₹399ಕ್ಕೆ ನೆಕ್‌ಬ್ಯಾಂಡ್, ₹699ಕ್ಕೆ TWS, ₹1,099ಕ್ಕೆ ಸ್ಮಾರ್ಟ್‌ವಾಚ್ ಬಿಡುಗಡೆ!
ಕಡಿಮೆ ಬೆಲೆಯ ಗ್ಯಾಜೆಟ್ ಉತ್ಪನ್ನಗಳ ತಯಾರಿಗೆ ಹೆಸರಾಗಿರುವ ಜನಪ್ರಿಯ ಟೆಕ್ ಬ್ರ್ಯಾಂಡ್ ಜಸ್ಟ್ ಕಾರ್ಸೆಕಾ (JUST CORSECA) ಸಂಸ್ಥೆಯು ₹2,000 ಕ್ಕಿಂತ ಕಡಿಮೆ ಬೆಲೆಯ ಹೊಸ ಸ್ಮಾರ್ಟ್ ಆಡಿಯೋ ಮತ್ತು ಧರಿಸಬಹುದಾದ ಸಾಧನಗಳ ಶ್ರೇಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಉತ್ಪನ್ನಗಳು, ಸಂಗೀತ ಪ್ರಿಯರು, ಫಿಟ್‌ನೆಸ್ ಉತ್ಸಾಹಿಗಳು ಮತ್ತು ಸುಧಾರಿತ ಉತ್ಪಾದಕತೆಯನ್ನು ಬಯಸುವ ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದ್ದು, TWS ಇಯರ್‌ಬಡ್‌ಗಳು, ನೆಕ್‌ಬ್ಯಾಂಡ್ಸ್ ಮತ್ತು ಸ್ಮಾರ್ಟ್‌ವಾಚ್‌ಗಳನ್ನು ಒಳಗೊಂಡಿದೆ. ಇವೆಲ್ಲವೂ ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ ಎಂದು ಕಂಪನಿ ಹೇಳಿದೆ. ಹಾಗಾದರೆ, ಹೊಸ ಜಸ್ಟ್ ಕಾರ್ಸೆಕಾ ಪರಿಚಯಿಸಿರುವ ಹೊಸ ಉತ್ಪನ್ನಗಳು ಹೇಗಿವೆ?, ಬೆಲೆಗಳು ಎಷ್ಟು ಎಂಬುದನ್ನು ನೋಡೋಣ ಬನ್ನಿ.
TWS ಮತ್ತು ನೆಕ್‌ಬ್ಯಾಂಡ್‌ಗಳ ವಿಶೇಷತೆಗಳು
ಟಿಡಬ್ಲ್ಯೂಎಸ್ ಸರಣಿಯಲ್ಲಿ SKYE TWS, ಸಿಲ್ವರ್ TWS, ಮತ್ತು ಸ್ನ್ಯಾಪರ್ TWS ಮಾದರಿಗಳು ಲಭ್ಯವಿದೆ. ಇವುಗಳು 10mm ಡ್ರೈವರ್‌ಗಳನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಒಟ್ಟು 40 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತವೆ. ಬ್ಲೂಟೂತ್ v5.4 ಸಂಪರ್ಕವು 10-ಮೀಟರ್ ವ್ಯಾಪ್ತಿಯಲ್ಲಿ ತಡೆರಹಿತ ಸಂಪರ್ಕವನ್ನು ಖಚಿತಪಡಿಸುತ್ತದೆ. ಬಳಕೆದಾರರ ಅನುಕೂಲಕ್ಕಾಗಿ ಇವುಗಳಲ್ಲಿ ಸಾಫ್ಟ್-ಟಚ್ ನಿಯಂತ್ರಣಗಳು ಮತ್ತು ಟೈಪ್-ಸಿ ಚಾರ್ಜಿಂಗ್ ವ್ಯವಸ್ಥೆಯನ್ನು ಒದಗಿಸಲಾಗಿದೆ. ಇವುಗಳು ಲೋಹೀಯ ಮತ್ತು ಕ್ಲಾಸಿಕ್ ಬಣ್ಣಗಳಲ್ಲಿ ಲಭ್ಯವಿದೆ.
ನೆಕ್‌ಬ್ಯಾಂಡ್ ಸರಣಿಯಲ್ಲಿ ಸ್ಟಾಲಿಯನ್ ಸ್ಟಾರ್, ಸ್ಟಾಲಿಯನ್ ಕೋರ್, ಸ್ಟಾಲಿಯನ್ ವೇವ್, ಸ್ಟಾಲಿಯನ್ ಎಕೋ, ಮತ್ತು ಸ್ಟಾಲಿಯನ್ ಪ್ರೊ ಮಾದರಿಗಳನ್ನು ಪರಿಚಯಿಸಲಾಗಿದೆ. ಇವುಗಳು 55 ಗಂಟೆಗಳ ಸುದೀರ್ಘ ಪ್ಲೇಬ್ಯಾಕ್ ಸಮಯ ಮತ್ತು ಮ್ಯಾಗ್ನೆಟಿಕ್ ಇಯರ್‌ಬಡ್‌ಗಳನ್ನು ಹೊಂದಿವೆ. ಬ್ಲೂಟೂತ್ v5.3 ತಂತ್ರಜ್ಞಾನವನ್ನು ಬಳಸುವ ಈ ನೆಕ್‌ಬ್ಯಾಂಡ್‌ಗಳು ಧ್ವನಿ ಸಹಾಯಕ ಕಾರ್ಯವನ್ನು ಸಹ ಬೆಂಬಲಿಸುತ್ತವೆ. ಎಲ್ಲಾ ಮಾದರಿಗಳಲ್ಲಿ ಟೈಪ್-ಸಿ ಚಾರ್ಜಿಂಗ್ ಸೌಲಭ್ಯವಿದ್ದು, ಕೆಲವು ಆಯ್ದ ಮಾದರಿಗಳಲ್ಲಿ ಏಕಕಾಲದಲ್ಲಿ ಎರಡು ಸಾಧನಗಳಿಗೆ ಸಂಪರ್ಕಿಸುವ ಮತ್ತು ಸ್ಪ್ಲಾಶ್ ರೆಸಿಸ್ಟೆನ್ಸ್ ವೈಶಿಷ್ಟ್ಯಗಳಿವೆ.

ಜಸ್ಟ್ ಕಾರ್ಸೆಕಾ ಸ್ಮಾರ್ಟ್‌ವಾಚ್‌ಗಳ ವೈಶಿಷ್ಟ್ಯಗಳು
ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಸಿಗ್ನೇಚರ್ ಸ್ಮಾರ್ಟ್‌ವಾಚ್ ಮತ್ತು ಸ್ಕೈವಾಚ್ ಪ್ರೊ ಮಾದರಿಗಳು ಮಾರುಕಟ್ಟೆಗೆ ಬಂದಿವೆ. ಇವುಗಳು ಹೃದಯ ಬಡಿತ ಮೇಲ್ವಿಚಾರಣೆ , ನೈಜ-ಸಮಯದ ಕ್ರೀಡಾ ಟ್ರ್ಯಾಕಿಂಗ್, ಸ್ಟೆಪ್ ಕಂಟ್, ಮತ್ತು 'ಫೈಂಡ್-ಮೈ-ಫೋನ್' ವೈಶಿಷ್ಟ್ಯಗಳಂತಹ ಪ್ರಮುಖ ಫೀಚರ್‌ಗಳನ್ನು ಒಳಗೊಂಡಿವೆ. 2.01-ಇಂಚಿನ ಟಿಎಫ್‌ಟಿ (TFT) ಡಿಸ್‌ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ವಾಚ್‌ಗಳು, 10 ದಿನಗಳ ಬ್ಯಾಟರಿ ಮತ್ತು 15 ದಿನಗಳ ಸ್ಟ್ಯಾಂಡ್‌ಬೈ ಒದಗಿಸುತ್ತವೆ. ಇವುಗಳನ್ನು FitPro ಮತ್ತು Hryfine ಅಪ್ಲಿಕೇಶನ್‌ಗಳ ಮೂಲಕ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳೊಂದಿಗೆ ಜೋಡಿಸಬಹುದು.
ಬೆಲೆ ಮತ್ತು ಲಭ್ಯತೆ
ಈ ಹೊಸ ಉತ್ಪನ್ನಗಳು ಜಸ್ಟ್ ಕಾರ್ಸೆಕಾದ ಅಧಿಕೃತ ವೆಬ್‌ಸೈಟ್, ಅಮೆಜಾನ್.in (Amazon.in) ಮತ್ತು ಕೆಲವು ಆಯ್ದ ಆಫ್‌ಲೈನ್ ಮಳಿಗೆಗಳಲ್ಲಿ ಲಭ್ಯವಿವೆ. ಬೆಲೆ ವಿವರಗಳು ಹೀಗಿವೆ:
TWS ಸರಣಿ:
SKYE TWS - ₹ 699
Silver TWS - ₹ 799
Snapper TWS - ₹ 799
ನೆಕ್‌ಬ್ಯಾಂಡ್ ಸರಣಿ:
Stallion Star - ₹ 399
Stallion Core - ₹ 499
Stallion Wave - ₹ 599
Stallion Echo - ₹ 799
Stallion Pro - ₹ 699
ಸ್ಮಾರ್ಟ್‌ವಾಚ್ ಸರಣಿ:
Signature Smartwatch - ₹ 1,099
Skywatch PRO - ₹ 1,199
ಈ ಹೊಸ ಉತ್ಪನ್ನಗಳು ಕಡಿಮೆ ಬಜೆಟ್‌ನಲ್ಲಿ ಉತ್ತಮ ಗುಣಮಟ್ಟದ ಆಡಿಯೋ ಮತ್ತು ಧರಿಸಬಹುದಾದ ಸಾಧನಗಳನ್ನು ಬಯಸುವ ಗ್ರಾಹಕರಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಈ ಬಿಡುಗಡೆ ಕುರಿತು ಮಾತನಾಡಿದ ಡ್ಯಾಮ್ಸನ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ರಿತೇಶ್ ಗೋಯೆಂಕಾ ಅವರು, "ನಮ್ಮ ಹೊಸ ಸ್ಮಾರ್ಟ್ ಆಕ್ಸೆಸರಿ ಸರಣಿಯು ಅತ್ಯುತ್ತಮ ವಿನ್ಯಾಸ, ಸೌಕರ್ಯ ಮತ್ತು ಪ್ರಾಯೋಗಿಕತೆಯನ್ನು ಹೊಂದಿದೆ. ಕೈಗೆಟಕುವ ಬೆಲೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ಗ್ಯಾಜೆಟ್‌ಗಳನ್ನು ರಚಿಸುವುದು ನಮ್ಮ ಗುರಿಯಾಗಿತ್ತು. ಈ ಉತ್ಪನ್ನಗಳು ಬಳಕೆದಾರರ ದೈನಂದಿನ ಜೀವನದ ಅನುಭವಗಳನ್ನು ಇನ್ನಷ್ಟು ಸುಧಾರಿಸುತ್ತವೆ ಎಂದು ನಮಗೆ ವಿಶ್ವಾಸವಿದೆ" ಎಂದು ತಿಳಿಸಿದ್ದಾರೆ.


Click it and Unblock the Notifications








