Home
Gadgets

ಮೇ 21 ರಂದು 10,000mAh ಬ್ಯಾಟರಿಯ Infinix XPad GT ಟ್ಯಾಬ್ಲೆಟ್ ಬಿಡುಗಡೆ!

ಬಜೆಟ್ ಬೆಲೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಗೆ ಹೆಸರಾಗಿರುವ ಇನ್ಫಿನಿಕ್ಸ್ ಕಂಪೆನಿಯು ತನ್ನ GT-ಬ್ರಾಂಡೆಡ್ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಸಿದ್ಧವಾಗಿದ್ದು, ಇದೇ ಮೇ 21 ರಂದು ತನ್ನ Infinix XPad GT ಎಂಬ ಗೇಮಿಂಗ್ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಲು ನಿರ್ಧರಿಸಿದೆ. ಈ ಹಿಂದೆ ದೃಢಪಡಿಸಲಾದ ಬಹುನಿರಿಕ್ಷಿತ Infinix GT 30 Pro ಸ್ಮಾರ್ಟ್‌ಫೋನ್‌ನೊಂದಿಗೆ ಈ ಬಹುನಿರೀಕ್ಷಿತ ಟ್ಯಾಬ್ಲೆಟ್ ಕೂಡ ಬಿಡುಗಡೆಯಾಗಲಿದ್ದು, ಗೇಮರ್‌ಗಳನ್ನು ಗುರಿಯಾಗಿಸಿಕೊಂಡಿರುವ ಈ ಟ್ಯಾಬ್ಲೆಟ್‌ನಲ್ಲಿ 10,000mAh ಬ್ಯಾಟರಿ ಮತ್ತು 8-ಸ್ಪೀಕರ್ ಆಡಿಯೋ ಸಿಸ್ಟಮ್ ನಂತಹ ಹಲವಾರು ಪ್ರಮುಖ ಫೀಚರ್ಸ್‌ಗಳು ಇರುವುದು ಅಧಿಕೃತವಾಗಿ ಖಚಿತವಾಗಿದೆ. ಹಾಗಾದರೆ, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹೊಸ Infinix XPad GT ಟ್ಯಾಬ್ಲೆಟ್ ಹೊಂದಿರುವ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ

Infinix XPad GT ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಿದ ಪ್ರಭಾವಶಾಲಿ ದೃಶ್ಯಗಳನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. Infinix ಕಂಪೆನಿ ಬಿಡುಗಡೆ ಮಾಡಿರುವ ಟೀಸರ್ ಪ್ರಕಾರ, ಈ Infinix XPad GT ಟ್ಯಾಬ್ಲೆಟ್ 13-ಇಂಚಿನ ಡಿಸ್ಪ್ಲೇಯನ್ನು 2.8K ರೆಸಲ್ಯೂಶನ್‌ನೊಂದಿಗೆ ಹೊಂದಿದೆ. ಇದು 144Hz ನ ಗರಿಷ್ಠ ಸ್ಕ್ರೀನ್ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ, ಇದು ಸುಗಮ ಮತ್ತು ಸ್ಪಂದಿಸುವ ದೃಶ್ಯಗಳನ್ನು ಖಾತ್ರಿಗೊಳಿಸುತ್ತದೆ. ಟಚ್ ಸ್ಯಾಂಪ್ಲಿಂಗ್ ದರದ ವಿವರಗಳು ಇನ್ನೂ ಲಭ್ಯವಿಲ್ಲದಿದ್ದರೂ, ಹೆಚ್ಚಿನ ರಿಫ್ರೆಶ್ ದರವು ಗೇಮಿಂಗ್ ಉತ್ಸಾಹಿಗಳಿಗೆ ಉತ್ತಮ ಅನುಭವವನ್ನು ನೀಡುತ್ತದೆ ಎನ್ನಲಾಗಿದೆ. ಇನ್ನು ಈ ಟ್ಯಾಬ್ಲೆಟ್ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಇದು ಬಳಕೆದಾರರಿಗೆ ಸಾಕಷ್ಟು ಮಲ್ಟಿಟಾಸ್ಕಿಂಗ್ ಸಾಮರ್ಥ್ಯಗಳು ಮತ್ತು ಫೈಲ್‌ಗಳನ್ನು ಸಂಗ್ರಹಿಸಲು ಸ್ಥಳಾವಕಾಶವನ್ನು ನೀಡುತ್ತದೆ.

ಮೇ 21 ರಂದು 10,000mAh ಬ್ಯಾಟರಿಯ Infinix XPad GT ಟ್ಯಾಬ್ಲೆಟ್ ಬಿಡುಗಡೆ!

ಪ್ರೊಸೆಸರ್ ವಿಬಾಗದಲ್ಲಿ, ಈ Infinix XPad GT ಟ್ಯಾಬ್ಲೆಟ್ ಸ್ನಾಪ್‌ಡ್ರಾಗನ್ 888 SoC ಯೊಂದಿಗೆ ಬರಲಿದೆ, ಇದು 2020 ರಲ್ಲಿ ಕ್ವಾಲ್ಕಾಮ್ ಪರಿಚಯಿಸಿದ ಶಕ್ತಿಯುತ ಚಿಪ್‌ಸೆಟ್ ಆಗಿದೆ. ಈ ಪ್ರೊಸೆಸರ್ 2.8GHz ನ ಗರಿಷ್ಠ ಕ್ಲಾಕ್ ಸ್ಪೀಡ್ ಹೊಂದಿದೆ ಮತ್ತು 5nm ಪ್ರೊಸೆಸ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ. ಹಳೆಯ ಚಿಪ್‌ಸೆಟ್ ಆದರೂ, ಸ್ನಾಪ್‌ಡ್ರಾಗನ್ 888 ಇನ್ನೂ ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡುತ್ತದೆ, ವಿಶೇಷವಾಗಿ ಅದರ ಆವಿ-ಚೇಂಬರ್ ಆಧಾರಿತ ಕೂಲಿಂಗ್ ಕಾರ್ಯವಿಧಾನದೊಂದಿಗೆ ಜೋಡಿಸಿದಾಗ, ತೀವ್ರವಾದ ಗೇಮಿಂಗ್ ಸೆಷನ್‌ಗಳಲ್ಲಿ ಟ್ಯಾಬ್ಲೆಟ್‌ನ ಕಾರ್ಯಕ್ಷಮತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಈ ಟ್ಯಾಬ್ಲೆಟ್‌ನ ಪ್ರೊಸೆಸರ್ ಆಯ್ಕೆಯು ಇದನ್ನು ಕೈಗೆಟುಕುವ ಸಾಧನವನ್ನಾಗಿ ಮಾಡುವ ಕಂಪೆನಿಯ ಉದ್ದೇಶವನ್ನು ಸೂಚಿಸುತ್ತದೆ.

ಇಷ್ಟು ಮಾತ್ರವಲ್ಲದೆ, ಈ Infinix GT 30 Pro ಟ್ಯಾಬ್ಲೆಟ್‌ನ ಆಡಿಯೋ ಸಾಮರ್ಥ್ಯಗಳ ಮೇಲೆ ವಿಶೇಷ ಗಮನ ನೀಡಲಾಗಿದೆ. ಈ ಟ್ಯಾಬ್ಲೆಟ್ 8-ಸ್ಪೀಕರ್ ಆಡಿಯೋ ಸಿಸ್ಟಮ್ ಅನ್ನು ಒಳಗೊಂಡಿದ್ದು, ಇದು ಗೇಮಿಂಗ್ ಮತ್ತು ಚಲನಚಿತ್ರ ವೀಕ್ಷಣೆಯ ಸಮಯದಲ್ಲಿ ಶ್ರೀಮಂತ ಮತ್ತು ತಲ್ಲೀನಗೊಳಿಸುವ ಧ್ವನಿ ಅನುಭವವನ್ನು ಒದಗಿಸುತ್ತದೆ. ಇದರಲ್ಲಿ DTS ಬೆಂಬಲವೂ ಇದೆ, ಇದು ಬಳಕೆದಾರರ ಒಟ್ಟಾರೆ ಮಲ್ಟಿಮೀಡಿಯಾ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ ಎಂದು. ಬ್ಯಾಟರಿ ವಿಭಾಗದಲ್ಲಿ, ಕಂಪೆನಿಯ ಟೀಸರ್‌ಗಳ ಪ್ರಕಾರ, ಈ ಸಾಧನವು 10,000mAh ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತದೆ. ಇದು ದೀರ್ಘಾವಧಿಯ ಬಳಕೆಗಾಗಿ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ. ಮತ್ತು 33W ವೈರ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಲಾಗಿದೆ. Infinix XPad GT ಟ್ಯಾಬ್ಲೆಟ್‌ನ ಎಲ್ಲಾ ಅಧಿಕೃತ ಫೀಚರ್ಸ್ ಮತ್ತು ಬೆಲೆಯ ಮಾಹಿತಿಗಾಗಿ ನಾವು ಮೇ 21 ರವರೆಗೆ ಕಾಯಬೇಕಿದೆ.

Best Mobiles in India

English summary
Infinix XPad GT, the upcoming tablet from the company under the GT brand, is set to be launched soon, with the official release date scheduled for May 21.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+