆಫರ್.. ಚಾನ್ಸ್ ಬಿಡಬೇಡಿ

ಶಾಪಿಂಗ್ ಮಾಡಲು ಬ್ರಿಟಿಷರೂ ಇಷ್ಟ ಪಡ್ತಾರೆ!

'ಫ್ಲ್ಯಾಗ್‌ಶಿಪ್ ಸೇಲ್-2024' (Flipkart Flagship Sale-2024) ಮಾರಾಟ ಘೋಷಣೆ ಮಾಡಿರುವ ಫ್ಲಿಪ್‌ಕಾರ್ಟ್, ಅಡಿಬರಹದ (ಟ್ಯಾಗ್ ಲೈನ್) ಮೂಲಕ ಪರೋಕ್ಷವಾಗಿ ಬ್ರಿಟಿಷರನ್ನು ಲೇವಡಿ ಮಾಡಿದೆ. 'ಈ ಡೀಲ್ ಮಾರಾಟ ಹೇಗಿದೆ ಎಂದರೆ.. ಶಾಪಿಂಗ್ ಮಾಡಲು ಬ್ರಿಟಿಷರು ಕೂಡ ಇಷ್ಟ ಪಡುತ್ತಾರೆ' ಎಂದು ಟ್ಯಾಗ್ ಲೈನ್ ನೀಡಲಾಗಿದೆ. ಇದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ಈ ಮೂಲಕ ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್, ಇಯರ್‌ಬಡ್ಸ್‌ ಮೇಲೆ ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ.

ಫ್ಲಿಪ್‌ಕಾರ್ಟ್‌ 'ಫ್ಲ್ಯಾಗ್‌ಶಿಪ್ ಸೇಲ್-2024' ಸೇಲ್‌ನಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್, ಇಯರ್‌ಬಡ್ಸ್, ಎಲೆಕ್ಟ್ರಾನಿಕ್ಸ್, ಗೃಹಪಯೋಗಿ ವಸ್ತುಗಳು ಸೇರಿದಂತೆ ಹಲವು ವಸ್ತುಗಳ ಮೇಲೆ ಭಾರೀ ಡಿಸ್ಕೌಂಟ್ ಲಭ್ಯವಿರಲಿದೆ. ಇದರ ಜೊತೆಗೆ ಫ್ಲಿಪ್‌ಕಾರ್ಟ್ ಸೂಚಿಸಿರುವ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಗ್ರಾಹಕರಿಗೆ ಮತ್ತಷ್ಟು ರಿಯಾಯಿತಿ ಸಿಗುತ್ತದೆ. ಈ ಫ್ಲಿಪ್‌ಕಾರ್ಟ್ ಫ್ಲ್ಯಾಗ್‌ಶಿಪ್ ಮಾರಾಟವು ನಾಳೆ (ಆಗಸ್ಟ್ 6) ಪ್ರಾರಂಭವಾಗುತ್ತದೆ ಮತ್ತು ಆಗಸ್ಟ್ 12 ರಂದು ಕೊನೆಗೊಳ್ಳುತ್ತದೆ.

ಶೇ.10ರಷ್ಟು ಬ್ಯಾಂಕ್ ಡಿಸ್ಕೌಂಟ್

ಸ್ವಾತಂತ್ರ್ಯ ದಿನಾಚರಣೆ-2024ರ ಸಂದರ್ಭದಲ್ಲಿ ಈ ಸೇಲ್ ಆರಂಭಿಸುತ್ತಿರುವ ಕಾರಣ, ಇದನ್ನು 'ಪೆರೇಡ್ ಆಫ್ ಡೀಲ್ಸ್' ಎಂದು ಹೆಸರಿಸಲಾಗಿದೆ. ಈ ಪೆರೇಡ್‌ನಲ್ಲಿ (ಮಾರಾಟದಲ್ಲಿ) ನೀವು ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಕಾರ್ಡ್ ಬಳಸಿದರೆ ಶೇ.10ರಷ್ಟು ಡಿಸ್ಕೌಂಟ್ ಪಡೆಯಬಹುದು. ಒಂದು ವೇಳೆ ಶಾಪಿಂಗ್‌ನಲ್ಲಿ ಫ್ಲಿಪ್‌ಕಾರ್ಟ್ ಮತ್ತು ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದರೆ ಶೇ.5ರಷ್ಟು ಡಿಸ್ಕೌಂಟ್ ಲಭ್ಯವಿದೆ. ಈ ಸೇಲ್‌ನಲ್ಲಿ ನೀವು ಹಲವು ಸ್ಯಾಮ್‌ಸಂಗ್ ಫೋನ್‌ಗಳನ್ನು ಅಗ್ಗವಾಗಿ ಖರೀದಿಸಬಹುದು.

ಶುರುವಾಗ್ತಿದೆ Flipkart Flagship Sale: ಸಾಲು ಸಾಲು ಆಫರ್.. ಚಾನ್ಸ್ ಬಿಡಬೇಡಿ

ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಡಿಸ್ಕೌಂಟ್ ಲಭ್ಯ?

Motorola G85 5G ಮಾರಾಟವು ಆಗಸ್ಟ್ 6 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಲಿದೆ. ಮೊಟೊರೊಲಾ, ಸ್ಯಾಮ್‌ಸಂಗ್, ನಥಿಂಗ್, ಆಫಲ್‌ (ಐಫೋನ್), ರಿಯಲ್‌ಮಿ, ರೆಡ್ಮಿ ಸೇರಿದಂತೆ ದೊಡ್ಡ ಶ್ರೇಣಿಯ ಫೋನ್‌ಗಳು ಈ ಮಾರಾಟದಲ್ಲಿ ಭರ್ಜರಿ ಆಫರ್‌ಗಳೊಂದಿಗೆ ಲಭ್ಯವಿರುತ್ತವೆ. Motorola G24, Motorola G64, Motorola Edge 50 Ultra, Motorola Edge 50 Fusion ಮತ್ತು Motorola Edge 50 Pro ಫೋನ್‌ಗಳ ಖರೀದಿ ಮೇಲೆಯೂ ಭಾರೀ ಡಿಸ್ಕೌಂಟ್‌ ಪಡೆಯಬಹುದು.

ಐಫೋನ್ ಪ್ರಿಯರಿಗೆ ಬಂಪರ್ ಆಫರ್!

ಗ್ರಾಹಕರು ಐಫೋನ್ 14 ಪ್ಲಸ್ ಮತ್ತು ಐಫೋನ್ 15 ಪ್ಲಸ್‌ ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯಬಹುದು. ರೆಡ್ಮಿ ಮತ್ತು ರಿಯಲ್‌ಮಿನ ಅನೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಆಫರ್‌ಗಳು ಲಭ್ಯವಿದೆ. Realme 12 Pro 5G, Realme 12 Pro Plus 5G, Realme 12x, Realme P1, Realme C65 ಮೇಲೆ ಆಫರ್‌ಗಳು ಲಭ್ಯವಿರುತ್ತದೆ. ರೆಡ್ಮಿಯ Redmi 12, Redmi 13C, Redmi 13C 5G, Redmi Note 13 Pro ಸೇರಿದಂತೆ ಇನ್ನಿತರ ಫೋನ್‌ಗಳಲ್ಲಿ ರಿಯಾಯಿತಿ ಪಡೆಯಬಹುದು.

ಇನ್ನೂ, ಒಪ್ಪೋ K12 5G ಫೋನ್‌ ಸಹ ಅಗ್ಗದ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. Nothing Phone 2a ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ನಂತಹ ಹಲವು ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್ ದರದಲ್ಲಿ ಸಿಗಲಿವೆ. CMF Watch Pro 2 ಸ್ಮಾರ್ಟ್‌ವಾಚ್, ಇಯರ್‌ಬಡ್ಸ್‌, ರಿಯಲ್‌ ಮಿ ಇಯರ್‌ಬಡ್ಸ್‌ ಸೇರಿದಂತೆ ಹಲವು ಎಲೆಕ್ಟ್ರಾನಿಕ್ಸ್ ವಸ್ತುಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕಿವೆ. ಈ ಅವಕಾಶದಿಂದ ಮೊಬೈಲ್ ದರ ಕಡಿಮೆಯಾಗಲಿದೆ.

Best Mobiles in India

English summary
Independence Day 2024: Flipkart brought Flagship Sale Starts on August 6 and end on August 12: know the all details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+