Home
Gadgets

Vivo Watch 5: ಸುಧಾರಿತ AI ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆ!

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Vivo ಶೀಘ್ರದಲ್ಲೇ ತನ್ನ ಹೊಸ ಸ್ಮಾರ್ಟ್‌ವಾಚ್ 'Vivo Watch 5' ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ಇದೇ ಏಪ್ರಿಲ್ 21 ರಂದು ಚೀನಾದಲ್ಲಿ ಕ್ಯಾಮೆರಾ ಕೇಂದ್ರಿತ Vivo X200 Ultra ಮತ್ತು Vivo X200s ಸ್ಮಾರ್ಟ್‌ಫೋನ್‌ಗಳ ಜೊತೆಗೆ ಈ Vivo Watch 5 ಸ್ಮಾರ್ಟ್‌ವಾಚ್ ಅನ್ನು ಸಹ ಅನಾವರಣಗೊಳಿಸಲಾಗುವುದು. ಇದರೊಂದಿಗೆ Vivo Pad 5 Pro ಮತ್ತು Vivo Pad SE ಎಂಬ ಎರಡು ಹೊಸ ಟ್ಯಾಬ್ಲೆಟ್‌ಗಳು ಸಹ ಬಿಡುಗಡೆಯಾಗಲಿವೆ ಎಂದು Vivo ಕಂಪನಿ ತಿಳಿಸಿದೆ. ಬಿಡುಗಡೆಗೆ ಮುಂಚಿತವಾಗಿ, Vivo ತನ್ನ ಈ ಹೊಸ ಸ್ಮಾರ್ಟ್ ವೇರಬಲ್‌ನ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿದ್ದು, ಇದು ಗ್ರಾಹಕರ ಗಮನ ಸೆಳೆಯುವಲ್ಲಿ ಸಫಲವಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾದ Vivo Watch 3 ಗಿಂತಲೂ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಈ ಹೊಸ Vivo Watch 5 ಸ್ಮಾರ್ಟ್‌ವಾಚ್ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ. ಕಂಪನಿಯು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್‌ವಾಚ್ AI-ಚಾಲಿತ ರನ್ನಿಂಗ್ ಮಾರ್ಗದರ್ಶನ ವ್ಯವಸ್ಥೆಯನ್ನು ಹೊಂದಿರಲಿದೆ. ಇದು ಬಳಕೆದಾರರಿಗೆ ತಮ್ಮ ಓಟದ ತರಬೇತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗಗಿದೆ. ಕೇವಲ 32 ಗ್ರಾಂ ತೂಕವಿರುವ ಈ ಹಗುರವಾದ ಸ್ಮಾರ್ಟ್‌ವಾಚ್, ಕೇವಲ 30 ಸೆಕೆಂಡುಗಳಲ್ಲಿ ರಕ್ತದೊತ್ತಡ ಅಪಾಯದ ಮೌಲ್ಯಮಾಪನ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವೀಬೊ ಪೋಸ್ಟ್‌ನಲ್ಲಿ Vivo ದೃಢಪಡಿಸಿದೆ.

ಬ್ಯಾಟರಿ ಬಾಳಿಕೆಯ ವಿಚಾರಕ್ಕೆ ಬಂದರೆ, ಈ Vivo Watch 5 ಸ್ಮಾರ್ಟ್‌ವಾಚ್ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 22 ದಿನಗಳವರೆಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು Vivo Watch 3 ಸ್ಮಾರ್ಟ್‌ವಾಚ್ ನೀಡುತ್ತಿದ್ದ 16 ದಿನಗಳ ಬಳಕೆಯ ಸಮಯಕ್ಕಿಂತ ಗಮನಾರ್ಹಸುಧಾರಣೆಯಾಗಿದೆ. ಆರೋಗ್ಯ ಮತ್ತು ಕ್ಷೇಮದ ವೈಶಿಷ್ಟ್ಯಗಳನ್ನು ಗಮನಿಸುವುದಾದರೆ, Vivo Watch 5 ರಕ್ತದೊತ್ತಡ ಮಾನಿಟರಿಂಗ್‌ನೊಂದಿಗೆ ಹೃದಯದ ಆರೋಗ್ಯದ ಮೇಲ್ವಿಚಾರಣೆ ಮತ್ತು ಆರ್ಹೆತ್ಮಿಯಾ ವಿಶ್ಲೇಷಣೆಯಂತಹ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ಈ ವೈಶಿಷ್ಟ್ಯಗಳು ಬಳಕೆದಾರರು ತಮ್ಮ ಆರೋಗ್ಯದ ಬಗ್ಗೆ ನಿಗಾ ಇಡಲು ಮತ್ತು ಅಗತ್ಯವಿದ್ದಲ್ಲಿ ಮುಂಚಿತವಾಗಿ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತವೆ.

Vivo Watch 5: ಸುಧಾರಿತ AI ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆ!

ಈ ಸ್ಮಾರ್ಟ್‌ವಾಚ್ BlueOS ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸಲಿದೆ ಮತ್ತು "Blue Heart Xiao V" ಎಂಬ AI ಸಹಾಯಕವನ್ನು ಸಹ ಬೆಂಬಲಿಸಲಿದೆ. ಕಂಪೆನಿಯ ಪ್ರಚಾರದ ಪೋಸ್ಟರ್‌ಗಳ ಪ್ರಕಾರ, Vivo Watch 5 ವೃತ್ತಾಕಾರದ ಡಿಸ್ಪ್ಲೇಯನ್ನು ಹೊಂದಿದೆ. ಇದರ ಬಲಭಾಗದಲ್ಲಿ ಕಿರೀಟ ಮತ್ತು ಕಾರ್ಯ ಬಟನ್ ಅನ್ನು ನೀಡಲಾಗಿದೆ. ಈ ವಾಚ್ 1.43-ಇಂಚಿನ AMOLED ಡಿಸ್ಪ್ಲೇ, 466 x 466 ಪಿಕ್ಸೆಲ್‌ಗಳ ರೆಸಲ್ಯೂಶನ್, BES2700BP ಚಿಪ್‌ಸೆಟ್, 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಇದು BlueOS ಮತ್ತು eSIM ಬೆಂಬಲವನ್ನು ಸಹ ಹೊಂದಿದೆ. 505mAh ಬ್ಯಾಟರಿಯನ್ನು ಹೊಂದಿರುವ ಈ ವಾಚ್ 5ATM ನೀರಿನ ಪ್ರತಿರೋಧವನ್ನು ಸಹ ಪಡೆದುಕೊಂಡಿದೆ.

ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ, ಮುಂಬರುವ ಈ ಹೊಸ Vivo Watch 5 ಸ್ಮಾರ್ಟ್‌ವಾಚ್ ಕೂಡ ನೋಡಲು Vivo Watch 3 ಅನ್ನು ಹೋಲುತ್ತದೆ. ಆದರೆ, ಇದು ದೀರ್ಘಕಾಲದ ಬ್ಯಾಟರಿ ಬಾಳಿಕೆ ಬಳಕೆದಾರರಿಗೆ ಪದೇ ಪದೇ ಚಾರ್ಜ್ ಮಾಡುವ ತೊಂದರೆಯಿಂದ ಮುಕ್ತಿ ನೀಡುತ್ತದೆ.ಹಾಗೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. Vivo Watch 5 ತನ್ನ ಹಿಂದಿನ ಮಾದರಿಗಿಂತ ಹೆಚ್ಚಿನ ಸುಧಾರಿತ ವೈಶಿಷ್ಟ್ಯಗಳು ಮತ್ತು ದೀರ್ಘಕಾಲದ ಬ್ಯಾಟರಿ ಬಾಳಿಕೆಯೊಂದಿಗೆ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿರೀಕ್ಷೆಯಿದೆ. ಏಪ್ರಿಲ್ 21 ರಂದು ನಡೆಯುವ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಇದರ ಸಂಪೂರ್ಣ ವೈಶಿಷ್ಟ್ಯಗಳು ಮತ್ತು ಬೆಲೆಯ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.

ಬಿಡುಗಡೆಯ ಸಮಯದಲ್ಲಿ, ಹಿಂದಿನ ಮಾದರಿ Vivo Watch 3 ಸ್ಮಾರ್ಟ್‌ವಾಚ್ ಬ್ಲೂಟೂತ್ ಆವೃತ್ತಿಯ ಬೆಲೆ CNY 1,099 (ಸುಮಾರು ₹ 12,600) ಮತ್ತು eSIM ಆವೃತ್ತಿಯ ಬೆಲೆ CNY 1,299 (ಸುಮಾರು ₹ 14,900) ಆಗಿತ್ತು.

Best Mobiles in India

English summary
The company announced in a Weibo post that the Vivo Watch 5 will include AI-powered running guidance features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+