ಆಪಲ್ ವಾಚ್‌ಗಳಲ್ಲಿ ಇನ್ಮುಂದೆ ಇರಲಿದೆ 'ಒಎಲ್‌ಇಡಿ' ಡಿಸ್‌ಪ್ಲೇ!..ಏಕೆ ಗೊತ್ತಾ?
ಜನಪ್ರಿಯ ಸ್ಮಾರ್ಟ್‌ವಾಚ್‌ಗಳ ತಯಾರಿಕೆಯಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿರುವ ಆಪಲ್ ತನ್ನ ಸ್ಮಾರ್ಟ್‌ವಾಚ್‌ಗಳಿಗೆ ಮತ್ತಷ್ಟು ಮೆರುಗನ್ನು ನೀಡಲು ಮುಂದಾಗಿದೆ. ಆಪಲ್ ಬಿಡುಗಡೆ ಮಾಡಿರುವ ಇತ್ತೀಚಿನ ಐಫೋನ್ ಎಕ್ಸ್‌ಆರ್‌ನಲ್ಲಿದ್ದ ಒಎಲ್‌ಇಡಿ ಪರದೆಯನ್ನು ಆಪಲ್ ವಾಚ್‌ಗಳಲ್ಲಿ ಬಳಸಲು ಸಂಸ್ಥೆ ಮುಂದಾಗಿದೆ ಎಂದು ತಿಳಿದುಬಂದಿದೆ. ಜಪಾನ್ ಡಿಸ್‌ಪ್ಲೇ ಸಂಸ್ಥೆಯು ಈ ವರ್ಷದಿಂದ ಆಪಲ್ ವಾಚ್‌ಗೆ ಒಎಲ್‌ಇಡಿ ಪರದೆಯನ್ನು ಒದಗಿಸಲಿದೆ ಎಂದು ಹೇಳಲಾಗಿದೆ.
ಹೌದು, 2020ರ ವೇಳೆಗೆ ಎಲ್ಲ ಆಪಲ್ ವಾಚ್‌ಗಳಲ್ಲಿ ಈ ಪರದೆಗಳು ಇರಲಿವೆ ಎಂಬುದು ದೃಢವಾಗಿದ್ದು, ಸಂಸ್ಥೆಯು ತನ್ನೆಲ್ಲಾ ಸ್ಮಾರ್ಟ್‌ವಾಚ್‌ಗಳಿಗೆ ಒಎಲ್‌ಇಡಿ ಪರದೆಯನ್ನು ಹಾಕುತ್ತಿದೆ. ಈ ಒಎಲ್‌ಇಡಿ ಪರದೆಯು ಇತರೆ ಪರದೆಗಳಿಂತ ಹೆಚ್ಚು ತೆಳುವಾಗಿದ್ದು, ಎಲ್‌ಸಿಡಿಗಿಂತ ಹೆಚ್ಚು ಪಾರದರ್ಶಕತೆಯನ್ನು ಒದಗಿಸಲಿದೆ. 2018ರಲ್ಲಿ ಐಫೋನ್ ಎಕ್ಸ್‌ಆರ್ ಫೋನಿಗೆ ಒಎಲ್‌ಇಡಿ ಪರದೆ ನೀಡಿದ್ದ ಇದೇ ಸಂಸ್ಥೆ ಸ್ಯಾಮ್‌ಸಂಗ್, ಎಲ್‌ಜಿಯ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೂ ಒಎಲ್‌ಇಡಿ ಪರದೆಗಳನ್ನು ಒದಗಿಸಿದೆ.

ಮಾರುಕಟ್ಟೆಯಲ್ಲಿರುವ ಬಹಳ ಪ್ರಸಿದ್ಧ ಸ್ಮಾರ್ಟ್ ವಾಚ್ ಎಂದರೆ ಅದು ಆಪಲ್ ವಾಚ್ ಗಳು ಮತ್ತು ಇದರಲ್ಲಿ ಬಹಳ ಆಪ್ಸ್ ಗಳ ಸಂಗ್ರಹ ಕೂಡ ಇದೆ. ಹೆಚ್ಚಿನ ಬಳಕೆದಾರರಿಗೆ ಬಹಳಷ್ಟು ಆಪ್ ಗಳು ಬಳಕೆಗೆ ಬರುವುದಿಲ್ಲ ಆದರೆ ಕೆಲವು ಆಪ್ ಗಳು ಆಪಲ್ ವಾಚ್ ನಲ್ಲಿ ಅತ್ಯಧಿಕವಾಗಿ ಬಳಕೆ ಮಾಡಲಾಗುತ್ತದೆ. ಹಾಗಾದರೆ, ಆಪಲ್ ವಾಚ್ ನಲ್ಲಿ ಡೌನ್ ಲೋಡ್ ಮಾಡಿ ಬಳಕೆ ಮಾಡಲು ಪ್ರಸಿದ್ಧವಾಗಿರುವ ಕೆಲವು ಆಪ್ಸ್ ಗಳ ಲಿಸ್ಟ್ ಈ ಕೆಳಗಿದೆ ನೋಡಿ.

ಸ್ಟಾರ್ವ್(Strave)
ಆಪಲ್ ವಾಚ್ ನಲ್ಲಿರುವ ಅತ್ಯಂತ ಪ್ರಸಿದ್ಧ ಫಿಟ್ನೆಸ್ ಆಪ್ ಇದು ಮತ್ತು ಇದೀಗ ನೀವು ನಿಮ್ಮ ನಿರಂತರ ಆಕ್ಟಿವಿಟಿಯನ್ನು ಟ್ರ್ಯಾಕ್ ಮಾಡುವುದಕ್ಕೆ ಫೋನಿನ ಅಗತ್ಯವಿರುವುದಿಲ್ಲ.ಈ ಆಪ್ ಮೇಲ್ಬಾಗದಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಸ್ವಚ್ಛವಾಗಿ ಆಫರ್ ಮಾಡುತ್ತದೆ.ಈ ಆಪ್ ಅನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ನೈಕ್ ರನ್ ಕ್ಲಬ್
ಮೊದಲ ಆಪಲ್ ವಾಚ್ ಬಿಡುಗಡೆಗೊಂಡಾಗಿನಿಂದಲೂ ನೈಕ್ ಮತ್ತು ಆಪಲ್ ಎರಡೂ ಸಂಸ್ಥೆಗಳೆರಡೂ ಕೂಡ ಒಟ್ಟಿಗೆ ಇವೆ. ನೈಕ್ ರನ್ ಕ್ಲಬ್ ಆಪ್ ಮತ್ತೊಂದು ಫಿಟ್ನೆಸ್ ಆಪ್ ಆಗಿದ್ದು ಇದು ಕೂಡ ಉತ್ತಮ ಟ್ರ್ಯಾಕಿಂಗ್ ಫೀಚರ್ ಗಳನ್ನು ನೀಡುತ್ತದೆ. ನೂತನ ಅಪ್ ಡೇಟ್ ನಲ್ಲಿ ಆಪ್ ಸಿರಿ ಇಂಟಿಗ್ರೇಷನ್ ಜೊತೆಗೆ ವಾಚ್ ಫೇಸ್ ಮತ್ತು ಅಗತ್ಯವಾದ ಎಲ್ಲಾ ಮಾಹಿತಿ ನೀಡುತ್ತದೆ.

ಸ್ಲೀಪ್ ಟ್ರ್ಯಾಕಿಂಗ್ ಆಪ್
ಸ್ಲೀಪ್ ಟ್ರ್ಯಾಕಿಂಗ್ ಆಪ್ ಅಥವಾ ಸ್ಲೀಪ್ ಸೈಕಲ್ ಅಲಾರಾಂ ಕ್ಲಾಕ್. ಇದು ಸ್ಲೀಪ್ ಸೈಕಲ್ ಮ್ಯಾನೇಜ್ ಮೆಂಟ್ ಗೆ ಆಫರ್ ಮಾಡುವ ಆಪ್ ಆಗಿದೆ ಮತ್ತು ನಿಮ್ಮ ನಿದ್ದೆಯ ಸೈಕಲ್ ನಲ್ಲಿ ಸರಿಯಾದ ಸಮಯಕ್ಕೆ ನಿಮ್ಮನ್ನ ಎಬ್ಬಿಸುವುದಕ್ಕೆ ನೆರವು ನೀಡುವ ಆಪ್ ಇದಾಗಿದೆ.

ಗೋ ಪ್ರೋ ಮತ್ತು VLC ರಿಮೋಟ್
ಗೋ ಪ್ರೋ ಕ್ಯಾಮರಾಕ್ಕೆ ಇದು ಕಂಪ್ಯಾನಿಯನ್ ಆಪ್ ಆಗಿದೆ. ಗೋ ಪ್ರೋ ಆಪ್ ಸರ್ವರ್ ವ್ಯೂಫೈಂಡರ್ ಮತ್ತು ರಿಮೋಟ್ ಕಂಟ್ರೋಲ್ ಆಪ್ ಆಗಿದೆ. ಇನ್ನು VLC ರಿಮೋಟ್ ಹೆಸರೇ ಸೂಚಿಸುವಂತೆ ಈ ಆಪ್ ವಿಎಲ್ ಸಿ ಮೀಡಿಯಾ ಪ್ಲೇಯರ್ ಗೆ ರಿಮೋಟ್ ಆಪ್ ಆಗಿದೆ.

Chrip
ಇದು ನಿಮಗೆ ಎಲ್ಲಾ ಟ್ವೀಟರ್ ಫೀಚರ್ ಗಳನ್ನು ನೀಡುತ್ತದೆ ಉದಾಹರಣೆಗೆ ಟ್ವೀಟ್ ನೋಡುವುದು, ರೀಟ್ವೀಟ್ ಮಾಡುವುದು ಮತ್ತು ಲೈಕ್ ಮಾಡುವುದು ಇತ್ಯಾದಿ. ಆಪಲ್ ವಾಚ್ ಗಾಗಿ ಇದನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ ಮತ್ತು ಇದು ವೇಗವಾಗಿರುತ್ತದೆ. ಆಪಲ್ ವಾಚ್ ಮೂಲಕ ನೇರವಾಗಿ ಮೆಸೇಜ್ ಕಳುಹಿಸುವುದಕ್ಕೂ ಕೂಡ ಈ ಆಪ್ ನೆರವು ನೀಡುತ್ತದೆ.

ಫೇಸ್ ಬುಕ್ ಮೆಸೇಂಜರ್
ಇದು ಆಪಲ್ ವಾಚ್ ಗೆ ಇರುವ ಅಧಿಕೃತವಾಗಿರುವ ಫೇಸ್ ಬುಕ್ ಮೆಸೇಂಜರ್ ಆಪ್ ಆಗಿದೆ. ಬಳಕೆದಾರರಿಗೆ ಇದು ಮೆಸೇಜ್ ಗಳನ್ನು ಓದುವುದಕ್ಕೆ ಮತ್ತು ರಿಪ್ಲೈ ಮಾಡುವುದಕ್ಕೆ ಸಹಕಾರಿಯಾಗಿದೆ. ಐಫೋನ್ ಸಹಾಯವಿಲ್ಲದೆ ನಿಮ್ಮ ಸ್ನೇಹಿತರಿಗೆ ಮತ್ತು ಫ್ಯಾಮಿಲಿಗೆ ಮೆಸೇಜ್ ಗಳನ್ನು ಕಳುಹಿಸುವುದಕ್ಕೆ ಇದು ನಿಮಗೆ ನೆರವು ನೀಡುತ್ತದೆ.


Click it and Unblock the Notifications








